MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಮೌನ ಮುರಿದ Rakshit Shetty ಹೀಗೊಂದು ಮನವಿ: FB ​ ಫೋಟೋ ಚೇಂಜ್​ ಆಗುತ್ತಲೇ, ಈ ವಿಡಿಯೋ ವೈರಲ್​

ಮೌನ ಮುರಿದ Rakshit Shetty ಹೀಗೊಂದು ಮನವಿ: FB ​ ಫೋಟೋ ಚೇಂಜ್​ ಆಗುತ್ತಲೇ, ಈ ವಿಡಿಯೋ ವೈರಲ್​

ರಶ್ಮಿಕಾ ಮಂದಣ್ಣ ಮದುವೆ ಬೆನ್ನಲ್ಲೇ, ನಟ ರಕ್ಷಿತ್ ಶೆಟ್ಟಿ ತಮ್ಮ ಫೇಸ್‌ಬುಕ್ ಕವರ್ ಫೋಟೋ ಬದಲಿಸಿದ್ದಾರೆ. ಇದನ್ನು ರಶ್ಮಿಕಾಗೆ ನೀಡಿದ ಟಾಂಗ್ ಎಂದು ಅಭಿಮಾನಿಗಳು ಭಾವಿಸುತ್ತಿರುವಾಗಲೇ, ರಶ್ಮಿಕಾ ಬಗ್ಗೆ ಕೆಟ್ಟದಾಗಿ ಮಾತನಾಡದಂತೆ ರಕ್ಷಿತ್ ಮನವಿ ಮಾಡಿದ್ದ ಹಳೆಯ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

2 Min read
Author : Suchethana D
Published : Mar 07 2026, 05:39 PM IST
Share this Photo Gallery
  • FB
  • TW
  • Linkdin
  • Whatsapp
16
ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ
Image Credit : instagram

ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ

ನಟ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ (Rakshit Shetty and Rashmika Mandanna) ಎಂಗೇಜ್​ಮೆಂಟ್​ ಮಾಡಿಕೊಂಡಿದ್ದು, ಬಳಿಕ ಅದು ಮುರಿದು ಬಿದ್ದ ಸುದ್ದಿ ಸಿನಿ ಪ್ರಿಯರಿಗೆ ತಿಳಿದದ್ದೇ. 2018ರಲ್ಲಿಯೇ ಎಲ್ಲವೂ ನಡೆದಿದ್ದರೂ, ಈಗ ರಶ್ಮಿಕಾ ಅವರ ಮದುವೆಯಿಂದ ಇದು ಮತ್ತೆ ಮುನ್ನೆಲೆಗೆ ಬರುತ್ತಿದೆ.

26
ಪ್ರತಿಕ್ರಿಯೆ ಇಲ್ಲ
Image Credit : Instagram

ಪ್ರತಿಕ್ರಿಯೆ ಇಲ್ಲ

ರಶ್ಮಿಕಾ ಮದುವೆಯ ಬಗ್ಗೆ ರಕ್ಷಿತ್​ ಶೆಟ್ಟಿ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ರಶ್ಮಿಕಾ ಹೆಸರು ಹೇಳುತ್ತಿದ್ದಂತೆಯೇ ರಿಷಬ್​ ಶೆಟ್ಟಿ ಕೂಡ ಏನೂ ಮಾತನಾಡದೇ ಅಲ್ಲಿಂದ ಹೊರಟು ಹೋಗಿದ್ದರು. ಪ್ರಮೋದ್​ ಶೆಟ್ಟಿ ಅವರು, ತಮಗೆ ರಶ್ಮಿಕಾ ಮದುವೆ ಇನ್​ವಿಟೇಷನ್​ ಕೊಟ್ಟಿಲ್ಲ, ಕೊಡುವುದೂ ಇಲ್ಲ ಎಂದಷ್ಟೇ ಹೇಳಿದ್ದರು.

Related Articles

Related image1
ಎಲ್ಲರೂ ಸರಿ ಎಂದ್ಕೊಂಡೆ, ಆಮೇಲೆ ಜ್ಞಾನೋದಯ ಆಯ್ತು: ಸಂದರ್ಶನದಲ್ಲಿ ಅಂದೇ ಹೇಳಿದ್ರು Rakshit Shetty!
Related image2
Rakshit Shetty ಫೇಸ್​ಬುಕ್​ ಕವರ್​ ಫೋಟೋ 3 ವರ್ಷದ ಬಳಿಕ ಚೇಂಜ್! ಒಂದು ಚಿತ್ರ, ನೂರೆಂಟು ಅರ್ಥ
36
ಫೇಸ್​ಬುಕ್​ ಕವರ್​ ಫೋಟೋ ಬದಲು
Image Credit : Facebook

ಫೇಸ್​ಬುಕ್​ ಕವರ್​ ಫೋಟೋ ಬದಲು

ಇವೆಲ್ಲವುಗಳ ನಡುವೆ, ನಿನ್ನೆ ರಕ್ಷಿತ್​ ಶೆಟ್ಟಿ ಏಕಾಏಕಿ ಫೇಸ್​ಬುಕ್​ ಕವರ್​ ಫೋಟೋ ಬದಲಿಸಿ ಶಾಕ್ ಕೊಟ್ಟಿದ್ದಾರೆ. ಮೂರು ವರ್ಷಗಳ ಬಳಿಕ ಕವರ್​ ಫೋಟೋ ಚೇಂಜ್ ಮಾಡಿದ ನಟ, ಚಾರ್ಲಿ ಚಿತ್ರದ ನಾಯಿಯ ಜೊತೆಗಿನ ಫೋಟೋ ಶೇರ್​ ಮಾಡಿದ್ದಾರೆ. ನಾಯಿಗೆ ಇರೋ ನಿಯತ್ತು ಮನುಷ್ಯರಿಗೆ ಇಲ್ಲ ಎಂದು ಇವರು ಪರೋಕ್ಷವಾಗಿ ರಶ್ಮಿಕಾ ಅವರಿಗೇ ಟಾಂಗ್​ ಕೊಟ್ಟಿದ್ದಾರೆ ಎಂದು ಅವರ ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆಯೇ ವಿನಾ, ನಟ ಮಾತ್ರ ಏನೂ ಹೇಳಲಿಲ್ಲ.

46
ರಕ್ಷಿತ್​ ಶೆಟ್ಟಿ ವಿಡಿಯೋ
Image Credit : Social Media

ರಕ್ಷಿತ್​ ಶೆಟ್ಟಿ ವಿಡಿಯೋ

ಇದರ ನಡುವೆಯೇ, ಇದೀಗ ರಕ್ಷಿತ್​ ಶೆಟ್ಟಿ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಇದು ಬಹುಶಃ 2018ರಲ್ಲಿ ರಶ್ಮಿಕಾ ಜೊತೆ ರಕ್ಷಿತ್​ ಅವರ ಮದುವೆ ಮುರಿದುಬಿದ್ದಾಗ ರಶ್ಮಿಕಾ ಬಗ್ಗೆ ಜನರು ಕೆಟ್ಟದ್ದಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ರಕ್ಷಿತ್​ ಅವರು ಮಾಡಿರುವ ವಿಡಿಯೋ ಆಗಿದೆ.

56
ಏನೇನೋ ಕಮೆಂಟ್ಸ್ ಹಾಕುತ್ತೀರಾ
Image Credit : Social Media

ಏನೇನೋ ಕಮೆಂಟ್ಸ್ ಹಾಕುತ್ತೀರಾ

ಇದರಲ್ಲಿ ರಕ್ಷಿತ್​ ಅವರು, ಸುಮಾರು ಮಂದಿ ಏನೇನೋ ಕಮೆಂಟ್ಸ್ ಹಾಕುತ್ತೀರಾ. ನನ್ನ ಬಗ್ಗೆ ಅಲ್ಲ, ಬೇರೆಯವರ ಬಗ್ಗೆ. ಇದನ್ನು ನೋಡಿದರೆ ತುಂಬಾ ಬೇಜಾರು ಆಗುತ್ತದೆ. ಆಗಿದ್ದು ಆಗಿ ಹೋಗಿದೆ. ಅದರ ಬಗ್ಗೆ ಮಾತನಾಡಿ ಪ್ರಯೋಜನ ಇಲ್ಲ. ದಯವಿಟ್ಟು ಯಾರದ್ದೇ ಬಗ್ಗೆ ಈ ರೀತಿಯ ಕಮೆಂಟ್ಸ್​ ಮಾಡಬೇಡಿ ಎಂದಿದ್ದಾರೆ.

66
ಯಾರಿಗೂ ಅಗೌರವ ತೋರಬೇಡಿ
Image Credit : Instagram

ಯಾರಿಗೂ ಅಗೌರವ ತೋರಬೇಡಿ

ಯಾರಿಗೂ ಅಗೌರವ ತೋರಬೇಡಿ. ನಮ್ಮ ಬಗ್ಗೆ ಯಾರಾದರೂ ಅಸಹ್ಯಪಟ್ಟುಕೊಂಡಾಗ ನಮಗೆ ಏನೆ ಅನ್ನಿಸ್ತದೆಯೋ, ನೀವು ಯಾರದ್ದಾದರೂ ಬಗ್ಗೆ ಮಾತನಾಡಿದರೆ ಅವರಿಗೂ ಹಾಗೆಯೇ ಅನ್ನಿಸುತ್ತದೆ. ಮೊದಲು ನಾವು ಮನುಷ್ಯರಾಗಿ ಇರಲು ನೋಡೋಣ. ಪರಸ್ಪರ ರಿಸ್​ಪೆಕ್ಟ್​ ಕೊಡೋಣ. ಎಲ್ಲರಿಗೂ ಪರ್ಸನಲ್ ಲೈಫ್​ ಇರುತ್ತದೆ. ಅದಕ್ಕೆ ಧಕ್ಕೆ ತರಬೇಡಿ ಎಂದಿದ್ದರು. ಆ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಆಗಿದ್ದು, ಅದೀಗ ಮತ್ತೆ ವೈರಲ್​ ಆಗ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಕ್ಷಿತ್ ಶೆಟ್ಟಿ
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಪ್ರೇಮ ವಿವಾಹ
ಪ್ರೀತಿ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಸಂಬಂಧಗಳು

Latest Videos
Recommended Stories
Recommended image1
Radhika Pandit ಹುಟ್ಟುಹಬ್ಬ: ಯಶ್​ ವಿಶೇಷ ಗಿಫ್ಟ್! ನಟಿಗೆ ಈಗ ಎಷ್ಟು ವರ್ಷ? ಸಿನಿಮಾಕ್ಕೆ ಮರಳ್ತಾರಾ?
Recommended image2
ಸ್ಯಾಂಡಲ್​ವುಡ್​ ಚೆಲುವೆ ಪ್ರೇಮಾ ಮದುವೆ? ಹಿಂಟ್ಸ್​ ಕೊಟ್ಟ ನಟಿ ತಾರಾ ಅನುರಾಧ- ಯಾರೀ ಚೆಲುವ?
Recommended image3
ಹೊಸ ಲುಕ್​ನಲ್ಲಿ ಪತ್ನಿ ಜೊತೆ ಮುಂಬೈ ಸುತ್ತಿದ ಯಶ್​: ಕಾರು ಇಳಿಯುತ್ತಿದ್ದಂತೆಯೇ ಫ್ಯಾನ್ಸ್​ ಗದ್ದಲ ನೋಡಿ!
Related Stories
Recommended image1
ಎಲ್ಲರೂ ಸರಿ ಎಂದ್ಕೊಂಡೆ, ಆಮೇಲೆ ಜ್ಞಾನೋದಯ ಆಯ್ತು: ಸಂದರ್ಶನದಲ್ಲಿ ಅಂದೇ ಹೇಳಿದ್ರು Rakshit Shetty!
Recommended image2
Rakshit Shetty ಫೇಸ್​ಬುಕ್​ ಕವರ್​ ಫೋಟೋ 3 ವರ್ಷದ ಬಳಿಕ ಚೇಂಜ್! ಒಂದು ಚಿತ್ರ, ನೂರೆಂಟು ಅರ್ಥ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved