ಇಲ್ಲೊಂದು ಕಡೆ ಎರಡು ಕುಟುಂಬಗಳು (Family) ಸೇರಿ ಶ್ವಾನಗಳಿಗೆ (Dog) ಮನೆ ಮಕ್ಕಳಿಗೆ ಮಾಡುವಂತೆ ಅದ್ದೂರಿ ಮದ್ವೆ ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ: ಒಂದು ಕಾಲದಲ್ಲಿ ಮನೆ ಕಾಯುವುದಕ್ಕಾಗಿ ನಾಯಿಗಳನ್ನು ಸಾಕುತ್ತಿದ್ದರು. ಆದರೆ ಕಾಲಕ್ಕೆ ತಕ್ಕಂತೆ ಕೋಲ ಎಂಬಂತೆ ಇತ್ತೀಚೆಗೆ ಮನೆ ಕಾಯುವ ನಾಯಿ ಮನೆ ಮಕ್ಕಳಂತಾಗಿದೆ. ಮನೆ ಕಾಯುವ ಬದಲು ಯಾರಾದರೂ ಹೊತ್ತುಕೊಂಡು ಹೋದರೆ ಎಂದು ಮನೆ ಮಂದಿಯೇ ನಾಯಿಯನ್ನು ಕಾಯುತ್ತಿದ್ದಾರೆ. ಬಹುತೇಕ ಶ್ವಾನ ಪ್ರಿಯರು ತಮ್ಮ ಮನೆಯ ನಾಯಿಗಳನ್ನು ಮನೆ ಮಕ್ಕಳಂತೆ ಮನೆಯ ಓರ್ವ ಸದಸ್ಯನಂತೆ ಸಲುಹುತ್ತಿದ್ದಾರೆ. ಅವುಗಳಿಗೆ ಮನೆಮಕ್ಕಳಂತೆ ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಆಚರಿಸುತ್ತಾರೆ. ಊರಿಗೆಲ್ಲಾ ಕರೆದು ಊಟವನ್ನು ಹಾಕಿಸುತ್ತಾರೆ. ಇತ್ತೀಚೆಗೆ ಈ ನಾಯಿ ಬರ್ತ್‌ಡೇ ಆಚರಿಸುವ ಕ್ರೇಜ್ ಹೆಚ್ಚಾಗಿದೆ.
ಹಾಗೆಯೇ ಇಲ್ಲೊಂದು ಕಡೆ ಎರಡು ಕುಟುಂಬಗಳು (Family) ಸೇರಿ ಶ್ವಾನಗಳಿಗೆ (Dog) ಮನೆ ಮಕ್ಕಳಿಗೆ ಮಾಡುವಂತೆ ಅದ್ದೂರಿ ಮದ್ವೆ ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆರವಣಿಗೆಯಲ್ಲಿ ಹೆಣ್ಣು ಗಂಡು ಶ್ವಾನವನ್ನು ಕರೆದುಕೊಂಡು ಬಂದ ಮನೆ ಮಂದಿಯೆಲ್ಲಾ ಸೇರಿ ಮದ್ವೆ ಮಾಡಿಸಿದ್ದಾರೆ. ಗಂಡು ಹಾಗೂ ಹೆಣ್ಣು ಎರಡು ಶ್ವಾನವನ್ನು ಮದುಮಕ್ಕಳಂತೆ ಕೆಂಪು ಬಣ್ಣದ ರೇಷ್ಮೆ ಶಾಲಿನ ಜೊತೆ ವಿವಿಧ ಆಭರಣಗಳಿಂದ ಸಿಂಗರಿಸಲಾಗಿತ್ತು. ಅದರ ಜೊತೆಗೆ ಶ್ವಾನಕ್ಕೆ ಗಂಡು ಶ್ವಾನವನನ್ನು ಪುಟ್ಟ ಕಾರಿನಲ್ಲಿ ಕರೆ ತಂದರೆ ಹೆಣ್ಣು ಶ್ವಾನವನ್ನು ಹೆಣ್ಣಿನ ಕಡೆಯವರೆಲ್ಲಾ ಸೇರಿ ಹೊತ್ತುಕೊಂಡು ಬಂದಿದ್ದಾರೆ. ನಂತರ ಈ ಶ್ವಾನ ಜೋಡಿಗೆ ದೊಡ್ಡ ಕಲ್ಯಾಣ ಮಂಟಪದಲ್ಲಿ ಆರತಕ್ಷತೆಯೂ ನಡೆದಿದೆ. ಅಲ್ಲದೇ ಬಳಿಕ ಮದ್ವೆಗೆ ಬಂದವರಿಗೆಲ್ಲಾ ಭೂರಿ ಭೋಜನ ಉಣಬಡಿಸಲಾಗಿದೆ. ಕೊನೆಯದಾಗಿ ಗಂಡು ಶ್ವಾನದ ಮನೆಗೆ ಹೆಣ್ಣು ಶ್ವಾನವನ್ನು ಕರೆದೊಯ್ಯಲಾಗಿದೆ. ಈ ಮದುವೆ ಸಮಾರಂಭದಲ್ಲಿ ಎಲ್ಲರೂ ದಾಂ ಧೂಮ್ ಆಗಿ ಡಾನ್ಸ್ (Dance)ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಗ್ರಾಮ ಪಂಚಾಯತಿ ರಾಜಕಾರಣದ ಕಥೆ ಬಿಚ್ಚಿಟ್ಟ ನಾಯಿ 'ಕ್ರಿಶ್' ಅದ್ಧೂರಿ ಬರ್ತ್‌ಡೇ ಪಾರ್ಟಿ...!
ಆದರೆ ಈ ಮದ್ವೆ ಎಲ್ಲಿ ನಡೆದಿದೆ. ಈ ಮದ್ವೆಯನ್ನು ಆಯೋಜಿಸಿದವರಾರು ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ ವಿಡಿಯೋ ನೋಡಿದ ಅನೇಕರು ಏನೇನೋ ಕಾಮೆಂಟ್ ಮಾಡಿದ್ದಾರೆ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಏನು ಬೇಕಾದರೂ ಮಾಡುತ್ತಾರೆ ಎಂದು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು ಈ ಕಣ್ಣಲ್ಲಿ ಇನ್ನು ಏನೆಲ್ಲಾ ನೋಡಬೇಕೋ ಎಂದು ಉದ್ಘರಿಸಿದ್ದಾರೆ. ಹಾಗೆಯೇ ಶ್ವಾನಪ್ರಿಯರನ್ನು ಉಲ್ಲೇಖಿಸಿ, ಒಂದು ವೇಳೆ ನೀವು ನಿಮ್ಮ ಶ್ವಾನಕ್ಕೆ ಹೀಗೆ ಮದ್ವೆ ಮಾಡಿಲ್ಲವೆಂದರೆ ನೀವು ಶ್ವಾನಪ್ರಿಯರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ನಾಯಿಗೆ ಮದುವೆ ಮಾಡಿ ಕನ್ಯಾದಾನದ ಬಯಕೆ ತೀರಿಸಿಕೊಂಡ
ಹಾಗೆಯೇ ಕಳೆದ ವರ್ಷ ಹರಿಯಾಣದ ಗುರುಗ್ರಾಮದ ಬಳಿಯ ಮಕ್ಕಳಿಲ್ಲದ ದಂಪತಿ ತಮ್ಮ ಮನೆಯಲ್ಲಿದ್ದ ಶ್ವಾನಕ್ಕೆ ಮದ್ವೆ ಮಾಡಿ ಊರಿಗೆಲ್ಲಾ ಊಟ ಹಾಕಿಸಿದ್ದರು. ಈ ಮೂಲಕ ಕನ್ಯಾದಾನದ ಬಯಕೆ ತೀರಿಸಿಕೊಂಡಿದ್ದರು. ಮಕ್ಕಳಿಲ್ಲದ ದಂಪತಿ ತಮ್ಮ ಹೆಣ್ಣು ಶ್ವಾನಕ್ಕೆ ಪಕ್ಕದ ಮನೆಯ ಶ್ವಾನದೊಂದಿಗೆ ಮದುವೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಗುರುಗ್ರಾಮದ ಪಲ್ಲಂ ವಿಹಾರ್ ಎಕ್ಸ್‌ಟೆನ್ಶನ್‌ನಲ್ಲಿ ಈ ವಿವಾಹವನ್ನು ಆಯೋಜಿಸಲಾಗಿತ್ತು. ಎರಡು ಮನೆಯವರು ಸೇರಿ ತಮ್ಮ ಹೆಣ್ಣು ಹಾಗೂ ಗಂಡು ಶ್ವಾನಕ್ಕೆ ಮದುವೆ ನಿಗದಿ ಮಾಡಿ ಮದುವೆ ಮಾಡಿಸಿದ್ದಾರೆ. ನವೆಂಬರ್ 13 (2022) ರಂದು ಗಂಡು ಶ್ವಾನ ಶೇರು ಜೊತೆ ಹೆಣ್ಣು ಶ್ವಾನ ಸ್ವೀಟಿ ಸಪ್ತಪದಿ ತುಳಿದಿತ್ತು ಈ ಶ್ವಾನ ಜೋಡಿಯ ಮೆಹೆಂದಿ ಸಮಾರಂಭವನ್ನು ನಡೆಸಲಾಗಿತ್ತು ಎಂದು ಮದುವೆಯನ್ನು ಆಯೋಜಿಸಿದವರು ತಿಳಿಸಿದ್ದಾರೆ. ಹಾಗಂತ ಕೇವಲ ಎರಡು ಕುಟುಂಬದವರು ಮಾತ್ರ ಸೇರಿ ಈ ವಿವಾಹ ನಡೆಸಿಲ್ಲ. ತಮ್ಮ ಸ್ವಂತ ಮಕ್ಕಳ ಮದುವೆ ಮಾಡುವಂತೆ ಇವರು ತಮ್ಮ ಶ್ವಾನದ ವಿವಾಹಕ್ಕೆ (wedding) ನೂರು ಆಹ್ವಾನ ಪತ್ರಿಕೆಗಳನ್ನು (Invitation) ಕೂಡ ಸಿದ್ಧಪಡಿಸಿ ಹಂಚಿದ್ದರು.
ವಿಜಯಪುರದ ಟೈಗರ್‌ಗೆ ಬರ್ತಡೇ ಸಂಭ್ರಮ, ಶ್ವಾನಕ್ಕೆ ಚಿನ್ನದ ಸರ, ಊರಿಗೆಲ್ಲ ಊಟ!