ಹಾರ್ಮೋನ್‌ಗಳ ಏರುಪೇರು, ಮೂಡ್ ಸ್ವಿಂಗ್ಸ್, ದೈಹಿಕ ಬದಲಾವಣೆ, ವಿವಿಧ ನೋವುಗಳು, ಸುಸ್ತು, ಸಂಕಟ- ಪ್ರಗ್ನೆನ್ಸಿಯಲ್ಲಿ ಕಾಡುವ ಎಲ್ಲವೂ ಸೇರಿ ಜೋಡಿಯ ನಡುವೆ ದೈಹಿಕ ಹಾಗೂ ಮಾನಸಿಕ ಅಡ್ಡಗೋಡೆಯೊಂದನ್ನು ಕಟ್ಟಿಬಿಡಬಹುದು. ಆದರೆ, ಇಂಥ ಸಂದರ್ಭದಲ್ಲೂ ಇಬ್ಬರ ನಡುವೆ ಆಪ್ತತೆಯ ಕೊರತೆಯಾಗದಂತೆ ನೋಡಿಕೊಳ್ಳಲು ಕೆಲ ಟಿಪ್ಸ್ ಇಲ್ಲಿವೆ. 

ಮಾತುಕತೆ
ಚೆಂದದ ಮನಸ್ಸಿನವರೊಡನೆ ಆಪ್ತವಾಗಿ ಮಾತನಾಡುವಷ್ಟು ಚೆಂದದ್ದು ಮತ್ತೊಂದು ಇರಲಿಕ್ಕಿಲ್ಲ. ಪತಿಪತ್ನಿ ಇಬ್ಬರೂ ಆಕಾಶಕ್ಕೆ ತೆರೆದುಕೊಂಡು ಬಾಲ್ಕನಿಯಲ್ಲೋ ಟೆರೇಸ್‌ನಲ್ಲೋ ಮಲಗಿಕೊಂಡು ನಾಳಿನ ಕನಸು ಕಟ್ಟುವುದು, ನಿನ್ನೆಯ ಖುಷಿಯ ಕ್ಷಣಗಳನ್ನು ನೆನಪು ಮಾಡಿಕೊಳ್ಳುವುದು, ನಿಮ್ಮ ಪ್ರೀತಿ, ನಿರೀಕ್ಷೆಗಳು, ಚಿಂತೆಗಳನ್ನು ಹೇಳಿಕೊಳ್ಳುವುದು ಎಲ್ಲವೂ ಇಬ್ಬರ ನಡುವೆ ಬಂಧದ ಕೊಂಡಿಯನ್ನು ಗಟ್ಟಿಯಾಗಿಸುತ್ತದೆ. ನಿಮ್ಮ ಹಾರ್ಮೋನ್‌ ಏರುಪೇರಿನ ಬಗ್ಗೆ, ಮಕ್ಕಳನ್ನು ಸಾಕುವ ಭಯದ ಕುರಿತು ಹಂಚಿಕೊಳ್ಳಿ. ಇಬ್ಬರೂ ಒಬ್ಬರಿಗೊಬ್ಬರು ಅಗತ್ಯವಿದ್ದಲ್ಲಿ ಸಲಹೆಗಳನ್ನು ನೀಡುತ್ತಾ, ಧೈರ್ಯ ಹೇಳುತ್ತಾ ಕಳೆಯಿರಿ. 

ಗರ್ಭಿಣಿ ವೊಂಬಾಟ್ ಸಾವು, ಹೊಟ್ಟೆಯಲ್ಲಿ ಚಡಪಡಿಸಿದ ಕಂದ, ಮುಂದೆ ನಡೆಯಿತ ...

ದೈಹಿಕ ಪ್ರೀತಿ
ಸಾಮಾನ್ಯವಾಗಿ ಪ್ರಗ್ನೆನ್ಸಿಯಲ್ಲಿ ಲೈಂಗಿಕ ಚಟುವಟಿಕೆಯಿಂದ ಅಂಥ ಸಮಸ್ಯೆಯೇನೂ ಆಗುವುದಿಲ್ಲ. ಆದರೂ, ಸಂಕಟ ಹಾಗೂ ಹಾರ್ಮೋನ್ ಏರುಪೇರಿನಿಂದಾದ ಇತರೆ ಸಮಸ್ಯೆಗಳಿಂದಾಗಿ ಅದು ಸಾಧ್ಯವಾಗದಿದ್ದಲ್ಲಿ ಬೇರೆ ರೀತಿಯಲ್ಲೂ ದೈಹಿಕವಾಗಿ ಹತ್ತಿರಾಗಿರಬಹುದು. ಹೊಟ್ಟೆಯ ಭಾರ ಹೊತ್ತು ಬಾತುಕೊಂಡ ಆಕೆಯ ಕಾಲುಗಳಿಗೆ ಮಸಾಜ್ ಮಾಡುವುದು, ತಲೆ ಕೂದಲಿಗೆ ಎಣ್ಣೆ ಹಾಕುವುದು ಮಾಡಿ ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸಿ. ಆಕೆ ಕೂಡಾ ಆತನಿಗೆ ತಲೆಗೆ ಎಣ್ಣೆ ಮಸಾಜ್ ಮಾಡುವುದು, ಸೆಕ್ಸ್‌ನ ಅಂತಿಮ ಹಂತ ಸಾಧ್ಯವಿಲ್ಲದಿದ್ದರೆ ಎಷ್ಟು ಸಾಧ್ಯವೋ ಅಲ್ಲಿಯವರೆಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಈ ಮೂಲಕ ಪ್ರೀತಿ ವ್ಯಕ್ತಪಡಿಸುವುದು, ಪರಸ್ಪರ ಮುದ್ದು ಮಾಡಿಕೊಳ್ಳುವುದು, ಅಪ್ಪುವುದು, ಒಬ್ಬರ ಕಾಲ ಮೇಲೆ ಮತ್ತೊಬ್ಬರು ಮಲಗುವುದು, ಕೈ ಹಿಡಿದು ವಾಕ್ ಮಾಡುವುದು ಆಗಾಗ ಮಾಡುತ್ತಿದ್ದರೆ ಇದರಿಂದ ಇಬ್ಬರೂ ಸದಾ ಕನೆಕ್ಟ್ ಆಗಿರಲು ಸಾಧ್ಯವಿದೆ. 

ಒಟ್ಟಾಗಿರಿ
ವಾರಕ್ಕೊಮ್ಮೆ ಒಟ್ಟಿಗೇ ಕುಳಿತು ಮೂವಿ ನೋಡಿ, ಈ ಸಂದರ್ಭದಲ್ಲಿ ಮುದ್ದು ಮಾಡುವುದನ್ನು ಮರೆಯದಿರಿ. ಊಟ ಮಾಡುತ್ತಾ ಹರಟೆ ಹೊಡೆಯಿರಿ. ಇಂಥ ಸಂದರ್ಭದಲ್ಲೆಲ್ಲ ಕೇವಲ ಮಗುವಿನ ಬಗ್ಗೆ ಮಾತನಾಡುತ್ತಿರಬೇಡಿ. ಅದರ ಹೊರತಾಗಿಯೂ ನಿಮ್ಮಿಬ್ಬರ ನಡುವೆ ಚೆಂದದ ಸಂಬಂಧ ಇರುವುದನ್ನು ನೆನಪಿಡಿ. ಇಬ್ಬರೂ ಕುಳಿತು ಪುಸ್ತಕ ಓದಿ ನಂತರ ಆ ಬಗ್ಗೆ ಚರ್ಚಿಸಿ, ಗಿಡಗಳನ್ನು ಬೆಳೆಸಿ, ಹಳೆಯ ಫೋಟೋ ಆಲ್ಬಮ್‌ಗಳನ್ನು ನೋಡಿ ಆನಂದಿಸಿ, ಒಟ್ಟಿಗೇ ವ್ಯಾಯಾಮ ಮಾಡಿ, ಅಧ್ಯಯನಗಳ ಪ್ರಕಾರ, ಪ್ರೀತಿಸುವವರ ಬೆವರಿಗೆ ಆಕರ್ಷಿಸುವ ಶಕ್ತಿ ಇದೆ. 

ಕಹಿ ಅನಿಸುತ್ತಿರುವ ಸಂಬಂಧಕ್ಕೆ ಸಿಹಿ ನೀಡುವ ಅಭ್ಯಾಸಗಳಿವು!

ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ದಾರಿಗಳು
ಸಣ್ಣ ಸಣ್ಣ ವಿಷಯಗಳೇ ಹೆಚ್ಚು ಕಾಡುವುದು. ಆಕೆ ದುಃಖಿತಳಾಗಿದ್ದರೆ ಸಮಾಧಾನ ಮಾಡಿ, ಅವಳ ಒಳ್ಳೆಯ ಗುಣಗಳನ್ನು ಮೆಚ್ಚಿ ಮಾತನಾಡಿ. ಆತನಿಷ್ಟದ ಅಡುಗೆ ಮಾಡಿ, ಆಗಾಗ ಆಕೆಗೆ ಇಷ್ಟದ ಚಾಕೋಲೇಟ್ ಬಾಕ್ಸ್ ಕೊಟ್ಟು ಸರ್ಪ್ರೈಸ್ ನೀಡಿ, ಆತನಿಗೆ ಕ್ರಿಕೆಟ್ ನೋಡಲು ಅವಕಾಶ ಕೊಡಿ- ಹೀಗೆ ಸಾಧ್ಯವಾದಲೆಲ್ಲ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ.