ವೈರಲ್ ವಿಡಿಯೋದಲ್ಲಿ, ಆನೆಯೊಂದು ದಾರಿಯಲ್ಲಿ ನಿಂತಿದ್ದ ವ್ಯಕ್ತಿಗೆ ಮಣ್ಣೆರಚಿ ಎಚ್ಚರಿಕೆ ನೀಡಿ ಸಾಗಿದೆ. ಪ್ರಾಣಿಗಳು ಸುಮ್ಮನೆ ಹಾನಿ ಮಾಡುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ವನ್ಯಮೃಗಗಳು ಮತ್ತು ಪ್ರಾಣಿಗಳ ಸಂಘರ್ಷ ದಶಕದಿಂದಲೇ ನಡೆಯುತ್ತಾ ಬಂದಿವೆ. ಅದರಲ್ಲಿಯೂ ಆನೆಗಳ ಹಾವಳಿಯಿಂದ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಷ್ಟೋ ಬೆಳೆಗಳು ನಾಶವಾಗಿವೆ. ಆದರೆ ಆನೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿಯ ಮೂಲ ಹುಡುಕಿದರೆ ತಪ್ಪು ಕಾಣುವುದು ಮನುಷ್ಯರದ್ದೇ ಎನ್ನುವ ವಾದವೂ ಇದೆ. ಏಕೆಂದರೆ ಕಾಡಿನಲ್ಲಿರಬೇಕಾಗಿದ್ದ ಕಾಡುಮೃಗಗಳು ಆಹಾರ ಸಿಗದೇ ಅಥವಾ ಇನ್ನಾವುದೋ ಕಾರಣಕ್ಕೆ ಊರೊಳಗೆ ಬರುವುದು ಮಾಮೂಲಾಗಿಬಿಟ್ಟಿದೆ. ಕಾಡು ಪ್ರದೇಶಗಳನ್ನು ಕಡಿದು ಅದರ ಜಾಗದಲ್ಲಿಯೂ ಮನೆಯನ್ನು ಕಟ್ಟಿಕೊಂಡರೆ ಕಾಡುಪ್ರಾಣಿಗಳು ಮಾಡುವುದಾದರೂ ಏನು ಎಂಬ ಬಗ್ಗೆಯೂ ಈಗ ಚರ್ಚೆಗಳು ಶುರುವಾಗಿದೆ. ಹಾಗೆ ಹೇಳಬೇಕು ಎಂದರೆ, ಕಾಡು ಪ್ರಾಣಿಗಳು ನಾಡಿಗೆ ಬರುತ್ತಿಲ್ಲ, ಬದಲಿಗೆ ಮನುಷ್ಯರು ಎನಿಸಿಕೊಂಡವರೇ ಅವುಗಳ ಜಾಗಕ್ಕೆ ಲಗ್ಗೆ ಇಡುತ್ತಿದ್ದು, ಅವು ಅಲ್ಲಿ ಬರುವುದರಲ್ಲಿ ತಪ್ಪೇನೂ ಇಲ್ಲ ಎಂಬ ವಾದವೂ ಇದೆ. ತನ್ನ ಜಾಗವನ್ನು ಆಕ್ರಮಿಸಿಕೊಂಡಿರುವುದು ಒಂದು ಕಡೆ, ಆಹಾರ ಸಿಗದೇ ಕೊರಗುವುದು ಇನ್ನೊಂದು ಕಡೆ... ಕಾರಣ ಏನೇ ಇರಲಿ.. ವನ್ಯಮೃಗಗಳು ನಾಡಿಗೆ ಬರುವುದು ಸಾಮಾನ್ಯವಾಗಿದೆ.

ಆದರೆ, ಯಾವುದೇ ಪ್ರಾಣಿಗಳು ಸುಖಾ ಸುಮ್ಮನೇ ಹಾನಿ ಮಾಡುವುದಿಲ್ಲ ಎನ್ನುವುದೂ ಅಷ್ಟೇ ದಿಟ. ಅವುಗಳಿಗೆ ಏನಾದ್ರೂ ಸಮಸ್ಯೆಯಾದಾಗ ಪ್ರಾಣ ತೆಗೆಯದೇ ಬಿಡಲಾರದು. ಆದರೆ ಇಲ್ಲೊಂದು ಕುತೂಹಲದ ವಿಡಿಯೋ ವೈರಲ್​ ಆಗಿದ್ದು, ಇದರಲ್ಲಿ ಆನೆಯೊಂದು ತಾನು ನಡೆಯುವ ದಾರಿಯಲ್ಲಿದ್ದ ವ್ಯಕ್ತಿಯೊಬ್ಬನಿಗೆ ಸಿಗ್ನಲ್​ ಕೊಟ್ಟು, ನಂತರ ತಾನು ಆ ದಾರಿಯಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಹೇಳಿಕೇಳಿ ಒಂಟಿ ಸಲಗ. ಅದಕ್ಕೇನಾದರೂ ಕೋಪ ಬಂದಿದ್ದರೆ ಅಥವಾ ಯಾರಾದರೂ ಕೀಟಲೆ ಮಾಡಿದ್ದರೆ, ಅದರ ದಾರಿಗೆ ಅಡ್ಡವಾಗಿ ನಿಂತಿದ್ದ ವ್ಯಕ್ತಿ ಒಂದೇ ಕ್ಷಣದಲ್ಲಿ ನುಜ್ಜುಗುಜ್ಜಾಗುತ್ತಿದ್ದ. 

ಮನೆಯೊಳಗೇ ನುಗ್ಗಿದ ಚಿರತೆ: ನಾಯಿ ಬೊಗಳಿದ್ರೂ ಏಳಲಿಲ್ಲ ಮನೆಯವರು! ಮುಂದೇನಾಯ್ತು? ಶಾಕಿಂಗ್‌ ವಿಡಿಯೋ ವೈರಲ್‌

ಆದರೆ, ಈ ವಿಡಿಯೋದಲ್ಲಿ ನೋಡುವಂತೆ, ವ್ಯಕ್ತಿ ಏನೋ ಆಲೋಚನೆ ಮಾಡುತ್ತಾ ನಿಂತಿದ್ದಾನೆ. ಹಿಂದುಗಡೆಯಿಂದ ಆನೆ ಬಂದಿದೆ. ಆದರೆ ಅದರ ಅರಿವು ಈ ವ್ಯಕ್ತಿಗೆ ಇಲ್ಲ. ಆನೆ ಆತನ ಹಿಂಬದಿ ಬಂದು ಸೊಂಡಿಲಿನಿಂದ ಅಲ್ಲಿದ್ದ ಮಣ್ಣನ್ನು ಅವನ ಕಾಲ ಮೇಲೆ ಎರಚಿದೆ. ಆಗ ವ್ಯಕ್ತಿಗೆ ಯಾರೋ ಬಂದಿದ್ದಾರೆ ಎಂದು ಹಿಂದಿರುಗಿ ನೋಡಿದಾಗ ಆತನ ಜೀವ ಬಾಯಲ್ಲಿ ಬಂದ ಅನುಭವ ಆಗಿ ಇತ್ತ ಕಡೆ ಓಡಿ ಬಂದಿದ್ದಾನೆ. ಆನೆಯನ್ನು ನೋಡಿದ ತಕ್ಷಣ, ಅಲ್ಲಿ ಯಾರಾದರೂ ವೀಕ್​ ಹೃದಯವರು ಇದ್ದರೆ ಹೃದಯಾಘಾತ ಗ್ಯಾರೆಂಟಿ ಆಗಿತ್ತು. ಆದರೆ ಅದೃಷ್ಟವಶಾತ್​ ಆ ಆನೆಯೂ ಈ ವ್ಯಕ್ತಿಗೆ ಏನೂ ಮಾಡಲಿಲ್ಲ, ಆನೆಯನ್ನು ನೋಡಿ ಹೆದರಿದರೂ ವ್ಯಕ್ತಿಯ ಹೃದಯ ಗಟ್ಟಿ ಇದ್ದುದರಿಂದ ಪಾರಾಗಿದ್ದಾನೆ.

ಒಟ್ಟಿನಲ್ಲಿ ಈ ವೈರಲ್​ ವಿಡಿಯೋಗೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಯಾವುದೇ ಪ್ರಾಣಿಗಳು ಮನುಷ್ಯನಿಗೆ ಸುಖಾಸುಮ್ಮನೆ ತೊಂದರೆ ಕೊಡುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ. ಇನ್ನು ಕೆಲವರು ದಾರಿ ಬಿಡಪ್ಪಾ ಎಂದು ಆನೆ ಹೇಳಿದ ರೀತಿಯನ್ನು ನೋಡಿ ಆನೆಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

ಬಾತ್​ರೂಮಿನ ಗೋಡೆ ಒಡೆದಾಗ ಚಿನ್ನದ ನಾಣ್ಯಗಳ ಸುರಿಮಳೆ! ಪೆಟ್ಟಿಗೆಯಲ್ಲಿ ಮುತ್ತು ರತ್ನ: ವಿಡಿಯೋ ವೈರಲ್​

View post on Instagram