90ರ ವೃದ್ಧನಿಗೆ ಬಂತು ಸಾಲು ಸಾಲು ಮದುವೆ ಪ್ರಪೋಸಲ್, ಕಾರಣ ಇದು!

ಹಣ ಕಂಡ್ರೆ ಹೆಣಾನೂ ಬಾಯಿಬಿಡ್ತಾರೆ ಅನ್ತಾರಲ್ಲ. ಅದು ಸುಳ್ಳಲ್ಲ ನೋಡಿ..ಆ ವೃದ್ಧನಿಗೆ ಭರ್ತಿ 90 ವರ್. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ ಅನ್ನೋ ಕಾಲ. ಆದ್ರೆ ಅದ್ಯಾಕೋ ತನ್ನಲ್ಲಿರೋ ಚಿನ್ನವನ್ನೆಲ್ಲಾ ಹಾಕ್ಕೊಂಡು ಒಂದು ವೀಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಬಂತು ನೋಡಿ ಸಾಲು ಸಾಲು ಮದ್ವೆ ಪ್ರಪೋಸಲ್ಸ್.

90 year man who owns gold worth Rs 94 lakh, posts video with it, gets proposals Vin

ಹುಡುಗ ಎಷ್ಟು ಪ್ರೀತಿಸ್ತಾನೆ, ಆತನ ಗುಣ-ನಡತೆ ಹೇಗಿದೆ ಅಂತ ನೋಡಿ ಮದ್ವೆಯಾಗೋ ಕಾಲ ಏನಿದ್ರೂ ಹೊರಟೋಯ್ತು. ಈಗೇನಿದ್ರೂ ಹುಡುಗನಿಗೆ ಎಷ್ಟು ಮನೆಯಿದೆ, ಎಷ್ಟು ಬ್ಯಾಂಕ್ ಬಾಲೆನ್ಸ್, ಎಷ್ಟು ಕಾರಿದೆ ಅಂತ ಚೆಕ್ ಮಾಡ್ತಾರೆ. ಸಿಕ್ಕಾಪಟ್ಟೆ ದುಡ್ಡಿದೆ ಅಂದ್ರೆ ಮತ್ತೇನೂ ಮ್ಯಾಟರ್ ಆಗೋದಿಲ್ಲ. ಇದು ಇತ್ತೀಚಿನ ಕೆಲ ವರ್ಷಗಳಿಂದ ಮದ್ವೆಯಾಗ್ತಿರೋ ಕೆಲ ಹುಡುಗಿಯರ ಮೆಂಟಾಲಿಟಿ. ಹಣ ಕಂಡ್ರೆ ಹೆಣಾನೂ ಬಾಯಿ ಬಿಡುತ್ತೆ ಅಂತಾರೆ. ಇನ್ನು ಜೀವ ಇರೋ ಮನುಷ್ಯ ಸುಮ್ನಿರ್ತಾನ. ಝಣ ಝಣ ಕಾಂಚಾಣ ಕಂಡ್ರೆ ಮತ್ಯಾವುದೂ ಗಮನಕ್ಕೆ ಬರೋದಿಲ್ಲ. ಅದು ಅಕ್ಷರಹಃ ನಿಜ ಎಂಬುದು ಇಲ್ಲೊಂದೆಡೆ ಸಾಬೀತಾಗಿದೆ. 

ಚೀನಾದಲ್ಲೂ ಇಂಥದ್ದೇ ಘಟನೆ ನಡೆದಿದೆ. 90 ವರ್ಷದ ವೃದ್ಧ ವ್ಯಕ್ತಿಯೊಬ್ಬರು ತಮ್ಮ ಬಳಿ ಇರುವ ಅಂದಾಜು 1 ಕೋಟಿ ಮೌಲ್ಯದ ಚಿನ್ನಾಭರಣ (Gold jewellery) ತೊಟ್ಟು ಜಾಲತಾಣದಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಿದ್ದರು. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ವೃದ್ಧನಿಗೆ ಸಾಕಷ್ಟುಮದುವೆ ಆಫರ್‌ಗಳು ಬಂದಿವೆಯಂತೆ. ಬಹಳಷ್ಟುಜನರು ನಮ್ಮಜ್ಜಿ ಕೂಡಾ ಒಬ್ಬಂಟಿಯಾಗಿದ್ದಾರೆ. ನಿಮ್ಮನ್ನು ಮದುವೆ (Marriage)ಯಾಗಲು ಸಿದ್ಧ ಎಂದೆಲ್ಲಾ ಆಫರ್‌ ಮುಂದಿಟ್ಟಿದ್ದಾರಂತೆ.

ಗೆಳತಿಯ ಬ್ಲ್ಯಾಕ್‌ಮೇಲ್, ಟ್ರಾಫಿಕ್‌ನಲ್ಲೇ ವಧುವನ್ನು ಬಿಟ್ಟು ಓಡಿಹೋದ ವರ!

90 ವರ್ಷದ ಚೀನಾ ವ್ಯಕ್ತಿಯ ಚಿನ್ನಾಭರಣ ಪ್ರದರ್ಶಿಸುವ ವೀಡಿಯೊ ವೈರಲ್
90 ವರ್ಷದ ಚೀನಾದ ವ್ಯಕ್ತಿಯೊಬ್ಬರು ಚಿನ್ನಾಭರಣಗಳನ್ನು ಪ್ರದರ್ಶಿಸುವ ವೀಡಿಯೊ ವೈರಲ್ ಆದ ನಂತರ ಹಲವಾರು ಮದ್ವೆ ಆಫರ್‌ಗಳನ್ನು ಪಡೆದಿದ್ದಾರೆ. ವಯೋವೃದ್ಧರು ದೊಡ್ಡದಾದ ಬ್ರೇಸ್‌ಲೆಟ್ ಮತ್ತು ಉಂಗುರವನ್ನು ಧರಿಸಿರುವುದು ವೈರಲ್ ಆಗಿರುವ ವಿಡಿಯೋದಲ್ಲಿದೆ. ಫೆಬ್ರವರಿ 27 ರಂದು ಆಗ್ನೇಯ ಚೀನಾದ ಫುಜಿಯಾನ್ ಪ್ರಾಂತ್ಯದ ಝಾಂಗ್ಝೌ ನಗರದ ಅಂಗಡಿಯಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ. ವೈರಲ್ ವಿಡಿಯೋದಲ್ಲಿ ವ್ಯಕ್ತಿ ಬ್ರೇಸ್‌ಲೆಟ್‌ ತೆಗೆದು ಅದರ ತೂಕ 2 ಕಿಲೋಗ್ರಾಂಗಳಿಗಿಂತ ಹೆಚ್ಚು ಎಂದು ಹೇಳಿಕೊಂಡಿದ್ದಾನೆ. ಅದನ್ನು ಪರಿಶೀಲಿಸಲು ಮೇಜಿನ ಮೇಲೆ ಎಸೆಯುತ್ತಾನೆ.

ನನ್ನ ಬಳಿ ಚಿನ್ನದ ಬೆಲ್ಟ್ ಕೂಡಾ ಇದೆ. ಆದರೆ ಮನೆಯವರು ಅದನ್ನು ಧರಿಸಲು ಬಿಡುತ್ತಿಲ್ಲ ಎಂದು ಆ ವ್ಯಕ್ತಿ ಹೇಳಿದ್ದಾನೆ. ವೈರಲ್ ಆಗಿರುವ ವೀಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಮಾತ್ರವಲ್ಲ ಕಾಮೆಂಟ್ ಬಾಕ್ಸ್‌ನಲ್ಲಿಯೇ ಮದುವೆ ಪ್ರಪೋಸಲ್‌ಗಳನ್ನು ಮುಂದಿಟ್ಟಿದ್ದಾರೆ. ಒಬ್ಬ ಬಳಕೆದಾರ, 'ನನ್ನ ಅಜ್ಜಿ ಒಂಟಿಯಾಗಿದ್ದಾಳೆ. ಅವಳು ನಿಮ್ಮನ್ನು ಭೇಟಿಯಾಗಲು ಬಯಸುತ್ತಾಳೆ' ಎಂದು ಹೇಳಿದ್ದಾರೆ. ಮತ್ತೊಬ್ಬರು 'ಅವನು ಮುದುಕನಲ್ಲ. ನನ್ನ ಮಗು' ಎಂದು ಕಾಮೆಂಟಿಸಿದ್ದಾರೆ. ಮತ್ತೊಬ್ಬರು, 'ಇಂಥವರು ಆಕಸ್ಮಿಕವಾಗಿ ಬೀದಿಯಲ್ಲಿ ಬಿದ್ದರೆ, ಜನರು ಅವನನ್ನು ಎದ್ದೇಳಲು ಸಹಾಯ ಮಾಡುತ್ತಾರೆ' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. 

ಸ್ಯಾಲರಿ ಹೈಕ್‌, ಪ್ರಮೋಶನ್ ಬೇಕು ಅಂತ ಹೆಂಡ್ತೀನ ಬಾಸ್ ಜೊತೆ ಮಲಗಲು ಹೇಳಿದ ಗಂಡ!

70ರ ಹರೆಯದ ವೃದ್ಧೆಯನ್ನು ಮದುವೆಯಾದ 75 ವರ್ಷದ ವೃದ್ಧ
ಮಹಾರಾಷ್ಟ್ರದ ಕೊಲ್ಲಾಪುರದ  ಶಿರೋಲ್ ತಾಲೂಕಿನ ಘೋಸರವಾಡದಲ್ಲಿ ಅಪರೂಪದ ಮದುವೆಯೊಂದು (Wedding) ನಡೆದಿತ್ತು. ಘೋಸರವಾಡದಲ್ಲಿರುವ ಜಾನಕಿ ವೃದ್ಧಾಶ್ರಮದಲ್ಲಿ ಅನುಸೂಯ ಶಿಂಧೆ (70) ಮತ್ತು ಬಾಬುರಾವ್ ಪಾಟೀಲ್ (75) ಎಂಬ ಇಬ್ಬರು ಹಿರಿಯ ವ್ಯಕ್ತಿಗಳು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಮದುವೆಯಾಗಿದ್ದರು. ಇವರಿಬ್ಬರ ಪ್ರೀತಿ ಮತ್ತು ಮದುವೆ ಸಾಮಾಜಿಕ ಜಾಲತಾಣದಲ್ಲಿ (Social Media) ಸುದ್ದಿಯಾಗಿತ್ತು.

ಅನುಸೂಯ ಶಿಂಧೆ ಪುಣೆಯ ವಘೋಲಿ ಮೂಲದವರಾಗಿದ್ದರೆ, ಬಾಬುರಾವ್ ಪಾಟೀಲ್ ಶಿರೋಲ್ ತಾಲೂಕಿನ ಶಿವನಕವಾಡಿಯವರು. ಇಬ್ಬರೂ ತಮ್ಮ ಸಂಗಾತಿಯನ್ನು ಕಳೆದುಕೊಂಡು ಕಳೆದ ಎರಡು ವರ್ಷಗಳಿಂದ ವೃದ್ಧಾಶ್ರಮದಲ್ಲಿ (Old Age Home) ವಾಸಿಸುತ್ತಿದ್ದರು. ಅಲ್ಲದೆ, ಈ ವೃದ್ಧಾಶ್ರಮದ ಇತರ ಅನೇಕ ಹಿರಿಯ ವ್ಯಕ್ತಿಗಳಂತೆ ಅವರೂ ಸಹ ಕುಟುಂಬಗಳಿಂದ ದೂರವಾದವರು. ಇಬ್ಬರೂ ದೈಹಿಕವಾಗಿ ಸ್ವತಂತ್ರರಾಗಿದ್ದರೂ ಮಾನಸಿಕವಾಗಿ ಇಬ್ಬರೂ ದಣಿದಿದ್ದರು. ಅವರು ತಮ್ಮ ಸಂಕಟಗಳನ್ನು ಪರಸ್ಪರ ಅನುಭವಿಸಲು ಹಂಚಿಕೊಂಡರು.

ಕ್ರಮೇಣ, ಬಾಬುರಾವ್ ಪಾಟೀಲ್,  ಅನುಸೂಯ ಶಿಂಧೆ ಅವರನ್ನು ಇಷ್ಟಪಡಲು ಪ್ರಾರಂಭಿಸಿದರು. ಇನ್ನು, ಅನುಸೂಯ ಅವರು ಆರಂಭದಲ್ಲಿ ಒಪ್ಪಿಕೊಳ್ಳದಿದ್ದರೂ, ನಂತರ ಹಿರಿಯ ವಯಸ್ಸಿನ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ, ಅವರು ಮದುವೆಯಾಗಲು ನಿರ್ಧರಿಸಿದರು ಮತ್ತು ಗ್ರಾಮಸ್ಥರು ಹಾಗೂ ವೃದ್ಧಾಶ್ರಮದ ಅಧಿಕಾರಿಗಳು ಕಾನೂನುಬದ್ಧವಾಗಿ ಮದುವೆಯಾಗಲು ಸಹಾಯ ಮಾಡಿದರು ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios