Asianet Suvarna News Asianet Suvarna News

ಮಗನ ಹೆಂಡ್ತಿ ಮೇಲೇನೆ ಲವ್ವಾಗೋಯ್ತು..28ರ ಸೊಸೆಯನ್ನು ಮದುವೆಯಾದ 70ರ ಮಾವ!

ಮದುವೆಯೆಂಬ ಸಂಬಂಧ ಇತ್ತೀಚಿನ ಕೆಲ ವರ್ಷಗಳಿಂದ ಅರ್ಥಹೀನವಾಗುತ್ತಿದೆ. ಸೋದರ ಸಂಬಂಧಿಯನ್ನೇ ಮದುವೆಯಾಗುವುದು, ಅಪ್ಪ-ಮಗಳ ವಿವಾಹ ಎಷ್ಟೋ ಕಡೆ ನಡೆದಿದೆ. ಹೀಗಿರುವಾಗ ಇಲ್ಲೊಬ್ಬ 70 ವರ್ಷದ ಮಾವ ತನ್ನ 28 ವರ್ಷದ ಸೊಸೆಯನ್ನೇ ವಿವಾಹವಾಗಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Father in law and daughter in law got married in uttar pradesh photo went viral Vin
Author
First Published Jan 27, 2023, 9:33 AM IST

ಗೋರಖ್‌ಪುರ: ಮಾವ-ಸೊಸೆ ಅಂದ್ರೆ ತಂದೆ ಮಗಳಿದ್ದಂತೆ ಅಂತಾರೆ. ಆದ್ರೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 70 ವರ್ಷದ ವ್ಯಕ್ತಿಯೊಬ್ಬ ತನ್ನ 28 ವರ್ಷದ ಸೊಸೆಯನ್ನೇ ಮದುವೆಯಾಗಿದ್ದಾರೆ. ದೇವಸ್ಥಾನದಲ್ಲಿ ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಯ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಕೊಟ್ವಾಲಿ ಪ್ರದೇಶದ ಛಾಪಿಯಾ ಉಮ್ರಾವ್ ಗ್ರಾಮದಲ್ಲಿ ಮದುವೆ ನಡೆದಿದೆ. ಇಲ್ಲಿನ ನಿವಾಸಿ 70 ವರ್ಷದ ಕೈಲಾಶ್ ಯಾದವ್ ಎಂಬವರು 28 ವರ್ಷದ ಸೊಸೆ ಪೂಜಾ ಅವರೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.. ಈ ವಿಚಾರ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.  ಬದಲ್ಗಂಜ್ ಕೊಟ್ವಾಲಿ ಪ್ರದೇಶದ ಛಾಪಿಯಾ ಉಮ್ರಾವ್ ಗ್ರಾಮದ ನಿವಾಸಿ  ಕೈಲಾಶ್ ಯಾದವ್, ಸೊಸೆ ಪೂಜಾರನ್ನು ವಿವಾಹವಾಗಿದ್ದಾರೆ.

ಮಗನ ಹೆಂಡ್ತಿಯನ್ನೇ ಮದುವೆಯಾದ ತಂದೆ
ಕೈಲಾಶ್ ಯಾದವ್ ಬದಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೈಲಾಶ್‌ ಪತ್ನಿ 12 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಕೈಲಾಶ್ ಅವರ ನಾಲ್ವರು ಮಕ್ಕಳಲ್ಲಿ ಮೂರನೇ ಮಗ, ಪೂಜಾರನ್ನು ವಿವಾಹ (Marriage)ವಾಗಿದ್ದರು. ಆದರೆ ಪೂಜಾ ಪತಿಯೂ ಕೆಲ ವರ್ಷದ ಹಿಂದೆ ಸಾವನ್ನಪ್ಪಿದ್ದರು(Death). ಇದಾದ ನಂತರ ಪೂಜಾ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದರೆ ಆಕೆಗೆ ಆತ ಇಷ್ಟವಾಗಿರಲಿಲ್ಲ. ಇದಾದ ನಂತರ ಪೂಜಾ ಅಲ್ಲಿಂದ ಹೊರಟು ಗಂಡನ (Husband) ಮನೆಗೆ ಬಂದಿದ್ದಾಳೆ. ಮಾವನನ್ನೇ ಮದುವೆಯಾಗಲು ನಿರ್ಧರಿಸಿದ್ದಾಳೆ. ಸದ್ಯ ಮಾವನನ್ನೇ (Father in law) ಮದುವೆಯಾದ ಸೊಸೆ ಸಪ್ತಪದಿ ತುಳಿದು ಗಂಡನ ಮನೆಯಲ್ಲೇ ವಾಸವಾಗಿದ್ದಾಳೆ.

ಸಹೋದರನನ್ನೇ ಮದ್ವೆಯಾದ ಮಹಿಳೆ, ಗರ್ಭಿಣಿಯಾದ ಮೇಲೆ ಬಯಲಾಯ್ತು ಸತ್ಯ!

ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ವೈರಲ್
ಸೋಷಿಯಲ್ ಮೀಡಿಯಾದ ಸುದ್ದಿ ಮತ್ತು ಫೋಟೋಗಳನ್ನು ನಂಬಿ, ಮಾವ ಕೈಲಾಶ್ ಯಾದವ್ ಅವರ ಪತ್ನಿ 12 ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಿಗೆ ನಾಲ್ಕು ಮಕ್ಕಳಿದ್ದು, ಪೂಜಾ ಅವರ ಪತಿ ಮೂರನೇ ಮಗ, ಅವರು ಸಹ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದಾರೆ ಮತ್ತು ಪೂಜಾ ತನ್ನ ಹೊಸ ಮದುವೆಯಿಂದ ಸಂತೋಷವಾಗಿದ್ದಾಳೆ ಎಂದು ತಿಳಿದುಬಂದಿದೆ. 

ಕೈಲಾಶ್ ಯಾದವ್ ದೇವಸ್ಥಾನದಲ್ಲಿ ತಮ್ಮ ಸೊಸೆ (daughter in law) ಪೂಜಾ ಅವರೊಂದಿಗೆ ಸಪ್ತಪದಿ ತುಳಿದರು. ಅವರ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಹಾಜರಿದ್ದರು.  ಪತಿಯ ಮರಣದ ನಂತರ ಪೂಜಾ ಒಂಟಿಯಾಗಿದ್ದರು ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಬೇರೆಯವರನ್ನು ಮದುವೆಯಾಗಿದ್ದಳು. ಆದರೆ ಆಕೆಗೆ ಆ ಮನೆಯವರು ಇಷ್ಟವಾಗದೆ ಗಂಡನ ಮನೆಗೆ ಮರಳಿದ್ದರು. ಇಲ್ಲಿ ಅವಳು ತನ್ನ ಮಾವನನ್ನು ಮದುವೆಯಾಗಲು ಒಪ್ಪಿಕೊಂಡಳು ಎಂದು ತಿಳಿಸುತ್ತಾರೆ.

ಇಬ್ಬರು ಹೆಂಡ್ತೀರ ಮುದ್ದಿನ ಗಂಡ, ಮೂರು ದಿನ ಅವಳ ಜೊತೆ, ಮೂರು ದಿನ ಇವಳ ಜೊತೆ!

ಬಾರ್ಹಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ಚೌಕಿದಾರ್ ಕೈಲಾಶ್ ಯಾದವ್ ಅವರ ಮದುವೆಯ ಮಾತು ಸಾಮಾಜಿಕ ಮಾಧ್ಯಮಗಳ ಮೂಲಕ ಆ ಗ್ರಾಮ ಮತ್ತು ಪೊಲೀಸ್ ಠಾಣೆಗೆ ತಲುಪಿದೆ. ವೈರಲ್ ಆಗುತ್ತಿರುವ ಫೋಟೋದಿಂದ ಮಾತ್ರ ಈ ಮದುವೆಯ ಬಗ್ಗೆ ನಮಗೆ ತಿಳಿದಿದೆ ಎಂದು ಠಾಣಾಧಿಕಾರಿ ಬರ್ಹಲ್‌ಗಂಜ್ ಹೇಳಿದ್ದಾರೆ. ಈ ಬಗ್ಗೆ ಯಾವುದೇ ದೂರು ಬಂದಿಲ್ಲ. ಇದು ಇಬ್ಬರ ನಡುವಿನ ಪರಸ್ಪರ ವಿಚಾರವಾಗಿದ್ದು, ಯಾರಿಗಾದರೂ ದೂರು ಇದ್ದಲ್ಲಿ ಪೊಲೀಸರು ತನಿಖೆ ನಡೆಸಬಹುದು ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios