ಪ್ರಿತಾ ಕೆರ್ವಾಶೆ

ಕಿಸ್ಸಿಂಗ್‌ ಡಿಸೀಸ್‌ ಅನ್ನೋದ್ಯಾಕೆ?

ಈ ರೋಗ ಬರೋದು ಎಂಜಲಿನಿಂದ. ನೆಗಡಿ, ಸೀನುವಾಗ ಬರುವ ಶೀತದ ಹನಿಯಿಂದ, ಕೆಲವೊಮ್ಮೆ ಲೈಂಗಿಕ ಕ್ರಿಯೆ ನಡೆಸಿದಾಗಲೂ ಇದು ಒಬ್ಬರ ದೇಹದಿಂದ ಇನ್ನೊಬ್ಬರ ದೇಹಕ್ಕೆ ಹರಡುತ್ತೆ. ಹೆಚ್ಚಾಗಿ ಕಿಸ್‌ ಮಾಡುವಾಗ ಹರಡೋ ಕಾರಣ ಈ ಮೋನೋ ಎಂಬ ರೋಗಕ್ಕೆ ‘ಕಿಸ್ಸಿಂಗ್‌ ಡಿಸೀಸ್‌’ ಎಂದೂ ಕರೆಯುತ್ತಾರೆ. ಆದರೆ ಯಾರನ್ನೂ ಚುಂಬಿಸದೆಯೂ ಈ ರೋಗ ಬರಬಹುದು. ಇನ್ನೊಬ್ಬರ ಟೂತ್‌ಬ್ರಶ್‌ ಶೇರ್‌ ಮಾಡಿದಾಗ, ಒಂದೇ ಪ್ಲೇಟ್‌ನಲ್ಲಿ ತಿಂದಾಗ, ಒಬ್ಬರು ಕುಡಿದ ಗ್ಲಾಸ್‌ ಅನ್ನು ತೊಳೆಯದೇ ಬಳಸಿದಾಗ, ಇನ್ನೊಬ್ಬರು ನಮ್ಮ ಪಕ್ಕದಲ್ಲೇ ಸೀನಿದಾಗ, ಹತ್ತಿರದಲ್ಲಿ ಕೂತಿದ್ದಾಗಲೂ ಇದು ಬರಬಹುದು.

30ರ ನಂತರ ಈ ಪ್ರಾಬ್ಲಮ್‌ ಬರೋದು ಕಡಿಮೆ. ಆದರೆ ಹದಿನೈದರಿಂದ 30ರೊಳಗಿನ ವಯೋಮಾನದವರಲ್ಲಿ ಈ ರೋಗದ ಪ್ರಮಾಣ ಶೇ.75ರಷ್ಟಿರುತ್ತದೆ. ಆದರೆ ಹತ್ತರ ಒಳಗಿನ ಮಕ್ಕಳಲ್ಲಿ ಬಹಳ ಮೈಲ್ಡ್‌ ಆಗಿ ಈ ರೋಗ ಬಂದು ಹೋಗಬಹುದು.

ಲಕ್ಷಣಗಳೇನು?

- ಜ್ವರ, ಗಂಟಲ ಕೆರೆತ, ನೋವು, ಎಂಜಲು ನುಂಗಲಾಗದಂತಾಗುವುದು, ತಲೆನೋವು, ಗುಳ್ಳೆಗಳು, ಅತಿಯಾಗುವ ಸುಸ್ತು, ಸ್ವಲ್ಪ ತಿಂದ ಕೂಡಲೇ ಹೊಟ್ಟೆತುಂಬಿದಂತಾಗೋದು.

ಕೊರೋನಾದಿಂದ ಚೇತರಿಸಿಕೊಂಡವ  'ಆ' ಕೆಲಸ ಮಾಡಲು ಎಷ್ಟು ದಿನ ಕಾಯಬೇಕು?

ವಾರಗಟ್ಟಲೆ ಕಾಡುತ್ತೆ

ಎರಡು ವಾರಗಳಾದರೂ ಈ ಸಮಸ್ಯೆಗಳು ಕಡಿಮೆಯಾಗೋದಿಲ್ಲ. ಕೆಲವೊಮ್ಮೆ ಜ್ವರ, ತಲೆನೋವು ಕಡಿಮೆಯಾದರೂ ಸುಸ್ತು ಆಮೇಲೂ ಒಂದಿಷ್ಟುದಿನಗಳವರೆಗೆ ಇರುತ್ತದೆ. ಕೆಲವರಿಗೆ ಕೆಲವು ವಾರಗಳಲ್ಲಿ ಈ ಸಮಸ್ಯೆಯಿಂದ ಮುಕ್ತಿ ಸಿಗಬಹುದು. ಆದರೆ ಕೆಲವರು ಆರು ತಿಂಗಳ ಕಾಲ ನರಳಬೇಕಾಗಿ ಬರಬಹುದು, ರಕ್ತ ಪರೀಕ್ಷೆ ಮಾಡುವಾಗ ಬಿಳಿ ರಕ್ತ ಕಣಗಳ (್ಝyಞphಟ್ಚyಠಿಛಿs) ಟೆಸ್ಟ್‌ ಮಾಡಿಸಿದರೆ ಈ ರೋಗ ಪತ್ತೆ ಮಾಡಬಹುದು.

ಹೈಜಿನ್‌ ಆಗಿದ್ರೆ ಬರಲ್ಲ

ಹೆಚ್ಚು ಕಡಿಮೆ ಕೊರೋನಾ ಬರದಂತೆ ವಹಿಸುವ ಮುನ್ನೆಚ್ಚರಿಕೆಯನ್ನು ಈ ರೋಗದ ಬಗ್ಗೆಯೂ ವಹಿಸಿದ್ರೆ ಆಯ್ತು. ಆಗಾಗ ಕೈ ತೊಳೆಯೋದು, ಇನ್ನೊಬ್ಬರಿಂದ ಅಂತರ ಕಾಯ್ದುಕೊಳ್ಳೋದು ಇತ್ಯಾದಿ ಎಚ್ಚರಿಕೆಗಳಿರಲಿ. ಈ ಸಮಸ್ಯೆ ಮಾರಾಣಾಂತಿಕವಲ್ಲ, ಹಾಗಂತ ನೆಗ್ಲೆಕ್ಟ್ ಮಾಡೋ ಹಾಗೂ ಇಲ್ಲ. ಯಾವುದಕ್ಕೂ ಹುಷಾರಾಗಿರಿ.