ಉಸಿರಾಡಲು ಸ್ಪೇಸ್ ಇಲ್ಲದ ದಾಂಪತ್ಯದಿಂದ ಬೇಗ ಹೊರ ಬನ್ನಿ: ಡಿವೋರ್ಸ್ ಕೋಚ್!
ವಿಚ್ಛೇದನಕ್ಕೆ ನಾನಾ ಕಾರಣಗಳಿರುತ್ತವೆ. ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಸಿಗ್ಬಹುದು. ಮತ್ತೆ ಕೆಲವರು ವರ್ಷಗಟ್ಟಲೆ ಡಿವೋರ್ಸ್ ಪಡೆಯಲು ಸಂಘರ್ಷಪಡಬೇಕು. ನಾನಾ ತೊಂದರೆ ಅನುಭವಿಸಬೇಕು. ಅಂತವರಿಗೆ ನೆರವಾಗುವ ಈ ಮಹಿಳೆ ಕೆಲ ಟಿಪ್ಸ್ ನೀಡಿದ್ದಾರೆ
ವಿಚ್ಛೇದನ ಪಡೆಯುವುದು ಸುಲಭವಲ್ಲ. ಅದ್ರಲ್ಲೂ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ ನಾನಾ ಕಡೆಗಳಿಂದ ವಿರೋಧಗಳು ಬರ್ತಿರುತ್ತವೆ. ಪತಿಯೇ ಆಕೆಗೆ ಸಾಕಷ್ಟು ಅಡ್ಡಿ ಮಾಡುವುದಿದೆ. ಕೆಲವೊಬ್ಬರ ವಿಚ್ಛೇದನವು ಸಾಮಾನ್ಯ ವಿಚ್ಛೇದನಕ್ಕಿಂತ ಮೂರು ಪಟ್ಟು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಲ್ಲದೆ ಸಾಮಾನ್ಯಕ್ಕಿಂತ ಮೂರರಿಂದ ನಾಲ್ಕು ಪಟ್ಟು ದುಬಾರಿಯಾಗಿರುತ್ತದೆ. ಸಂಗಾತಿ (Companion) ಹಾಗೂ ಪತಿ (Husband) ಮನೆಯಿಂದ ತೀವ್ರ ಹಿಂಸೆ ಅನುಭವಿಸುತ್ತಿದ್ದರೂ ಅನೇಕ ಮಹಿಳೆಯರಿಗೆ ವಿಚ್ಛೇದನ ಪಡೆಯುವ ಮಾರ್ಗ, ಒಬ್ಬರ ನೆರವು ಸಿಗೋದಿಲ್ಲ.
ಪೀಡಿತ (Victim) ಮಹಿಳೆಯರಿಗೆ ಸಹಾಯ ಮಾಡಲು ಆಮಿ ಪೊಲಾಕೊ ಹೆಸರಿನ ಮಹಿಳೆ ನಿರಂತರ ಕೆಲಸ ಮಾಡ್ತಿದ್ದಾರೆ. ಅವರು ವಿಚ್ಛೇದನ (Divorce) ತರಬೇತುದಾರೆ. ಪತ್ರಕರ್ತೆ (Jounlaist) ಮತ್ತು ಕನೆಕ್ಟಿಕಟ್‌ನಲ್ಲಿ ವಾಸಿಸುತ್ತಿರುವ ಒಂಟಿ ಮಹಿಳೆ. ಅವರು 10 ವರ್ಷಗಳ ಕಾಲ ಮುದ್ರಣ ಮತ್ತು ದೂರದರ್ಶನ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದರು. ತನಿಖಾ ಘಟಕವನ್ನು ನಡೆಸುತ್ತಿದ್ದರು. ಆಮಿ ಪೊಲಾಕೊ ಬಿಡುವಿನ ವೇಳೆಯಲ್ಲಿ ನೊಂದ ಮಹಿಳೆಗೆ ನೆರವಾಗ್ತಿದ್ದಾರೆ.
ನಿಮ್ಮ ಸಂಗಾತಿ ಏನು ಅಂತ ಅರ್ಥವೇ ಆಗ್ತಿಲ್ವಾ? ಹಾಗಾದ್ರೆ ಅವರು ಈ ರಾಶಿಯವರೇ ಇರ್ಬೇಕು?
ತಮ್ಮ ಜೀವನ (Life) ದ ಅನುಭವವನ್ನು ಬರೆದುಕೊಂಡಿರುವ ಆಮಿ, ಜೀವನದಲ್ಲಿ ವಿಚ್ಛೇದನಕ್ಕೆ ಒಳಗಾಗುವ ಮಹಿಳೆಯರು ಎದುರಿಸುವ ಸಮಸ್ಯೆಯನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವ ಏಕೈಕ ವ್ಯಕ್ತಿ ನಾನು ಎನ್ನುತ್ತಾರೆ. ಈ ಬಲಿಪಶುಗಳು ತಾವು ಒಬ್ಬಂಟಿಯಾಗಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎನ್ನುವ ಆಮಿ, ಅದಕ್ಕಾಗಿಯೇ ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಮಹಿಳೆಯರ ಬೆಂಬಲ ಗುಂಪಾದ ಸ್ಟ್ರಾಂಗ್ ಸ್ಯಾವಿ ವುಮೆನ್ ಅನ್ನು ಪ್ರಾರಂಭಿಸಿದ್ದಾರೆ. ಅವರು ಫೇಸ್ಬುಕ್ ಗ್ರೂಪ್ ಮತ್ತು ಮಾಸಿಕ ಸಭೆಗಳನ್ನು ನಡೆಸಿ ಚರ್ಚೆ ನಡೆಸುತ್ತಾರೆ.
ಆಮಿ, ವಿಚ್ಛೇದನ ಸಮಯದಲ್ಲಿ ಸಮಸ್ಯೆ ಎದುರಿಸಿದ ಅನೇಕ ಮಹಿಳೆಯರನ್ನು ರಕ್ಷಿಸಿದ್ದಾರೆ. ಅವರು ಉಸಿರುಗಟ್ಟುವ ಸಂಬಂಧದಿಂದ ಹೊರಗೆ ಬರಲು ನೆರವಾಗಿದ್ದಾರೆ. ಮಹಿಳೆ ವಿಚ್ಛೇದನಕ್ಕೆ ನಿರ್ಧರಿಸಿದಾಗ ಅಥವಾ ಪತಿಯಿಂದ ದೂರವಾಗಲು ಮುಂದಾದಾಗ ಅದು ಪುರುಷರ ಅಹಂಕಾರವನ್ನು ಗಾಯಗೊಳಿಸುತ್ತದೆ. ಆಗ ಅವರು ವಿನಾಶದ ಹಾದಿ ತುಳಿಯುತ್ತಾರೆ ಎನ್ನುತ್ತಾರೆ ಆಮಿ. ವಿಚ್ಛೇದನ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ನಿಜವಾದ ಯುದ್ಧ ಶುರುವಾಗುತ್ತದೆ ಎನ್ನುವ ಆಮಿ, ಕೋರ್ಟ್ ನಲ್ಲಿ ಸಾವಿರಾರು ಡಾಲರ್ ಕಳೆದುಕೊಂಡು, ನನ್ನ ವಿಚ್ಛೇದನಕ್ಕೆ ತಿಂಗಳ ಸಮಯ ಹಾಳು ಮಾಡಿದ ಅನುಭವ ನನಗಿದೆ ಎಂದಿದ್ದಾರೆ. ಆದ್ರೆ ನಾನು ಭಾಗ್ಯಶಾಲಿ. ಈ ಪ್ರಕ್ರಿಯೆಯಲ್ಲಿ ನಾನು ದಿವಾಳಿ ಆಗ್ಲಿಲ್ಲ, ಬೇರೆಯವರ ಜೊತೆ ಮಲಗುವ ಸ್ಥಿತಿ ಬರಲಿಲ್ಲ ಎನ್ನುವ ಆಮಿ, ಸಾವಿರಾರು ಮಂದಿ ಈ ದುಸ್ಥಿತಿಯಲ್ಲಿದ್ದಾರೆ. ಅವರಿಗೆ ನೆರವಾಗಲು ನಾನು ವಿಚ್ಛೇದನ ಕೋಚ್ ಆಗಿದ್ದೇನೆ ಎನ್ನುತ್ತಾರೆ.
ಜನರನ್ನು ಕಠಿಣ ಪರಿಸ್ಥಿತಿಯಿಂದ ಹೊರಗೆ ತರುವುದು ನನ್ನ ಮೂಲ ಉದ್ದೇಶ. ನೀವು ಯಾರೊಂದಿಗಾದ್ರೂ ಡೇಟಿಂಗ್ ಮಾಡ್ತಿದ್ದು, ಅವರಲ್ಲಿ ನಾರ್ಸಿಸಿಸ್ಟಿಕ್ ನಡವಳಿಕೆ ಕಂಡು ಬಂದಲ್ಲಿ ಅಥವಾ ಏನೋ ಸರಿ ಇಲ್ಲ ಅನ್ನಿಸಿದ್ರೆ ಆ ವ್ಯಕ್ತಿ ಜೊತೆ ಕಾನೂನು ರೀತಿಯಲ್ಲಿ ಬಂಧಿಸಲ್ಪಡಬೇಡಿ. ನೀವು ಹೀಗೆ ಮಾಡಿದ್ರೆ ಅದು ನಿಮ್ಮ ಜೀವನದ ದೊಡ್ಡ ತಪ್ಪು ಎನ್ನುತ್ತಾರೆ ಆಮಿ. ಹಾಗೇ ನೀವು ಸ್ವಂತ ಹಣ, ದುಡಿಮೆಯನ್ನು ಹೊಂದಿರಿ ಎನ್ನುವ ಆಮಿ, ಇದು ನಿಮ್ಮನ್ನು ಬಂಧನದಿಂದ ಹೊರಗಿಡುತ್ತದೆ ಎನ್ನುತ್ತಾರೆ.
ಶೀಘ್ರದಲ್ಲೇ ಸಾರಾ ತೆಂಡೂಲ್ಕರ್ ಮತ್ತು ಶುಬ್ಮನ್ ಗಿಲ್ ಮದ್ವೆ! ಗುಟ್ಟು ಬಿಟ್ಟು ಕೊಟ್ಟ ಯುಎಇ ಆಟಗಾರ!
ವಿಚ್ಛೇದನದ ಸಮಯದಲ್ಲಿ ಸಂಗಾತಿಯ ನಾರ್ಸಿಸಿಸ್ಟಿಕ್ ನಡವಳಿಕೆ ಕಾರಣಕ್ಕೆ ಜೈಲಿಗೆ ಹೋದ ಮಹಿಳೆಯರನ್ನು ನೋಡಿದ ಆಮಿ, ಮದುವೆಗೆ ಓಕೆ ಎನ್ನುವ ಮುನ್ನ ಕೆಲವೊಂದನ್ನು ಗಮನಿಸಿ ಎನ್ನುತ್ತಾರೆ.
ನಿಮ್ಮನ್ನು ಪ್ರೀತಿಸುವ ಹಾಗೂ ಬೇಗ ಮದುವೆಯಾಗಲು ಬಯಸುವ ವ್ಯಕ್ತಿ ಜೊತೆ ದೀರ್ಘ ಸಮಯ ಡೇಟ್ ಮಾಡಿ. ಅವರ ಸ್ವಭಾವ ಅರಿತುಕೊಳ್ಳಿ. ನಂತ್ರ ಮುಂದಿನ ನಿರ್ಧಾರಕ್ಕೆ ಬನ್ನಿ ಎನ್ನುತ್ತಾರೆ ಆಮಿ.
ಸಂಗಾತಿ ಸಣ್ಣ ವಿಷ್ಯಕ್ಕೂ ಸುಳ್ಳು ಹೇಳ್ತಿದ್ದರೆ ಅವರನ್ನು ನಂಬಲು ಹೋಗ್ಬೇಡಿ ಎನ್ನುವ ಆಮಿ, ಮಾಜಿಗಳನ್ನು ಹುಚ್ಚರೆನ್ನುವ ಹಾಗೂ ತಮ್ಮನ್ನು ಪೀಡಿತರಂತೆ ಬಿಂಬಿಸುವ ಜನರನ್ನು ಕೂಡ ನಂಬಬೇಡಿ ಎನ್ನುತ್ತಾರೆ ಆಮಿ. ಅವರು ಬೇರೆಯವರನ್ನು ಹೇಗೆ ನೋಡ್ತಾರೆ ಎಂಬುದನ್ನು ಪರಿಗಣಿಸಬೇಕು ಹಾಗೆ ಒಮ್ಮೆ ಮೋಸ ಮಾಡಿದವರು ಯಾವಾಗ್ಲೂ ಮೋಸಗಾರರೇ ಎಂಬುದು ನೆನಪಿರಲಿ ಎನ್ನುತ್ತಾರೆ ಆಮಿ.