ಅಪ್ಪ ಅಗ್ತಾ ಇದ್ದೀರಾ? ಹಾಗಿದ್ದರೆ ತಂದೆತನ ಅನುಭವಿಸಲು ಕೆಲವು ಟ್ರಿಕ್ಸ್!
ಅಪ್ಪನಾಗುವುದು ಅಮ್ಮನಾಗುವಷ್ಟು ಹೆಚ್ಚು ಅನುಭವ ನೀಡದೇ ಇರಬಹುದು. ಆದರೆ,ಮಾನಸಿಕವಾಗಿ ಅನುಭವಿಸುವಂಥ ಮಹಾನುಭವ ಪದಗಳಿಗೆ ದಕ್ಕದ್ದು. ಅಪ್ಪನೆಂದರೆ ಜವಾಬ್ದಾರಿ. ಜೊತೆಗೆ ಮತ್ತೊಂದಿಷ್ಟು. ಏನವು?
ಡಾ.ಚಂದ್ರಿಕಾ ಆನಂದ್
ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಲಹೆಗಾರರು, ಫೋರ್ಟಿಸ್ ಆಸ್ಪತ್ರೆ.
ಹೆಣ್ಣಾದವಳು ತಾಯಿಯಾಗುತ್ತಿರುವ ಸಂದರ್ಭದಲ್ಲಿ ಒಂದಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾಳೆ. ತನ್ನ ಮಗುವನ್ನು 9 ತಿಂಗಳುಗಳ ಕಾಲ ಹೊಟ್ಟೆಯಲ್ಲಿ ಹೊತ್ತುಕೊಳ್ಳುವ ಆಕೆ, ತಾಯ್ತನದ ಸವಿಯನ್ನೂ ಅನುಭವಿಸುತ್ತಿರುತ್ತಾಳೆ. ಅಷ್ಟೇ ಅಲ್ಲದೆ, ತಾಯಿಯಾಗುತ್ತಿರುವ ಹೆಣ್ಣಿಗೆ ಪ್ರತಿಯೊಬ್ಬರು ಅವರವರ ಸಲಹೆ, ಕಿವಿ ಮಾತು ಹೇಳುತ್ತಾರೆ. ಹಾಗಾದರೆ ಗರ್ಭೀಣಿಯೊಬ್ಬರು ಮಾತ್ರ ಮಗುವಿನ ಜನನಕ್ಕೆ ಸಿದ್ಧರಾದರೆ ಸಾಕೇ? ಈ ವೇಳೆ ತಂದೆಯಾದವರ ಜವಾಬ್ದಾರಿ ಇರುವುದಿಲ್ಲವೇ? ಖಂಡಿತ ಇದೆ. ಗಂಡನಾದವನು, ತನ್ನ ಹೆಂಡತಿಯೇ ಪೂರ್ಣ ನೋವು ಅನುಭವಿಸಿಕೊಂಡು ಮಗು ಹೆರಲಿ, ನನ್ನದು ಕೇವಲು ದುಡಿದು, ತಂದು ಹಾಕುವುದಷ್ಟೇ ಎನ್ನುವ ಮನೋಭಾವ ಹೊಂದಿರಬಾರದು. ತಾಯ್ತನದಂತೆ, ತಂದೆತನ ಎನ್ನುವುದೂ ಇದೆ. ಹೀಗಾಗಿ ಹೊಸದಾಗಿ ತಂದೆಯ ಬಡ್ತಿ ಪಡೆಯುತ್ತಿರುವವರಿಗೆ ಇಲ್ಲಿದೆ ಕೆಲವು ಟಿಪ್ಸ್ ಹಾಗೂ ತಂದೆತನ ಅನುಭವಿಸುವ ಟ್ರಿಕ್ಸ್..
ನಾನ್ಯಾಕೆ ಹಿಂಗೆ, ನನ್ ಮಗ ಯಾಕೆ ಹಂಗೆ!
1. ಗರ್ಭಾವಸ್ಥೆಯಲ್ಲಿ ತಾಯಿಯಾಗುವಳಿಗಿಂತ ತಂದೆಯದ್ದೇ ಹೆಚ್ಚು ಜವಾಬ್ದಾರಿ:
ಇಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳಿಗಿAತ ಗಂಡ-ಹೆAಡತಿಯಷ್ಟೇ ಇರುವ ಸಣ್ಣ ಕುಟುಂಬಗಳೇ ಹೆಚ್ಚು. ಇಂಥ ಸಂದರ್ಭದಲ್ಲಿ ಹೆಣ್ಣು ಗರ್ಭಿಣಿಯಾದರೆ, ಅವಳ ಆರೈಕೆಗೆ ಮತ್ತೊಬ್ಬರ ಸಹಾಯ ಪಡೆಯುವುದು ಕಷ್ಟಕರ. ಹೀಗಾಗಿ ಗಂಡನಾದವನು, ಗರ್ಭಿಣಿಯನ್ನು ಮಗುವಿಗಿಂತ ಹೆಚ್ಚಾಗಿ ಆರೈಕೆ ಮಾಡುವುದು ಅತಿ ಮುಖ್ಯ. ಆ 9 ತಿಂಗಳುಗಳ ಕಾಲ ತನ್ನ ಗರ್ಭಿಣಿ ಹೆಂಡತಿಯನ್ನು ದೈಹಿಕ ಹಾಗೂ ಮಾನಸಿಕವಾಗಿ ಕ್ರಿಯಾಶೀಲವಾಗಿ ಇಟ್ಟುಕೊಳ್ಳುವತ್ತ ಗಮನ ಹರಿಸಬೇಕು.
2. ಹೆಂಡತಿಗೆ ಸಮಯ ಕೊಡಿ:
ಗರ್ಭಾವಸ್ಥೆಯಲ್ಲಿ ಹೆಣ್ಣಿನ ಮೊದಲ ಬಯಕೆ ಎಂದರೆ ಗಂಡ ಸದಾ ಜೊತೆಯಲ್ಲಿರಬೇಕು ಎಂದು. ಆದರೆ, ಕೆಲಸದ ಒತ್ತಡದಿಂದ ಗಂಡನಾದವನು ಸಮಯ ಕೊಡದೇ ಹೋಗಬಹುದು. ಇದರಿಂದ ಹೆಂಡತಿ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಗಂಡನಾದವನು ಈ ಸಂದರ್ಭದಲ್ಲಿ ಅವಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಅವಳೊಂದಿಗೆ ಆಸ್ಪತ್ರೆಗೆ ತೆರಳಿ ಅಲ್ಟಾçಸೌಂಡ್ ಸ್ಕಾö್ಯನ್, ಸೇರಿದಂತೆ ಇತರೆ ಓಡಾಡದಲ್ಲಿ ಜೊತೆಗೆ ನಿಲ್ಲಬೇಕು. ಅಲ್ಲದೆ, ಜೊತೆಗೆ ಊಟ ಮಾಡುವುದು, ಊಟ ಮಾಡಿಸುವುದು, ಅವಳೊಂದಿಗೆ ಹರಟೆ ಹೊಡೆಯುವುದು, ಸಾಧ್ಯವಾದರೆ ಸುಂದರ ಸಂಜೆ ಕಳೆಯುವುದು, ಅವಳು ಇಷ್ಟ ಪಡುವ ರೀತಿ ನಡೆದುಕೊಳ್ಳುವುದು, ಕೋಪ ನಿಯಂತ್ರಿಸಿಕೊಳ್ಳುವುದು, ವ್ಯಾಯಾಮಾ ಮಾಡಿಸುವಲ್ಲಿ ತೊಡಗಿಕೊಳ್ಳುವುದು, ಪೌಷ್ಠಿಕ ಆಹಾರ ನೀಡುವುದು, ಮಾನಸಿಕ ನೆಮ್ಮದಿಗೆ ಒತ್ತು ನೀಡುವುದು ಇಂಥ ಸಣ್ಣ ಸಂಗತಿಗಳನ್ನು ಮಾಡುವುದರಿಂದ ಗರ್ಭಿಣಿಯರು ಹೆಚ್ಚು ಆನಂದವಾಗಿರಲು ಸಾಧ್ಯ.
ಸಂತೃಪ್ತ ಪಾಲಕರಾಗಬೇಕೆಂದ್ರೆ ನೀವು ಈ 9 ಟಿಪ್ಸ್ ಪಾಲಿಸಲೇಬೇಕು
3. ಧೂಮಪಾನ, ಮಧ್ಯಪಾನ ಸೇವನೆ ನಿಲ್ಲಿಸಿ:
ಮಗು ಹೆರುವುದು ಹೆಂಡತಿ ತಾನೇ, ಆಕೆ ಆರೋಗ್ಯಕರ ಜೀವನ ಶೈಲಿ ಹೊಂದಿದ್ದರೆ ಸಾಕು ಎನ್ನುವ ಮನಸ್ಥಿತಿಯನ್ನು ತೆಗೆದು ಹಾಕಿ. ಏಕೆಂದರೆ, ಗರ್ಭಿಣಿಯರ ಸುತ್ತಲಿನ ವಾತಾವರಣ ಸ್ವಚ್ಛಂದವಾಗಿರಬೇಕು. ಹೀಗಾಗಿ ಗಂಡನಾದವನು ಮೊದಲ ಮಾಡಬೇಕಾದ ಕೆಲಸವೆಂದರೆ ಈ ಕೆಟ್ಟ ಚಟಗಳನ್ನು ಬಿಡುವುದು. ಇಲ್ಲವಾದರೆ, ಸಿಗರೇಟಿನ ಹೊಗೆಯನ್ನೇ ಗರ್ಭಿಣಿಯೂ ಸೇವಿಸಲಿದ್ದಾಳೆ. ಇದರಿಂದ ಹುಟ್ಟುವ ಮಗುವಿನ ತೂಕ ಇಳಿಯಬಹುದು, ಶಿಶುವಲ್ಲಿ ಅಸ್ತಮಾ, ಉಸಿರಾಟದ ಸೋಂಕು, ಕಿವಿ ಸೋರುವಿಕೆ, ಹಠಾತ್ ಶಿಶು ಮರಣದಂತಹ ಘಟನೆ ಸಂಭವಿಸಬಹುದು. ಹೀಗಾಗಿ ಧೂಮಪಾನ ಕಡ್ಡಾಯವಾಗಿ ನಿಲ್ಲಿಸುವುದು ಒಳ್ಳೆಯದು. ಜೊತೆಗೆ ಆಕೆಯ ಪರಿಸರದಲ್ಲಿ ಧೂಮಪಾನಿಗಳನ್ನೂ ದೂರ ಇಡುವುದು ಸೂಕ್ತ.
4. ಹೆರಿಗೆ ಸಮಯದಲ್ಲಿ ಜೊತೆಗಿರಿ:
ತನ್ನ ಹೆರಿಗೆ ಸಮಯದಲ್ಲಿ ಗಂಡನಾದವನು ಜೊತೆಯಲ್ಲೇ ಇರಬೇಕು ಎನ್ನುವುದು ಎಲ್ಲಾ ಹೆಣ್ಣುಮಕ್ಕಳ ಆಸೆ. ಇದಕ್ಕೆ ವೈಜ್ಞಾನಿಕ ಕಾರಣ ಸಹ ಇದೆ. ಗಂಡನಾದವನು ಜೊತೆಯಲ್ಲೇ ಇದ್ದರೆ, ಮಹಿಳೆಯಲ್ಲಿ ಆತ್ಮಸ್ಥೆöÊರ್ಯ ಮೂಡುತ್ತದೆ. ಇದರಿಂದ ಮಗುವಿನ ಜನನಕ್ಕೆ ಹೆಚ್ಚು ಶ್ರಮ ಪಡುವ ಅಗತ್ಯವಿಲ್ಲ. ಅಧ್ಯಯನದ ಪ್ರಕಾರ, ಹೆರಿಗೆ ಸಂದರ್ಭದಲ್ಲಿ ಗಂಡ ಜೊತೆಗಿದ್ದ ಸಂದರ್ಭದಲ್ಲಿ ಶಿಶು ಜನನ ಆರೋಗ್ಯಕರವಾಗಿ ಆಗಿದೆ ಎನ್ನಲಾಗಿದೆ. ಶಿಶು ಮರಣ ಪ್ರಮಾಣ ಸಹ ತೀರ ವಿರಳ ಎಂದು ವರದಿ ತಿಳಿಸಿದೆ.
ಪಾಂಡಾ ಪೇರೆಂಟಿಂಗ್: ಮಕ್ಕಳನ್ನು ಸಶಕ್ತರಾಗಿಸಲು ವಿಶಿಷ್ಠ ಶೈಲಿ
5. ಭಯ ಆತಂಕ ನಿವಾರಿಸಿ:
ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗಿಂತ ಪುರುಷರಲ್ಲೇ ಹೆಚ್ಚು ಆತಂಕ, ಭಯ ಮನೆ ಮಾಡಿರುತ್ತದೆ. ಹೆರಿಗೆ ಸಂದರ್ಭದಲ್ಲಿ ಹೆಂಡತಿಯ ನೋವು, ಕಿರುಚಾಟ ಕೇಳುವ ಗಂಡAದಿರು ಅಲ್ಲೆಯೇ ಪ್ರಜ್ಞೆ ತಪ್ಪಿದ ಎಷ್ಟೋ ಉದಾಹರಣೆಗಳು ಇವೆ. ಆದರೆ, ಇಂಥ ಘಟನೆಗಳು ನಡೆಯಬಾರದು. ಒಂದು ವೇಳೆ ಗಂಡನೇ ಮೂರ್ಜೆ ಹೋದರೆ ಹೆಂಡತಿ ಆತ್ಮಸ್ಮೆöÊರ್ಯ ಕಳೆದುಕೊಳ್ಳುತ್ತಾರೆ. ಹೀಗಾಗಿ ಆಪರೇಷನ್ ಥಿಯೇಟರ್‌ಗೆ ಬರುವ ಮುನ್ನ ಈ ಬಗ್ಗೆ ಒಂದಷ್ಟು ಅಧ್ಯಯನ ಮಾಡಿಕೊಂಡು ಬಂದಿದ್ದರೆ ಒಳ್ಳೆಯದು.
6. ಹೆರಿಗೆ ನಂತರದ ಜವಾಬ್ದಾರಿ:
ಹೆರಿಗೆ ನಂತರ ಪುರುಷನ ಜವಾಬ್ದಾರಿ ದ್ವಿಗುಣವಾಗಿ ಬಿಡುತ್ತದೆ. ಇಷ್ಟು ದಿನ ಗಂಡನಾಗಿದ್ದವರು ಅಪ್ಪನ ಸ್ಥಾನಕ್ಕೆ ಬಡ್ತಿ ಪಡೆದ ನಂತರ ಮಗುವಿನ ಆರೈಕೆಯಲ್ಲಿ ತಾಯಿಯಷ್ಟೇ ಸಮಾನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಮಗುವಿಗೆ ಚುಚ್ಚುಮದ್ದು, ಮಗುವಿನ ಆರೋಗ್ಯದ ಆರೈಕೆ ಎಲ್ಲವನ್ನೂ ಜವಾಬ್ದಾರಿಯುತವಾಗಿ ನಿಭಾಯಿಸಿ..