ಡೈವೋರ್ಸ್ ಯಾಕೆ ಹೆಚ್ಚಾಗುತ್ತಿದೆ ಎಂಬುದಕ್ಕೆ ತಜ್ಞರು ಕೊಟ್ಟ ಕಾರಣ ಇದು! ಯುವಜನರೇ ಹುಷಾರ್

ಇತ್ತೀಚೆಗೆ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿದೆ. ಅದೂ ಯುವಜನರಲ್ಲೇ ಹೆಚ್ಚುತ್ತಿದೆ. ಯಾಕೆ? ತಜ್ಞರು ನಾನಾ ಕಾರಣಗಳನ್ನು ತರ್ಕಿಸಿದ್ದಾರೆ. ಕೌನ್ಸೆಲಿಂಗ್ ಪ್ರಕರಣಗಳನ್ನು ತೆಗೆದು ನೋಡಿದರೆ ಹೆಚ್ಚಿನವು ವರ್ತನೆ ಮತ್ತು ಲೈಂಗಿಕ ಅತೃಪ್ತಿಗೆ ಸಂಬಂಧಿಸಿವೆ. ಹೌದು, ಯಾಕೆ ಇಷ್ಟೊಂದು ಲೈಂಗಿಕ ಅತೃಪ್ತಿ?

 

divorces are rising because of sexual problems in youth, be careful

ಯುವಜನತೆಯಲ್ಲಿ ಡೈವೋರ್ಸ್ (divorce) ಹೆಚ್ಚಳವಾಗುತ್ತಿದೆ. ನಮ್ಮ ರಾಜ್ಯದ ಕೊಡಗಿನಲ್ಲಿ ಡೈವೋರ್ಸ್‌ಗಳ ಸಂಖ್ಯೆ ತುಂಬಾ ಅಧಿಕವಾಗಿದೆ. ಪ್ರತಿವರ್ಷ 400ಕ್ಕೂ ಹೆಚ್ಚು ಜೋಡಿ ಪ್ರತ್ಯೇಕಗೊಳ್ಳುತ್ತಿದೆ. ಇದು ಇತ್ತೀಚಿನ ಎರಡು ವರ್ಷಗಳಲ್ಲಿ ಕಂಡುಬಂಧ ಹೆಚ್ಚಳದ ವಿಚಾರ. ಈ ವಿಚ್ಛೇದನ ಹೆಚ್ಚಲು ಕಾರಣವೇನು? ಕೌಟುಂಬಿಕ ನ್ಯಾಯಾಲಯದವರು ನೀಡುವ ಮಾಹಿತಿಯ ಪ್ರಕಾರ, ಹೆಚ್ಚಿನ ಕೇಸ್‌ಗಳಲ್ಲಿ ದಂಪತಿಗಳಲ್ಲಿ, ಅಥವಾ ದಂಪತಿಯಲ್ಲಿ ಯಾರಾದರೊಬ್ಬರು ಅನುಭವಿಸುವ ಲೈಂಗಿಕ ಅತೃಪ್ತಿ ಈ ಡೈವೋರ್ಸ್‌ಗಳಿಗೆ ಕಾರಣಗಳಲ್ಲಿ ಅಧಿಕವಾಗಿ ಕಂಡುಬಂದಿದೆ. ಇದು, ಇನ್ನು ಮಂದೆಯಾದರೂ ಮದುವೆಯಾಗುವವರು ತಮ್ಮ ಹಾಗೂ ತಮ್ಮ ಸಂಗಾತಿಯ ಲೈಂಗಿಕ ತೃಪ್ತಿಯನ್ನು ಮುಖ್ಯವಾಗಿ ಪರಿಗಣಿಸಬೇಕು ಎಂಬುದರತ್ತ ನಮ್ಮ ಗಮನವನ್ನು ಸೆಳೆಯುತ್ತದೆ. 

ಯಾಕೆ ಲೈಂಗಿಕ ಅತೃಪ್ತಿ?
1. ಕೆಲಸದ ಒತ್ತಡ ಹೆಚ್ಚುತ್ತಿದೆ. ಇಬ್ಬರೂ ಉದ್ಯೋಗಕ್ಕೆ ಹೋಗುವವರಾದರೆ, ಇಬ್ಬರ ಕರ್ತವ್ಯದ ಪಾಳಿ ಭಿನ್ನವಾಗಿದ್ದರೆ, ಅವರಿಬ್ಬರೂ ಭೇಟಿಯಾಗುವುದೇ ಅಪರೂಪ ಎಂಬಂತಾಗುತ್ತದೆ. ನವವಿವಾಹಿತರು ಹಿಂದಿನ ಕಾಲದಲ್ಲಿ ಪ್ರತಿದಿನ ಕೂಡುತ್ತಿದ್ದರು. ಇದು ಅವರ ನಡುವಿನ ತಿಳಿವಳಿಕೆ, ಇಬ್ಬರ ದೇಹದ ಪರಸ್ಪರ ಪರಿಚಯವನ್ನು ಗಾಢವಾಗಿಸುತ್ತಿತ್ತು. ಆದರೆ ಅದೂ ಈಗ ಕಡಿಮೆಯಾಗಿದೆ. ನವವಿವಾಹಿತರೂ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಸೇರುತ್ತಾರೆ. ಅಷ್ಟೊಂದು ಕೆಲಸದ ಒತ್ತಡ ಕಾಡುತ್ತಿದೆ. ಬೆಡ್‌ರೂಂ ಒಳಗೂ ಕಾಲಿಡುವ ಉದ್ಯೋಗದ ಒತ್ತಡದಿಂದಾಗಿ, ಸರಸ ಸಲ್ಲಾಪದಲ್ಲಿ ಮನಸ್ಸು ಮತ್ತು ದೇಹವನ್ನು ತೊಡಗಿಸಲು ಅಸಾಧ್ಯವಾಗಿದೆ. 

ಏನು ಮಾಡಬಹುದು- ಕೆಲಸದ ನಡುವೆ ಬಿಡುವು ಮಾಡಿಕೊಳ್ಳಬೇಕು. ಕಚೇರಿಗಳು ಹತ್ತಿರವಿರಲಿ. ಮನೆ ಕಚೇರಿಗೆ ಹತ್ತಿರವಿರಲಿ. ಇಬ್ಬರೂ ಕೆಲಸದಿಂದಾಚೆಗೆ ವಿಭಿನ್ನ ಹವ್ಯಾಸಗಳಿಗೆ, ಇಬ್ಬರ ಅಭಿರುಚಿಗಳನ್ನು ಪೋಷಿಸುವ ಕಡೆಗೆ ಗಮನ ಕೊಡಿ. ಜೊತೆ ಸೇರಿ ಅಡುಗೆ ಮಾಡಿ. ಸಾಂಗತ್ಯ ಬೆಳೆಯುತ್ತದೆ.

2. ಸೆಕ್ಸ್‌ನಲ್ಲಿ ಅತೃಪ್ತಿ ಹೆಚ್ಚುತ್ತಿದೆ. ಎಂದರೆ ಗಂಡನ ಸೆಕ್ಸ್‌ ಡ್ರೈವ್ ಅಥವಾ ಲೈಂಗಿಕ ಆಸಕ್ತಿಗಳಿಗೆ ಹೆಂಡತಿ ಸ್ಪಂದಿಸದಿರುವುದು, ಹೆಂಡತಿಯ ಲೈಂಗಿಕ ಆಸೆಗಳಿಗೆ ಗಂಡ ಗಮನ ಕೊಡದೇ ಇರುವುದು- ಅಪಾಯಕಾರಿ. ಹಲವು ವರ್ಷಗಳಿಂದಲೂ ಲೈಂಗಿಕ ತಜ್ಞರು ಎಚ್ಚರಿಸುತ್ತಲೇ ಇರುವ ವಿಚಾರವೆಂದರೆ, ದಾಂಪತ್ಯದಲ್ಲಿ ಗಂಡು ಪ್ರತೀ ಬಾರಿ ಸುಖದ ಉತ್ತುಂಗ ತಲುಪಿದರೂ, ಪತ್ನಿಗೆ ಅದೇ ಸುಖವನ್ನು ಒದಗಿಸಿಕೊಡುವಲ್ಲಿ ವಿಫಲನಾಗ್ತಾನೆ. ಹೀಗೆ ಹತಾಶೆ ಅನುಭವಿಸುವ ಪತ್ನಿಯರ ಪ್ರಮಾಣ ಶೇ.೬೦ಕ್ಕಿಂತಲೂ ಅಧಿಕ. ಹಾಗೆಂದು ಪತಿಗೆ ವಂಚಿಸಲು ಯಾವ ಪತ್ನಿಯೂ ಮುಂದಾಗುವುದಿಲ್ಲ. ಪತಿಯಿಂದ ಅದನ್ನು ಪಡೆಯಲು ಪರಿಪರಿಯಾಗಿ ಪ್ರಯತ್ನಿಸುತ್ತಾರೆ. ಆದರೆ ಇದು ಸಾಧ್ಯವೇ ಇಲ್ಲವೆಂದು ಗೊತ್ತಾದರೆ ಮಾತ್ರ ಡೈವೋರ್ಸ್‌ಗೆ ಮುಂದಾಗುತ್ತಾರೆ.

ಏನು ಮಾಡಬಹುದು- ಯುವಕರು ತಮ್ಮ ಸಂಗಾತಿಯ ಲೈಂಗಿಕ ತೃಪ್ತಿಯ ಬಗ್ಗೆ ಹೆಚ್ಚು ಅರಿವು ಬೆಳೆಸಿಕೊಳ್ಳಬೇಕು. ತಾನು ಸುಖ ಪಡೆಯುವುದರ ಜೊತೆಗೆ, ಸಂಗಾತಿಗೂ ಸುಖ ನೀಡುವುದು ಹೇಗೆ ಎಂಬುದರ ಬಗ್ಗೆಯೂ ಆಲೋಚಿಸಬೇಕು.

Teenage pregnancy: ಹದಿಹರೆಯದ ಮಗಳು ಬಸುರಾದರೆ, ಪೋಷಕರು ಹೇಗೆ ರಿಯಾಕ್ಟ್ ಮಾಡಬೇಕು?

3. ವೈವಿಧ್ಯತೆಯ ಕೊರತೆಯೂ ಕೆಲವೊಮ್ಮೆ ಕಾರಣ. ಹೆಚ್ಚಿನ ದಂಪತಿಗಳು ತಮ್ಮ ಲೈಂಗಿಕತೆಯಲ್ಲಿ ಹೊಸತನವನ್ನು ತರಲು ಪ್ರಯತ್ನಿಸುವುದೇ ಇಲ್ಲ. ಹೊಸತನ ಎಂದರೆ ಹೊಸ ಸ್ಥಳಕ್ಕೆ ಪ್ರವಾಸ ಹೋಗಿ ಏಕಾಂತ ಕಳೆಯುವುದು, ಮನೆಯಲ್ಲಿಯೂ ಹೊಸ ಜಾಗಗಳಲ್ಲಿ ಸುಖ ಹುಡುಕಾಡುವುದು, ದಿನನಿತ್ಯ ಅಭ್ಯಾಸವಾದ ಭಂಗಿಗಳನ್ನು ಬದಲಾಯಿಸಿ ಹೊಸ ಭಂಗಿಗಳನ್ನು ಪ್ರಯತ್ನಿಸುವುದು- ಹೀಗೆ ಲೈಂಗಿಕತೆಯಲ್ಲಿ ವೈವಿಧ್ಯವು ದಂಪತಿಯ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. 

ಏನು ಮಾಡಬಹುದು- ಸದಾ ಹೊಸ ಪ್ರಯೋಗಗಳ ಅನ್ವೇಷಣೆ.

4. ಲೈಂಗಿಕ ವಂಚನೆಯೂ ವಿಚ್ಛೇದನಕ್ಕೆ ಪ್ರಮುಖ ಕಾರಣ. ಕೆಲವೊಮ್ಮೆ ಗಂಡನಾಗುವವನು, ತನ್ನ ಲೈಂಗಿಕ ಅಶಕ್ತತೆಯನ್ನು ಮುಚ್ಚಿಟ್ಟು ಮದುವೆಯಾಗಿರಬಹುದು. ಪತ್ನಿಯಾಗುವವಳು, ತನ್ನ ಫ್ರಿಜಿಡಿಟಿ ಅಥವಾ ಲೈಂಗಿಕ ಸ್ಪಂದನವಿಲ್ಲದಿರುವಿಕೆಯನ್ನು ಮುಚ್ಚಿಟ್ಟಿರಬಹುದು. ಮದುವೆಯಾದ ಬಳಿಕವಷ್ಟೇ ಇಂಥ ಸಂಗತಿಗಳು ಪರಸ್ಪರರಿಗೆ ಗೊತ್ತಾಗುತ್ತವೆ. ಇದು ಸಂಗಾತಿಗೆ ದೊಡ್ಡ ಮಟ್ಟದ ನಿರಾಶೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಗಂಡ ಅನ್ಯ ಗಂಡಸಿನಲ್ಲಿಯೂ, ಪತ್ನಿ ಅನ್ಯ ಸ್ತ್ರೀಯಲ್ಲಿಯೂ ಅನುರಕ್ತರಾಗುವ ಸ್ವಭಾವ ಹೊಂದಿರಬಹುದು. ಆಗಲೂ ಇಬ್ಬರ ಲೈಂಗಿಕ ಆಯ್ಕೆಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆ.      

ಏನು ಮಾಡಬಹುದು- ಮದುವೆಗೆ ಮುನ್ನವೇ ತಮ್ಮ ಲೈಂಗಿಕ ಪ್ರವೃತ್ತಿಗಳ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಬಹುದು. 

ಲೈಂಗಿಕ ಸಮಯದಲ್ಲಿ ಕೆಲವು ಜೋಡಿ ಲೈಟ್ ಆನ್‌ ಇಟ್ಟುಕೊಳ್ಳುವುದು ಯಾಕೆ?
 

Latest Videos
Follow Us:
Download App:
  • android
  • ios