Relationship Tips: ಹುಡ್ಗೀರು ಡ್ರಾಮಾ ಮಾಡಿದ್ರೆ ಹುಡುಗರಿಗೆ ಇಷ್ಟವಾಗೋದಿಲ್ಲ

ಮೂರ್ಖರಂತೆ ನಟಿಸುವುದು, ಸುಳ್ಳು ಹೇಳುವುದು, ಪದೇ ಪದೇ ದೂರುವುದು, ನಾಟಕ ಮಾಡುವುದು ಮಾಡಿದರೆ ಹುಡುಗರಿಗೆ ಒಪ್ಪಿಗೆ ಆಗೋದಿಲ್ಲ. ಅವರು ಕೋಪವನ್ನೂ ತೋರುತ್ತಾರೆ ಮತ್ತು ನಿಮ್ಮ ಸಂಬಂಧ ಹಾಳಾಗುತ್ತದೆ.

Do not create drama for your good relationship with partner

ಗೆಳೆತನ (Friendship) ಬೆಳೆಸಿಕೊಳ್ಳುವುದು ಉಳಿಸಿಕೊಳ್ಳುವುದು ಸುಲಭವಲ್ಲ. ಡೇಟಿಂಗ್‌ (Dating) ಗಾಗಲೀ, ಸ್ನೇಹಕ್ಕಾಗಲೀ ಹುಡುಗ (Male)-ಹುಡುಗಿ (Female) ಇಬ್ಬರೂ ಕೆಲವು ವಿಚಾರದಲ್ಲಿ ಸಮಾನ ಧೋರಣೆ ಹೊಂದಿರಬೇಕು. ಮಹಿಳೆಯರು ಹೇಗೆ ಪುರುಷರ ಕೆಲವು ವರ್ತನೆಗಳನ್ನು ಇಷ್ಟಪಡುವುದಿಲ್ಲವೋ ಹಾಗೆಯೇ ಪುರುಷರಿಗೂ ಮಹಿಳೆಯರ ಕೆಲವು ವರ್ತನೆಗಳು ಇಷ್ಟವಾಗುವುದಿಲ್ಲ. ಯುವತಿಯರು ಹೊಂದಿರಬಹುದಾದ ಈ ನಾಲ್ಕು ರೀತಿಯ ಗುಣಗಳು ಹುಡುಗರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಅಂತಹ ಗುಣಗಳು ನಿಮ್ಮಲ್ಲೂ ಇದ್ದರೆ ಹುಡುಗರು ನಿಮ್ಮ ಸ್ನೇಹಕ್ಕೆ ಕೈ ಚಾಚುವುದಿಲ್ಲ. ದೂರವೇ ಇರುತ್ತಾರೆ. ಒಂದೊಮ್ಮೆ ಸ್ನೇಹವಾದರೂ ಅವರು ಅದನ್ನು ಮುಂದುವರಿಸುವುದಿಲ್ಲ. 
ಪುರುಷರನ್ನು ನಿಮ್ಮಿಂದ ದೂರ ಮಾಡುವ ಆ ಗುಣಗಳು ಯಾವುವು ಎಂದು ನೋಡಿಕೊಳ್ಳಿ. 

•    ಮೂರ್ಖರಂತೆ (Stupid Like Behaviour) ವರ್ತಿಸುವುದು
ಮುಗ್ಧತೆ ಬೇರೆ, ಮೂರ್ಖತನ ಬೇರೆ. ಮುಗ್ಧತೆ ಇರುವಂತೆ ನಟಿಸುವುದು ಕೆಲ ಹೆಣ್ಣುಮಕ್ಕಳಿಗೆ ಭಾರೀ ಇಷ್ಟ. ಕೆಲವೊಮ್ಮೆ ಅವರು ಏನೂ ತಿಳಿಯದವರಂತೆ, ಏನೂ ಹೇಳದೆ ಸುಮ್ಮನಿದ್ದುಬಿಡುತ್ತಾರೆ. ಇದರಿಂದ ಪುರುಷರ ಗಮನ (Attraction) ಸೆಳೆಯಬಹುದು ಎಂದುಕೊಂಡಿದ್ದರೆ ತಪ್ಪು. ಚುರುಕಾಗಿ ನಿರ್ಧಾರ ತೆಗೆದುಕೊಳ್ಳದ ಹೆಣ್ಣುಮಕ್ಕಳನ್ನು ಈಗಿನ ಯುವಕರು ದೂರವೇ ಇಡುತ್ತಾರೆ. ಯಾವುದೇ ವಿಚಾರದಲ್ಲಾದರೂ ಚುರುಕಾಗಿ ವರ್ತಿಸುವ, ವಿಚಾರ ಮಾಡುವ, ತ್ವರಿತವಾಗಿ ಜವಾಬ್ದಾರಿ ನಿಭಾಯಿಸುವ ಹುಡುಗಿಯರನ್ನು ಹುಡುಗರು ಇಷ್ಟಪಡುತ್ತಾರೆ. ಆತ್ಮವಿಶ್ವಾಸವುಳ್ಳ, ಬೌದ್ಧಿಕ ಸ್ವಾತಂತ್ರ್ಯ ಹೊಂದಿದ, ಸ್ಮಾರ್ಟ್‌ (Smart) ಮಹಿಳೆಯರಿಗೆ ಅವರು ಬೆಲೆ ನೀಡುತ್ತಾರೆ. ನಿಮ್ಮಲ್ಲಿ ಈ ಗುಣಗಳಿಲ್ಲದಿದ್ದರೂ ಪರವಾಗಿಲ್ಲ. ಆದರೆ, ಮೂರ್ಖರಂತೆ ವರ್ತಿಸಿದರೆ ಅವರು ಖಂಡಿತ ನಿಮ್ಮಿಂದ ದೂರವಾಗುತ್ತಾರೆ. 

•    ಸುಳ್ಳು ಹೇಳುವುದು (Telling Lie)
ಸಂಬಂಧದಲ್ಲಿ ಸುಳ್ಳು ಹೇಳುವುದು ಯಾರಿಗೂ ಇಷ್ಟವಾಗುವುದಿಲ್ಲ. ಹಾಗೆಯೇ ಪುರುಷರೂ ಸಹ ಇದನ್ನು ಹೇಟ್‌ (Hate) ಮಾಡುತ್ತಾರೆ. ಏನೋ ವೈಚಾರಿಕತೆ ಹೊಂದಿದ್ದೇವೆ ಎನ್ನುವಂತೆ ಸುಳ್ಳೇ ಸುಳ್ಳು ವರ್ತಿಸುವುದು ಅವರಿಗೆ ಇಷ್ಟವಾಗುವುದಿಲ್ಲ. ನೀವಲ್ಲದ ನಿಮ್ಮ ಮುಖವನ್ನು ಬಿಂಬಿಸಲು ಯತ್ನಿಸಬೇಡಿ. ಎಂದಿಗೂ ನಿಮ್ಮ ಬಗ್ಗೆ, ನಿಮ್ಮ ಆದ್ಯತೆ, ಇಷ್ಟಾನಿಷ್ಟ, ಸ್ನೇಹವಲಯದ ಬಗ್ಗೆ ಸುಳ್ಳು ಹೇಳಬೇಡಿ. ನಿಮ್ಮದಲ್ಲದ ಹವ್ಯಾಸಗಳನ್ನು ಹೇಳಿಕೊಳ್ಳಬೇಡಿ. ನೀವು ಅವರನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದಿದ್ದರೂ ಪರವಾಗಿಲ್ಲ, ಆದರೆ, ಸುಳ್ಳು ಹೇಳುತ್ತಿದ್ದರೆ ಅವರು ನಿಮ್ಮಿಂದ ದೂರವಾಗುತ್ತಲೇ ಇರುತ್ತಾರೆ.

ಇದನ್ನೂ ಓದಿ: ನನ್ನ ತಮ್ಮನಿಗೂ ನನ್ನ ಗೆಳತಿಗೂ ಲೈಂಗಿಕ ಸಂಬಂಧ, ಸಹಿಸಿಕೊಳ್ಳೋಕೆ ಆಗ್ತಿಲ್ಲ ಅಂತಿದ್ದಾಳೆ ಅಕ್ಕ

•    ಡ್ರಾಮಾ ಮಾಡ್ಬೇಡಿ (Do not Create Drama)
ನೀವು ಸಣ್ಣ ಸಣ್ಣ ಸನ್ನಿವೇಶಗಳಿಗೂ ದೊಡ್ಡ ಸೀನ್‌ ಕ್ರಿಯೇಟ್‌ ಮಾಡುವಿರಾ? ಹಾಗಾದರೆ ನಿಮ್ಮ ಫ್ರೆಂಡ್‌ ನಿಮ್ಮಿಂದ ದೂರ ಓಡುವುದು ನಿಶ್ಚಿತ. ಸಣ್ಣ ಸಂಗತಿಗಳನ್ನು ದೀರ್ಘಕಾಲ ನೆನಪಿನಲ್ಲಿ ಉಳಿಯುವಂತೆ ವರ್ತಿಸುವುದು ಸಲ್ಲದು. ಪುರುಷರು ಸಾಮಾನ್ಯವಾಗಿ ಅತ್ಯಂತ ಪ್ರಾಕ್ಟಿಕಲ್‌ ಆಗಿರುತ್ತಾರೆ. ಅವರಿಗೆ ಡ್ರಾಮಾ ಮಾಡುವುದು ಇಷ್ಟವಾಗುವುದಿಲ್ಲ. ಭಾವನಾತ್ಮಕವಾಗಿ ಸಮತೋಲನದ (Emotional Intelligence) ಬುದ್ಧಿ ಹೊಂದಿರುವ ಮಹಿಳೆಯರ ಕಡೆಗೆ ಅವರು ಆಕರ್ಷಿತರಾಗುತ್ತಾರೆ. ಪುರುಷರು ನಿಜಕ್ಕೂ ಪ್ರೀತಿ ಅಥವಾ ಸ್ನೇಹದಲ್ಲಿ ಡ್ರಾಮಾ ಮಾಡುವ ಬುದ್ಧಿ ಹೊಂದಿರುವುದಿಲ್ಲ. ನಿಮ್ಮಿಂದಲೂ ಅದನ್ನವರು ನಿರೀಕ್ಷೆ ಮಾಡುವುದಿಲ್ಲ. ದೀರ್ಘಕಾಲದ ಸ್ನೇಹ, ಪ್ರೀತಿ ನಿಮ್ಮದಾಗಿರಬೇಕು ಎಂದಾದರೆ ಡ್ರಾಮಾ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುವ ನಿಮ್ಮ ಬುದ್ಧಿಯನ್ನು ಬಿಡಬೇಕು. 

ಇದನ್ನೂ ಓದಿ: Love Life: ನಿಮ್ಮ ಪ್ರೀತಿಗೆ ನೀವೇ ಕೊಳ್ಳಿ ಇಡ್ತೀರಾ?

•    ಸತತವಾಗಿ ದೂರುವ (Complain) ಬುದ್ಧಿ
ಸಂಗಾತಿ ನಿಮ್ಮ ಮೇಲಿನ ಆಸಕ್ತಿ ಕಳೆದುಕೊಳ್ಳಬಾರದು ಎಂದಾದರೆ ಎಲ್ಲದರ ಬಗ್ಗೆಯೂ ದೂರುವ ಬುದ್ಧಿಯನ್ನು ಬಿಡಬೇಕು. ಬದಲಿಗೆ, ಉತ್ತಮ ಕಮ್ಯೂನಿಕೇಷನ್‌ ಗುಣ ಬೆಳೆಸಿಕೊಳ್ಳಬೇಕು. ನಿಮಗೇನು ಇಷ್ಟವಾಗುವುದಿಲ್ಲವೋ ಅದರ ಬಗ್ಗೆ ದೂರುತ್ತಿರುವುದರ ಬದಲಿಗೆ ಅದನ್ನು ನೇರವಾಗಿ ಅವರಲ್ಲಿ ಹೇಳಬಹುದು, ವ್ಯಕ್ತಪಡಿಸಬಹುದು. ಮಹಿಳೆಯರು ಖುಷಿಯಾಗಿ, ತಮ್ಮ ನೆಲೆಯಲ್ಲಿ ಸಂತೃಪ್ತರಾಗಿರುವುದನ್ನು ಪುರುಷರು ಇಷ್ಟಪಡುತ್ತಾರೆ. ಇದು ಅಗತ್ಯವೂ ಹೌದು. 

Latest Videos
Follow Us:
Download App:
  • android
  • ios