Asianet Suvarna News Asianet Suvarna News

ಗಂಗಾ ನದಿ ಮಧ್ಯೆ ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗಿ ಅಪಾಯದಲ್ಲಿ ಸಿಲುಕಿದ ದಂಪತಿ; ಕೊಚ್ಚಿ ಹೋಗ್ತಿದ್ದೋರ ರಕ್ಷಣೆ

ಭವ್ಯವಾದ ಗಂಗಾನದಿಯ ಹಿನ್ನೆಲೆಯಲ್ಲಿ ಸ್ಮರಣೀಯ ಪ್ರೀ ವೆಡ್ಡಿಂಗ್ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ದಂಪತಿ ಆಶಿಸಿದ್ದರು. ಆದರೆ ನೀರಿನ ಮಟ್ಟ ಹೆಚ್ಚಾದಾಗ ಅವರು ನದಿಯ ಮಧ್ಯದಲ್ಲಿ ಸಿಲುಕಿಕೊಂಡರು.

pre wedding shoot goes wrong couple almost swept away by ganga ash
Author
First Published Dec 30, 2023, 2:56 PM IST

ದೆಹ್ರಾಡೂನ್‌ (ಡಿಸೆಂಬರ್ 30, 2023): ಉತ್ತರಾಖಂಡದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್‌ಗೆ ಗಂಗಾ ನದಿಗೆ ಹೋದ ದೆಹಲಿಯ ದಂಪತಿ ನದಿಯ ಮಧ್ಯೆ ಸಿಲುಕಿಕೊಂಡ ಘಟನೆ ನಡೆದಿತ್ತು. ಅಲ್ಲದೆ, ನದಿಯ ರಭಸಕ್ಕೆ ಬಹುತೇಕ ಕೊಚ್ಚಿಹೋಗುತ್ತಿದ್ದ ಆಘಾತಕಾರಿ ಘಟನೆಯೂ ನಡೆದಿದೆ. 

27 ವರ್ಷದ ಮಾನಸ್ ಖೇಡಾ ಮತ್ತು 25 ವರ್ಷದ ಅಂಜಲಿ ಅನೇಜಾ ರಿಷಿಕೇಶದಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ನದಿಗೆ ಪ್ರವೇಶಿಸಿದ್ದರು. ಭವ್ಯವಾದ ಗಂಗಾನದಿಯ ಹಿನ್ನೆಲೆಯಲ್ಲಿ ಸ್ಮರಣೀಯ ಪ್ರೀ ವೆಡ್ಡಿಂಗ್ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ದಂಪತಿ ಆಶಿಸಿದ್ದರು. ಆದರೆ ನೀರಿನ ಮಟ್ಟ ಹೆಚ್ಚಾದಾಗ ಅವರು ನದಿಯ ಮಧ್ಯದಲ್ಲಿ ಸಿಲುಕಿಕೊಂಡರು.

ಆಮೀರ್​ ಖಾನ್​ ಪುತ್ರಿಯ ಪ್ರೀ ವೆಡ್ಡಿಂಗ್​ ಕಾರ್ಯ ಶುರು: ನಟಿ ಇರಾ ಖಾನ್​ ಕೈಹಿಡಿಯುತ್ತಿರೋರು ಯಾರು?

ನದಿಯಲ್ಲಿ ಮುಳುಗುತ್ತಿರುವ ದೆಹಲಿಯ ದಂಪತಿ ರಕ್ಷಿಸಲು ಋಷಿಕೇಶದ ಬೀಸಿ ಪೊಲೀಸ್ ಚೆಕ್ ಪೋಸ್ಟ್‌ನಿಂದ ಎಸ್‌ಡಿಆರ್‌ಎಫ್‌ಗೆ ಗುರುವಾರ ತುರ್ತು ಕರೆ ಬಂದಿದೆ. ಘಟನೆ ವರದಿಯಾದ ಸಿಂಗ್ಟೋಲಿ ಬಳಿಯ ಪ್ರದೇಶವನ್ನು ರಕ್ಷಣಾ ತಂಡ ತಲುಪಿದಾಗ, ದಂಪತಿ ಬಹುತೇಕ ಕೊಚ್ಚಿಹೋಗಿರುವುದನ್ನು ಅವರು ನೋಡಿದರು. ಆದರೆ, ಸ್ಥಳೀಯರ ನೆರವಿನಿಂದ ಎಸ್‌ಡಿಆರ್‌ಎಫ್ ತಂಡ ಅವರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ಅವರನ್ನು ರಕ್ಷಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿದ ಉತ್ತರಾಖಂಡ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಕಮಾಂಡೆಂಟ್ ಮಣಿಕಾಂತ್ ಮಿಶ್ರಾ, ಮಾನಸ್ ಖೇಡಾನನ್ನು ನದಿಯಿಂದ ರಕ್ಷಿಸಿದಾಗ, ಅವನು ಪ್ರಜ್ಞಾಹೀನನಾಗಿದ್ದನು. ದಂಪತಿಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುತ್ತ ನೀರು, ಮಧ್ಯೆ ಮದು ಮಕ್ಕಳು; ಅವರ ನಡುವೆ ಬಂತೊಂದು ಹಾವು! ಇದು ಪ್ರಿವೆಡ್ಡಿಂಗ್ ಶೂಟ್

ಅಲ್ಲದೆ, ಅವರು ಹೆಚ್ಚು ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿರುವುದರಿಂದ ಅವರ ದೆಹಲಿ ವಿಳಾಸವನ್ನು ತಕ್ಷಣವೇ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಎಂದೂ ಮಣಿಕಾಂತ್‌ ಮಿಶ್ರಾ ಹೇಳಿದರು. ದಂಪತಿ ನದಿಗೆ ಹೋದಾಗ ಸ್ವಲ್ಪ ನೀರು ಇತ್ತು. ಆದರೆ, ನೀರಿನ ಮಟ್ಟವು ಇದ್ದಕ್ಕಿದ್ದಂತೆ ಏರುತ್ತದೆ ಎಂದು ಅವರು ಊಹಿಸಲು ಸಾಧ್ಯವಾಗಲಿಲ್ಲ ಎಂದೂ ಎಸ್‌ಡಿಆರ್‌ಎಫ್‌ ಸಿಬ್ಬಂದಿ ದಂಪತಿಗಾದ ಅನುಭವದ ಬಗ್ಗೆ ತಿಳಿಸಿದ್ದಾರೆ.
 

Follow Us:
Download App:
  • android
  • ios