ಐಪಿಎಲ್ ಮಾಜಿ ಕಮೀಷನರ್ ಲಲಿತ್ ಮೋದಿ-ಸುಶ್ಮಿತಾ ಸೇನ್ ವಿವಾಹ?
ಐಪಿಎಲ್ ಮಾಜಿ ಕಮೀಷನರ್ ಆಗಿದ್ದ ಲಲಿತ್ ಮೋದಿ ಹಾಗೂ ಮಾಜಿ ಭುವನ ಸುಂದರಿ 46 ವರ್ಷದ ಸುಶ್ಮಿತಾ ಸೆನ್ ಮಾಲ್ಡೀವ್ಸ್‌ನಲ್ಲಿ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಲಿತ್ ಮೋದಿ ಮಾಡಿರುವ ಟ್ವೀಟ್ ಕೂಡ ಇವರಿಬ್ಬರೂ ಮದುವೆಯಾಗಿರುವ ಸೂಚನೆ ನೀಡಿದೆ.
ನವದೆಹಲಿ (ಜುಲೈ 14): ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರನ್ನು ವಿವಾಹವಾಗಿದ್ದಾರೆ. ಇಬ್ಬರೂ ಮಾಲ್ಡೀವ್ಸ್‌ನಲ್ಲಿ ವಿವಾಹವಾಗಿರುವ ಬಗ್ಗೆ ಲಲಿತ್ ಮೋದಿಯೇ ಅಧಿಕೃತವಾಗಿ ತಿಳಿಸಿದ್ದಾರೆ.. ಇತ್ತೀಚೆಗಷ್ಟೇ ಸುಶ್ಮಿತಾ ಸೇನ್ ಮದುವೆ ಬಗ್ಗೆ ಕಾಮೆಂಟ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಈ ನಡುವೆ ಸುಶ್ಮಿತಾ ಸೆನ್ ಹಾಗೂ ಲಲಿತ್ ಮೋದಿ ಡೇಟಿಂಗ್‌ನಲ್ಲಿದ್ದು ಇನ್ನೂ ಮದುವೆಯಾಗಿಲ್ಲ ಎನ್ನುವ ವರದಿಯೂ ಇದೆ. ಸುಶ್ಮಿತಾ ಸೆನ್ ಅಧಿಕೃತವಾಗಿ ಈವರೆಗೂ ವಿವಾಹವಾಗಿಲ್ಲ. ಆದರೆ, ಮೂರು ಪ್ರಮುಖ ರಿಲೇಷನ್‌ಷಿಪ್‌ನಲ್ಲಿದ್ದರು. 46 ವರ್ಷದ ಸುಶ್ಮಿತಾ ಸೆನ್ ಈವರೆಗೂ ಮದುವೆಯಾಗುವ ನಿರ್ಧಾರವನ್ನು ಮಾಡಿಲ್ಲ."ಮಾಲ್ಡೀವ್ಸ್ ಸೇರಿದಂತೆ ಇತರೆಡೆ ಟೂರ್ ಮಾಡಿದ ಬಳಿಕ ಈಗ ಲಂಡನ್‌ಗೆ ನನ್ನ ಕುಟುಂಬದೊಂದಿಗೆ ವಾಪಸಾಗಿದ್ದೇನೆ. ಈಕೆ ನನ್ನ ಅರ್ಧಾಂಗಿ ಸುಶ್ಮಿತಾ ಸೇನ್. ನನ್ನ ಹೊಸ ಜೀವನದಲ್ಲಿ ಹೊಸ ಆರಂಭವಾಗುತ್ತಿದೆ. ಬಹಳ ಸಂಭ್ರಮವಾಗಿದೆ' ಎಂದು 56 ವರ್ಷದ ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.ಮಾಲ್ಡೀವ್ಸ್‌ನಲ್ಲಿ ಇವರಿಬ್ಬರೂ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದ ಬೆನ್ನಲ್ಲಿಯೇ ಮತ್ತೊಂದು ಟ್ವೀಟ್ ಮಾಡಿದ ಲಲಿತ್ ಮೋದಿ, ಒಂದು ಸಣ್ಣ ಸ್ಪಷ್ಟನೆ ನೀಡುತ್ತಿದ್ದೇನೆ. ನಾವಿನ್ನೂ ಮದುವೆಯಾಗಿಲ್ಲ. ಪರಸ್ಪರ ಡೇಟಿಂಗ್‌ನಲ್ಲಿದ್ದು, ಶೀಘ್ರವೇ ವಿವಾಹವಾಗಲಿದ್ದೇವೆ ಎಂದು ಹೇಳಿದ್ದಾರೆ.
ಎರಡೂವರೆ ವರ್ಷಗಳ ಕಾಲ ರೊಹಮನ್ ಜೊತೆ ಡೇಟಿಂಗ್: ಸುಶ್ಮಿತಾ ಸೇನ್ ಇತ್ತೀಚೆಗೆ ರೊಹಮನ್ ಶ್ವಾಲ್ ಎನ್ನುವ ವ್ಯಕ್ತಿಯ ಜೊತೆ ಎರಡೂವರೆ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಇವರಿಬ್ಬರ ನಡುವೆ 15 ವರ್ಷಗಳ ಅಂತರವಿತ್ತು. ಸುಶ್ಮಿತಾ ಸೇನ್‌ಗೆ 46 ವರ್ಷವಾಗಿದ್ದರೆ, ರೊಹಮನ್‌ಗೆ 30 ವರ್ಷ ವಯಸ್ಸಾಗಿತ್ತು. ಎರಡೂವರೆ ವರ್ಷವೂ ಇವರು ಲಿವ್ ಇನ್ ಸಂಬಂಧದಲ್ಲಿದ್ದರು. ಸುಶ್ಮಿತಾ ಸೇನ್ ಅವರ ಇಬ್ಬರು ಪುತ್ರಿಯರಾದ ರೀನೆ ಹಾಗೂ ಆಲಿಶಾ ಜೊಗೆಯೂ ರೊಹಮನ್ ಉತ್ತಮ ಬಾಂಧವ್ಯ ಹೊಂದಿದ್ದರು. ಇವರಿಬ್ಬರೂ ಕೂಡ ರೊಹಮನ್ ತಮ್ಮ ಅಪ್ಪ ಎಂದೇ ಹೇಳಿಕೊಂಡಿದ್ದಾರೆ.
ರೊಹಮನ್ ಅಲ್ಲದೆ, ಸುಶ್ಮಿತಾ ಸೆನ್, ನಿರ್ದೇಶಕ ವಿಕ್ರಮ್ ಭಟ್, ನಟ ರಣದೀಪ್ ಹೂಡಾ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್, ಮುಂಬೈ ಮೂಲದ ರೆಸ್ಟೋರೆಂಟ್ ಮಾಲೀಕ ಹೃತಿಕ್ ಭಾಶಿನ್ ಹಾಗೂ ನಿರ್ದೇಶಕ ಮುದಸ್ಸರ್ ನಜೀರ್ ಅವರೊಂದಿಗೆ ಲಿವ್ ಲಿನ್ ರಿಲೇಷನ್‌ಷಿಪ್ ಹಾಗೂ ಡೇಟಿಂಗ್‌ನಲ್ಲಿದ್ದರು.
ಇದನ್ನೂ ಓದಿ: ಲಲಿತ್ ಮೋದಿ ದಂಪತಿಗೆ ಕಪ್ಪು ಹಣದ ಸಂಕಷ್ಟ!
ವಿವಾದಿತ ವ್ಯಕ್ತಿ ಲಲಿತ್ ಮೋದಿ: 12 ವರ್ಷಗಳ ಹಿಂದೆ ದೇಶವನ್ನು ಬಿಟ್ಟು ಹೋಗಿದ್ದ ಲಿಲಿತ್ ಮೋದಿ ಈಗಲೂ ಐಪಿಎಲ್ ಎನ್ನುವ ಟಿ20 ಕ್ರಿಕೆಟ್ ಟೂರ್ನಿ ಆರಂಭಿಸಿದ್ದು ತಾವು ಎಂದು ಹೇಳುತ್ತಾರೆ. 2005 ರಿಂದ 2010ರವರೆಗೆ ಬಿಸಿಸಿಐನ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರ. 2008ರಿಂದ 2010ರವರೆಗೆ ಐಪಿಎಲ್‌ನ ಕಮೀಷನರ್/ಚೇರ್ಮನ್ ಆಗಿದ್ದರು. ವಿವಿಧ ಆರೋಪಗಳ ಕೇಲ 2010ರಲ್ಲಿ ಲಲಿತ್ ಮೋದಿ ಅವರನ್ನು ಈ ಸ್ಥಾನದಿಂದ ಅಮಾನತು ಮಾಡಲಾಗಿದ್ದರೆ, ಬಿಸಿಸಿಐನಿಂದ ನಿಷೇಧ ಹೇರಲಾಗಿತ್ತು. ಅಕ್ರಮ ಹಣ ವರ್ಗಾವಣೆ ಆರೋಪಗಳು ಬೀಳುತ್ತಿದ್ದ ಬೆನ್ನಲ್ಲಿಯೇ 2010ರಲ್ಲಿ ದೇಶವನ್ನು ತೊರೆದು ಲಂಡನ್‌ನಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: ಮಗಳ ನಿರ್ಧಾರದ ಬಗ್ಗೆ ಭಯಗೊಂಡಿದ್ದರೆ ಸುಶ್ಮೀತಾ ಸೇನ್ ಅಪ್ಪ?
ಅಮ್ಮನ ಸ್ನೇಹಿತೆಯನ್ನು ಮದುವೆಯಾಗಿದ್ದ ಲಲಿತ್ ಮೋದಿ: ವಿದೇಶದಲ್ಲಿ ಓದುತ್ತಿದ್ದಾಗ ಲಲಿತ್ ತನ್ನ ತಾಯಿಯ ಸ್ನೇಹಿತೆ ಮೀನಲ್‌ರನ್ನು ಪ್ರೀತಿಸುತ್ತಿದ್ದರು. ಮೀನಲ್, ಲಲಿತ್ ಅವರಿಗಿಂತ 9 ವರ್ಷ ದೊಡ್ಡವರಾಗಿದ್ದರು, ಆದರೆ ಇದರ ಹೊರತಾಗಿಯೂ, ಮೋದಿ ಮತ್ತು ಮಿನಲ್ ನಡುವೆ ನಿಕಟತೆ ಬೆಳೆಯಲು ಪ್ರಾರಂಭಿಸಿತು. ಇನ್ನೇನು ನೈಜೀರಿಯಾ ಮೂಲದ ಉದ್ಯಮಿ ಜ್ಯಾಕ್ ಸಾಗರಾನಿ ಅವರನ್ನು ಮದುವೆಯಾಗಬೇಕು ಎನ್ನುವ ಹಂತದಲ್ಲಿ ಲಲಿತ್ ಮೋದಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಇದರಿಂದ ಬಹಳ ಸಿಟ್ಟಾಗಿದ್ದ ಮೀನಲ್, ನಾಲ್ಕು ವರ್ಷಗಳ ಕಾಲ ಲಲಿತ್ ಮೋದಿಯೊಂದಿಗೆ ಮಾತುಕತೆ ನಿಲ್ಲಿಸಿದ್ದರು.