ತನ್ನ ಪತಿ ಶ್ರೀ ರಾಮಚಂದ್ರನಂತೆ ಎಂದು ಕೊಳ್ಳುವ ಪ್ರತೀ ಹೆಣ್ಣು ಮಕ್ಕಳಿಗೂ ಶಾಕ್ ನೀಡುವ ಸ್ಟಡಿಯ ವರದಿ ಇದು. ಯಾವ ಗಂಡೂ ಸಾಚಾವಲ್ಲ ಬಿಡಿ ಎನ್ನುತ್ತೆ ಈ ಅಧ್ಯಯನ. ಒಂದು ನಿಮಿಷ, ಹಾಗಂತ ಎಲ್ಲೂ ಗಂಡಸರೂ ದಾರಿ ತಪ್ಪಿದ ಮಕ್ಕಳಾಗಿರುವುದಿಲ್ಲ. ಹೆಣ್ಣಿನ ಬಗ್ಗೆ ಕನಸಿನಲ್ಲಾದರೂ ವಿಧ ವಿಧವಾಗಿ ಸುಖಿಸಿರುತ್ತಾರೆ ಅಷ್ಟೇ. ಅಷ್ಟಕ್ಕೂ ಈ ಗಂಡಿನ ಗುಟ್ಟು ರಟ್ಟು ಮಾಡಿದ ಸ್ಟಡಿ ಏನು ಹೇಳುತ್ತೆ ನೀವೇ ಓದಿ...


ಲೈಫ್‌ ಇಡೀ ನೆನಪಿರುತ್ತಾಳೆ ಫಸ್ಟ್ ಕ್ರಶ್
ಟೀನೇಜ್ನಲ್ಲಿ ಸ್ಕೂಲ್ ನಲ್ಲಿ ಲೈನ್ ಹೊಡೀತಿದ್ದ ಹುಡುಗಿ ನಮ್ಮ ಫಸ್ಟ್ ಕ್ರಶ್. ಆಕೆ ಅಷ್ಟು ಸುಲಭಕ್ಕೆ ನಮ್ಮ ಮನಸ್ಸಿಂದ ಆಚೆ ಹೋಗಲ್ಲ. ಹರೆಯ ಆಗಷ್ಟೇ ಕಾಲಿಟ್ಟ ಸಮಯದಲ್ಲಿ ಈ ಹುಡುಗಿ ಕನಸಿನಲ್ಲೂ, ಮನಸಿನಲ್ಲೂ ಬಹಳ ಕಾಡಿರ್ತಾಳೆ. ಅವಳಿಂದಾಗಿ ನಿಮಗೆ ಪಾಠದ ಕಡೆ ಗಮನ ಕೊಡಲು ಆಗೋದಿಲ್ಲ. ಪ್ರತಿಯೊಬ್ಬ ಪುರುಷನ ಲೈಫ್‌ನಲ್ಲೂ ಫಸ್ಟ್ ಕ್ರಶ್ ಇದ್ದೇ ಇರುತ್ತಾಳೆ. ಒಂದಿಷ್ಟು ಕಾಲ ಅವಳಿಗೆ ಲೈನ್ ಹೊಡೆಯೋದು ಬಿಟ್ಟರೆ ಆಕೆ ಲೈಫ್‌ಗೇನೂ ಪರ್ಮನೆಂಟ್ ಆಗಿ ಎಂಟ್ರಿ ಕೊಟ್ಟಿರಲ್ಲ.

ಬಿಂದಾಸ್ ಹುಡುಗಿ
ಈಕೆಗೆ ಊರ ತುಂಬ ಬಾಯ್ಪ್ರೆಂಡ್ಸ್ ಇರ್ತಾರೆ. ನೇರ ಗುಣದ ಈ ಹುಡುಗಿ ಸಖತ್ ಬಿಂದಾಸಾಗಿಯೂ ಇರುತ್ತಾಳೆ. ಸಿಟಿಯಲ್ಲಾದ್ರೆ ಹುಡುಗರ ಜೊತೆಗೆ ಪಾರ್ಟಿ ಮಾಡ್ತಾಳೆ. ಒಂದು ಹೊತ್ತಲ್ಲಿ ಎಲ್ಲರೆದುರೇ ಆಕೆಯ ಬಾಯ್ಫ್ರೆಂಡ್‌ನ ಚುಂಬಿಸುತ್ತಾಳೆ. ಸಖತ್ ಮೋಜು ಮಸ್ತಿಯಾಗಿರುವ ಆ ಹುಡುಗಿಯ ಗೆಳೆಯನಾಗಿರಲು ಹುಡುಗರು ಹಾತೊರೆಯುತ್ತಾರೆ.

ತುಂಬ ಗಾಸಿಪ್ ಮಾಡೋ ಹುಡುಗಿ
ಹುಡುಗರ ಗಮನಕ್ಕೆ ಬರುವ ಹೆಚ್ಚಿನೆಲ್ಲ ಹುಡುಗೀರೂ ಗಾಸಿಪ್ ಮಾಡುತ್ತಿರುತ್ತಾರೆ. ಅಂಥವರಿಗೆಲ್ಲ ಲೀಡರ್ನಂತಿರುವ ಒಬ್ಬಾಕೆಯನ್ನು ಗಂಡಸು ಇಷ್ಟಪಡಲಾರಂಭಿಸುತ್ತಾನೆ. ಅವಳು ಹೇಳೋ ಕತೆಗಳೆಲ್ಲ ಅವನಿಗೆ ಇಂಪಾಗಿಯೇ ಕೇಳಿಸುತ್ತೆ. ಯಾವ ಹುಡುಗ ಯಾರ ಜೊತೆ ಓಡಾಡ್ತಾ ಇದ್ದಾನೆ, ಯಾವ ಹುಡುಗಿ ಯಾರೊಂದಿಗೆ ರಿಲೇಶನ್ನಲ್ಲಿದ್ದಾಳೆ ಅನ್ನೋದೆಲ್ಲ ಈಕೆಯ ನಾಲಿಗೆ ತುದೀಲಿರುತ್ತೆ.

Sex Education: ಬೇಕಾ? ಯಾರಿಗೆ? ಯಾವಾಗ? 

ಸೀರಿಯಸ್ ಹುಡುಗೀರು
ಪಾಠದ ಕಡೆಗೇ ಸದಾ ಗಮನ. ಕಲಿಯೋದ್ರಲ್ಲೂ ಮುಂದು. ಕನ್ನಡಕ ಹಾಕಿಕೊಂಡು ಮಹಾಜಾಣರಂತೆ ಕಾಣೋ ಈ ಹುಡುಗೀರ ಜೊತೆಗೂ ಹುಡುಗರು ಫ್ಲರ್ಟ್ ಮಾಡಿರುತ್ತಾರೆ. ಎದುರು ಏನನ್ನೂ ತೋರಿಸಿಕೊಳ್ಳದೇ ಹೋದರೂ ಮನಸ್ಸಲ್ಲೇ ಮಂಡಿಗೆ ತಿನ್ನುತ್ತಿರುತ್ತಾರೆ. ಸದಾ ಓದಿನಲ್ಲಿ ಮುಳುಗಿರೋ ಈ ಹುಡುಗೀರಿಗೆ ಡೇಟಿಂಗ್ಗೂ ಟೈಮ್ ಇರಲ್ಲ. ಅದು ಇಂಗ್ಲೀಷ್ ಕ್ಲಾಸ್‌ಗಿಂತ ಮುಖ್ಯ ಅಂತಲೂ ಅವರಿಗೆ ಅನಿಸೋದಿಲ್ಲ. ಬೇಗ ಬ್ರೇಕ್ಅಪ್ ಆಗೋದು ಕಾಮನ್.

ಬ್ಯೂಟಿಫುಲ್ ಹುಡುಗಿ
ಗೆಳೆಯರ ಜೊತೆಗೆ ಮಾತನಾಡುವಾಗ ಸಾಕಷ್ಟು ಸಲ ಚರ್ಚೆ ಮಾಡಿರುತ್ತಾರೆ. ಹುಡುಗಿಯ ಚಂದ ನೋಡಿ ಲವ್ ಮಾಡಬಾರದು. ಬೆನೇ ಇಲ್ಲದ ಹುಡುಗಿ ಎಂಥಾ ಸುಂದರಿಯಾಗಿದ್ರೂ ನೋ ಯೂಸ್ ಅಂತೆಲ್ಲ. ಆದರೂ ಚಂದದ ಹುಡುಗಿ ಎದುರು ಬಂದಾಗ ಎದೆ ಹೊಡ್ಕೊಳ್ಳುತ್ತೆ, ಒಂದು ಚಾನ್ಸ್ ನೋಡು ಮಗಾ ಅಂತ ಮನಸು ಹೇಳುತ್ತೆ. ಮನಸ್ಸಲ್ಲೇ ಮನೆದೇವರನ್ನು ಪ್ರಾರ್ಥಿಸಿ ಅಪ್ಲಿಕೇಶನ್ ಹಾಕೋದು. ಅವಳು ಅದಕ್ಕೆ ಓಕೆ ಅಂದಾಗ ಕಣ್ಣನ್ನೇ ನಂಬಲಾಗುವುದಿಲ್ಲ. ಆದರೆ ಒಂದಲ್ಲ ಒಂದು ದಿನ ಇದು ರಿಯಲ್ ಲವ್ ಅಲ್ಲ ಅನ್ನೋದರ ಅರಿವಾಗಿ ಬ್ರೇಕ್ಅಪ್ ಆಗಿಬಿಡುತ್ತೆ.

ಕೆಟೋ ಡಯಟ್‌ನಿಂದ ವೀರ್ಯ ವೃದ್ಧಿ! 

ಮಧ್ಯವಯಸ್ಸಿನ ಪೊಸೆಸ್ಸಿವ್ ಲೇಡೀಸ್
ವಯಸ್ಸಲ್ಲಿ ದೊಡ್ಡವರಾದ ಲೇಡೀಸ್ ಬಗ್ಗೆ ಗಂಡಸರಲ್ಲಿ ಪ್ರೀತಿ ಅಷ್ಟು ಸುಲಭಕ್ಕೆ ಹುಟ್ಟಲ್ಲ. ಆದರೆ ಇಲ್ಲಿ ಹೆಂಗಸರೇ ಅವರನ್ನು ನಿಧಾನಕ್ಕೆ ತಮ್ಮ ತೆಕ್ಕೆಗೆ ಎಳೆದುಕೊಳ್ಳುತ್ತಾರೆ. ಶುರು ಶುರುವಲ್ಲಿ ಇದೊಂದು ಡಿಫರೆಂಟ್ ಎಕ್ಸ್ಪೀರಿಯನ್ಸ್ ಅನಿಸಿದರೂ ಕ್ರಮೇಣ ಅವರ ಅತಿಯಾದ ಪೊಸೆಸ್ಸಿವ್ನೆಸ್ ರೇಜಿಗೆ ಹುಟ್ಟಿಸುತ್ತದೆ. ಇದು ಲವ್ವಲ್ಲ, ಜೈಲು ಅಂತ ರಿವೀಲ್ ಆಗಿ ಈ ಸಂಬಂಧದಿಂದ ಕಳಚಿಕೊಳ್ಳೋದು ಕಾಮನ್.

ಡ್ರಾಮಾ ಕ್ವೀನ್‌ಗಳು
ಎದುರಿಗೆ ಮಹಾ ಸಾಧ್ವಿಗಳಂತೆ ತೋರಿಸಿಕೊಳ್ತಾರೆ. ಆದರೆ ಗಂಡಸರ ಅರಿವಿಗೇ ಬರದ ಹಾಗೆ ಅವರ ಸ್ವಾತಂತ್ರ್ಯಕ್ಕೆ ಕನ್ನ ಹಾಕುತ್ತಾರೆ. ಎಮೋಷನಲೀ ಬ್ಲಾಕ್‌ಮೇಲ್ ಮಾಡುತ್ತಾ ತಮ್ಮದೇ ಹಠ ನಡೆಯೋ ಹಾಗೆ ಮಾಡ್ತಾರೆ. ಇದನ್ನೆಲ್ಲ ಸಹಿಸಲಾಗದೇ ಒಂದು ದಿನ ಬ್ರೇಕ್ಅಪ್ ಮಾಡ್ಕೊಂಡ್ರೋ ಮರುದಿನವೇ ಪಕ್ಕದ್ಮನೆ ಹುಡುಗನ ಜೊತೆಗೆ ನಿಮ್ಮ ಕಣ್ಣೆದುರಲ್ಲೇ ಓಡಾಡಲು ಶುರು ಮಾಡ್ತಾರೆ.

#Feelfree: ಸ್ಯಾಂಡಲ್‌ವುಡ್‌ನ ಡ್ರಗ್ಸ್ ಮತ್ತು ಸೆಕ್ಸ್- ಡೆಡ್ಲೀ ಕಾಂಬಿನೇಶನ್! ...

ಬಾಳ ಸಂಗಾತಿ
ಬಾಳ ಸಂಗಾತಿಯ ಬಗ್ಗೆ ಏನು ಕನಸು ಕಂಡಿರುತ್ತಾರೋ ಅದೇ ಥರದವರು ಸಿಗೋದರೊಂದಿಗೆ ಈ ಜರ್ನಿಗೆ ಫುಲ್‌ಸ್ಟಾಪ್ ಬೀಳುತ್ತೆ. ಕಷ್ಟದಲ್ಲಿ ಜೊತೆಯಾಗುವ, ಬಹಳ ಪ್ರೀತಿಸುವ ಹೆಣ್ಣಿವಳು. ಚೆಂದದ, ಸ್ಮಾರ್ಟ್ ಆಗಿರುವ, ಹಾಸ್ಯಪ್ರಜ್ಞೆ ಇರುವ, ಎಲ್ಲಕ್ಕಿಂತ ಮುಖ್ಯವಾಗಿ ಆಕೆ ಜೊತೆಗಿದ್ದರೆ ಜಗತ್ತನ್ನೇ ಜಯಿಸಬಲ್ಲೆ ಎಂಬ ಫೀಲ್ ಕೊಡುವ ಹುಡುಗಿ.