ರಹಸ್ಯ ಇನ್ಸ್ಟಾಗ್ರಾಮ್ ಖಾತೆ ಹೊಂದಿದ್ದಾರಂತೆ ಎಲಾನ್ ಮಸ್ಕ್: ಯಾಕೆ ಗೊತ್ತಾ?
ಟೆಸ್ಲಾ ಸಿಇಓ ಎಲಾನ್ ಮಸ್ಕ್ ಸಾಮಾನ್ಯವಾಗಿ ಟ್ವಿಟರ್‌ನಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ ಅಲ್ಲದೇ ಅವರ ಪ್ರತಿ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ಈಗ ಟೆಸ್ಲಾ ಸಿಇಒ "ರಹಸ್ಯ" ಇನ್ಸ್ಟಾಗ್ರಾಮ್ ಖಾತೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
Elon Musk Latest News: ಬಿಲಿಯನೇರ್ ಮತ್ತು ಎಲ್ಲವೂ ಯೋಜನೆಯಂತೆ ನಡೆದರೆ ಶೀಘ್ರದಲ್ಲೇ ಟ್ವಿಟರ್ ಮುಖ್ಯಸ್ಥರಾಗಲಿರುವ ಎಲಾನ್ ಮಸ್ಕ್ ಪುಣೆ ಮೂಲದ ಐಟಿ ವೃತ್ತಿಪರ ಪ್ರಣಯ್ ಪಾಥೋಲ್ (Pranay Pathole) ಅವರಿಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸುವಾಗ ರಹಸ್ಯ ವಿವರವೊಂದನ್ನು ಬಹಿರಂಗಪಡಿಸಿದ್ದಾರೆ. ಮಸ್ಕ್ ರಹಸ್ಯ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದಾರೆಂದು ಈಗ ಹೇಳಿದ್ದಾರೆ.
ಟೆಸ್ಲಾ ಸಿಇಓ ಎಲಾನ್ ಮಸ್ಕ್ ಸಾಮಾನ್ಯವಾಗಿ ಟ್ವಿಟರ್‌ನಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ ಅಲ್ಲದೇ ಅವರ ಪ್ರತಿ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ಈಗ ಟೆಸ್ಲಾ ಸಿಇಒ "ರಹಸ್ಯ" ಇನ್ಸ್ಟಾಗ್ರಾಮ್ ಖಾತೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ರಹಸ್ಯ ಇನ್ಸ್ಟಾಗ್ರಾಮ್ ಖಾತೆಯೊಂದಿಗೆ ಅವರು ಸಾಮಾನ್ಯವಾಗಿ ತಮ್ಮ ಸ್ನೇಹಿತರು ಕಳುಹಿಸುವ ಲಿಂಕ್‌ಗಳನ್ನು ಪರಿಶೀಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.
"ಎಲಾನ್ ಮಸಕ್ ನನ್ನ ಟ್ವೀಟರ್ ಖಾತೆಯನ್ನು ನಡೆಸುತ್ತಾರ ಎಂದು ಅನೇಕ ಜನರು ಭಾವಿಸುತ್ತಾರೆ. ಮತ್ತು ಇದು ನಿಜ. ಮಸ್ಕ್ ತುಂಬಾ ಬ್ಯುಸಿ ವ್ಯಕ್ತಿ, ರಾಕೆಟ್‌ಗಳನ್ನು ನಿರ್ಮಿಸುವುದು, ಜೀವನಯೋಗ್ಯ ಇತರ ಗ್ರಹಗಳನ್ನು ಪತ್ತೆ ಮಾಡುವುದು, ಫ್ಯೂಚರಿಸ್ಟಿಕ್ ಎಲೆಕ್ಟ್ರಿಕ್ ವಾಹನಗಳನ್ನು ನಿರ್ಮಿಸುವುದು, ಸುರಂಗಗಳನ್ನು ಅಗೆಯುವುದು. ಇವೆಲ್ಲದರ ಹೊರತಾಗಿ ಹೇಗಾದರೂ ಅವರು ಟ್ವಿಟರ್ ಖಾತೆಗಳನ್ನು ಚಲಾಯಿಸಲು ಸಮಯವನ್ನು ಕಂಡುಕೊಳ್ಳುತ್ತಾರೆ. ಹೌದು" ಎಂದು ಪ್ರಣಯ್ ಪಾಥೋಲ್ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್ "ನಾನು ಚೀಸೀ ರಹಸ್ಯ ಇನ್ಸ್ಟಾಗ್ರಾಮ್ (Instagram) ಖಾತೆಯನ್ನು ಹೊಂದಿದ್ದೇನೆ, ಹಾಗಾಗಿ ಸ್ನೇಹಿತರು ನನಗೆ ಕಳುಹಿಸುವ ಲಿಂಕ್‌ಗಳ ಮೇಲೆ ನಾನು ಕ್ಲಿಕ್ ಮಾಡಬಹುದು" ಎಂದು ಮಸ್ಕ್ ಅವರು ಪ್ಯಾಥೋಲ್‌ಗೆ ಪ್ರತಿಕ್ರಿಯಿಸುವಾಗ ಹೇಳಿದ್ದಾರೆ. ಪ್ರಣಯ್ ಪಾಥೋಲ್ ಸಾಮಾನ್ಯವಾಗಿ ಟ್ವೀಟ್ ಮಾಡುವ ಪ್ರತಿಯೊಂದಕ್ಕೂ ಮಸ್ಕ್‌ರಿಂದ ನಿಯಮಿತವಾಗಿ ಪ್ರತ್ಯುತ್ತರಗಳನ್ನು ಪಡೆಯುತ್ತಾರೆ.
ರಹಸ್ಯ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವುದು ಮಸ್ಕ್ (Elon Musk) ಅವರ ಕಂಪನಿಗಳ ಅಧಿಕೃತ ಫೇಸ್‌ಬುಕ್ ಪುಟಗಳನ್ನು ಅಳಿಸುವ ನಿರ್ಧಾರಕ್ಕೆ ವಿರುದ್ಧವಾಗಿದೆ. 2018 ರಲ್ಲಿ, ಮಸ್ಕ್ ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಫೇಸ್‌ಬುಕ್ ಪುಟಗಳನ್ನು ಡಿಲೀಟ್ ಮಾಡಿಸಿದ್ದರು. ಈ ಎರಡೂ ಖಾತೆಗಳು ಸುಮಾರು 2.6 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದವು.
ಇದನ್ನೂ ಓದಿ: ನಕಲಿ ಖಾತೆಗಳ ಬಗ್ಗೆ ಸ್ಪಷ್ಟತೆ ಇಲ್ಲದೆ ಟ್ವೀಟರ್ ಒಪ್ಪಂದ ಇಲ್ಲ: ಎಲಾನ್ ಮಸ್ಕ್
ಇದಕ್ಕೆ ವಿರುದ್ಧವಾಗಿ, ಸ್ಪೇಸ್‌ಎಕ್ಸ್ (SpaceX) ಮತ್ತು ಟೆಸ್ಲಾ ಎರಡೂ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿವೆ, ಇದು ಫೇಸ್‌ಬುಕ್‌ನಂತೆ ಮೆಟಾ ಒಡೆತನದಲ್ಲಿದೆ. ಮಸ್ಕ್ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿಲ್ಲ ಆದರೆ ಹಲವಾರು ಅಭಿಮಾನಿ ಪುಟಗಳಿವೆ.
ಟ್ವೀಟರ್‌ನಲ್ಲಿ ಸಖತ್ ಆಕ್ಟೀವ್: ಬಿಲಿಯನೇರ್ ಹೆಚ್ಚು ಬಳಸುವ ಏಕೈಕ ಸಾಮಾಜಿಕ ಮಾಧ್ಯಮ ವೇದಿಕೆಯೆಂದರೆ ಟ್ವಿಟರ್ (Twitter). ಕಳೆದ ವರ್ಷ ಟ್ವಿಟರ್‌ನ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಾಕ್ ಡಾರ್ಸೆ ಟ್ವೀಟರನ್ನು ಸಹ-ಸ್ಥಾಪಿಸಿದ್ದರು. ಪ್ರಸ್ತುತ, ಪರಾಗ್ ಅಗರವಾಲ್ ಅವರು ಟ್ವಿಟರ್‌ನ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಾಗ್ ಅಗರ್‌ವಾಲ್ ಸದ್ಯ ಮ್ಯಾನೆಜ್‌ಮೆಂಟನ್ನು ಪುನರ್ರಚಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇತ್ತೀಚೆಗೆ ಕೆಲವು ಉನ್ನತ ಕಾರ್ಯನಿರ್ವಾಹಕರನ್ನು ಕೂಡ ವಜಾಗೊಳಿಸಿದ್ದಾರೆ.
ಮಸ್ಕ್ ಪ್ರಸ್ತುತ ಟ್ವಿಟರ್ ಖರೀದಿಸಲು ಮುಂದಾಗಿದ್ದಾರೆ ಆದರೆ ಟ್ವೀಟರ್ ಮತ್ತು ಮಸ್ಕ್ ನಡುವಿನ ಈ ಒಪ್ಪಂದು ಇನ್ನೂ ಖಚಿವಾಗಿಲ್ಲ. ಮೈಕ್ರೋಬ್ಲಾಗಿಂಗ್ ಸೈಟ್ ಕಳೆದ ತ್ರೈಮಾಸಿಕದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿನ ಬಾಟ್‌ಗಳ ಸಂಖ್ಯೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹೇಳುತ್ತಿದೆ ಎಂದು ಮಸ್ಕ್ ಭಾವಿಸಿದ್ದು ಬಿಲಿಯನೇರ್ $44 ಶತಕೋಟಿ ಟ್ವಿಟರ್ ಒಪ್ಪಂದವನ್ನು ಸದ್ಯ ತಡೆಹಿಡಿದಿದ್ದಾರೆ.
ಇದನ್ನೂ ಓದಿ: Elon Musk: ಜಗತ್ತಿನ ಶ್ರೀಮಂತ ಪುಣೆಯ ಟೆಕ್ಕಿ ಚಡ್ಡಿ ದೋಸ್ತರು!
ಟ್ವಿಟರ್, ತನ್ನ ಇತ್ತೀಚಿನ ಸಂಶೋಧನೆಯಲ್ಲಿ, ಕಳೆದ ತಿಂಗಳು ಪ್ಲಾಟ್‌ಫಾರ್ಮ್‌ನಲ್ಲಿ ಸುಮಾರು 5 ಪ್ರತಿಶತದಷ್ಟು ಬಾಟ್‌ಗಳು ಇದ್ದವು ಎಂದು ಹೇಳಿದೆ, ಆದರೆ ಕನಿಷ್ಠ 20 ಪ್ರತಿಶತದಷ್ಟು ಇದೆ ಎಂದು ಮಸ್ಕ್ ನಂಬಿದ್ದಾರೆ. ಬಿಲಿಯನೇರ್ ಇತ್ತೀಚೆಗೆ ಅವರು ಟ್ವೀಟರನ್ನು ಖರೀದಿಸಲು ಅಗ್ಗದ ಒಪ್ಪಂದವನ್ನು ಪರಿಗಣಿಸಬಹುದು ಎಂದು ಸುಳಿವು ನೀಡಿದ್ದರು. ಆದ್ದರಿಂದ, ಮಸ್ಕ್ ಮೈಕ್ರೋಬ್ಲಾಗಿಂಗ್ ಸೈಟ್ ಟ್ವೀಟರನ್ನು ಕಡಿಮೆ ಬೆಲೆಗೆ ಖರೀದಿಸುವ ಸಾಧ್ಯತೆಯಿದೆ.