ಜಿಲ್ಲಾಸ್ಪತ್ರೆಯ ಆಪರೇಷನ್‌ ಥಿಯೇಟರ್‌ನೊಳಗೆ ವೆಡ್ಡಿಂಗ್ ಫೋಟೋಶೂಟ್ ಮಾಡ್ಕೊಂಡ ಡಾಕ್ಟರ್‌!

ವೆಡ್ಡಿಂಗ್ ಡೇ ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಜನರು ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಳ್ಳೋದು ಇತ್ತೀಚಿಗೆ ಟ್ರೆಂಡ್ ಆಗಿದೆ. ಜನರು ಚಿತ್ರ-ವಿಚಿತ್ರವಾಗಿ ಫೋಟೋಶೂಟ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಂದು ಜೋಡಿ ಆಪರೇಷನ್ ಥಿಯೇಟರ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಎಡವಟ್ಟಿಗೆ ಸಿಲುಕಿಕೊಂಡಿದ್ದಾರೆ.

Doctors pre wedding photoshoot in the operation theatre of a government hospital in Chithrdurga Vin

ಮದ್ವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಪ್ರಮುಖವಾದ ದಿನ. ಹೀಗಾಗಿಯೇ ವೆಡ್ಡಿಂಗ್ ಡೇ ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಜನರು ಏನೇನೋ ಹೊಸ ಹೊಸ ಕಾನ್ಸೆಪ್ಟ್ ನೊಂದಿಗೆ ಬರುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ಕೆಲ ವರ್ಷಗಳಿಂದ,  ಮದ್ವೆ ಫೋಟೋ ಶೂಟ್, ಪ್ರೀ ವೆಡ್ಡಿಂಗ್ ಫೋಟೋ ಶೂಟ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಅನ್ನೋದು ಹೆಚ್ಚು ಟ್ರೆಂಡ್ ಆಗ್ತಿದೆ. ಜನರು ಗ್ರ್ಯಾಂಡ್ ಲೊಕೇಷನ್‌ನಲ್ಲಿ ತುಂಬಾ ಅದ್ಧೂರಿಯಾಗಿ ಫೋಟೋಶೂಟ್‌ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸಿಂಪಲ್ ಆಗಿ, ಮತ್ತೆ ಕೆಲವರು ಚಿತ್ರ-ವಿಚಿತ್ರವಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. 

ಕೆಲವು ಜೋಡಿ ತುಂಬಾ ವಿಭಿನ್ನವಾಗಿರಬೇಕೆಂದು ಸಾಹಸಕ್ಕೂ ಕೈಹಾಕುತ್ತಾರೆ. ಅದರಲ್ಲಿ ಕೆಲವು ತುಂಬಾ ವಿಚಿತ್ರವಾದವುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಹಾಗೆಯೇ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಜೋಡಿಯೊಂದು, ಪ್ರಿ-ವೆಡ್ಡಿಂಗ್ ಶೂಟ್‌ನ್ನು ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಮಾಡಿಕೊಂಡಿದ್ದು ಎಲ್ಲರ ಕೆಂಗಣ್ಣಿಎ ಗುರಿಯಾಗಿದೆ.

ಗಂಗಾ ನದಿ ಮಧ್ಯೆ ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗಿ ಅಪಾಯದಲ್ಲಿ ಸಿಲುಕಿದ ದಂಪತಿ; ಕೊಚ್ಚಿ ಹೋಗ್ತಿದ್ದೋರ ರಕ್ಷಣೆ

ರೋಗಿಯನ್ನು ಬೆಡ್ ಮೇಲೆ ಮಲಗಿಸಿ ವೆಡ್ಡಿಂಗ್ ಫೋಟೋಶೂಟ್
ಭರಮಸಾಗರ ಮೂಲದ ಜಿಲ್ಲಾಸ್ಪತ್ರೆಯ ಗುತ್ತಿಗೆ ಅಧಾರಿತ ವೈದ್ಯ ಡಾ.ಅಭಿಷೇಕ್ ಅವರು ರೋಗಿಯೊಬ್ಬರನ್ನು ಬೆಡ್‌ ಮೇಲೆ ಮಲಗಿಸಿ, ಆಪರೇಷನ್‌ ಮಾಡುವಂತೆ, ಇನ್ನೊಂದೆಡೆ ಭಾವಿ ಪತ್ನಿ ಸಹಾಯ ಮಾಡುವಂತೆ ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಅಂತಿಮವಾಗಿ ಆಪರೇಷನ್‌ ಮುಗಿಯಿತು ಅಂದ ಬಳಿಕ ರೋಗಿ ಎದ್ದು ಕುಳಿತುಕೊಳ್ಳುತ್ತಾನೆ. ಈ ಎಲ್ಲಾ ದೃಶ್ಯಗಳನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಚಿತ್ರೀಕರಣದ ಸಮಯದಲ್ಲಿ ಸುಮಾರು ಮೂರ್ನಾಲ್ಕು ಜನರು ಕ್ಯಾಮೆರಾಗಳು ಮತ್ತು ಲೈಟ್‌ಗಳೊಂದಿಗೆ ಕೋಣೆಯೊಳಗೆ ಇದ್ದರು ಎಂದು ತಿಳಿದುಬಂದಿದೆ.

​ಜೋಡಿಯ ಪ್ರೀ ವೆಡ್ಡಿಂಗ್ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವೈದ್ಯರ ನಡವಳಿಕೆ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

ಡಿವೋರ್ಸ್‌ ಆಯ್ತೆಂದು ಫೋಟೋಗ್ರಾಫರ್‌ಗೆ ಹಣ ವಾಪಸ್ ನೀಡುವಂತೆ ಕೇಳಿದ ಮಹಿಳೆ

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೇಣು ಪ್ರಸಾದ್ ಮಾತನಾಡಿ, ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಡಾ.ಅಭಿಷೇಕ್ ಅವರನ್ನು ಒಂದು ತಿಂಗಳ ಹಿಂದೆ ಗುತ್ತಿಗೆ ಆಧಾರದ ಮೇಲೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಮೂಲಕ ನೇಮಿಸಲಾಗಿದೆ. ಭರಮಸಾಗರ ಆರೋಗ್ಯ ಕೇಂದ್ರದಲ್ಲಿ ಮದುವೆಯ ಪೂರ್ವ ಚಿತ್ರೀಕರಣವನ್ನು ಬಳಕೆಯಾಗದ ಆಪರೇಷನ್ ಥಿಯೇಟರ್‌ನಲ್ಲಿ ನಡೆಸಲಾಯಿತು. ಕಳೆದ ಸೆಪ್ಟೆಂಬರ್ ನಿಂದ ಆ ಒಟಿಯಲ್ಲಿ ಯಾವುದೇ ಶಸ್ತ್ರ ಚಿಕಿತ್ಸೆ ನಡೆದಿಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆ ಆಡಳಿತಾಧಿಕಾರಿಗೆ ನೋಟಿಸ್ ಜಾರಿ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios