ಏರ್‌ಪೋರ್ಟ್‌ ಟಾರ್‌ಮ್ಯಾಕ್‌ನಲ್ಲಿ ಆಹಾರ ತಿಂದ ಪ್ರಯಾಣಿಕರು: ಇಂಡಿಗೋಗೆ ಬರೋಬ್ಬರಿ 1.2 ಕೋಟಿ ರೂ. ದಂಡ!

30 ದಿನಗಳಲ್ಲಿ 1.2 ಕೋಟಿ ರೂ. ಮೊತ್ತವನ್ನು ಪಾವತಿಸಲು ಇಂಡಿಗೋಗೆ BCAS ಸೂಚಿಸಿದೆ. ಅಲ್ಲದೆ, ಮಂಜಿನ ವಿಳಂಬಕ್ಕೆ ಕಾರಣವಾಗುವ ಕಳಪೆ ಸಿದ್ಧತೆಗಾಗಿ ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ಡಿಜಿಸಿಎ ತಲಾ 30 ಲಕ್ಷ ರೂ. ಹಾಗೂ ಮುಂಬೈ ಏರ್‌ಪೋರ್ಟ್‌ಗೂ 30 ಲಕ್ಷ ರೂ. ದಂಡ ವಿಧಿಸಿದೆ ಎಂದು ಡಿಜಿಸಿಎ ತಿಳಿಸಿದೆ. 

indigo fined 1 2 Crore after viral video shows fliers eating on tarmac ash

ನವದೆಹಲಿ (ಜನವರಿ 18, 2024): ವಿಮಾನ ವಾಹಕ ಇಂಡಿಗೋಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ ಬರೋಬ್ಬರಿ 1.2 ಕೋಟಿ ರೂ. ದಂಡ ವಿಧಿಸಿದೆ. ವಿಮಾನದ ಟೇಕಾಫ್‌ಗೆ ಪ್ರಯಾಣಿಕರು ಕಾಯುತ್ತಿದ್ದು, ಈ ವೇಳೆ ವಿಮಾನದ ಬಳಿ ಟಾರ್‌ಮ್ಯಾಕ್‌ನಲ್ಲಿ ತಿನ್ನುವ ವಿಡಿಯೋವೈರಲ್‌ ಆದ ಬಳಿಕ BCAS ದಂಡ ವಿಧಿಸಿದೆ.

ಈ ಮಧ್ಯೆ, ದೇಶದ ವಿಮಾನಯಾನ ನಿಯಂತ್ರಕ ಡಿಜಿಸಿಎ ಸಹ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋ ಗಮನಿಸಿ, ಮುಂಬೈ ವಿಮಾನ ನಿಲ್ದಾಣಕ್ಕೆ 30 ಲಕ್ಷ ರೂ. ಪಾವತಿಸಲು ಆದೇಶಿಸಿದೆ. ಅಲ್ಲದೆ, ಟಾರ್ಮ್ಯಾಕ್‌ನಲ್ಲಿ ಪ್ರಯಾಣಿಕರು ತಿನ್ನುವ ವಿಡಿಯೋ ಹಿನ್ನೆಲೆ ಕೇಂದ್ರ ಸರ್ಕಾರ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಇದನ್ನು ಓದಿ: ರನ್‌ವೇ ಮೇಲೇ ವಿಮಾನ ಪ್ರಯಾಣಿಕರಿಗೆ ತಿಂಡಿ, ಊಟ: ಇಂಡಿಗೋಗೆ ಕೇಂದ್ರ ನೋಟಿಸ್‌

30 ದಿನಗಳಲ್ಲಿ 1.2 ಕೋಟಿ ರೂ. ಮೊತ್ತವನ್ನು ಪಾವತಿಸಲು ಇಂಡಿಗೋಗೆ BCAS ಸೂಚಿಸಿದೆ. ಈ ಮಧ್ಯೆ, ಮಂಜಿನ ವಿಳಂಬಕ್ಕೆ ಕಾರಣವಾಗುವ ಕಳಪೆ ಸಿದ್ಧತೆಗಾಗಿ ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ಡಿಜಿಸಿಎ ತಲಾ 30 ಲಕ್ಷ ರೂ. ದಂಡ ವಿಧಿಸಿದೆ ಎಂದು ಡಿಜಿಸಿಎ ತಿಳಿಸಿದೆ. 

ಸಾಮಾಜಿಕ ಮಾಧ್ಯಮದಲ್ಲಿ ಜನರು ಗುಂಪುಗಳಲ್ಲಿ ಕುಳಿತು ವಿಮಾನದ ಪಕ್ಕದಲ್ಲಿ ಟಾರ್ಮ್ಯಾಕ್‌ನಲ್ಲಿ ಊಟ ಮಾಡುವುದನ್ನು ತೋರಿಸುವ ದೃಶ್ಯಗಳು ಹಾಗೂ ಪೈಲಟ್‌ಗೆ ಪ್ರಯಾಣಿಕರೊಬ್ಬರು ಹೊಡೆಯುವ ದೃಶ್ಯ ವೈರಲ್‌ ಆದ ಕಾರಣದಿಂದ ಪ್ರತಿ ಚಳಿಗಾಲದಲ್ಲಿ ಮಂಜು ವಿಳಂಬವು ಈ ವರ್ಷ ಹೆಚ್ಚು ಚರ್ಚೆಗೆ ಗ್ರಾಸವಾಯ್ತು.

ಟಾಯ್ಲೆಟ್‌ ಡೋರ್‌ ಲಾಕ್‌, 100 ನಿಮಿಷ ಮುಂಬೈ-ಬೆಂಗಳೂರು ವಿಮಾನದಲ್ಲೇ ಕಳೆದ ಪ್ರಯಾಣಿಕ!

ಈ ವಿಡಿಯೋದಲ್ಲಿ, ಗಂಟೆಗಳ ಕಾಲ ಕಾದಿದ್ದ ವಿಮಾನ ಪ್ರಯಾಣಿಕರು ಇಂಡಿಗೋ ವಿಮಾನದಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ಟಾರ್ಮ್ಯಾಕ್‌ನಲ್ಲಿ ಕುಳಿತುಕೊಂಡು, ಊಟ ಸೇವಿಸುತ್ತಿರುವುದು ಕಂಡುಬಂದಿದೆ. ದೆಹಲಿಯಲ್ಲಿ ಕಡಿಮೆ ಗೋಚರತೆಯಿಂದಾಗಿ ಗೋವಾ - ದೆಹಲಿ ವಿಮಾನವನ್ನು ಮುಂಬೈಗೆ ಡೈವರ್ಟ್‌ ಮಾಡಲಾದ ನಂತರ ಈ ಘಟನೆ ಸಂಭವಿಸಿತ್ತು.

ಇನ್ನು, ಜನವರಿ 14 ರಂದು ಗೋವಾದಿಂದ ದೆಹಲಿ ವಿಮಾನವನ್ನು ಒಳಗೊಂಡ ಘಟನೆಯ ಬಗ್ಗೆ ಇಂಡಿಗೋ ಸಹ ಹೇಳಿಕೆ ನೀಡಿದೆ. ದೆಹಲಿಯಲ್ಲಿ ಕಡಿಮೆ ಗೋಚರತೆಯ ಪರಿಸ್ಥಿತಿಯಿಂದಾಗಿ ವಿಮಾನವನ್ನು ಮುಂಬೈಗೆ ಡೈವರ್ಟ್‌ ಮಾಡಲಾಗಿದೆ. ಈ ಸಂಬಂಧ ನಾವು ನಮ್ಮ ಗ್ರಾಹಕರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಪ್ರಸ್ತುತ ಘಟನೆಯನ್ನು ಪರಿಶೀಲಿಸುತ್ತಿದ್ದೇವೆ. ಭವಿಷ್ಯದಲ್ಲಿ ಅಂತಹ ಯಾವುದೇ ನಿದರ್ಶನಗಳನ್ನು ತಪ್ಪಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದೂ ಹೇಳಿಕೆ ನೀಡಿತ್ತು. 

Latest Videos
Follow Us:
Download App:
  • android
  • ios