Viral Video : ಕಾರಲ್ಲಿ ಬಂದ ವರ.. ಮೆರವಣಿಗೆಯಲ್ಲಿ ವಧು.. ಅಲ್ಲಿ ನಡೆದಿದ್ದು ಮಾತ್ರ ನಾಯಿ ಮದ್ವೆ!
ಮನುಷ್ಯರ ಮದುವೆ ಮಾತ್ರವಲ್ಲ ಪ್ರಾಣಿಗಳ ಮದುವೆ ಕೂಡ ಈಗಿನ ದಿನಗಳಲ್ಲಿ ಶುರುವಾಗಿದೆ. ನೆಚ್ಚಿನ ಪ್ರಾಣಿಗಳ ಮದುವೆ ಮಾಡಿ, ಜನರು ಎಂಜಾಯ್ ಮಾಡ್ತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಬಳಕೆದಾರರ ಅಚ್ಚರಿಗೆ ಕಾರಣವಾಗಿದೆ.
ಸಾಕು ಪ್ರಾಣಿಗಳ ಪಟ್ಟಿಯಲ್ಲಿ ಮೊದಲಿರೋದು ನಾಯಿ. ಪ್ರಾಮಾಣಿಕತೆಗೆ ಹೆಸರುವಾಸಿಯಾದ ಪ್ರಾಣಿ ನಾಯಿ. ಇದನ್ನು ಅಪಾರವಾಗಿ ಮುದ್ದಿಸುವ ಜನರಿದ್ದಾರೆ. ಕೆಲವರು ನೆಚ್ಚಿನ ಸಾಕು ನಾಯಿಯನ್ನು ಕಳೆದುಕೊಂಡು ವರ್ಷವಿಡಿ ಕಣ್ಣೀರು ಹಾಕ್ತಿರುತ್ತಾರೆ. ನಾಯಿಯನ್ನು ಒತ್ತಡ, ಖಿನ್ನತೆ ಕಡಿಮೆ ಮಾಡುವ ಪ್ರಾಣ ಎಂದೂ ಹೇಳಲಾಗುತ್ತದೆ.
ಮನುಷ್ಯನ ಭಾವನೆಯನ್ನು ನಾಯಿ (Dog) ಬೇಗ ಅರ್ಥ ಮಾಡಿಕೊಳ್ಳುತ್ತದೆ. ಮನೆಯಲ್ಲೊಂದು ನಾಯಿಯಿದ್ರೆ ಮಕ್ಕಳಿದ್ದ ಹಾಗೆ. ಈಗಿನ ದಿನಗಳಲ್ಲಿ ಬಹುತೇಕರು ನಾಯಿ ಸಾಕಿರ್ತಾರೆ. ಅದನ್ನು ಮನೆಯ ಸದಸ್ಯನಂತೆ ನೋಡುವ ಜನರಿದ್ದಾರೆ. ನಾಯಿಗೆ ಬಟ್ಟೆ ತೊಡಿಸುವುದು, ಅದಕ್ಕೆ ಮನುಷ್ಯನ ಮಾತನ್ನು ಅರ್ಥ ಮಾಡಿಸುವುದು, ಅದ್ರ ಹುಟ್ಟು ಹಬ್ಬ (Birthday) ಆಚರಿಸುವುದು ಸೇರಿದಂತೆ ಪ್ರವಾಸಕ್ಕೆ ಅದನ್ನು ಕರೆದೊಯ್ಯುವ ಮಂದಿಯನ್ನು ನೀವು ನೋಡಿರ್ತೀರಾ. ಈಗ ನಾಯಿ ಮದುವೆ ಸುದ್ದಿ ಚರ್ಚೆಗೆ ಬರ್ತಿದೆ. ಈ ಹಿಂದೆ ಹಮೀರ್‌ಪುರ ಜಿಲ್ಲೆಯ ಸೌಖೇರ್ ಗ್ರಾಮದ ನಾಯಿಯನ್ನು ಪರ್ಚಾಚ್ ಗ್ರಾಮದ ನಾಯಿಯೊಂದಿಗೆ ವಿವಾಹ ಮಾಡಲಾಗಿತ್ತು. ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ನಾಯಿ ಮದುವೆ ವೈರಲ್ ಆಗಿದೆ.
90ರ ವೃದ್ಧನಿಗೆ ಬಂತು ಸಾಲು ಸಾಲು ಮದುವೆ ಪ್ರಪೋಸಲ್, ಕಾರಣ ಇದು!
ಭಾರತೀಯ (Indian) ಮದುವೆಗಳು ವಿಶೇಷವಾಗಿರುತ್ತವೆ. ಎರಡು ಕುಟುಂಬಗಳು, ಸ್ನೇಹಿತರು ಸೇರಿ ಅದ್ಧೂರಿಯಾಗಿ, ಸಾಂಪ್ರದಾಯದಂತೆ ಮದುವೆ (Marriage) ಮಾಡ್ತಾರೆ. ಈಗ ಟ್ವಿಟರ್ ನಲ್ಲಿ ವೈರಲ್ ಆಗಿರುವ ಮದುವೆಯಲ್ಲಿ ಕೂಡ ಸಂಬಂಧಿಕರ ಸಂಭ್ರಮ ಮನೆ ಮಾಡಿದೆ. ಮದುವೆ ಮಂಟಪ ಸಿದ್ಧವಾಗಿದೆ. ಜನರು ಚೆಂದದ ಬಟ್ಟೆ ಧರಿಸಿ ಅತ್ತಿಂದಿತ್ತ ಓಡಾಡ್ತಿದ್ದಾರೆ. ಆದ್ರೆ ಮಂಟಪಕ್ಕೆ ಬಂದ ವರ ಮತ್ತು ವಧು ಮಾತ್ರ ಮನುಷ್ಯರಲ್ಲ. ಸಾಕು ನಾಯಿಗಳು.
ವೈರಲ್ ಆದ ವಿಡಿಯೋದಲ್ಲಿ ಏನಿದೆ? : ಹತೀಂದರ್ ಸಿಂಗ್ 3 ಹೆಸರಿನ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕುಟುಂಬವೊಂದು ಭಿನ್ನವಾಗಿ ಆಲೋಚನೆ ಮಾಡಿರೋದನ್ನು ನಾವಿಲ್ಲಿ ನೋಡ್ಬಹುದು. ಸಂತೋಷಕ್ಕೆ ಮನುಷ್ಯರ ಮದುವೆಯಾಗ್ಬೇಕಾಗಿಲ್ಲ. ನಾಯಿಗಳ ಮದುವೆಯಾದ್ರೂ ನಾವು ಸಂಭ್ರಮಿಸಬಹುದು ಎಂಬುದು ಇಲ್ಲಿ ಸ್ಪಷ್ಟವಾಗ್ತಿದೆ. ವಿಡಿಯೋದಲ್ಲಿ ಕುಟುಂಬ ಎರಡು ನಾಯಿಗಳ ಮದುವೆ ಮಾಡೋದನ್ನು ನಾವು ನೋಡ್ಬಹುದು. ಕಡುಗೆಂಪು ಬಣ್ಣದ ದುಪಟ್ಟಾ ಧರಿಸಿದ ನಾಯಿ ವಧುವಾಗಿ ಮಿಂಚುತ್ತಿದೆ. ಇನ್ನೊಂದು ನಾಯಿ ವರನ ವೇಷದಲ್ಲಿದೆ. ವರ ಶ್ವಾನ ಬ್ಯಾಟರಿ ಚಾಲಿತ ಕಾರಿನಲ್ಲಿ ಎಂಟ್ರಿ ಕೊಡುತ್ತದೆ. ವಧುವನ್ನು ಆಕೆ ಕುಟುಂಬದವರು ಅದ್ಧೂರಿ ಮೆರವಣಿಗೆ ಮೂಲಕ ಮಂಟಪಕ್ಕೆ ಕರೆ ತರ್ತಾರೆ. ಮದುವೆ ಸಮಾರಂಭದಲ್ಲಿ ಡಾನ್ಸ್, ಹಾಡುಗಳನ್ನು ನೀವು ನೋಡ್ಬಹುದು.
ಮಾಲೆ ಬದಲಿಸಿಕೊಂಡ ಶ್ವಾನಗಳು : ಬರೀ ಇಷ್ಟೇ ಅಲ್ಲ ನಂತ್ರ ಶ್ವಾನಗಳ ಕುಟುಂಬಸ್ಥರ ಸಹಾಯದಿಂದ ನಾಯಿಗಳು ಮಾಲೆಯನ್ನು ಬದಲಾಯಿಸಿಕೊಳ್ಳುತ್ತವೆ. ಮದುವೆಗೆ ಬಂದವರು ಮದುವೆಯನ್ನು ಎಂಜಾಯ್ ಮಾಡ್ತಿದ್ದಾರೆ. ಜನರು ಫೋಟೋ ತೆಗೆಯಲು ಮುಗಿಬೀಳ್ತಿದ್ದಾರೆ. ನಂತ್ರ ಫೋಟೋ ಶೂಟ್ ಕೂಡ ನಡೆಯುತ್ತದೆ.
ಸಾಮಾನ್ಯ ಮದುವೆಯಂತೆ ಇಲ್ಲೂ ಇತ್ತು ರುಚಿಯಾದ ಖಾದ್ಯ : ಎಲ್ಲ ಮದುವೆಯಂತೆ ಶ್ವಾನದ ಮದುವೆಯಲ್ಲೂ ಖಾದ್ಯಗಳು ಸಿದ್ಧವಾಗಿದ್ದವು. ಜನರು ರುಚಿ ರುಚಿ ಆಹಾರ ಸವಿದು ಎಂಜಾಯ್ ಮಾಡಿದ್ರು.
ಅಬ್ಬಬ್ಬಾ ನಾಯಿಗಳಿಗೂ ಅದ್ದೂರಿ ಮದ್ವೆ : ಊರಿಗೆಲ್ಲಾ ಊಟ ಹಾಕಿದ ಮನೆ ಮಂದಿ
ಡೋಲಿಯಲ್ಲಿ ಗಂಡನ ಮನೆಗೆ ಹೋದ ನಾಯಿ : ವಧುವನ್ನು ಗಂಡನ ಮನೆಗೆ ಕಳುಹಿಸುವ ಸಮಾರಂಭ ಕೂಡ ಅದ್ಧೂರಿಯಾಗಿಯೇ ನಡೆದಿದೆ. ಕೊನೆಯಲ್ಲಿ ಡೋಲಿ ಮೇಲೆ ವಧುವನ್ನು ಗಂಡನ ಮನೆಗೆ ಕಳುಹಿಸಿಕೊಡಲಾಗಿದೆ. ಡೋಲಿಯನ್ನು ಸುಂದರವಾಗಿ ಶೃಂಗರಿಸಿದ್ದನ್ನು ನೀವು ನೋಡ್ಬಹುದು.
ಬಳಕೆದಾರರ ಕಮೆಂಟ್ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ನೋಡಿದ ಜನರು ದಂಗಾಗಿದ್ದಾರೆ. ಶ್ವಾನದ ಮದುವೆಯನ್ನೂ ಹೀಗೆ ಮಾಡ್ಬಹುದು ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ವ್ಯಕ್ತಿಯೊಬ್ಬ ವಿಡಿಯೋ ಮನಸ್ಸನ್ನು ನಾಟಿದೆ. ಪ್ರಾಣಿಗಳಿಗೂ ಮದುವೆಯಾಯ್ತು ಎಂದು ಬರೆದಿದ್ದಾನೆ. ಇನ್ನೊಬ್ಬ ಬಳಕೆದಾರ, ನಾಯಿಗಳಿಗೆ ಅಲ್ಲಿ ಏನಾಗ್ತಿದೆ ಎಂಬುದೇ ಗೊತ್ತಾಗ್ತಿಲ್ಲವೆಂದು ಕಮೆಂಟ್ ಮಾಡಿದ್ದಾನೆ.