ನಟಿ ಭಾವನಾ ಅವರು ಐವಿಎಫ್​ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಮುಕೇಶ್​ ಅಂಬಾನಿ ಕುಟುಂಬದ ನಾಲ್ವರು ಮಕ್ಕಳ ಬಗ್ಗೆ ಚರ್ಚೆ ಆಗ್ತಿದೆ. ಏನಿದು ಸುದ್ದಿ? 

ನಟಿ ಭಾವನಾ ಅವರು ಐವಿಎಫ್​ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಭಾರತದ ಅತ್ಯಂತ ಶ್ರೀಮಂತರು ಎನ್ನಿಸಿಕೊಂಡಿರುವ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮುಕೇಶ್​ ಅಂಬಾನಿ ಮನೆಯ ಸುದ್ದಿಯೂ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇದಾಗಲೇ ಹಲವು ಮಹಿಳೆಯರು ಐವಿಎಫ್​ ಮೂಲಕ ಮಗುವನ್ನು ಪಡೆದಿದ್ದಾರೆ. ಅದರಲ್ಲಿಯೂ ಬಾಲಿವುಡ್​ ಸೆಲೆಬ್ರಿಟಿಗಳೂ ಸಾಕಷ್ಟು ಮಂದಿ ಹೀಗೆ ಅಮ್ಮ-ಅಪ್ಪ ಆಗಿದ್ದಾರೆ. ನಟ ಆಮೀರ್ ಖಾನ್ ಮತ್ತು ಕಿರಣ್ ರಾವ್ ಅವರು ಐವಿಎಫ್ ಚಿಕಿತ್ಸೆ ಮೂಲಕ ಮಗ ಆಜಾದ್‌ನನ್ನು ಪಡೆದಿರುವುದರಿಂದ ಹಿಡಿದು ಕೆಲವು ತಾರೆಯರು ಇದೇ ರೀತಿ ಅಪ್ಪ-ಅಮ್ಮ ಆಗಿದ್ದಾರೆ.

ಆದರೆ ನಟಿ ಭಾವನಾ ಅವರು ಅವಿವಾಹಿತರಾಗಿರುವ ಕಾರಣ, ಇದು ಎಷ್ಟೊಂದು ಸದ್ದು ಮಾಡುತ್ತಿದೆ. ಅದೇನೇ ಇದ್ದರೂ ಐವಿಎಫ್​ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯದ ಸಮಯದಲ್ಲಿಯೇ ಮುಕೇಶ್​ ಅಂಬಾನಿ ಮನೆಯಲ್ಲಿ ಇಬ್ಬರು ಮಕ್ಕಳು ಐವಿಎಫ್​ ಮೂಲಕ ಹುಟ್ಟಿದ್ದರು ಎನ್ನುವುದು ವಿಶೇಷ. ಮುಕೇಶ್ ಮತ್ತು ನೀತಾ ಅಂಬಾನಿಯವರು ಐವಿಎಫ್ (In Vitro Fertilization) ಮೂಲಕ ತಮ್ಮ ಅವಳಿ ಮಕ್ಕಳಾದ ಇಶಾ ಮತ್ತು ಆಕಾಶ್ ಅವರನ್ನು ಪಡೆದಿದ್ದಾರೆ. ನೀತಾ ಅಂಬಾನಿ ಅವರು 44 ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ಅವಳಿ ಮಕ್ಕಳನ್ನು ಪಡೆದರು. ಕುತೂಹಲದ ವಿಷಯ ಏನೆಂದರೆ, ಉದ್ಯಮಿಯಾಗಿರುವ ಇಶಾ ಅಂಬಾನಿ ಅವರು ಕೂಡ ತಮ್ಮ ಅವಳಿ ಮಕ್ಕಳಾದ ಆದಿಯಾ ಮತ್ತು ಕೃಷ್ಣ ಅವರಿಗೆ ಐವಿಎಫ್ ಮೂಲಕವೇ ಜನ್ಮ ನೀಡಿದರು. ಇಶಾ ಅಂಬಾನಿ ಮತ್ತು ನೀತಾ ಅಂಬಾನಿ ಇಬ್ಬರೂ ಐವಿಎಫ್ ಚಿಕಿತ್ಸೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿ, ಬಂಜೆತನದ ಬಗ್ಗೆ ಇರುವ ಕಳಂಕವನ್ನು ಹೋಗಲಾಡಿಸಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದರು. ಅನಂತ್​ ಅಂಬಾನಿ ದಂಪತಿಗೆ ನೈಸರ್ಗಿಕವಾಗಿ ಹುಟ್ಟಿರುವ ಮಗ.

ಆದರೆ ಭಾವನಾ ಹಾಗೂ ಇವರಿಗೆ ಇರುವ ಒಂದೇ ವ್ಯತ್ಯಾಸ ಎಂದರೆ, ಅಂಬಾನಿ ಕುಟುಂಬವಾಗಲೀ ಅಥವಾ ಇನ್ನಿತರೇ ಹೆಚ್ಚಿನ ಸೆಲೆಬ್ರಿಟಿಗಳಾಗಿ ತಮ್ಮದೇ ಅಂಡಾಣು ಮತ್ತು ವೀರ್ಯಾಣುಗಳಿಂದ (ದಂಪತಿ) ಮಗುವನ್ನು ಪಡೆದರೆ, ಭಾವನಾ ಅವರು ದಾನಿಯ ವೀರ್ಯ ಪಡೆದು ಮಗು ಅವಳಿ ಮಗು ಪಡೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಮದುವೆಯಾದರೂ ಕೆಲವೊಂದು ಸಮಸ್ಯೆಗಳಿಂದ ಬಳಲುತ್ತಿದ್ದರೆ ಐವಿಎಫ್​ ಚಿಕಿತ್ಸೆಯ ಬಗ್ಗೆ ಹೇಳಲಾಗುತ್ತದೆ. ಉದಾಹರಣೆಗೆ, ಕಡಿಮೆ ವೀರ್ಯ ಎಣಿಕೆ, ಫಾಲೋಪಿಯನ್ ಟ್ಯೂಬ್‌ ಸಮಸ್ಯೆ, ಎಂಡೊಮೆಟ್ರಿಯೊಸಿಸ್ ಅಥವಾ ಯಾವುದೇ ಇತರ ವೈದ್ಯಕೀಯ ಸ್ಥಿತಿಯ ಕಾರಣದಿಂದಾಗಿ ಬಂಜೆತನವನ್ನು ಎದುರಿಸುತ್ತಿರುವ ದಂಪತಿಗೆ IVF ಅನ್ನು ಶಿಫಾರಸು ಮಾಡಲಾಗುತ್ತದೆ.

ಕಳಪೆ ಮೊಟ್ಟೆಯ ಗುಣಮಟ್ಟ, ವೀರ್ಯ-ಸಂಬಂಧಿತ ಸಮಸ್ಯೆಗಳು, ದೋಷಯುಕ್ತ ಭ್ರೂಣದ ಬೆಳವಣಿಗೆ, ಇಂಪ್ಲಾಂಟೇಶನ್ ವೈಫಲ್ಯ, ಹಾರ್ಮೋನುಗಳ ಅಸಮತೋಲನ, ಗರ್ಭಾಶಯದ ಅಸಹಜತೆಗಳು ಮತ್ತು ಎಂಡೊಮೆಟ್ರಿಯೊಸಿಸ್ ಅಥವಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCPS) ನಂತಹ ಆಧಾರವಾಗಿರುವ ಆರೋಗ್ಯ ಪರಿಸ್ಥಿತಿಗಳಿಂದಾಗಿ ವೈಫಲ್ಯ ಸಂಭವಿಸುತ್ತದೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ, ಯಶಸ್ಸಿನ ಪ್ರಮಾಣವು ಶೇಕಡ 45ರಷ್ಟಿದೆ. ನೀವು ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಮಾಡಲು ಶಕ್ತರಾಗಿರುವವರೆಗೆ IVF ಚಕ್ರಗಳನ್ನು ಪ್ರಯತ್ನಿಸುವುದರಲ್ಲಿ ಯಾವುದೇ ದೈಹಿಕ ಹಾನಿ ಇಲ್ಲ. ಐವಿಎಫ್‌ಗೆ 1 ರಿಂದ 3 ಲಕ್ಷ ರೂ. ಖರ್ಚಾಗಬಹುದು. ಈ ಬಗ್ಗೆ ಇದಾಗಲೇ ನಟಿ ಭಾವನಾ ಮಾತನಾಡಿದ್ದಾರೆ.