ಗರ್ಭಿಣಿ ಗರ್ಲ್‌ಫ್ರೆಂಡ್ ಆಸ್ಪತ್ರೆಯಲ್ಲಿ, ಬಾಯ್‌ಫ್ರೆಂಡ್ ಮತ್ತೊಬ್ಬಳ ತೆಕ್ಕೆಯಲ್ಲಿ..!

ಪ್ರೀತಿ ಇದ್ದಲ್ಲಿ ಮೋಸ ಇದ್ದೇ ಇದೆ. ಬಾಯ್‌ಫ್ರೆಂಡ್ (Boyfriend) ಇದ್ದವರು, ಮದುವೆಯಾದವರು, ಹದಿಹರೆಯದವರು, ವಯಸ್ಸಾದವರು ಪ್ರೀತಿ (Love)ಯಲ್ಲಿ ಎಲ್ಲರೂ ಹೀಗೆ ಮೋಸ ಮಾಡುತ್ತಾರೆ. ಆತ ಮಾಡಿದ್ದೂ ಅದೇ. ಗರ್ಲ್‌ಫ್ರೆಂಡ್‌ (Girlfriend)ನ್ನು ಗರ್ಭಿಣಿ ಮಾಡಿ ಪರಸ್ತ್ರೀಯೊಂದಿಗೆ ಚಕ್ಕಂದವಾಡ್ತಿದ್ದ. ಮಗು (Baby)ವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಗರ್ಲ್‌ಫ್ರೆಂಡ್ ಇದನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾಳೆ.

Woman Caught Boyfriend Cheating Moments After Giving Birth In Viral Video Vin

ಪ್ರೀತಿ ಇದ್ದಲ್ಲಿ ಮೋಸ ಇದ್ದೇ ಇದೆ. ವಾಯ್‌ಫ್ರೆಂಡ್ ಇದ್ದವರು, ಮದುವೆಯಾದವರು, ಹದಿಹರೆಯದವರು, ವಯಸ್ಸಾದವರು ಪ್ರೀತಿಯಲ್ಲಿ ಎಲ್ಲರೂ ಹೀಗೆ ಮೋಸ ಮಾಡುತ್ತಾರೆ. ಪ್ರೀತಿಯಲ್ಲಿ ಮೋಸ ಅನ್ನುವುದು ಈಗ ಅಚ್ಚರಿಗೆ ಕಾರಣವಾಗುತ್ತಿಲ್ಲ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವುದು, ನಂತರ ಮತ್ತೊಬ್ಬಳ ಹಿಂದೆ ಹೋಗುವುದು, ಪ್ರೀತಿಸಿದವಳಿಗೆ ಮೋಸ ಮಾಡುವುದು ಇದೆಲ್ಲವೂ ಸಾಮಾನ್ಯವಾಗಿ ಹೋಗಿದೆ. ಎಷ್ಟು ವರ್ಷಗಳ ಕಾಲ ಪ್ರೀತಿಸಿದ್ರು ಎಂಬುದು ಸಹ ಪರಿಗಣನೆಗೆ ಬರುವುದಿಲ್ಲ. ಮದುವೆಯೆಂಬ ಬಂಧ ಸಹ ಪ್ರೀತಿಯಲ್ಲಾಗುತ್ತಿರುವ ಮೋಸವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇಲ್ಲಾಗಿರುವುದು ಇದೇ.

ಸಾಮಾನ್ಯವಾಗಿ ಮದುವೆಯಾದ ಬಳಿಕ ಹೆಂಡತಿ ಗರ್ಭಿಣಿಯಾದ ನಂತರ ಗಂಡಸರು ಹೆಚ್ಚಾಗಿ ಮೋಸ ಮಾಡುತ್ತಾರೆ. ಆರೈಕೆಗಾಗಿ ಹೆಂಡತಿ ತವರಿಗೆ ಹೋಗುವುದು ಗಂಡಸರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಇದಲ್ಲದೆ ಹೆಂಡತಿ ಗರ್ಭಿಣಿಯಾಗಿದ್ದಾಗ ಸೆಕ್ಸ್‌ನಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೆ ಇರುವುದು ಗಂಡಸರು ಮತ್ತೊಬ್ಬ ಹೆಣ್ಣಿನೆಡೆಗೆ ವಾಲಲು ಕಾರಣವಾಗುತ್ತಿದೆ. ಇದೇ ರೀತಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಬಾಯ್‌ಫ್ರೆಂಡ್ ಪರಸ್ತ್ರೀಯೊಂದಿಗೆ ಚಕ್ಕಂದವಾಡೋದನ್ನು ಬಯಲು ಮಾಡಿದ್ದಾಳೆ. ಸದ್ಯ ಈ ಮಹಿಳೆ ಶೇರ್ ಮಾಡಿರುವ ಎಲ್ಲೆಡೆ ವೈರಲ್ ಆಗುತ್ತಿದೆ.

Cheating Partner : ಒಂದೇ ಬಾರಿ ಇಬ್ಬರ ಜೊತೆ ಲವ್ವಿಡವ್ವಿ, ಸಂಗಾತಿ ಗುಟ್ಟು ಹೀಗೆ ರಟ್ಟು

ಮಗುವನ್ನು ನಿರೀಕ್ಷಿಸುತ್ತಿರುವ ದಂಪತಿಗಳಲ್ಲಿ ದಾಂಪತ್ಯ ದ್ರೋಹವು ಹೆಚ್ಚು ಸಾಮಾನ್ಯವಾಗಿದೆ. ಮನಶ್ಶಾಸ್ತ್ರಜ್ಞ ರಾಬರ್ಟ್ ರೋಡ್ರಿಗಸ್ ಪ್ರಕಾರ, ಅಂದಾಜು 10 ಪ್ರತಿಶತದಷ್ಟು ಮಂದಿ ಹೆಂಡತಿ ಗರ್ಭಿಣಿಯಾಗಿದ್ದಾಗ ತಮ್ಮ ಸಂಗಾತಿಗೆ ಮೋಸ ಮಾಡುತ್ತಾರೆ. ಅದೇ ರೀತಿ ಬಾಯ್‌ಫ್ರೆಂಡ್‌ಗಳು ಸಹ ಸಂಗಾತಿ ಗರ್ಭಿಣಿಯಾದಾಗ ತಕ್ಷಣ ಬಿಟ್ಟು ಬೇರೆ ಹುಡುಗಿಯ ಹಿಂದೆ ಹೋಗುತ್ತಾರೆ ಎಂದು ತಿಳಿಸಿದ್ದಾರೆ.

ಮಗುವಿಗೆ ಜನ್ಮ ನೀಡಿದ ಮಹಿಳೆ, ಮೋಸ ಮಾಡಿದ ಬಾಯ್ ಫ್ರೆಂಡ್ !
ಮಗನಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ತನ್ನ ಗೆಳೆಯ ಮತ್ತೊಬ್ಬ ಮಹಿಳೆಯೊಂದಿಗೆ ಚಕ್ಕಂದವಾಡುತ್ತಿದ್ದು, ತನಗೆ ಮೋಸ ಮಾಡುತ್ತಿದ್ದಾನೆ ಎಂದು ಮಹಿಳೆ ವೀಡಿಯೋ ಹಂಚಿಕೊಂಡಿದ್ದಾರೆ. @aubrecita ಎಂಬ ಖಾತೆಯ ಮೂಲಕ ಮಹಿಳೆ ವೀಡಿಯೋವೊಂದನ್ನು ಟಿಕ್‌ಟಾಕ್‌ಗೆ ಅಪ್‌ಲೋಡ್  ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ. ಈ ವೈರಲ್ ವೀಡಿಯೋ ನಾಲ್ಕು ದಿನಗಳಲ್ಲಿ 6.7 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಕರನ್ನು ಮತ್ತು 3,700 ಕಾಮೆಂಟ್‌ಗಳನ್ನು ಗಳಿಸಿದೆ.  ಹೆಂಡ್ತಿ ಡೆಲಿವರಿಗೆ ಹೋದ ಮೋಸ ಮಾಡಿದ ಗಂಡನನ್ನು ನೆಟ್ಟಿಗರು ಟೀಕಿಸಿದ್ದಾರೆ. 

ಇದು ಒಂಭತ್ತು ವರ್ಷದ ಹಿಂದೆ ನಡೆದ ಘಟನೆಯಾಗಿದ್ದು, ಬಾಯ್‌ಫ್ರೆಂಡ್ ಗರ್ಭಿಣಿಯಾಗಿದ್ದ ನನ್ನನ್ನು ಬಿಟ್ಟು ಮತ್ತೊಬ್ಬಳ ಜತೆ ಮಜಾ ಮಾಡುತ್ತಿದ್ದ. ನನಗೆ ಇದು ಮೊದಲೇ ಗೊತ್ತಾಗಿದ್ದ ಕಾರಣ ಬಿಟ್ಟು ಬರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

Dating Appನಲ್ಲಿ ಮ್ಯಾಚ್ ಆಗ್ತಿದೆ ಭಾವನ ಪ್ರೊಫೈಲ್, ಅಕ್ಕನಿಗೆ ಹೇಳೋದ್ ಹೇಗೆ ಅನ್ನೋದಿವಳ ಪ್ರಾಬ್ಲಂ!

ನಾನು ಆಸ್ಪತ್ರೆಯಲ್ಲಿದ್ದಾಗ ಮಗುವಿಗೆ ಹಾಲು ಕುಡಿಸುವ ಸಂದರ್ಭ ನನ್ನ ಬಾಯ್‌ಫ್ರೆಂಡ್ ಮಲಗಿದ್ದ. ಹೀಗಾಗಿ ನಾನು ನರ್ಸ್‌ನ ಸಹಾಯ ಪಡೆದುಕೊಂಡು ಆತನ ಮೊಬೈಲ್‌ ತೆಗೆದುಕೊಂಡೆ ಮತ್ತು ಅದನ್ನು ಪರಿಶೀಲಿಸಿದೆ. ಈ ಸಂದರ್ಭದಲ್ಲಿ ಆತ ಮೋಸ ಮಾಡಿರುವುದು ಬಯಲಿಗೆ ಬಂತು ಎಂದು ಆಕೆ ಹೇಳಿದ್ದಾರೆ. ಬಾಯ್‌ ಫ್ರೆಂಡ್‌ ಮೊಬೈಲ್‌ ಸ್ಕ್ರೀನ್ ಸೇವರ್‌ಗೆ ನವಜಾತ ಶಿಶುವಿನ ಫೋಟೋ ಹಾಕಿಕೊಂಡಿದ್ದ. ಇದರ ಮೇಲೆಯೇ ಬಂದು ನನ್ನನ್ನು ಮುದ್ದಾಡು ಎಂದು ಹುಡುಗಿಯ ಮೆಸೇಜ್ ಬಂತು ಎಂದು ಆಕೆ ಹೇಳಿದ್ದಾಳೆ.

ಅನೇಕ ಕಾಮೆಂಟೆರ್‌ಗಳು @aubrecita ಅವರ ವೀಡಿಯೊ ನೋಡಿ ಪ್ರತಿಕ್ರಿಯಿಸಿದ್ದಾರೆ. ರೆಡ್ ಹ್ಯಾಂಡ್ ಆಗಿ ಬಾಯ್ ಫ್ರೆಂಡ್‌ನ್ನು ಹಿಡಿದ ಆಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವೊಬ್ಬರು ಮೋಸ ಮಾಡುವ ಗೆಳೆಯನೊಂದಿಗೆ ಬ್ರೇಕ್‌ ಅಪ್‌ ಮಾಡಿಕೊಂಡಿರಾ ಎಂದು ಕೇಳಿದ್ದಾರೆ.

Latest Videos
Follow Us:
Download App:
  • android
  • ios