ಪಾರ್ಟ್ ಟೈಮ್ ಜಾಬ್ ಮಾಡುವ ಸಲುವಾಗಿ ಕಾಲೇಜ್ ಹುಡುಗಿಯೊಬ್ಬಳು ಹೋಟೆಲ್ ಗೆ ಸಂದರ್ಶನಕ್ಕೆ ಹೋಗಿದ್ದಳು. ಈ ವೇಳೆ ಬಾಸ್ ನ ಮೇಲೆಯೇ ಪ್ರೇಮಾಂಕುರವಾಗಿದೆ. ಕೆಲ ವರ್ಷದ ಡೇಟಿಂಗ್ ನ ಬಳಿಕ, ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.
ಜಾಕ್ಸನ್ ಲೇಕ್ (ಜೂನ್ 11): ಸಂದರ್ಶನಕ್ಕೆಂದು ಬಂದ ಹುಡುಗಿ, ಸಂದರ್ಶನ ಮಾಡಿದ ಬಾಸ್ ಅನ್ನೇ ಪ್ರೀತಿಸಿ ಮದುವೆಯಾದ ಸುದ್ದಿ ಇದು. 25 ವರ್ಷದ ವಿದ್ಯಾರ್ಥಿಯೊಬ್ಬಳು ಅರೆಕಾಲಿಕ ಉದ್ಯೋಗದ ಸಂದರ್ಶನಕ್ಕಾಗಿ ಹೋಟೆಲ್ ಗೆ ತೆರಳಿದ್ದಳು. ಈ ವೇಳೆ 55 ವರ್ಷ ವಯಸ್ಸಿನ ಹೋಟೆಲ್ ನ ಜನರಲ್ ಮ್ಯಾನೇಜರ್ ಸಂದರ್ಶನಕ್ಕೆ ಬಂದಿದ್ದರು.
ಆದರೆ, ಸಂದರ್ಶನ ಮಾಡಲು ಬಂದಿದ್ದ ಬಾಸ್ ನ ಮೇಲೆಯೇ ಆಕೆಗೆ ಪ್ರೇಮಾಂಕುರವಾಗಿತ್ತು. ಈಗ ಈ ಸಂಬಂದಕ್ಕೆ ಮೂರು ವರ್ಷವಾಗಿದ್ದು, ಪರಸ್ಪರ ತಾವಿಬ್ಬರೂ ಈ ದಿನಗಳನ್ನು ಸಂತೋಷದಿಂದ ಕಳೆದಿದ್ದೇವೆ ಎಂದು ಹೇಳಿದ್ದಾರೆ.
25 ವರ್ಷ ವಯಸ್ಸಿನ ಸುಜಾನಾ ಡಯಾಜ್(Suzana Diaz) ಅಮೆರಿಕದ ಜಾಕ್ಸನ್ ಲೇಕ್ (Jackson Lake) ನಿವಾಸಿಯಾಗಿದ್ದು, 2018 ರಲ್ಲಿ ಅರೆಕಾಲಿಕ ಉದ್ಯೋಗದ (part-time job)ನಿರೀಕ್ಷೆಯಲ್ಲಿದ್ದರು. ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಕಾರಣಕ್ಕೆ, ತಮ್ಮ ಖರ್ಚಿನ ಹಣವನ್ನು ವ್ಯವಸ್ಥೆ ಮಾಡಿಕೊಳ್ಳಲು ಅರೆಕಾಲಿಕ ಕೆಲಸದ ಹುಡುಕಾಟದಲ್ಲಿದ್ದರು. ಈ ವೇಳೆ ಸ್ಥಳೀಯ ಹೋಟೆಲ್ ನಲ್ಲಿ ಪಾರ್ಟ್ ಟೈನ್ ಜಾಬ್ ಇರುವ ಬಗ್ಗೆ ಆಕೆಗೆ ಮಾಹಿತಿ ಸಿಕ್ಕಿತ್ತು.
ಸೀದಾ ರೆಸ್ಟೋರೆಂಟ್ ಗೆ ಹೋಗಿದ್ದ ಸುಜನಾ ಡಯಾಜ್, ಅಲ್ಲಿಯೇ ಇದ್ದ ಪಕ್ಕದ ಬೂತ್ ನಲ್ಲಿ ಕೆಲಸದ ಅರ್ಜಿಗಳನ್ನು ಭರ್ತಿ ಮಾಡುತ್ತಿದ್ದರು. ಈ ವೇಳೆ ಆಕೆಯ ಭುಜವನ್ನು ತಟ್ಟಿ ಯಾರೋ ಕರೆದಂತಾಗಿತ್ತು. ಹಿಂತಿರುಗಿ ನೋಡಿದರೆ, ರೆಸ್ಟೋರೆಂಟ್ ನ ಜನರಲ್ ಮ್ಯಾನೇಜರ್ ಟೋನಿ ಕಹಾನೆಕ್ (Tony Kahanek) ಇದ್ದರು. ಸ್ವತಃ ಟೋನಿ ಕಹಾನೆಕ್ ಅವರೇ ಸುಜನಾ ಡಯಾಜ್ ಅವರ ಸಂದರ್ಶನ ತೆಗೆದುಕೊಳ್ಳಬೇಕಿತ್ತು.
ಸಂದರ್ಶನದ ವೇಳೆ, ಇಬ್ಬರಿಗೂ ಕೆಲ ವಿಚಾರಗಳಲ್ಲಿ ಸಾಮ್ಯತೆಗಳನ್ನು ಇರುವ ಬಗ್ಗೆ, ಸಂಬಂಧ ಇರುವ ಬಗ್ಗೆ ಅರ್ಥ ಮಾಡಿಕೊಂಡಿದ್ದರು. ಈ ವೇಳೆಗಾಗಲೇ ಟೋನಿ ಕಹಾನೆಕ್ ಅವರ ಮಾತಿನ ಮೋಡಿಗೆ ಸುಜನಾ ಡಯಾಜ್ ಬಿದ್ದಿದ್ದರು. ರೋಗಿ ಬಯಸಿದ್ದೂ ಹಾಲು, ವೈದ್ಯ ಹೇಳಿದ್ದೂ ಹಾಲು ಎನ್ನುವಂತೆ ಇದೇ ಸಂದರ್ಭದಲ್ಲಿ ಟೋನಿ ಕಹಾನೆಕ್, ಸುಜನಾ ಡಯಾಜ್ ಬಳಿ ಫೋನ್ ನಂಬರ್ ಕೇಳಿದ್ದರು. ಸಂದರ್ಶನ ಮುಗಿಸಿ ಮನೆಗೆ ತೆರಳಿದ್ದ ಸುಜನಾಗೆ ಮರುದಿನ ಟೋನಿಯಿಂದ ಸಂದೇಶ ಬಂದಿತ್ತು. ಕೆಲ ದಿನಗಳ ಕಾಲ ಫೋನ್ ನಲ್ಲಿಯೇ ಮಾತುಕತೆ ನಡೆಸಿದ ಈ ಜೋಡಿ, ಕೊನೆಗೆ ಒಂದು ದಿನ ಡಿನ್ನರ್ ಪ್ಲ್ಯಾನ್ ಕೂಡ ಮಾಡಿದ್ದರು.
ಆರಂಭದಲ್ಲಿ ಸುಜನಾ ಹಾಗೂ ಟೋನಿ ಇಬ್ಬರೂ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಟ್ಟಿದ್ದರು. ಆದರೆ, ತಮ್ಮ ಸಂಬಂಧಕ್ಕೆ ಕೆಲ ವರ್ಷಗಳಾದ ಬೆನ್ನಲ್ಲಿಯೇ ತನ್ನೊಂದಿಗೆ ವಾಸಮಾಡುವಂತೆ ಟೋನಿ ಕಹಾನೆಕ್, ಸುಜನಾ ಡಯಾಜ್ ಅವರನ್ನು ಕೇಳಿದ್ದರು. ಆಗ ಸುಜನಾಗೆ ನಿಜವಾದ ಸಂಕಷ್ಟ ಎದುರಾಗಿತ್ತು.
ಈ ಕಂಪೆನಿಯಲ್ಲಿ ಉದ್ಯೋಗಿಗಳಿಗೆ ಲಂಚ್ ಬ್ರೇಕ್ ಮಾತ್ರವಲ್ಲ, ಹಸ್ತಮೈಥುನ ಮಾಡ್ಕೊಳ್ಳೋಕು ಬ್ರೇಕ್ ಸಿಗುತ್ತೆ !
ಯಾಕೆಂದರೆ, ಟೋನಿ ಕಹಾನೆಕ್ ಜೊತೆ ಉಳಿಯಬೇಕಾದಲ್ಲಿ ಈ ಬಗ್ಗೆ ಪೋಷಕರಿಗೆ ತಿಳಿಸಬೇಕಿತ್ತು. ತನಗಿಂತ ದುಪ್ಪಟ್ಟು ವಯಸ್ಸಿನ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದರೆ ಮನೆಯಲ್ಲಿ ಒಪ್ಪಿಕೊಳ್ಳುವುದು ಅನುಮಾನ ಎನ್ನುವ ಆತಂಕ ಸುಜನಾಗೆ ಇತ್ತು. ಅದರಂತೆ, ಅವರ ಪೋಷಕರು ಕೂಡ ಆರಂಭದಲ್ಲಿ ಇದನ್ನು ನಂಬಿರಲಿಲ್ಲ. ಆದರೆ, ಮಗಳು ಟೋನಿಯ ಜೊತೆ ಸಂತಸವಾಗಿರುವುದನ್ನು ನೋಡಿದ ಬಳಿಕ, ಟೋನಿ ಕಹಾನೆಕ್ ಅವರನ್ನು ತಮ್ಮ ಕುಟುಂಬದ ಭಾಗವನ್ನಾಗಿ ಮಾಡಿಕೊಳ್ಳಲು ಒಪ್ಪಿದ್ದರು. ಇನ್ನೊಂದೆಡೆ ಟೋನಿ ಕಹಾನೆಕ್ ಅವರ ತಾಯಿ ಕೂಡ ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದರು.
Real Story: ಹೆಣ್ಮಕ್ಕಳ ಸೆರಗು ಬಿಡದ ಬಾಯ್ ಫ್ರೆಂಡ್ ರಾತ್ರಿ ಮನೆಗೇ ಬರೋದಿಲ್ಲ !
ಹಾಗಿದ್ದರೂ, ಟೋನಿ ಹಾಗೂ ಸುಜನಾ ಅವರ ಕೆಲ ಆಪ್ತ ಸ್ನೇಹಿತರು ಈ ಸಂಬಂಧದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಆದರೆ, ಸುಜನಾ ಮಾತ್ರ, ತಮ್ಮದೇ ವಯಸ್ಸಿನ ಸಂಗಾತಿಯೊಂದಿಗೆ ಬದುಕುವುದಕ್ಕಿಂತ, ಪ್ರಬುದ್ಧ ವ್ಯಕ್ತಿಯೊಂದಿಗೆ ಸಂಬಂಧ ಹೊಂದುವುದು ಉತ್ತಮ. ಅವರೊಂದಿಗೆ ಬಾಳ್ವೆ ಸುಲಭ ಎಂದು ನಂಬಿರುವುದಾಗಿ ಹೇಳಿದ್ದಾರೆ. ಈಗಾಗಲೇ ಇವರಿಬ್ಬರ ಸಂಬಂದಕ್ಕೆ ಮೂರು ವರ್ಷಗಳಾಗಿವೆ. ಈ ಹಂತದಲ್ಲಿ ಸುಜನಾ ಹಾಗೂ ಟೋನಿ ಈ ಮೂರು ವರ್ಷದಲ್ಲಿ ಪ್ರತಿ ದಿನ ಕೂಡ ತಮಗೆ ಸಂತೋಷದ ಕ್ಷಣವೆಂದು ಹೇಳುತ್ತಾರೆ.
