ಕಚೇರಿ (Office)ಗಳಲ್ಲಿ ಟೀ ಬ್ರೇಕ್‌, ಲಂಚ್ ಬ್ರೇಕ್‌ (Break) ಇರೋ ಬಗ್ಗೆ ನೀವು ಕೇಳಿರಬಹುದು. ಅನ್‌ಫಿಶಿಯಲ್ ಆಗಿ ಸ್ಮೋಕ್ ಮಾಡೋಕು ಕೆಲವೊಬ್ರು ಬ್ರೇಕ್ ತಗೊಳ್ತಾರೆ. ಆದ್ರೆ ಈ ಕಚೇರಿಯಲ್ಲಿ ಉದ್ಯೋಗಿಗಳಿಗೆ ಭರ್ತಿ  30 ನಿಮಿಷದ ಬ್ರೇಕ್ ನೀಡಲಾಗುತ್ತೆ. ಆದ್ರೆ ಇದು ಟೀ, ಲಂಚ್ ಬ್ರೇಕ್ ಅಲ್ಲ. ಈ ಸುದೀರ್ಘ ಬ್ರೇಕ್ ಕೊಡೋದು ಉದ್ಯೋಗಿಗಳು ಹಸ್ತಮೈಥುನ (Masturbation) ಮಾಡ್ಕೊಳ್ಳೋಕೆ. ಅಯ್ಯಯ್ಯೋ ಏನ್‌ ಹೇಳ್ತಿದ್ದೀರಿ ಎಂದು ಹೌಹಾರ್ಬೇಡಿ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ. 

ಒಂದೊಂದು ಕಂಪೆನಿ (Company)ಯೂ ಉದ್ಯೋಗಿಗಳನ್ನು ನಡೆಸಿಕೊಳ್ಳುವ ರೀತಿ, ಉದ್ಯೋಗಿ (Employees)ಗಳಿಗೆ ನೀಡುವ ಸವಲತ್ತುಗಳು ವಿಭಿನ್ನವಾಗಿರುತ್ತದೆ. ಕೆಲವೊಂದು ಕಚೇರಿಗಳಲ್ಲಿ ಟೀ, ಲಂಚ್ ಬ್ರೇಕ್‌ (Lunch break) ಜೊತೆಗೆ ರೆಸ್ಟ್ ಮಾಡಲು ಸಹ ಸಮಯ ಕೊಡುತ್ತಾರೆ. ಇತ್ತೀಚಿಗೆ ಕಂಪೆನಿಯೊಂದು ಮಧ್ಯಾಹ್ನದ ಊಟದ ನಂತರ ಉದ್ಯೋಗಿಗಳಿಗೆ ಸಣ್ಣ ಮಟ್ಟಿನ ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟು ಸುದ್ದಿಯಾಗಿತ್ತು. ಆದ್ರೆ, ಇಲ್ಲೊಂದು ಕಂಪೆನಿ, ಇನ್ನೊಂಚೂರು ಮುಂದಕ್ಕೆ ಹೋಗಿ ಯೊಚಿಸಿದೆ. ಲೇಡಿ ಬಾಸ್​ ಒಬ್ಬರು ತನ್ನ ನೌಕರರಿಗೆ ಹಸ್ತಮೈಥುನ (Masturbation) ಮಾಡಿಕೊಳ್ಳಲು ಕಚೇರಿಯಲ್ಲಿ 30 ನಿಮಿಷದ ಬ್ರೇಕ್ ನೀಡುತ್ತಿದ್ದಾರೆ.

ಆಫೀಸಿನಲ್ಲಿ ಹಸ್ತಮೈಥುನ ಮಾಡಿಕೊಳ್ಳಲು ವಿರಾಮ
ಉದ್ಯೋಗಿಗಳು ಕೆಲಸದ ನಡುವೆ ಆಗಾಗ ರಿಲ್ಯಾಕ್ಸ್​ ಆಗಲಿ ಎಂದು ಬ್ರೇಕ್ ನೀಡಲಾಗುತ್ತದೆ. ಆದರೆ, ಇನ್ನೂ ಕೊಂಚ ಮುಂದೆ ಹೋಗಿ ಯೋಚಿಸಿರುವ ಲೇಡಿ ಬಾಸ್​ ಒಬ್ಬರು ತನ್ನ ನೌಕರರಿಗೆ ಹಸ್ತಮೈಥುನ ಮಾಡಿಕೊಳ್ಳಲು ವಿರಾಮ ನೀಡುತ್ತಿದ್ದಾರೆ. ಆದರೆ ಇದು ಯಾವುದೋ ಸಾಫ್ಟ್‌ವೇರ್ ಕಂಪೆನಿಯಲ್ಲ. ಪೋರ್ನ್ ನಿರ್ದೇಶಕಿ, ಸ್ಟ್ರಿಪ್​​ಚಾಟ್ (Stripchat)​ ಎಂಬ ಅಡಲ್ಟ್​ ವೆಬ್​ಸೈಟ್​ ನಡೆಸುವ ಕಂಪನಿಯ ಬಾಸ್​ ಎರಿಕಾ ಲಸ್ಟ್ ಎಂಬಾಕೆ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹಸ್ತಮೈಥುನಕ್ಕಾಗಿ ಪ್ರತಿದಿನ ಅರ್ಧ ಗಂಟೆ ಬ್ರೇಕ್ ತೆಗೆದುಕೊಳ್ಳಲು ಅವಕಾಶ ನೀಡುತ್ತಿದ್ದಾರೆ. ಎರಿಕಾ ಲಸ್ಟ್ ತನ್ನ ಸಿಬ್ಬಂದಿಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಳೆದ ವರ್ಷದಿಂದ ಈ ಹೊಸ ನಿಯಮ ಜಾರಿಗೆ ತಂದಿದ್ದಾರೆ ಎಂದು ತಿಳಿದುಬಂದಿದೆ. ಲೇಡಿ ಬಾಸ್ ನಡೆಯಿಂದ ಉದ್ಯೋಗಿಗಳು ಸಹ ಫುಲ್ ಖುಷ್ ಆಗಿದ್ದಾರೆ.

Relationship Tips: ಮದುವೆ ನಂತ್ರ ಬೆಡ್ ರೂಮ್ ವಿಷ್ಯ ಅಮ್ಮಂಗೆ ಹೇಳಕ್ಕೋಗಬೇಡಿ!

ನಿರ್ದೇಶಕರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಿನಿ-ಸಾಕ್ಷ್ಯಚಿತ್ರವನ್ನು ಸಹ ಬಿಡುಗಡೆ ಮಾಡಿದರು. ಅಲ್ಲಿ ಅವರು ಒಂಟಿಯಾಗಿ ಸಮಯವನ್ನು ಹೇಗೆ ಪಡೆಯುತ್ತಾರೆ ಎಂದು ಜನರನ್ನು ಕೇಳಿದರು. ಬಹಳಷ್ಟು ಪ್ರತಿಕ್ರಿಯೆಗಳು ಒತ್ತಡದ ಮಟ್ಟವನ್ನು ಅವಲಂಬಿಸಿ ಪ್ರಮಾಣವು ಬದಲಾಗುತ್ತದೆ ಎಂದು ಸೂಚಿಸಿದೆ, ಕೆಲವರು ಕೆಲಸದ ವಾತಾವರಣದಲ್ಲಿನ ಇತ್ತೀಚಿನ ಬದಲಾವಣೆಗಳು ತಮ್ಮ ಅಭ್ಯಾಸಗಳ ಮೇಲೆ ಪ್ರಭಾವ ಬೀರಿದೆ ಎಂದು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಈ ಲೇಡಿ ಬಾಸ್ ಉದ್ಯೋಗಿಗಳಿಗೆ ಹಸ್ತಮೈಥುನಕ್ಕೆ ಅವಕಾಶ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಸಿಬ್ಬಂದಿಗೆ ಸೆಕ್ಸ್​ ಟಾಯ್​ ಉಚಿತವಾಗಿ ವಿತರಣೆ
ಸ್ಟ್ರಿಪ್​​ಚಾಟ್ ಎಂಬ ಅಡಲ್ಟ್​ ವೆಬ್​ಸೈಟ್​ ನಡೆಸುವ ಕಂಪನಿ ಕೇವಲ ಹಸ್ತಮೈಥುನ ಬ್ರೇಕ್ ಮಾತ್ರವಲ್ಲ, ತನ್ನ ಉದ್ಯೋಗಿಗಳಿಗೆ ಉಚಿತ ಸೆಕ್ಸ್ ಟಾಯ್‌ನ್ನು ಸಹ ವಿತರಿಸುತ್ತಿದೆ. ಪೋರ್ನ್ ಸೈಟ್ ನಿರ್ವಹಿಸುತ್ತಿರುವುದರಿಂದ ಇಲ್ಲಿನ ಮಾಲಕಿ ಲೈಂಗಿಕತೆಯ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದಾರೆ. ಮತ್ತು ಜೀವನದಲ್ಲಿ ಅದರ ಅಗತ್ಯತೆಯ ಬಗ್ಗೆ ಅರಿತುಕೊಂಡಿದ್ದಾರೆ. ಹೀಗಾಗಿ ಉದ್ಯೋಗಿಗಳಿಗೆ ಉಚಿತವಾಗಿ ಸೆಕ್ಸ್ ಟಾಯ್ ನೀಡಲು ನಿರ್ಧರಿಸಿದರಂತೆ. ಅಂದಹಾಗೆ, ಎರಿಕಾ ಅವರ ಈ ನಿರ್ಧಾರದ ಬಳಿಕ ಅವರ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕೆಲಸದ ಗುಣಮಟ್ಟ, ಉತ್ಪಾದಕತೆಯೂ ಹೆಚ್ಚಾಗಿದೆಯಂತೆ.

ಚುಂಬನ ದೇಹದಲ್ಲಿ ರೋಮಾಂಚನ ಉಂಟು ಮಾಡುವುದು ಯಾಕೆ ? ಇಲ್ಲಿದೆ ಯಾರೂ ಹೇಳಿರದ ಸೀಕ್ರೆಟ್‌

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಎರಿಕಾ ಲಸ್ಟ್​, ಕಳೆದ ಮೇ ತಿಂಗಳಲ್ಲಿ ನಾನು ನನ್ನ ಸಿಬ್ಬಂದಿಗೆ ದಿನವೂ 30 ನಿಮಿಷಗಳ ಹಸ್ತಮೈಥುನ ವಿರಾಮವನ್ನು ನೀಡಲು ಪ್ರಾರಂಭಿಸಿದೆ. ಈ ವರ್ಷ, ಫನ್ ಫ್ಯಾಕ್ಟರಿಯ ನನ್ನ ಸ್ನೇಹಿತರು ಮತ್ತು ಅವರ ಲೈಂಗಿಕ ಆಟಿಕೆಗಳ ಸಹಾಯದಿಂದ ನಮ್ಮ ವಿಶೇಷ ಕೆಲಸದ ಗುಣಮಟ್ಟವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ನೀವು ನಮ್ಮೊಂದಿಗೆ ಸೇರಿಕೊಳ್ಳುತ್ತೀರಾ? ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯೋದಲ್ಲಿನ ನನ್ನ ಲಿಂಕ್‌ಗೆ ಭೇಟಿ ನೀಡಿ. ಅಲ್ಲಿ ನೀವು ಮಾದಕ ರಿಯಾಯಿತಿಯನ್ನು ಪಡೆಯಬಹುದು ಎಂದು ಪೋಸ್ಟ್ ಮಾಡಿದ್ದಾರೆ.