ಗರ್ಭಿಣಿ ವೊಂಬಾಟ್ ಸಾವು, ಹೊಟ್ಟೆಯಲ್ಲಿ ಚಡಪಡಿಸಿದ ಕಂದ, ಮುಂದೆ ನಡೆಯಿತು ಅಚ್ಚರಿ!
ವಿಶ್ವದಲ್ಲಿ ತಾಯಿಯಾಗುವ ಅನುಭವ ಬಹಳ ಖುಷಿ ಕೊಡುವಂತಹದ್ದು ಎನ್ನಲಾಗುತ್ತದೆ. ಅದು ಮನುಷ್ಯರಾಗಿರಲಿ ಅಥವಾ ಪ್ರಾಣಿಗಳಾಗಿರಲಿ ತಾಯೊಯಾಗುವ ಮೂಲಕ ಹೊಸದೊಂದು ಜೀವವನ್ನು ಜಗತ್ತಿಗೆ ತರಲಾಗುತ್ತದೆ. ಆದರೆ ಹಲವಾರು ಬಾರಿ ದುರ್ಘಟನೆಯಲ್ಲಿ ಜೀವ ಹೋಗುತ್ತದೆ. ಹೊಸ ಜೀವ ಜಗತ್ತಿಗೆ ಬರುವ ಮುನ್ನವೇ ಕಣ್ಮುಚ್ಚಿಕೊಳ್ಳುತ್ತದೆ, ಇಲ್ಲವೇ ಮಗು ಹುಟ್ಟುವ ಮುನ್ನವೇ ತಾಯಿ ಸಾವನ್ನಪ್ಪುತ್ತದೆ. ಆದರೆ ಸದ್ಯ ಅಚ್ಚರಿಯ ಘಟನೆಯೊಂದು ವರದಿಯಾಗಿದೆ. ನ್ಯೂ ಸೌಥ್ ವೆಲ್ಸ್‌ನ ರಸ್ತೆ ಬದಿಯಲ್ಲಿ ಗರ್ಭಿಣಿ ವೊಂಬಾಟ್ಸ್ ಎಂಬ ಪ್ರಾಣಿ ಸಾವನ್ನಪ್ಪುತ್ತದೆ. ಹೀಗಿರುವಾಗ ಅಲ್ಲಿಂದ ತೆರಳುತ್ತಿದ್ದ ವ್ಯಕ್ತಿಯೊಬ್ಬ ಇದನ್ನು ಗಮನಿಸಿ ಅಲ್ಲಿfಗೆ ತೆರಳಿದ್ದಾನೆ. ಹೀಗಿರುವಾಗ ತಾಯಿ ಸಾವನ್ನಪ್ಪಿರುವುದು ಆತನ ಗಮನಕ್ಕೆ ಬರುತ್ತದೆ. ಆದರೆ ಅದರ ಹೊಟ್ಟೆಯಲ್ಲಿ ವಿಚಿತ್ರ ಚಲನ ವಲನ ಗಮನಕ್ಕೆ ಬಂದಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಅದು ಗರ್ಭಿಣಿ ಎಂಬ ವಿಚಾರ ಅವರಿಗೆ ತಿಳಿಯುತ್ತದೆ ಹಾಗೂ ಹೊಟ್ಟೆಯಲ್ಲಿರುವ ಮರಿ ಹೊರಬರಲು ಯತ್ನಿಸುತ್ತಿರುವುದು ತಿಳಿಯುತ್ತದೆ. ಹೀಗಿರುವಾಗ ಅಚಾನಕ್ಕಾಗಿ ಆ ಮರಿ ಗರ್ಭದೊಳಗಿಂದ ಹೊರ ಬರುವ ಪ್ರಯತ್ನದಲ್ಲಿ ತನ್ನ ಕೈಯ್ಯನ್ನೂ ಹೊರ ಹಾಕಿತ್ತು. ಪುಟ್ಟ ಮರಿಯ ಜನ್ಮದ ಈ ದೃಶ್ಯಗಳನ್ನು ಜನರು ಭಾರೀ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಈ ಫೊಟೋ ನ್ಯೂ ಸೌತ್ ವೆಲ್ಸ್‌ನದ್ದಾಗಿದೆ. ಇಲ್ಲೊಬ್ಬ ಪ್ರಾಣಿ ರಕ್ಷಕ ವೊಂಬಾಟ್ಸ್ ಹೊಟ್ಟೆಯಿಂದ ಮರಿಯನ್ನು ತೆಗೆದು ರಕ್ಷಿಸಿದ್ದಾನೆ.
ಈ ಮರಿ ತಾಯಿ ಸಾವನ್ನಪ್ಪಿದ ಬಳಿಕ ಅದರ ಹೊಟ್ಟೆಯಲ್ಲಿ ಸಿಲುಕಿತ್ತು. ರಸ್ತೆ ದಾಟುತ್ತಿದ್ದ ವೊಂಬಾಟ್ಸ್ ನ್ನು ವೇಗವಾಗಿ ಬಂದಿದ್ದ ವಾಹನವೊಂದು ಡಿಕ್ಕಿ ಹೊಡೆದು ಸಾಗಿತ್ತು.
ಹೀಗಿರುವಾಗ ಅದೇ ದಾರಿಯಲ್ಲಿ ಸಾಗುತ್ತಿದ್ದ 59 ವರ್ಷದ ಜಾನ್ ಕರೇಂಟೋ ಸತ್ತು ಬಿದ್ದಿದ್ದ ವೊಂಬಾಟ್ಸ್ ಗಮನಿಸಿದ್ದಾರೆ. ಅವರು ಅದರ ಬಳಿ ತೆರಳುದಾಗ ಹೊಟ್ಟೆಯೊಳಗೆ ಅದೇನೋ ಹೊರಳಾಡುತ್ತಿರುವುದನ್ನು ಗಮನಿಸಿದ್ದಾರೆ.
ಹೀಗಿರುವಾಗ ಅಚಾನಕ್ಕಾಗಿ ಸತ್ತು ಬಿದ್ದಿದ್ದ ವೊಂಬಾಟ್ಸ್ ಗರ್ಭದಿಂದ ಮರಿಯೊಂದು ಕೈ ಹೊರ ಹಾಕಿದೆ. ಆಗಲೇ ಅವರಿಗೆ ತಿಳಿದದ್ದು ಸತ್ತು ಹೋಗಿದ್ದ ವೊಂಬಾಟ್ಸ್ ಗರ್ಭಿಣಿಯಾಗಿತ್ತೆಂದು. ಹೀಗಾಗಿ ತಾಯಿ ಸತ್ತ ಬಳಿಕ ಮರಿ ಹೊರಬರಲು ಪ್ರಯತ್ನಿಸುತ್ತಿತ್ತು.
ಹೀಗಿರುವಾಗ ಜಾನ್ ಆ ಮರಿಯ ಕೈ ಹಿಡಿದು ಅದನ್ನು ಹೊರಗೆಳೆದಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅಲ್ಲಿಂದ ಜಾನ್ ಈ ಮರಿಯನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ. ಅದನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದಾರೆ.