Elon Musk Dating: ದೊಡ್ಡ ಶ್ರೀಮಂತನ ಹೊಸ ಗೆಳತಿ 27ರ ನತಾಶಾ.. ಮಸ್ಕ್ ಮಸ್ತ್ ಓಡಾಟ
ಯುವಜನತೆಯನ್ನು ಮೋಡಿ ಮಾಡಿರುವ ಟೆಸ್ಲಾ (Tesla) ಮತ್ತು ಸ್ಪೇಸ್‌ಎಕ್ಸ್ (SpaceX) ಸಿಇಒ ಎಲೋನ್ ಮಸ್ಕ್ (Elon Musk) ಡೇಟಿಂಗ್ ಇದೀಗ ದೊಡ್ಡ ಸುದ್ದಿಯಾಗಿದೆ. ಹಾಗಾದರೆ ಮಸ್ಕ್ ಅವರೇ ಆಕೆಯ ಹಿಂದೆ ಬಿದ್ರಾ? ಆಕೆಯೇ ಮಸ್ಕ್ ಹಿಂದೆ ಬಂದರಾ?
ಎಲೋನ್ ಮಸ್ಕ್ ಸ್ಟ್ರೇಲಿಯಾದ (Hollywood) ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಯುಎಸ್‌ನ ಲಾಸ್ ಏಂಜಲೀಸ್‌ನಲ್ಲಿ ಎಲೋನ್ ಮಸ್ಕ್ ಅವರು ನಟಿಯೊಂದಿಗೆ ಖಾಸಗಿ ಜೆಟ್‌ನಿಂದ ನಿರ್ಗಮಿಸುತ್ತಿರುವ ವೇಳೆ ಕ್ಯಾಮರಾಕ್ಕೆ ಸೆರೆ ಸಿಕ್ಕಿದ್ದಾರೆ.
ನತಾಶಾ ಬ್ಯಾಸೆಟ್ ಜೊತೆಗೆ ಎಲೋನ್ ಮಸ್ಕ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಚ್ಚರಿಯ ವಿಚಾರವೆಂದರೆ ಎಲೋನ್ ಮಸ್ಕ್ 50 ವರ್ಷವಾದರೆ ಅವರ ಹೊಸ ಗೆಳತಿಗೆ 27 ವರ್ಷ!
Image: Natasha Bassett/Instagram
ನತಾಶಾ ಅವರು ಎಲೋನ್ ಮಸ್ಕ್ ಜೊತೆಗೆ ಖಾಸಗಿ ಜೆಟ್‌ನಿಂದ ಇಳಿಯುವಾಗ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದರು. ಆದರೆ ಸಿಕ್ಕಿಬಿದ್ದರು!
ನತಾಶಾ ಆಸ್ಟ್ರೇಲಿಯನ್ ನಟಿ. ಈಕೆ ಸಿಡ್ನಿಯಲ್ಲಿ ಬೆಳೆದವರು.. ನಟನೆ ಮತ್ತು ನೃತ್ಯ ಕಲಿಯಲು 2019ರಲ್ಲಿ ನ್ಯೂಯಾರ್ಕ್‌ಗೆ ತೆರಳಿದರು. ಆಸ್ಟ್ರೇಲಿಯನ್ ಥಿಯೇಟರ್ ಫಾರ್ ಯಂಗ್ ಪೀಪಲ್‌ನಲ್ಲಿ ರೋಮಿಯೋ ಮತ್ತು ಜೂಲಿಯೆಟ್ ಮೂಲಕ ಹೆಸರು ಸಂಪಾದನೆ ಮಾಡಿಕೊಂಡವರು.
ನಟಿ ಸಾಮಾಜಿಕ ಹೋರಾಟಗಾರ್ತಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಜಾಗತಿಕ ತಾಪಮಾನದ ಬಗ್ಗೆಯೂ ಮಾತನಾಡಿದ್ದಾರೆ. ಎಲೋನ್ ಮಸ್ಕ್ ಮತ್ತು ಗಾಯಕಿ ಗ್ರಿಮ್ಸ್ ಮೂರು ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿ ನಂತರ ಸೆಪ್ಟೆಂಬರ್ 2021 ರಲ್ಲಿ ಬೇರ್ಪಟ್ಟರು. ದಂಪತಿಗೆ ಒಬ್ಬ ಪುತ್ರ ಇದ್ದಾನೆ.