- Home
- Sports
- Cricket
- ಕೊನೆಗೂ ನೋವು ಹೊರಹಾಕಿದ ಚಹಲ್ ಪತ್ನಿ ಧನಶ್ರೀ ವರ್ಮಾ..! ಡಿಸೆಂಬರ್‌ನಿಂದ ಸರಿಯಾಗಿ ನಿದ್ರೆ ಮಾಡಿಲ್ವಂತೆ..!
ಕೊನೆಗೂ ನೋವು ಹೊರಹಾಕಿದ ಚಹಲ್ ಪತ್ನಿ ಧನಶ್ರೀ ವರ್ಮಾ..! ಡಿಸೆಂಬರ್‌ನಿಂದ ಸರಿಯಾಗಿ ನಿದ್ರೆ ಮಾಡಿಲ್ವಂತೆ..!
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಅವರ ಪತ್ನಿ ಧನಶ್ರೀ ವರ್ಮಾ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಧನಶ್ರೀ ವರ್ಮಾ, ಕಳೆದ ಡಿಸೆಂಬರ್‌ನಿಂದ ಸರಿಯಾಗಿ ನಿದ್ರೆ ಮಾಡುತ್ತಿಲ್ಲ ಎಂದಿದ್ದಾರೆ. ಏಕೆ? ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಭಾರತ ಕ್ರಿಕೆಟ್ ತಂಡದ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಅವರ ಪತ್ನಿ ಧನಶ್ರೀ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಒಂದಿಲ್ಲಾ ಒಂದು ವಿಚಾರದಲ್ಲಿ ನಿರಂತರವಾಗಿ ಗಮನ ಸೆಳೆಯುತ್ತಲೇ ಬಂದಿದ್ದಾರೆ.
ಸೋಷಿಯಲ್ ಮೀಡಿಯಾ ಸೆನ್ಸೇಷನ್ ಧನಶ್ರೀ ವರ್ಮಾ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಆಕೆಯ ಹೊಸ ವಿಡಿಯೋವೊಂದು ವೈರಲ್ ಆಗಿದೆ.
ಧನಶ್ರೀ ವರ್ಮಾ ಹಂಚಿಕೊಂಡ ವಿಡಿಯೋದಲ್ಲಿ, ತಾವು ಕಳೆದ ಡಿಸೆಂಬರ್‌ನಿಂದಲೂ ಸರಿಯಾಗಿ ನಿದ್ರೆಯನ್ನೇ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಅವರ ಫ್ಯಾನ್ಸ್, ಸೋಷಿಯಲ್ ಮೀಡಿಯಾದಲ್ಲೇ ಆಕೆಯ ಆರೋಗ್ಯ ವಿಚಾರಿಸಿದ್ದಾರೆ
ಆದರೆ ಧನಶ್ರೀ ಆರೋಗ್ಯದಲ್ಲಿ ಬೇರೆ ಏನೂ ವ್ಯತ್ಯಾಸವಾಗಿಲ್ಲ. ಸದ್ಯ ಧನಶ್ರೀ ವರ್ಮಾ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದಾರೆ. ಈ ಶೋನಲ್ಲಿನ ತಯಾರಿಯಲ್ಲೇ ಹೆಚ್ಚು ಮಗ್ನರಾಗಿದ್ದಾರೆ.
ಧನಶ್ರೀ ವರ್ಮಾಗೆ ಖ್ಯಾತ ರಿಯಾಲಿಟಿ ಶೋ ಆಗಿರುವ 'ಝಲಕ್ ದಿಖಲಾಜಾ' ವೈಲ್ಡ್ ಕಾರ್ಡ್ ಎಂಟ್ರಿ ಸಿಕ್ಕಿದೆ. ಆ ಶೋನಲ್ಲಿ ಸ್ವತಃ ಧನಶ್ರೀ ವರ್ಮಾ ತಾವು ಸ್ಟೂಡಿಯೋದಲ್ಲಿದ್ದುಕೊಂಡೇ ಹೆಚ್ಚು ಪ್ರಾಕ್ರೀಸ್ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಧನಶ್ರೀ ವರ್ಮಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿಯೂ ಈ ರಿಯಾಲಿಟಿ ಶೋನ ಹಲವು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಇನ್ನು ಇದೇ ವೇಳೆ ತಮ್ಮ ಬ್ಯುಸಿ ಶೆಡ್ಯೂಲ್ ಬಗ್ಗೆಯೂ ತುಟಿಬಿಚ್ಚಿದ್ದಾರೆ.
ಧನಶ್ರೀ ವರ್ಮಾ ಕೇವಲ ರಿಯಾಲಿಟಿ ಶೋ ಮಾತ್ರವಲ್ಲದೇ ಕೆಲವೊಮ್ಮೆ ವಿವಿಧ ದೇಶಗಳಿಗೆ ಟ್ರಿಪ್‌ಗೆ ಹೋಗಿ ಎಂಜಾಯ್ ಮಾಡುವ ಹಾಟ್ ಫೋಟೋಗಳನ್ನು ಶೇರ್ ಮಾಡಲು ಹಿಂಜರಿಯುವುದಿಲ್ಲ.
ಇನ್ನು ಯುಜುವೇಂದ್ರ ಚಹಲ್ ವಿಚಾರಕ್ಕೆ ಬಂದರೆ, ಲೆಗ್‌ಸ್ಪಿನ್ನರ್ 2023ರ ಆಗಸ್ಟ್ ಬಳಿಕ ಭಾರತ ಪರ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಇತ್ತೀಚೆಗಷ್ಟೇ ಜರುಗಿದ ಆಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಟಿ20 ಸರಣಿಗೂ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.
ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಚಹಲ್, ಐಪಿಎಲ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.