ಅಪ್ಪ, ಬೇರೊಬ್ಬ ಮಹಿಳೆಗೆ ಕಳುಹಿಸಿದ Incriminating Email ನೋಡಿ ಶಾಕ್ ಆದ ಮಹಿಳೆ!

ತಂದೆಯ ಮಹಿಳೆಯೊಬ್ಬರಿಗೆ ಕಳುಹಿಸಿದ ಸಂದೇಶಗಳನ್ನು ಕಂಡು ತನಗೆ ರಹಸ್ಯ ಸಹೋದರಿ ಇದೆ ಎಂದು ಮಹಿಳೆ ಭಯಪಡುತ್ತಾಳೆ. ಹಲವಾರು ವರ್ಷಗಳಿಂದ ತನ್ನ ವಿವಾಹಿತ ತಂದೆ ತನ್ನ ಪ್ರೇಯಸಿಗೆ ಕಳುಹಿಸಿದ ಸಂದೇಶಗಳನ್ನು ಕಂಡುಕೊಂಡ ನಂತರ ಮಹಿಳೆಯೊಬ್ಬರು ಜನರಲ್ಲಿ ಸಲಹೆಯನ್ನು ಕೇಳಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ..

Doughter shocked by seeing her father's incriminating email to someone!

 ದಿನದಿಂದ ದಿನಕ್ಕೆ ಟೆಕ್ನಾಲಜಿ ಬೆಳೆಯುತ್ತಿದೆ, ಇದರಿಂದಾಗಿ ಎಂದೋ ಕಳುಹಿಸಿದ ಹಳೆಯ ಮೆಸೇಜ್ಗಳು ಹಲವಾರು ದಿನಗಳ ಕಾಲ ಉಳಿಸಿಕೊಳ್ಳಬಹುದಾಗಿದೆ. ಇದು ಬಹುತೇಕ ಜನರಿಗೆ ಉಪಯುಕ್ತವಾದ ಸಂಗತಿ. ಆದರೂ, ಇನ್ನು ಕೆಲವು ಸಂದರ್ಭದಲ್ಲಿ ಜನರು ಇದರಿಂದಾಗಿ ತೊಂದರೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಅದಕ್ಕೆ ಒಂದು ಉದಾಹರಣೆ ಇಲ್ಲಿದೆ.

ಮಹಿಳೆ ಒಬ್ಬರು ತಮ್ಮ ಪೋಸ್ಟ್ (Post) ಒಂದರಲ್ಲಿ ತಾವು ಎದುರಿಸಿದ ಒಂದು ಸನ್ನಿವೇಶವನ್ನು ಹೀಗೆ ಹಂಚಿಕೊಂಡಿದ್ದಾರೆ.. ಅವರು 24 ವರ್ಷ ವಯಸ್ಸಿನವರು. ಸಾಂಕ್ರಾಮಿಕ ರೋಗ ಹರಡುತ್ತಿದ್ದ ಸಮಯದಲ್ಲಿ ತಮ್ಮ ಪೋಷಕರು ವಾಸವಿದ್ದ ಮನೆಗೆ ತೆರಳಿದರು. ಆ ಮೂಲಕ ಅವಳು ಮನೆಯಿಂದ ಕೆಲಸ ಮಾಡುತ್ತಾ ಬಾಡಿಗೆ ನೀಡಬೇಕಾದ ಹಣವನ್ನು ಉಳಿಸಲು ಬಯಸಿದ್ದಳು. 

ಇದನ್ನೂ ಓದಿ: ಫಸ್ಟ್‌ ಲವ್‌ ಬ್ರೇಕಪ್‌ ಆಗ್ಬಾರ್ದು ಅಂದ್ರೆ ಪ್ರೀತಿಸೋರ ಹಿಂದೆಮುಂದೆ ಸುತ್ತಾಡ್ಬೇಡಿ

ಅವಳ ತಂದೆಯ ಲ್ಯಾಪ್‌ಟಾಪ್ (Laptop) ಒಡೆದುಹೋಗುವವರೆಗೂ ಎಲ್ಲವೂ ಸರಿಯಾಗಿ ನಡೆಯುತ್ತಿತ್ತು. ನಂತರ ಅವಳು ಅದರ ಬಿಡಿಭಾಗವನ್ನು ಬಳಸಿಕೊಳ್ಳಲು ಮುಂದಾದಳು. ಅವಳ ತಂದೆ ಇತ್ತೀಚೆಗೆ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಅವಳು ಗಮನಿಸಿದಾಗ, ಅವಳು ತನಿಖೆ ಮಾಡಲು ನಿರ್ಧರಿಸಿದಳು. "ನಾನು ಅದನ್ನು ಮಾಡಬಾರದಿತ್ತು ಎಂದು ನನಗೆ ತಿಳಿದಿದೆ ಆದರೆ, ಅವನು ಇಂದು ಬೆಳಿಗ್ಗೆ (Morning) ಹೊರಗೆ ಹೋದಾಗ ನಾನು ಅವನ ಇಮೇಲ್‌ಗಳನ್ನು ಪರಿಶೀಲಿಸಿದೆ." ಎಂಬುದಾಗಿ ಅವಳು ಹಾಕಿದ್ದ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾಳೆ.

ಮಹಿಳೆ ತನ್ನ ತಂದೆಯ ಇಮೇಲ್‌ಗಳನ್ನು (Email) ತೆರೆದಾಗ ವರ್ಷಗಳ ಹಿಂದೆ ಅಕ್ರಮ ಸಂದೇಶಗಳನ್ನು ಆಕೆಯ ತಂದೆ ರವಾನಿಸುವುದು ಕಂಡಳು. ಅವನು ಬೇರೊಬ್ಬ ಮಹಿಳೆಯೊಂದಿಗೆ (Woman) ಸಂಬಂಧ ಹೊಂದಿದ್ದಾನೆಂದು ಸೂಚಿಸುವ ಅತ್ಯಂತ ದೋಷಾರೋಪಣೆಯ ಇಮೇಲ್‌ಗಳು ಆಗಿದ್ದವು. ಅವು ಯಾವುವೂ ಆತ ತನ್ನ ಹೆಂಡತಿಗೆ ಕಳಿಸಿರಲಿಲ್ಲ, ಬದಲಿಗೆ ಬೇರೆಯೊಬ್ಬ ಮಹಿಳೆಗೆ ಕಳುಹಿಸಲಾಗಿತ್ತು. ಇದನ್ನು ನೋಡಿ ದಿಗ್ಬ್ರಮೆಗೊಂಡ (Shock) ಆಕೆ, ತನ್ನ ತಂದೆ ತನ್ನಿಂದ "ಮತ್ತೊಂದು ಕುಟುಂಬ"ವನ್ನು ಮರೆಮಾಡಬಹುದೆಂದು ನಂಬುತ್ತಾಳೆ. 

ತನ್ನ ತಂದೆ ತಮ್ಮ ವೃತ್ತಿಜೀವನದಲ್ಲಿ ವಿಶ್ವದ ಇತರ ಭಾಗಗಳಲ್ಲಿ ವಾಸಿಸುತ್ತಿದ್ದರು ಮತ್ತು ಕೆಲಸ ಮಾಡುತ್ತಿದ್ದರು, ಆದ್ದರಿಂದ ಅವರು ಇನ್ನೊಂದು ಕುಟುಂಬವನ್ನು ಹೊಂದಿದ್ದಾರೆಂದು ಯೋಚಿಸಲಾಗುವುದಿಲ್ಲ" ಎಂದು ಆಕೆ ಹೇಳಿಕೊಳ್ಳುತ್ತಾ, ದಂಪತಿಗಳು ಎಷ್ಟು ಸಮಯದಿಂದ ಪರಸ್ಪರ ತಿಳಿದಿದ್ದಾರೆಂದು ಮಗಳಿಗೆ ತಿಳಿದಿಲ್ಲವಾದರೂ, ಅವರು ಅತ್ಯಂತ ಆಪಾದನೆಗೆ (Incriminating) ಒಳಗಾಗುವ ರೀತಿಯ ಇಮೇಲ್‌ಗಳನ್ನು ರವಾನಿಸಿಕೊಂಡಿದ್ದಾರೆ ಅದರಲ್ಲಿ ಅವನು ಅವಳನ್ನು ಅವಳ ಹುಟ್ಟುಹಬ್ಬದ ಸೂಟ್ ನೋಡಲು ಬಯಸುತ್ತಾನೆ, ಅವನು ಯಾವಾಗಲೂ ಅವಳನ್ನು ನನ್ನ ಪ್ರಿಯತಮೆ ಎಂದು ಸಂಬೋಧಿಸುತ್ತಾನೆ ಎಂದು ಅವಳು ಹೇಳಿದ್ದಾಳೆ.

ಇದನ್ನೂ ಓದಿ: ಬ್ಯೂಟಿಪಾರ್ಲರ್ ಮಹಿಮೆ: 30ರ ತರುಣಿ ಎಂದು 54ರ ಅಂಟಿಯ ಮದುವೆಯಾಗಿ ಮೋಸ ಹೋದ ವರ

ವಿಷಯ ಇಲ್ಲಿಗೆ ನಿಂತಿರುವುದಿಲ್ಲ, ಅವರು ನಿಗೂಢ (Secret) ಮಹಿಳೆಯ ಮಕ್ಕಳಿಗೆ ಹಣ ಮತ್ತು ಆಟಿಕೆಗಳನ್ನು ಕಳುಹಿಸುತ್ತಿದ್ದಾರೆ ಎಂಬುದಕ್ಕೆ ಪುರಾವೆ ಸಿಕ್ಕಿದೆ ಎಂದು ಕೂಡಾ ಅವಳು ಹಾಕಿದ ಪೋಸ್ಟ್ ಅಲ್ಲಿ ಹೇಳಿಕೊಂಡಿದ್ದಾಳೆ. ಈಗ ಅವಳು ತನಗೆ ಅಕ್ಕ-ತಂಗಿಯರು ಇರಬಹುದೇ ಎಂಬುದಾಗಿ ಆಶ್ಚರ್ಯ ಪಡುತ್ತಾಳೆ. ಏಕೆಂದರೆ, ಇವಳ ಹಾಗೆಯೇ ಕಾಣುವ ತನ್ನ ಮಗಳ ಚಿತ್ರಗಳನ್ನು ಆಕೆ ಕಳುಹಿಸುತ್ತಿದ್ದಳು ಹಾಗಾಗಿ, ಅವಳು ನನ್ನ ಮಲತಂಗಿಯೇ ಎಂಬ ಯೋಚನೆಯೂ ಸೇರಿಕೊಂಡಿದೆ. ಆದರೆ, ಅವನು ಅವಳನ್ನು ತನ್ನ ಮಗಳು (Daughter) ಎಂದು ಎಂದಿಗೂ ಉಲ್ಲೇಖಿಸಿಲ್ಲ. ಈ ಇಮೇಲ್‌ಗಳು ಆರು ವರ್ಷಗಳ ಹಿಂದನವು ಆಗಿದ್ದವು. ಇದಿಷ್ಟೂ ವಿಷಯಗಳನ್ನು ಪೋಸ್ಟ್ ಒಂದರಲ್ಲಿ ಹಂಚಿಕೊಂಡಿರುವ ಮಹಿಳೆ ಈ ವಿಚಾರವನ್ನು ತನ್ನ ಅಮ್ಮನಿಗೆ ಹೇಳಬೇಕಾ? ಎಂದು ಓದುಗರಿಗೆ ಕೇಳಿದ್ದಾಳೆ, ಅವರು 22 ವರ್ಷ ವಯಸ್ಸಿನಿಂದಲೂ ಒಟ್ಟಿಗೆ ಇದ್ದಾರೆ ಮತ್ತು ಅವರು ಈಗ 61 ವರ್ಷ ವಯಸ್ಸಿನವರಾಗಿದ್ದಾರೆ. ಎಂದು ಹೇಳುವ ಮೂಲಕ ಆಕೆಯ ಪೋಸ್ಟ್ ಮುಕ್ತಾಯವಾಯಿತು.

ಸಲಹೆಯನ್ನು ನೀಡುವ ಹಿತೈಷಿಗಳಿಂದ ಕಾಮೆಂಟ್‌ಗಳು (Comment) ತುಂಬಿದ್ದವು, ಹಲವಾರು ಜನರು ಆಕೆಯಿರುವ ಸನ್ನಿವೇಶ ನೋಡಿ ನೊಂದುಕೊಂಡರು, ಇನ್ನೂ ಕೆಲವರು ಈ ವಿಚಾರವನ್ನು ನಿಮ್ಮ ತಾಯಿಗೆ (Mother) ಹೇಳಿ ಎಂಬುದಾಗಿ ಸಲಹೆ ನೀಡಿದರು.. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು....

Latest Videos
Follow Us:
Download App:
  • android
  • ios