ಅತ್ಯಲ್ಪ ಅವಧಿಯಲ್ಲಿ ಮುಖೇಶ್‌ ಅಂಬಾನಿಯ ಸಂಪತ್ತು ಮೂರು ಪಟ್ಟು ನಾಲ್ಕು ಪಟ್ಟು ಹೆಚ್ಚಲು ಕಾರಣವಾದ ಈ ಮೋದಿಯ ಬಗ್ಗೆ ನಿಮಗೆ ಗೊತ್ತಾ? 

ನಿಮಗೆ ನರೇಂದ್ರ ಮೋದಿ ಗೊತ್ತು. ಲಲಿತ್‌ ಮೋದಿ, ನೀರವ್‌ ಮೋಡಿ ಕೂಡ ಗೊತ್ತಿರಬಹುದು. ಆದರೆ ಮನೋಜ್‌ ಮೋದಿ ಗೊತ್ತಾ? ಗೊತ್ತಿಲ್ಲದಿದ್ದರೆ ಗೊತ್ತು ಮಾಡಿಕೊಳ್ಳೋಕೆ ಇದು ಸುಸಮಯ.

ಇವರು ಬೇರ್ಯಾರೂ ಅಲ್ಲ, ರಿಲಯನ್ಸ್‌ ಜಿಯೋ ಕಂಪನಿಯ ಒಡೆಯ, ಎಣಿಕೆಯೇ ಸಿಗದಷ್ಟು ಕೋಟ್ಯಂತರ ರೂಪಾಯಿಗಳ ಮಾಲಿಕ ಮುಖೇಶ್‌ ಅಂಬಾನಿ ಅವರ ಬಲಗೈ. ಇವರಿಲ್ಲದೆ ಮುಖೇಶ್‌ ಸಾಮ್ರಾಜ್ಯವೇ ಇಲ್ಲ. ಇವರಿಲ್ಲದೆ ಮುಖೇಶ್‌ ಯಾವ ಪ್ರಮುಖ ತೀರ್ಮಾನವನ್ನೂ ತೆಗೆದುಕೊಳ್ಳುವುದಿಲ್ಲ. 

ನೀತಾ ಮುಖೇಶ್ ಲವ್ ಸ್ಟೋರಿ

ಮನೋಜ್‌ ಸದ್ದಿಲ್ಲದೆ ದುಡಿಯುವ ವ್ಯಕ್ತಿಯಂತೆ. ಮುಖೇಶ್‌ರಂತೆ ಇವರು ಹೊರಗೆಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಬ್ಯುಸಿನೆಸ್‌ ಡೀಲ್‌ಗಳ ವಿಷಯ ಬಂದಾಗ ಇವರು ಕಟ್‌ಥ್ರೋಟ್‌ ವ್ಯಕ್ತಿತ್ವ. ಇತರ ಕಂಪನಿಗಳ ಜೊತೆ ವ್ಯವಹರಿಸುವಾಗ ನಯವಾಗಿ ರಿಲಯನ್ಸ್‌ಗೆ ಗರಿಷ್ಠ ಲಾಭ ಆಗುವಂತೆ ವ್ಯವಹಾರ ಕುದುರಿಸಬಲ್ಲವರು. 

ಕೋಟ್ಯಾನುಗಟ್ಟಲೇ ಹಣ ಸಂಪಾದಿಸ್ತಾರೆ ಅಂಬಾನಿ ಕುಟುಂಬದ ಸೊಸೆಯರು! 

ಆದರೆ ತನ್ನನ್ನು ತಾನು ಲೋ ಪ್ರೊಫೈಲ್‌ನಲ್ಲಿ ಇಟ್ಟು ನೋಡಿಕೊಳ್ಳುವುದೇ ಮನೋಜ್‌ ಮೋದಿಗೆ ಇಷ್ಟೆ. ನನಗೆ ವ್ಯೂಹ ರಚಿಸುವುದು ಗೊತ್ತಿಲ್ಲ. ನಾನು ಅಷ್ಟೆಲ್ಲಾ ತಿಳಿದವನಲ್ಲ ಎಂಬ ಮಾತನ್ನು ಹೇಳುತ್ತಿರುತ್ತಾರೆ. ಆದರೆ ಬ್ಯುಸಿನೆಸ್‌ ವಿಷಯಕ್ಕೆ ಬಂದಾಗ- ಎಲ್ಲರಿಗೂ ಲಾಭ ಆಗದೆ ಹೋದರೆ ಅಂಥ ಡೀಲ್‌ಗಳು ಉಳಿಯುವುದಿಲ್ಲ ಎಂಬ ಒಳನೋಟವನ್ನೂ ಕೊಡುತ್ತಾರೆ. ಧೀರುಭಾಯ್‌ ಕಾಲದಲ್ಲಿ ಇದ್ದ ಪೆಟ್ರೋಕೆಮಿಕಲ್ಸ್‌ ವ್ಯವಹಾರವನ್ನು ಇಂದು ವಿಸ್ತರಿಸಿ ಟೆಲಿಕಾಂನಲ್ಲಿ ಟ್ರೆಂಡ್‌ ಸೆಟ್‌ ಮಾಡಿ, ಈಗ ಇಂಟರ್‌ನೆಟ್‌, ಪೇಮೆಂಟ್‌ ಇತ್ಯಾದಿಗಳಿಗೂ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಮನೋಜ್‌ ಅವರ ಒಳನೋಟ, ಅನುಭವ, ಹೋರಾಟದ ಮನೋಭಾವಗಳು ತುಂಬಾ ಮುಖ್ಯವಾಗಿವೆ ಅನ್ನುತ್ತಾರೆ ರಿಲಯನ್ಸ್‌ನಲ್ಲಿ ಕೆಲಸ ಮಾಡುವ ಮಂದಿ.

ಜಿಯೋ ಜತೆ ಜನರಲ್‌ ಅಟ್ಲಾಂಟಿಕ್‌ 6,600 ಕೋಟಿ ರು. ಹೂಡಿಕೆ!