ಫಸ್ಟ್ ಲವ್ ಬ್ರೇಕಪ್ ಆಗ್ಬಾರ್ದು ಅಂದ್ರೆ ಪ್ರೀತಿಸೋರ ಹಿಂದೆಮುಂದೆ ಸುತ್ತಾಡ್ಬೇಡಿ
ಮೊದಲ ಹೆಜ್ಜೆ, ಮೊದಲ ಮಳೆಯಂತೆಯೇ ಮೊದಲ ಪ್ರೀತಿ (Love)ಗೆ ಎಲ್ಲರ ಜೀವನದಲ್ಲೂ ಮಹತ್ತರ ಸ್ಥಾನವಿದೆ. ಮೊತ್ತ ಮೊದಲ ಬಾರಿಗೆ ಇಷ್ಟಪಟ್ಟವರು ಜೀವನಪೂರ್ತಿ ಜೊತೆಗಿರಬೇಕು ಎಂದೇ ಎಲ್ಲರೂ ಬಯಸುತ್ತಾರೆ. ಆದ್ರೆ ನೀವು ,ಮಾಡೋ ಕೆಲವು ತಪ್ಪಿನಿಂದ ಫಸ್ಟ್ ಲವ್ (First love) ರಿಜೆಕ್ಟ್ (Reject) ಆಗ್ಬೋದು. ಕಾರಣಗಳೇನು ತಿಳ್ಕೊಳ್ಳಿ.
ಪ್ರೀತಿ (Love)ಯೆಂಬುದು ಒಂದು ಸುಂದರವಾದ ಮಧುರ ಭಾವನೆ. ಯಾರನ್ನಾದರೂ ಪ್ರೀತಿಸುವುದು ಸುಲಭ. ಆದರೆ ಪ್ರೀತಿಯ ಮಾತುಗಳನ್ನು ಅವರಿಗೆ ಹೇಳುವುದು ಕಷ್ಟ. ಹೀಗಾಗಿ ಮನಸ್ಸಿನ ಮಾತುಗಳನ್ನು ಹೇಳಲು ಹಿಂಜರಿದ ಕಾರಣವೇ ಅದೆಷ್ಟೋ ಮಂದಿ ಪ್ರೀತಿಯಿಂದ ವಂಚಿತರಾಗುತ್ತಾರೆ. ನಿರಾಕರಣೆಯ ಭಯದಿಂದ ಅನೇಕ ಜನರು ತಮ್ಮ ಹೃದಯದ (Heart) ಮಾತನ್ನು ಹೇಳಲು ಹಿಂಜರಿಯುತ್ತಾರೆ. ಮೊದಲ ಪ್ರೀತಿಯಲ್ಲಿ ಹೆಚ್ಚಾಗಿ ಇಂಥಾ ತಪ್ಪು ನಡೆಯುತ್ತದೆ. ಆದ್ರೆ ಎಲ್ಲರ ಜೀವನದಲ್ಲಿಯೂ ಮೊದಲ ಪ್ರೀತಿ ಎಂಬುದು ವಿಶೇಷ ಭಾವನೆ. ಹೀಗಾಗಿ ಇದನ್ನು ಅಪೂರ್ಣವಾಗದಂತೆ ನೋಡಿಕೊಳ್ಳುವುದು ಒಳ್ಳೆಯದು. ನಿಮ್ಮ ಮೊದಲ ಪ್ರೀತಿಯೂ ದೂರವಾಗಬಾರದು ಅಂದ್ರೆ ಇಂಥಾ ತಪ್ಪು ಮಾಡೋದನ್ನು ತಪ್ಪಿಸಿ
ಮೊದಲು ನಿಮ್ಮ ಭಾವನೆ ಪರೀಕ್ಷಿಸಿಕೊಳ್ಳಿ: ನೀವು ಯಾರನ್ನಾದರೂ ಪ್ರೀತಿಸುತ್ತೀರಿ ಮತ್ತು ನಿಮ್ಮ ಹೃದಯವನ್ನು ಅವರಿಗೆ ವ್ಯಕ್ತಪಡಿಸಲು ಬಯಸುತ್ತೀರಿ. ಹೀಗಿದ್ದಾಗ ಮೊದಲು ನಿಮ್ಮ ಭಾವನೆಗಳ ಬಗ್ಗೆ ನೀವು ಸಂಪೂರ್ಣವಾಗಿ ಖಚಿತವಾಗಿರಬೇಕು. ಕೆಲವೊಮ್ಮೆ ನೀವು ಕ್ರಶ್ ಅಥವಾ ವ್ಯಾಮೋಹವನ್ನು ಪ್ರೀತಿ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತೀರಿ. ಹೀಗಾಗಿ ಇದನ್ನು ಸರಿಯಾಗಿ ತಿಳಿದುಕೊಳ್ಳದೆ ಐ ಲವ್ ಯೂ ಎಂದು ಹೇಳುವ ತಪ್ಪನ್ನು ಮಾಡಬೇಡಿ. ಮೊದಲು ನೀವು ಜೀವನಪೂರ್ತಿ ಅವರ ಜೊತೆಯಿರಲು ಸಿದ್ಧರಿದ್ದೀರಾ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ.
ಪ್ರೀತಿಸಿದ ಹುಡುಗಿ ಜೊತೆ ಬ್ರೇಕಪ್ ಆಯ್ತು, ಆದ್ರೆ ಆಕೆ ನೆನಪಿನಿಂದ ಹೊರಬರೋಕೆ ಆಗ್ತಿಲ್ಲ. ಏನ್ಮಾಡ್ಲಿ ?
ವಿಪರೀತ ಹೊಗಳಬೇಡಿ: ಅನೇಕ ಬಾರಿ, ಎದುರಿಗಿರುವ ವ್ಯಕ್ತಿಯನ್ನು ಮೆಚ್ಚಿಸಲು, ನೀವು ಅವರನ್ನು ತುಂಬಾ ಹೊಗಳಲು ಪ್ರಾರಂಭಿಸುತ್ತೀರಿ. ಅವರು ನಿಮ್ಮೊಂದಿಗೆ ಪ್ರಭಾವಿತರಾಗುವ ಬದಲು, ಅವರು ನಿಮ್ಮನ್ನು ಚೀಪ್ ಎಂದು ಯೋಚಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಪ್ರೀತಿಯನ್ನು ಅವರು ಗಣನೆಗೆ ತೆಗೆದುಕೊಳ್ಳದೇ ಹೋಗಬಹುದು. ಆದ್ದರಿಂದ ಸಾಮಾನ್ಯವಾಗಿ ಹೊಗಳಿ ಸಾಕು. ಹೃದಯದ ಮಾತುಗಳನ್ನು ಎಂಥವರೂ ಇಷ್ಟಪಡುತ್ತಾರೆ. ಅತಿಯಾದ ಹೊಗಳಿಕೆ ಯಾರಿಗೂ ರುಚಿಸುವುದಿಲ್ಲ. ಅತಿಯಾದ ಹೊಗಳಿಕೆ ಅಭ್ಯಾಸ ನೀವು ಅಭಿನಯಿಸುತ್ತಿದ್ದೀರಿ ಎಂಬ ಭಾವನೆಯನ್ನು ಹುಟ್ಟು ಹಾಕುತ್ತದೆ.
ಮೊದಲ ಸ್ನೇಹ ಗಳಿಸಿ: ನೀವು ಯಾರೊಂದಿಗಾದರೂ ಉತ್ತಮ ಸ್ನೇಹಿತರಾಗಿದ್ದರೆ, ವ್ಯಕ್ತಿಯು ನಿಮ್ಮನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಸ್ನೇಹಿತರು ಒಬ್ಬರಿಗೊಬ್ಬರು ಆರಾಮವಾಗಿರುತ್ತಾರೆ ಮತ್ತು ಪರಸ್ಪರ ಏನನ್ನೂ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಮೊದಲು ಅವರ ಉತ್ತಮ ಸ್ನೇಹಿತರಾಗಲು ಬಯಸಿ.
ನಂತರ ಮಾತ್ರ ನೀವು ಉತ್ತಮ ಸಂಗಾತಿಯಾಗಬಹುದು. ದಂಪತಿಗಳ ನಡುವೆ ಸ್ನೇಹ ಸಂಬಂಧವನ್ನು ಹೊಂದುವುದು ಬಹಳ ಮುಖ್ಯ ಮತ್ತು ನಿಮ್ಮ ಮೊದಲ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಈ ವಿಧಾನವನ್ನು ನೀವು ಅಳವಡಿಸಿಕೊಳ್ಳಬೇಕು. ನಿಮ್ಮಿಬ್ಬರ ನಡುವೆ ಸ್ನೇಹದ ಬಲವಾದ ಬಂಧವಿದ್ದಾಗ, ನೀವು ನಿಮ್ಮ ಮನಸ್ಸಿನ ಮಾತನ್ನು ಅವರಿಗೆ ಸುಲಭವಾಗಿ ಹೇಳಬಹುದು. ಅವರು ನಿಮಗೆ ಅವಕಾಶ ನೀಡುವ ಬಗ್ಗೆ ಯೋಚಿಸಬಹುದು ಅಥವಾ ನಿಮ್ಮೊಂದಿಗೆ ಪ್ರೀತಿಯಲ್ಲಿ ಬೀಳಬಹುದು.
ಅಷ್ಟಕ್ಕೂ ಹೆಣ್ಣಿಗೇಕೆ ಮದುವೆಯಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತೆ!?
ಎಲ್ಲಾ ಸಮಯ ಜೊತೆಗಿದ್ದು ಇರಿಟೇಟ್ ಮಾಡಬೇಡಿ: ನೀವು ಪ್ರೀತಿಸುವ ವ್ಯಕ್ತಿಯೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳಿ. ಆದರೆ ಯಾವಾಗಲೂ ಹಿಂದೆಯೇ ಹೋಗುತ್ತಿರಬೇಡಿ. ನೀವು ಯಾವಾಗಲೂ ಯಾರೊಂದಿಗಾದರೂ ಇರಲು ಪ್ರಯತ್ನಿಸಿದಾಗ, ಅವರು ಅದನ್ನು ಇಷ್ಟಪಡುತ್ತಾರೆ ಎಂದು ನೀವು ಭಾವಿಸುತ್ತೀರಿ. ಆದರೆ ಇದರಿಂದ ಎದುರಿಗಿರುವ ವ್ಯಕ್ತಿಯು ಕಿರಿಕಿರಿಗೊಳ್ಳಬಹುದು ಮತ್ತು ನಿಮ್ಮಿಂದ ದೂರವಿರಲು ಕಾರಣವನ್ನು ಕಂಡುಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ, ಅಗತ್ಯವಿರುವಷ್ಟು ಸಮಯ ಮಾತ್ರ ಜೊತೆಗಿರಿ. ಇದರಿಂದ ಅವರ ಹೃದಯವನ್ನು ಸುಲಭವಾಗಿ ಗೆಲ್ಲಲು ಸಾಧ್ಯವಾಗುತ್ತದೆ.