ಮಗಳ ನಿರ್ಧಾರದ ಬಗ್ಗೆ ಭಯಗೊಂಡಿದ್ದರೆ ಸುಶ್ಮೀತಾ ಸೇನ್ ಅಪ್ಪ?

ಮಾಜಿ ಭುವನ ಸುಂದರಿ ಸುಶ್ಮೀತಾ ಸೇನ್ ಬಾಲಿವುಡ್‌ನ ಹೆಮ್ಮೆಯ ಸಿಂಗಲ್ ಪೇರೆಂಟ್‌ಗಳಲ್ಲಿ ಒಬ್ಬರು. ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಲಹುತ್ತಿರುವ ಸುಶ್ಮೀತಾ ಸೇನ್‌, ಸಿನಿಮಾ ರಂಗದ ಗಟ್ಟಿಗಿತ್ತಿ ಹೆಣ್ಣು ಮಗಳು.

Miss Universe 1994 pageant winner actress Sushmita Sen talked about adoption akb

ಮಾಜಿ ಭುವನ ಸುಂದರಿ ಸುಶ್ಮೀತಾ ಸೇನ್ ಬಾಲಿವುಡ್‌ನ ಹೆಮ್ಮೆಯ ಸಿಂಗಲ್ ಪೇರೆಂಟ್‌ಗಳಲ್ಲಿ ಒಬ್ಬರು. ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಲಹುತ್ತಿರುವ ಸುಶ್ಮೀತಾ ಸೇನ್‌, ಸಿನಿಮಾ ರಂಗದ ಗಟ್ಟಿಗಿತ್ತಿ ಹೆಣ್ಣು ಮಗಳು. ದತ್ತು ಪಡೆಯುವ ಸಂದರ್ಭದಲ್ಲಿ ಎದುರಾದ ತೊಡಕುಗಳ ಬಗ್ಗೆ ಈಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುಶ್ಮಿತಾ ಸೇನ್ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮೊದಲ ಬಾರಿ ಮಗು ದತ್ತು ಪಡೆದಾಗ ನ್ಯಾಯಾಧೀಶರು ಸುಶ್ಮೀತಾ ತಂದೆಯವರನ್ನು, ಮಗುವನ್ನು ದತ್ತು ಪಡೆದ ಮಗಳು ಮುಂದೆಂದೂ ಮದುವೆಯಾಗಲಾರಳು ಎಂದು ಭಯವಾಗುತ್ತಿದೆಯೇ ಎಂದು ಪ್ರಶ್ನಿಸಿದ್ದರಂತೆ. 

ಟ್ವೀಕ್ ಇಂಡಿಯಾಗಾಗಿ (Tweak India) ಟ್ವಿಂಕಲ್ ಖನ್ನಾ (Twinkle Khanna) ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ, ಸುಶ್ಮಿತಾ ಅವರು ಮೊದಲ ಮಗು ರೆನೀಯನ್ನು ದತ್ತು ಪಡೆದ ಸಮಯವನ್ನು ನೆನಪಿಸಿಕೊಂಡರು. ದತ್ತು ಪಡೆಯುವ ಯೋಚನೆ ನನಗೆ ಮೊದಲೇ ಇತ್ತು. ಈ ಮಧ್ಯೆ 29 ವರ್ಷ ವಯಸ್ಸಿನ ವಿಚ್ಛೇದಿತ ಮಹಿಳೆಯೊಬ್ಬರಿಗೆ ಕೋರ್ಟ್ ದತ್ತು ಪಡೆಯಲು ಅವಕಾಶ ನೀಡಿತ್ತು. ಇದನ್ನು ಗಮನಿಸಿಕೊಂಡಿದ್ದ ನಾನು 21 ನೇ ವರ್ಷಕ್ಕೆ ಮಗುವನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಿದೆ ಎಂದು ಸುಶ್ಮಿತಾ ಹೇಳಿದ್ದಾರೆ. 

ಸುಶ್ಮಿತಾ ಸೇನ್ ಸೇರಿದಂತೆ ಬ್ರೆಸ್ಟ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾದ ಟಾಪ್ ನಟಿಯರು

ರೇನಿ ಅವರನ್ನು ದತ್ತು ಪಡೆದ ಆರು ತಿಂಗಳ ಬಳಿಕ ನ್ಯಾಯಾಲಯದ ವಿಚಾರಣೆ ನಡೆಯಿತು. ನಾನು ಅಪ್ಪ ಮತ್ತು ಚಾಲಕನಿಗೆ ಮೊದಲೇ ಹೇಳಿದ್ದೆ ಕೊಠಡಿಯಿಂದ ಹೊರಡುತ್ತಿದ್ದಂತೆ ಗಾಡಿ ಸ್ಟಾರ್ಟ್‌ ಮಾಡಿ ನಾವು ರೇನಿ ಜೊತೆ ಕಾರಿನಲ್ಲಿ ಪರಾರಿಯಾಗೋಣ ಎಂದು ಹೇಳಿದ್ದೆ. ಇದು ತಮಾಷೆ ಆಗಿರಲಿಲ್ಲ. ರೇನಿ ನನ್ನನ್ನು ಅಮ್ಮ ಎಂದು ಕರೆಯಲು ಆರಂಬಿಸಿದ್ದಳು ಎಂದು ಸುಶ್ಮಿತಾ ಹೇಳಿದ್ದಾರೆ. 

ಆ ಸಂದರ್ಭದಲ್ಲಿ ನಾನು ತುಂಬಾ ಭಾವುಕಳಾಗಿದ್ದೆ. ಪೋಷಕರ ಕರ್ತವ್ಯವನ್ನು ನಿಜವಾಗಿಯೂ ಚೆನ್ನಾಗಿ ಮಾಡುವುದಾಗಿ ನ್ಯಾಯಾಧೀಶರಿಗೆ ಭರವಸೆ ನೀಡಿದ್ದೆ ಎಂದು ಅವರು ಹೇಳಿದ್ದಾರೆ. ಇದಾದ ಬಳಿಕ ನ್ಯಾಯಾಧೀಶರು ಆಕೆಯ ತಂದೆಗೆ ಮಗಳ ನಿರ್ಧಾರಕ್ಕೆ ನಿಮಗೆ ಒಪ್ಪಿಗೆ ಇದೆಯೇ ಎಂದು ಪ್ರಶ್ನಿಸಿದರು. ಏಕೆಂದರೆ ಅದು ಅವರ ಮದುವೆ ಯೋಜನೆಗಳು ಮತ್ತು ಅವಳ ಉಳಿದ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಧೀಶರು ಆತಂಕ ವ್ಯಕ್ತಪಡಿಸಿದ್ದರು. 

ಮಾಜಿ ಪ್ರಿಯಕರ Rohaman ಜೊತೆ Sushmita Sen; ಏನ್ ನಡಿತಿದೆ ಎಂದ ನೆಟಿಜನ್ಸ್

ಯಾವ ತಂದೆಯೂ ಇದಕ್ಕೆ ಒಪ್ಪಲು ಸಾಧ್ಯವಿಲ್ಲ. ಆದರೆ ಸುಶ್ಮೀತಾಳನ್ನು ಒಬ್ಬರ ಹೆಂಡತಿಯಾಗಿ ಬಾಳುವಂತೆ ಮಾತ್ರ ತಾನು ಬೆಳೆಸಿಲ್ಲ ಎಂದು ನ್ಯಾಯಾಧೀಶರ ಮುಂದೆ ಸುಶ್ಮಿತಾ (Sushmita sen) ಅವರ ತಂದೆ ಶುಬೀರ್ ಸೇನ್ (Shubeer Sen) ಖಚಿತವಾಗಿ ಹೇಳಿದ್ದರು. ಅವಳು ಈ ಮಾತೃತ್ವವನ್ನು ಆರಿಸಿಕೊಂಡಿದ್ದಾಳೆ ಮತ್ತು ನನ್ನ ಮಗಳು  ಅದನ್ನು ಚೆನ್ನಾಗಿ ನಿಭಾಯಿಸುತ್ತಾಳೆ ಎಂದಿದ್ದರು. ಹೀಗಾಗಿ ಅಂತಿಮವಾಗಿ ನ್ಯಾಯಾಧೀಶರು ರೆನೀಯನ್ನು ಮನೆಗೆ ಕರೆದೊಯ್ಯಲು ಸುಶ್ಮಿತಾಗೆ ಅನುಮತಿ ನೀಡಿದರು ಎಂದು ಸುಶ್ಮೀತಾ ಹೇಳಿದ್ದಾರೆ.

ಸುಶ್ಮಿತಾ ಸೇನ್ ರೆನೀ ಸೇನ್ ಮತ್ತು ಅಲಿಸಾ ಸೇನ್ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ನಟಿ ಸುಶ್ಮಿತಾ ಸೇನ್ ತನ್ನ ಹಿರಿಯ ಮಗಳು ರೆನೀ ಸೇನ್ ಅವರನ್ನು 2000ನೇ ಇಸವಿಯಲ್ಲಿ ದತ್ತು ಪಡೆದಿದ್ದರು. ನಂತರ 2010 ರಲ್ಲಿ ಅಲಿಸಾ ಎಂಬಾಕೆಯನ್ನು ಎರಡನೇ ಮಗಳಾಗಿ ದತ್ತು ಸ್ವೀಕರಿಸಿದರು. 1994 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿ ಗೆದ್ದ ಸುಶ್ಮಿತಾ ನಂತರ 1996 ರಲ್ಲಿ ಮಹೇಶ್ ಭಟ್ ಅವರ ದಸ್ತಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಅವರು ಬಿವಿ ನಂ 1, ಫಿಜಾ, ಆಂಖೇನ್, ಮೈ ಹೂ ನಾ ಮತ್ತು ಮೈನೆ ಪ್ಯಾರ್ ಕ್ಯೂಂ ಕಿಯಾ? ಮತ್ತು ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.  
 

Latest Videos
Follow Us:
Download App:
  • android
  • ios