ಸಂಭೋಗದ ನಂತರ ಅಳುವುದಕ್ಕೆ ನೋವೊಂದೇ ಕಾರಣ ಆಗಿರಬೇಕಿಲ್ಲ. ಹಲವಾರು ಕಾರಣಗಳಿರಬಹುದು. ಸೆಕ್ಸ್‌ ಎಂದರೆ ಮಹಿಳೆಯರಿಗೆ ತೀವ್ರ ಭಾವೋತ್ಕರ್ಷದ ಒಂದು ಚಟುವಟಿಕೆ. ಆಗ ಅನೇಕ ಬಗೆಯ ಹಾರ್ಮೋನ್‌ಗಳು ದೇಹದಲ್ಲಿ ಚಿಮ್ಮುತ್ತವೆ. ಅವುಗಳು ಆಕೆ ಅಳುವಂತೆ ಮಾಡಬಹುದು.

ಪ್ರಶ್ನೆ: ನನಗೆ ಮೂವತ್ತು ವರ್ಷ. ಪತ್ನಿಗೆ ಇಪ್ಪತ್ತೆಂಟು ವರ್ಷ. ಆರು ತಿಂಗಳ ಹಿಂದೆ ಮದುವೆಯಾಗಿದೆ. ನಮ್ಮ ಸಮಸ್ಯೆ ಏನೆಂದರೆ, ಸೆಕ್ಸ್‌ನ ಬಳಿಕ ನನ್ನ ಪತ್ನಿ ಅಳುತ್ತಾಳೆ. ಕೆಲವೊಮ್ಮೆ ಜೋರಾಗಿ, ಕೆಲವೊಮ್ಮೆ ಬಿಕ್ಕಳಿಕೆ. ಕೆಲವೊಮ್ಮೆ ಬೇಸರದ ಮೂಡ್‌ನಲ್ಲಿರುತ್ತಾಳೆ. ಹಾಗಂತ ಆಕೆಗೆ ಸೆಕ್ಸ್‌ ವೇಳೆ ನೋವಾಗುತ್ತಿಲ್ಲವಂತೆ. ಅನೇಕ ಬಾರಿ ನಾವಿಬ್ಬರೂ ಆನಂದದ ಉತ್ತುಂಗ ಅನುಭವಿಸಿದ್ದೇವೆ. ಆದರೂ ಆಕೆ ಅಳುತ್ತಾಳೆ. ಯಾಕೆ ಎಂದು ಕೇಳಿದರೆ ಹೇಳಲು ಆಕೆಗೆ ತಿಳಿಯುವುದೇ ಇಲ್ಲ. ನನಗೆ ಇದರಿಂದಾಗಿ ಸೆಕ್ಸ್‌ ಮೇಲೆ ಆಸಕ್ತಿಯೇ ಹೊರಟು ಹೋಗುವಂತಾಗಿದೆ, ಮದುವೆಯಾದ ಹೊಸದರಲ್ಲಿ ಆಲ್‌ಮೋಸ್ಟ್‌ ಪ್ರತಿದಿನ ಸೆಕ್ಸ್‌ ಮಾಡುತ್ತಿದ್ದೆವು. ಈಗ ವಾರಕ್ಕೊಂದು ದಿನಕ್ಕೆ ಬಂದು ನಿಂತಿದೆ. ಏನು ಮಾಡಲಿ?

ಉತ್ತರ: ಸಂಭೋಗದ ನಂತರ ಅಳುವುದಕ್ಕೆ ನೋವೊಂದೇ ಕಾರಣ ಆಗಿರಬೇಕಿಲ್ಲ. ಹಲವಾರು ಕಾರಣಗಳಿರಬಹುದು. ನೋವಿನಿಂದ ಅಳುವುದಾದರೆ, ಶಿಶ್ನವನ್ನು ಯೋನಿಯ ಒಳಗೆ ತೂರಿಸಿದಾಗಲೇ ನೋವಿನಿಂದ ಅಳು ಬರಬಹುದು. ಆದರೆ ನಿಮ್ಮ ಪತ್ನಿ ಹಾಗೆ ಮಾಡುತ್ತಿಲ್ಲ ಎಂದು ನೀವೇ ಹೇಳಿದ್ದೀರಿ. ಸಂಭೋಗದ ನಂತರ ಅವರು ಅಳುತ್ತಾರೆ ಎಂದರೆ ಕಾರಣಗಳು ಬೇರೆಯೇ ಇರಬಹುದು.

ಸೆಕ್ಸ್‌ ಎಂದರೆ ಮಹಿಳೆಯರಿಗೆ ತೀವ್ರ ಭಾವೋತ್ಕರ್ಷದ ಒಂದು ಚಟುವಟಿಕೆ. ಆಗ ಅನೇಕ ಬಗೆಯ ಹಾರ್ಮೋನ್‌ಗಳು ದೇಹದಲ್ಲಿ ಚಿಮ್ಮುತ್ತವೆ. ಅವುಗಳು ಆಕೆ ಅಳುವಂತೆ ಮಾಡಬಹುದು. ಅನೇಕ ಸಲ ತುಂಬಾ ಆನಂದ ಆದಾಗಲೂ ಕಣ್ಣಿನಲ್ಲಿ ನೀರು ಚಿಮ್ಮುವುದಿದೆ. ಕೆಲವೊಮ್ಮೆ ಗರ್ಭಧಾರಣೆ ತಡೆಯಲು ತೆಗೆದುಕೊಳ್ಳುವ ಮಾತ್ರೆಗಳು ಮನಸ್ಸಿನಲ್ಲಿ ಆತಂಕದ ಭಾವವೊಂದನ್ನು ಮೂಡಿಸುತ್ತವೆ. ನಿಮ್ಮ ಪತ್ನಿ ಅಂಥ ಔಷಧ ಸೇವಿಸುತ್ತಿದ್ದಾರೆಯೇ ಎಂಬುದನ್ನು ನೀವು ತಿಳಿಸಿಲ್ಲ.

ಕೆಲವೊಮ್ಮೆ ಮಹಿಳೆಯರು ತುಂಬಾ ಕೆಲಸ ಮಾಡಿ ಸುಸ್ತಾಗಿರುತ್ತಾರೆ. ಮನೆಯ ಒಳಗೂ, ಹೊರಗೂ ಕೆಲಸ ಮಾಡುವ ಮಹಿಳೆಯರಿಗೆ ತಡೆಯಲಾದ ಸುಸ್ತಾಗಿರುತ್ತದೆ. ಇಂಥ ಸಂದರ್ಭದಲ್ಲಿ ಸೆಕ್ಸ್‌ ಅನ್ನುವುದು ಅವರನ್ನು ತುಂಬಾ ರಿಲ್ಯಾಕ್ಸ್‌ ಮೂಡ್‌ಗೆ ತರಬಹುದು. ಅಥವಾ ಇದರ ಉಲ್ಟಾ ಕೂಡ ಆಗಬಹುದು. ತುಂಬಾ ಸುಸ್ತಾದಾಗ ಸೆಕ್ಸ್‌ ಬೇಕೆನಿಸುವುದಿಲ್ಲ. ಆಗ ಸಂಗಾತಿಯನ್ನು ತೃಪ್ತಿಪಡಿಸಲು ಸೆಕ್ಸ್‌ನಲ್ಲಿ ಭಾಗವಹಿಸುತ್ತಾರೆ. ಆದರೆ ದೇಹದಂತೆ ಮನಸ್ಸು ಸಹಕರಿಸುವುದಿಲ್ಲವಷ್ಟೆ.

ಸೆಕ್ಸ್‌ನ ವೇಳೆ ಆಕ್ಸಿಟೋಸಿನ್‌ ಎಂಬ ಹಾರ್ಮೋನ್‌ ಬಿಡುಗಡೆಯಾಗುತ್ತದೆ. ಇದು ವ್ಯಕ್ತಿಯಲ್ಲಿ ಆಳವಾದ ಸಂಬಂಧದ, ನಂಬಿಕೆಯ, ಸಹಾನುಭೂತಿಯ ಭಾವನೆಯನ್ನು ಉದ್ದೀಪಿಸುವ ಹಾರ್ಮೋನ್.‌ ಇಂಥ ಹೊತ್ತಿನಲ್ಲಿ ನಿಮ್ಮ ಸಂಗಾತಿ ನಿಮ್ಮೊಂದಿಗೆ ಅತೀ ಸಾಮೀಪ್ಯ, ಸುರಕ್ಷತೆ, ತಲ್ಲೀನತೆಯ ಭಾವ ಅನುಭವಿಸಬಹುದು. ಇದು ಕೂಡ ಅಳುವಿಗೆ ಕಾರಣವಾಗಬಹುದು.

ಈ 5 ಕೆಲಸ ಮಾಡಿದ್ರೆ ಲೈಂಗಿಕ ಜೀವನ ಬೊಂಬಾಟ್ ಆಗಿರುತ್ತೆ

ಒಮ್ಮೊಮ್ಮೆ ಶೋಕವೂ ಇಂಥ ಅಳುವಿಗೆ ಕಾರಣವಾಗುವುದಿದೆ. ಯಾವುದಾದರೂ ಒಂದು ಆಳವಾದ ಶೋಕವೂ ಅವರನ್ನು ಒಳಗೊಳಗೇ ಕೊರೆಯುತ್ತಿರಬಹುದು. ಅದು ಸೆಕ್ಸ್‌ನಂಥ ಭಾವೋತ್ಕರ್ಷದ ವೇಳೆಯಲ್ಲಿ ಹೊರಗೆ ಬಂದು ಅಳುವಾಗಿ ಪರಿವರ್ತನೆಯಾಗುತ್ತಿರಬಹುದು. ಅಥವಾ ತಾನು ಈ ಹಿಂದೆ ಮಾಡಿದ ತಪ್ಪುಗಳು, ಭಾವನಾತ್ಮಕ ಸಮಸ್ಯೆಗಳು ಆಕೆಗೆ ನೆನಪಾಗಿ ಅಳು ಬರುತ್ತಿರಬಹುದು. ಅಥವಾ, ಸೆಕ್ಸ್‌ನ ಹೊತ್ತಿಗೆ ಇನ್ಯಾರೋ ತನ್ನ ಆತ್ಮೀಯರ, ಸಂಕಷ್ಟದಲ್ಲಿರುವವರ ನೆನಪಾಗಿ, ಅವರು ಕಷ್ಟದಲ್ಲಿರುವಾಗ ನಾನು ಸುಖಪಡುತ್ತಿದ್ದೇನಲ್ಲಾ ಎಂಬ ಪಶ್ಚಾತ್ತಾಪದ ಭಾವವೂ ಮೂಡುತ್ತಿರಬಹುದು.

ಇನ್ನೂ ಮುಖ್ಯವಾದ ಇನ್ನೊಂದು ಕಾರಣವೆಂದರೆ ಲೈಂಗಿಕ ಹಿಂಸೆ ಅಥವಾ ದೌರ್ಜನ್ಯದ ನೆನಪೂ ಕಾಡುತ್ತಿರಲೂಬಹುದು. ಚಿಕ್ಕವರಿದ್ದಾಗ, ಅಸಹಾಯಕರಾಗಿದ್ದಾಗ ಯಾರಾದರೂ ಲೈಂಗಿಕವಾಗಿ ಶೋಷಿಸಿದ್ದರೆ, ಆ ನೆನಪು ಮನದಲ್ಲಿ ಗಾಢವಾಗಿ ಕುಳಿತು, ಸಂಗಾತಿಯ ಜತೆಗೆ ಆನಂದದಾಯಕ ಸೆಕ್ಸ್‌ ಆನುಭವಿಸಿದಾಗಲೂ ಅಳುವಾಗಿ ಪರಿವರ್ತಿಗೊಂಡು ಹೊರಹೊಮ್ಮಬಹುದು.

ಹೀಗಾಗಿ, ನಿಮ್ಮ ಸಂಗಾತಿಯ ಅಳುವಿಗೆ ಏನು ಕಾರಣ ಎಂಬುದನ್ನು ಆತ್ಮೀಯವಾಗಿ ನೀವು ವಿಚಾರಿಸಿ ತಿಳಿದುಕೊಳ್ಳಬೇಕು. ಸಾಧ್ಯವಾಗದಿದ್ದರೆ ಕೌನ್ಸೆಲಿಂಗ್‌ ಸಹಾಯ ಪಡೆಯಿರಿ. 

ಸೆಕ್ಸ್ ಬಗ್ಗೆ ಆಸಕ್ತಿ ಅಂದ್ರೆ ನಾಚಿಕೆ ವಿಷ್ಯವಾ? ಸದ್ಗುರು ಹೇಳ್ತಾರೇನು?