ಬೇಡ ಬೇಡ ಅಂದ್ರೂ ಪ್ರೀತಿಯ ಪಾಶಕ್ಕೆ ಕಟ್ಟುಬಿದ್ದು ಹೊರಬರಲಾಗದೆ ಒದ್ದಾಡೋ ಮನಸ್ಸುಗಳು ಇಂದು ಲಕ್ಷಾಂತರ! ಫೇಸ್‌ಬುಕ್‌ ,ಇನ್ಸಾ$್ಟದ ಮೂಲಕ ಪರಿಚಯವಾಗಿ ವಾಟ್ಸಪ್‌ನ ಮೂಲಕ ಸಂಬಂಧ ಇನ್ನಷ್ಟುಗಟ್ಟಿಆಗಲ್ಪಟ್ಟಿರುತ್ತದೆ. ಮೊದಮೊದಲ ದಿನಗಳಲ್ಲಿ ಕ್ಷಣಬಿಡದೆ ಪ್ರೇಮ ಸಂದೇಶ ವಿನಿಮಯ, ಸದಾ ಮಾತಾಡಿಕೊಳ್ಳುವ ಹಂಬಲ.. ಕವಿಯಾಗದವನು ಕವಿಯಾಗಿ ಪ್ರೇಮಕಾವ್ಯದ ಉದಯರವಿಯಾಗಬಲ್ಲನಾದರೆ, ಮನದನ್ನೆಯ ನೆಮ್ಮದಿ ಬಯಸುವ ಪ್ರಿಯಕರನಾಗಿ ಸಲಹೆ ನೀಡುವ ವೈದ್ಯನೂ ಆಗಬಲ್ಲ.

ಆಫೀಸ್‌ನಲ್ಲಿ ಫ್ಲರ್ಟಿಂಗ್‌ ಮಾಡಿದ್ರೆ ಹೆಚ್ಚುತ್ತಂತೆ ಪ್ರೊಡಕ್ಟಿವಿಟಿ!?

ಪ್ರೇಮದ ನಶೆಗೆ ಒಳಗಾದ ಮೇಲೆ ಹೊರಬರೋದು ತುಂಬಾ ಕಷ್ಟ. ಪರಿಚಯವಾದ ಹೊಸತರಲ್ಲಿ ಪರಸ್ಪರ ಗೊತ್ತಿರದ ವಿಚಾರಗಳ ವಿನಿಮಯ! ಅವನ ಇಷ್ಟಕಷ್ಟತಿಳಿದವಳು ತನ್ನ ಅಭಿರುಚಿಯನ್ನ ಆತನಿಗೆ ಅರುಹುತ್ತಾಳೆ.. ಎಂದೆಂದೂ ಹರಿದಾಡೋ ಲವ್‌ ಇಮೋಜಿಸ್‌ ಒಲುಮೆಯ ವ್ಯಾಪ್ತಿ ಇನ್ನಷ್ಟುವಿಸ್ತರಿಸಿಬಿಟ್ಟಿರುತ್ತದೆ. ಪದೇಪದೇ ಡಿಪಿ ನೋಡುತ್ತಾ ಭೇಟಿಯ ಆತುರ ಮತ್ತಷ್ಟುಹೆಚ್ಚಿಸಿ ಹೃನ್ಮಯ ಭಾವ ಮೂಡಿರುತ್ತದೆ..

‘ಯಾವಾಗ ಮೀಟ್‌ ಆಗೋಣ?’ ಎನ್ನುವ ಮಾತು ಯಾರಿಂದ ಮೊದಲು ಉದ್ಘೋಷಿಸುತ್ತದೆ ಅನ್ನುವ ಕುತೂಹಲ ಇಬ್ಬರಿಗೂ ಇದ್ದಿದ್ದೇ. ಇಲ್ಲೆಷ್ಟೇ ಮಾತನಾಡಿದರೂ ಭೇಟಿಯ ಕಾತರತೆಗೆ ನಿಲುಗಡೆಯಿಲ್ಲ! ಮನಸ್ಸಿನ ತುಡಿತ ತನ್ಮೂಲಕ ಪ್ರೀತಿಯೊಡನೆ ಬೆಸೆದುಬಿಟ್ಟಿರುತ್ತದೆ. ಸಿನ್ಸಿಯರ್‌ ಪ್ರೇಮಕ್ಕೆ ಎಣೆಯಿರದು..

ಮೊದಲ ಬಾರಿ ಭೇಟಿ ಆದಾಗಲಂತೂ ಅತ್ಯಂತ ಸಂಕೋಚದ ಮಧ್ಯೆ ಅನಂತ ವಿಷಯಗಳ ಪ್ರಸ್ತಾಪದ ಜರೂರಿ. ಮೊದಲು ಯಾರು ಮಾತನಾಡೋದು ಅನ್ನೋ ಗೊಂದಲದಿಂದ ಶುರು ಆಗಿ ಮಾತಿನ ಮಹಲು ನಿರ್ಮಾಣ ಆಗೋವರೆಗೆ ಇಬ್ಬರಲ್ಲೂ ಹೇಳಿಕೊಳ್ಳಲಾಗದ ಹಿಂಜರಿಕೆ. ವಾಚಿಸಿದಷ್ಟುಮುಗಿಯದ ಅನುರಾಗದ ರಾಗಮಾಲಿಕೆ ಈರ್ವರಿಗೂ ಅನನ್ಯ ಹಾಗೂ ಅಪ್ಯಾಯಮಾನ!

ಕುರುಡು ಪ್ರೀತಿಯ ಬಲೆಯಲ್ಲಿ ಒದ್ದಾಡುತ್ತಿರೋವಾಗ ಆಗೋ ಅನುಭವ ಬಲ್ಲವರಿಗೆ ಮಾತ್ರ ಸಾಧ್ಯ.. ಒಂದಿನಿತೂ ಬಿಟ್ಟಿರಲಾರದ ಅಕ್ಕರೆಯ ಕರೆಗೆ ಇಬ್ಬರ ಹಪಹಪಿಕೆ. ಅಬ್ಬಾ! ಎಂಥಾ possessiveness!

ಅದೊಂದು ಮಾತು

ತಮಾಷೆಗೋ ಇಲ್ಲಾ ಕಾಲೆಳೆಯೋದಕ್ಕೋ ಏನೋ ಅಂತ ಬಳಸಿದ ಒಂದು ಪದ ಬಹಳಷ್ಟು Misunderstand ಗೆ ಕಾರಣ ಆಗಿರುತ್ತದೆ.. ಮತ್ತೆ ಅದಕ್ಕೆ ಸ್ಪಷ್ಟೀಕರಣಕ್ಕೆ ಕಾಲಹರಣ.. ‘ಸಾರಿ’ ಅನ್ನುವ ಸರಳ ಪದ. ಅದು ವಾರಕ್ಕೂ ಹೆಚ್ಚು ಮುಂದುವರಿದರೆ ಮತ್ತೆ ಸರಿ ಮಾಡೋ ಸವಾಲು!

ಈಗೋ ದುನಿಯಾದಲ್ಲಿ ಇಂದಿನ ಸಂಬಂಧಗಳು

ದಡ ಸೇರೋ ಮುಂಚೆ ಮುಳುಗಿ ಹೋಗೋ ಪ್ರೇಮ ನೌಕೆಗೆ ಇಂದಿನ 4ಜಿ/5ಜಿ ದುನಿಯಾದ ಈಗೋ ಕಾರಣ. ಬಹುತೇಕ ಸಂದರ್ಭಗಳಲ್ಲಿ ಈ ‘ನಾನು’ ಅನ್ನುವ ಕಾನ್ಸೆಪ್ಟ್‌ ಬಂದು ‘ನಾವು’ ಅನ್ನೋದು ನಾಶ ಆದಾಗ ಸಂಬಂಧಗಳ ನಡುವೆ ಬಿರುಕು ಬಿದ್ದುಬಿಟ್ಟಿರುತ್ತದೆ. 

ಮಗಳು ಹಸ್ತಮೈಥುನ ಮಾಡಿಕೊಳ್ಳೋದನ್ನ ನೋಡಿದೆ, ಏಕೋ ಮನಸ್ಸಿಗೆ ಕಸಿವಿಸಿ

ಸಾಕಷ್ಟುಅನುಭವಿಸಿದ್ದೇನೆ ಇನ್ನಂತು ನಿನ್ನ ಜತೆ ಬಾಳಲ್ಲ ಅಂತ ಪೂರ್ಣವಿರಾಮ ಹಾಕುವ ಅನಿಸಿಕೆ. ಒಬ್ಬರ ತಪ್ಪಿಗೆ ಇಬ್ಬರ ಜಗಳ, ಮಾತಿನ ಜಟಾಪಟಿ.. ಅಂದಾಡಿದ ಮಾತಿನ ಸ್ಮರಣೆ; ಎಲ್ಲವೂ ಸೇರಿ ಸಂಬಂದ ಮುರಿಯೋ ಹಂತಕ್ಕೆ ಬಂದು ಅಲ್ಪ ಸಮಯಕ್ಕೇನೇ 4ಜಿ/5ಜಿ ದುನಿಯಾದ ಪ್ರಣಯಕಥೆ ಮುಗಿದು ಹೋಗಿಬಿಟ್ಟಿರುತ್ತದೆ..