ಚಕ್ರಕ್ಕೆ ಸಿಲುಕಿ ಗಂಭೀರ ಗಾಯವಾದರೂ ಸತ್ತ ನಾಗನಿಗಾಗಿ ಕಾದು ಕುಳಿತ ನಾಗಿಣಿ: ಕಣ್ಣೀರಿನ ವಿಡಿಯೋ ವೈರಲ್​

ಚಕ್ರಕ್ಕೆ ಸಿಲುಕಿ ಮೃತಪಟ್ಟ ನಾಗ ಏಳುತ್ತಾನೆ ಎನ್ನುವ ಭರವಸೆಯಲ್ಲಿ ನಾಗಿಣಿ ಕಾದು ಕುಳಿತಿರುವ ಕಣ್ಣೀರು ತರಿಸುವ ವಿಡಿಯೋ ವೈರಲ್​ ಆಗಿದೆ. 
 

female snake standing nearby after the death of the male snake is going viral on social media

ಹೊಲದಲ್ಲಿ ಕೆಲಸ ಮಾಡುವ ವೇಳೆ ಜೆಸಿಬಿಯ ಚಕ್ರಕ್ಕೆ ಸಿಲುಕಿ ನಾಗರಾಜ ಸತ್ತು ಹೋಗಿದ್ದಾನೆ. ಆದರೆ ಇದರ ಅರಿವು ಈ ನಾಗಿಣಿಗೆ ಇಲ್ಲ. ಸತ್ತು ಬಿದ್ದಿದ್ದ ನಾಗನ ಪಕ್ಕದಲ್ಲಿಯೇ ಆತ ಏಳುತ್ತಾನೆ ಎಂದು ಗಂಟೆಗಟ್ಟಲೆ ಕಾಯುತ್ತಾ ಕುಳಿತಿದೆ ಈ ನಾಗರ. ಆದರೆ  ಏನು ಮಾಡಿದರೂ ನಾಗರಹಾವು ಮಾತ್ರ ಏಳಲೇ ಇಲ್ಲ. ಕಣ್ಣೀರು ತರಿಸುವಂಥ ಈ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.  

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಗಂಡು ಹಾವಿನ ಸಾವಿನ ನಂತರ, ಹೆಣ್ಣು ಹಾವು ಹತ್ತಿರದಲ್ಲಿ ನಿಂತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜೆಸಿಬಿ ಡಿಕ್ಕಿ ಹೊಡೆದ ಪರಿಣಾಮ ಹಾವು ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಗಂಡು ಹಾವಿನ ಮೃತ ದೇಹದ ಬಳಿ ಹೆಣ್ಣು ಹಾವು ತನ್ನ ಹೆಡೆಯನ್ನು ಮೇಲಕ್ಕೆತ್ತಿ ಸುಮಾರು ಒಂದು ಗಂಟೆ ಕುಳಿತಿತ್ತು ಎಂದು ಜನರು ಹೇಳಿರುವುದಾಗಿ ಈ ವಿಡಿಯೋದಲ್ಲಿ ಬರೆಯಲಾಗಿದೆ.  ಇಲ್ಲಿಯ ಕೃಷಿಕರು  ಹೊಲವನ್ನು ಸ್ವಚ್ಛ ಮಾಡಲು ಜೆಸಿಬಿ ಕರೆಸಿದ್ದರು. ಅಲ್ಲಿ ಈ ನಾಗರ ಜೋಡಿ ಇತ್ತು. ಆದರೆ ಕೆಲಸ ಮಾಡುವಾಗ ಇದು ಗಮನಕ್ಕೆ ಬಾರಲಿಲ್ಲ. ಅಕಸ್ಮಾತ್ತಾಗಿ ಚಕ್ರಕ್ಕೆ ಸಿಲುಕಿ ಗಂಡು ನಾಗ ಸಾವನ್ನಪ್ಪಿದೆ. ಹೆಣ್ಣು ಹಾವು ಕೂಡ ಗಂಭೀರವಾಗಿ ಗಾಯಗೊಂಡಿದ್ದರೂ, ಜಾಗ ಬಿಟ್ಟು ಕದಲಿಲ್ಲ ಎನ್ನಲಾಗುತ್ತಿದೆ. ಯಾರಾದರೂ ನನ್ನ ಪ್ರಿಯಕನನ್ನು ಏಳಿಸುತ್ತಾರೆಯೋ ಎಂದು ಹಾವು ದನನೀಯವಾಗಿ ಎಲ್ಲೆಡೆ ನೋಡುವಂತೆ ಕಾಣಿಸುತ್ತಿದೆ ಈ ವಿಡಿಯೋ. 

ಅಣ್ಣಾವ್ರೇ... ದಾರಿ ಬಿಡಿ... ತನ್ನ ದಾರಿಗೆ ಅಡ್ಡವಾಗಿದ್ದ ವ್ಯಕ್ತಿಗೆ ಸೂಚನೆ ಕೊಟ್ಟ ಆನೆಯ ಕ್ಯೂಟ್​ ವಿಡಿಯೋ ವೈರಲ್​
 
ಇದು ಕೊನೆಗೆ ಜೆಸಿಬಿ ಚಾಲಕನ ಗಮನಕ್ಕೆ ಬಂದಿದೆ. ಕೆಲಸವನ್ನು ಅರ್ಧಕ್ಕೇ ನಿಲ್ಲಿಸಲಾಯಿತು. ಅಲ್ಲಿಯೇ ಇದ್ದವರು ಇದರ ವಿಡಿಯೋ ಮಾಡಿದ್ದಾರೆ. ನಾಗಿಣಿಗೆ ನೀರು ಕೊಟ್ಟರೂ ಅದು ಸ್ವಲ್ಪವೂ ಕದಲದೇ ಮೃತಪಟ್ಟ ನಾಗನನ್ನೇ ನೋಡುತ್ತಿತ್ತು ಎಂದು ಗ್ರಾಮಸ್ಥರು ತಿಳಿಸುತ್ತಾರೆ. ಸುಮಾರು ಒಂದು ಗಂಟೆ ಅದು ಅಲ್ಲಿಂದ ಕದಲಲೇ ಇಲ್ಲ. 

ತೋಟದ ಮಾಲೀಕರು ಕೂಡಲೇ  ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕರು,  ಗಾಯಗೊಂಡ ಹಾವಿಗೆ ಚಿಕಿತ್ಸೆ ನೀಡಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. 

ಸೌಂದರ್ಯ ವೃದ್ಧಿಗೆ ನಾಗರಹಾವಿನ ಪಕೋಡಾ: ಒಂದಕ್ಕೆ ಒಂದು ಸಾವಿರ ರೂ! ಮೈ ಝುಂ ಎನ್ನೋ ವಿಡಿಯೋ ವೈರಲ್​

Latest Videos
Follow Us:
Download App:
  • android
  • ios