Dating Apps: ವಿವಾಹೇತರ ಡೇಟಿಂಗ್‌ ಆ್ಯಪ್ ಗ್ಲೀಡೆನ್‌ಗೆ ಭಾರತದಲ್ಲಿ 2 ಮಿಲಿಯನ್‌ ಬಳಕೆದಾರರು!


ಹೆಚ್ಚಿನ ಹೊಸ ಬಳಕೆದಾರರು (ಶೇ 66) ಶ್ರೇಣಿ 1 ನಗರಗಳಿಂದ ಬಂದಿದ್ದಾರೆ, ಉಳಿದವರು (ಶೇ 44) ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಿಂದ ಬಂದಿದ್ದಾರೆ ಎಂದು ಫ್ರಾನ್ಸ್‌ ಮೂಲದ ಕಂಪನಿ ಹೇಳಿದೆ.
 

France based  Extramarital dating app Gleeden  achieves 2mn users in India san

ನವದೆಹಲಿ (ಜ.17): ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಅಪ್ಲಿಕೇಶನ್‌ಗಳು ದೇಶದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಟಿಂಡರ್, ಬಂಬಲ್ ಮತ್ತು ಹಿಂಜ್‌ನೊಂದಿಗೆ, ಪ್ರೀತಿ ಮತ್ತು ಒಡನಾಟವನ್ನು ಬಯಸುವವರು ಸಮಾನ ಆಸಕ್ತಿಗಳೊಂದಿಗೆ ಪಾಲುದಾರರನ್ನು ಹುಡುಕುವಷ್ಟು ಅದೃಷ್ಟವಂತರಾಗಿದ್ದಾರೆ. ಹಾಗಿದ್ದರೂ, ವಿವಾಹೇತರ ಸಂಬಂಧಗಳ ಅಪ್ಲಿಕೇಶನ್ ಒಂದಿದೆ ಎನ್ನುವುದೇ ಬಹುತೇಕರಿಗೆ ಅಚ್ಚರಿಯಾಗಿ ಕಾಡಬಹುದು.  ಅಂತಹ ಅಪ್ಲಿಕೇಶನ್ ಸದ್ಯ ಆ್ಯಪ್ ಸ್ಟೋರ್‌ನಲ್ಲಿದೆ ಮತ್ತು ಅದಕ್ಕೆ ಸೈನ್ ಅಪ್ ಮಾಡಿದ ಹೆಚ್ಚಿನ ಸಂಖ್ಯೆಯ ಜನರು ಭಾರತೀಯರಾಗಿದ್ದಾರೆ ಎನ್ನುವುದು ಅಚ್ಚರಿಯ ವಿಚಾರವಾಗಿದೆ. ವಿವಾಹೇತರ ಸಂಬಂಧಗಳಿಗಾಗಿ ಫ್ರೆಂಚ್ ಮೂಲದ ಅಪ್ಲಿಕೇಶನ್ ಗ್ಲೀಡೆನ್ ಕಂಪನಿ, ಜಗತ್ತಿನಾದ್ಯಂತ 10 ಮಿಲಿಯನ್ ಬಳಕೆದಾರರನ್ನು ಗಳಿಸಿದ್ದಾಗಿ ಘೋಷಣೆ ಮಾಡಿದೆ. ಕಂಪನಿಯ ಮಾಹಿತಿಯ ಪ್ರಕಾರ, 10 ಮಿಲಿಯನ್‌ನಲ್ಲಿ 2 ಮಿಲಿಯನ್ ಬಳಕೆದಾರರು ಭಾರತದವರಾಗಿದ್ದಾರೆ. 2 ಮಿಲಿಯನ್ ಜನರಲ್ಲಿ, ಅವರ ಹೊಸ ಬಳಕೆದಾರರಲ್ಲಿ ಸುಮಾರು 66 ಪ್ರತಿಶತದಷ್ಟು ಜನರು ಶ್ರೇಣಿ 1 ನಗರಗಳಿಂದ ಮತ್ತು 44 ಪ್ರತಿಶತದಷ್ಟು ಶ್ರೇಣಿ 2 ಮತ್ತು 3 ನಗರಗಳಿಂದ ಬಂದವರಾಗಿದ್ದಾರೆ ಎಂದು ಮಾಹಿತಿ ನೀಡಿದೆ.

ಭಾರತದಲ್ಲಿ ತಮ್ಮ ಹೆಚ್ಚುತ್ತಿರುವ ಬಳಕೆದಾರರ ಕುರಿತಾಗಿ ಮಾತನಾಡಿರುವ ಗ್ಲೀಡೆನ್‌ನ ಕಂಟ್ರಿ ಮ್ಯಾನೇಜರ್ ಇಂಡಿಯಾದ ಸಿಬಿಲ್ ಶಿಡ್ಡೆಲ್, "ಭಾರತವು ವಿವಾಹಗಳು ಮತ್ತು ಏಕಪತ್ನಿತ್ವವನ್ನು ಪೂಜಿಸುವ ದೇಶವಾಗಿದೆ, ಅಪ್ಲಿಕೇಶನ್‌ನಲ್ಲಿ ಬಳಕೆದಾರರ ಸಂಖ್ಯೆ ಬೆಳೆಯುತ್ತಲೇ ಇದೆ. 2022 ರಲ್ಲಿಯೇ ನಮಗೆ + 18 ಪ್ರತಿಶತ ಹೊಸ ಬಳಕೆದಾರರನ್ನು ತಂದಿದೆ, ಇದು ಡಿಸೆಂಬರ್ 2021 ರಲ್ಲಿ 1.7 ಮಿಲಿಯನ್‌ನಿಂದ ಪ್ರಸ್ತುತ 2+ ಮಿಲಿಯನ್‌ಗೆ ಏರಿದೆ." ಎಂದು ತಿಳಿಸಿದ್ದಾರೆ.

ಅಮ್ಮನ ವಿಧೇಯ ಮಗನಾಗಿದ್ದ ಕಾರಣ ಕಿರಣ್‌ ಕುಮಾರ್‌ : ಸಂಬಂಧ ಮುರಿದು ಕೊಂಡ ರೇಖಾ

ಭಾರತದಲ್ಲಿ ಬಳಕೆದಾರರ ಹೆಚ್ಚಳವು ಏಕಪತ್ನಿತ್ವ ಮತ್ತು ಇತರ ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯಗಳಿಂದ ದೂರ ಸರಿಯುತ್ತಿರುವ ಬದಲಾಗುತ್ತಿರುವ ಸಾಮಾಜಿಕ ವಿಚಾರವನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿಯು ವಿವರಿಸಿದೆ. ತಮ್ಮ ಭಾರತೀಯ ಬಳಕೆದಾರರ ಕಲ್ಪನೆಯನ್ನು ನೀಡುತ್ತಾ, ಅವರು ಉನ್ನತ ಸಾಮಾಜಿಕ-ಆರ್ಥಿಕ ಹಿನ್ನೆಲೆಗೆ ಸೇರಿದವರು ಮತ್ತು ಎಂಜಿನಿಯರ್‌ಗಳು, ಉದ್ಯಮಿಗಳು, ಸಲಹೆಗಾರರು, ವ್ಯವಸ್ಥಾಪಕರು, ಕಾರ್ಯನಿರ್ವಾಹಕರು ಮತ್ತು ವೈದ್ಯರಂತಹ ವೃತ್ತಿಪರರು ಎಂದು ಕಂಪನಿ ಹೇಳಿದೆ.

ಪತಿಯ ಬಲವಂತದ ಸೆಕ್ಸ್ ಗೆ ನೀವೂ ಕಾರಣವಿರ್ಬಹುದು..

ಸಣ್ಣ ಶೇಕಡಾವಾರು ಗೃಹಿಣಿಯರು ಸಹ ಅಪ್ಲಿಕೇಶನ್‌ನ ಭಾಗವಾಗಿದ್ದಾರೆ ಎಂದು ಕಂಪನಿ ಹೇಳಿದೆ. ಆ್ಯಪ್‌ನಲ್ಲಿರುವ ಮಹಿಳೆಯರು ಹೆಚ್ಚಾಗಿ 26 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು. ಏತನ್ಮಧ್ಯೆ, ಪುರುಷರು ಹೆಚ್ಚಾಗಿ 30 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಮಹಿಳೆಯರ ಸುರಕ್ಷತೆಯ ವಿಚಾರವನ್ನು ಉದ್ದೇಶಿಸಿ ಕಂಪನಿಯು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿಕೊಂಡಿದೆ. 2023 ರ ಹೊತ್ತಿಗೆ, ಅಪ್ಲಿಕೇಶನ್ ಶೇ.40 ಮಹಿಳಾ ಬಳಕೆದಾರರು ಮತ್ತು ಶೇ. 60 ಪುರುಷ ಬಳಕೆದಾರರನ್ನು ಹೊಂದಿರಲಿದೆ ಎಂದಿದೆ.

Latest Videos
Follow Us:
Download App:
  • android
  • ios