Asianet Suvarna News Asianet Suvarna News

ಮನೆಯಿಂದ ದೂರವಿರೋದು ಕಷ್ಟ, Homesickness ಹೋಗಲಾಡಿಸುವುದು ಹೇಗೆ ?

ಊರಲ್ಲಿದ್ದಾಗ ಎಜುಕೇಷನ್, ಜಾಬ್‌ ನೆಪದಲ್ಲಿ ಮನೆ ಬಿಟ್ಟು. ಸಿಟಿ ಸೇರಿ ಲೈಫ್ ಎಂಜಾಯ್ ಮಾಡೋಣ ಅನ್ಸುತ್ತೆ. ನಗರ ಸೇರಿದಾಗ ಮತ್ತೆ ಮತ್ತೆ ಮನೆಯ ನೆನಪು ಕಾಡುತ್ತೆ. ಬಹುತೇಕರನ್ನು ಕಾಡೋ ಈ ಹೋಮ್ ಸಿಕ್‌ನೆಸ್ ಹೋಗಲಾಡಿಸುವುದು ಹೇಗೆ ?

Difficult Being Away From Home, Ways To Overcome Homesickness Vin
Author
Bengaluru, First Published Jul 12, 2022, 1:24 PM IST

ಜೀವನದಲ್ಲಿ ಅನೇಕ ಬಾರಿ, ನಾವು ಸ್ವಯಂ ಬೆಳೆಯಬೇಕಾದರೆ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿದ್ಯಾಭ್ಯಾಸ, ಉದ್ಯೋಗದ ನಿಮಿತ್ತ ತಮ್ಮ ಹುಟ್ಟೂರನ್ನು ಬಿಟ್ಟು ಬೇರೆ ಊರಿಗೆ ತೆರಳಬೇಕಾಗುತ್ತದೆ. ಯಾಕೆಂದರೆ ಅಲ್ಲಿ ಕೆಲಸ ಮತ್ತು ಅಧ್ಯಯನಕ್ಕೆ ಸಂಬಂಧಿಸಿದಂತೆ ಉತ್ತಮ ಅವಕಾಶಗಳಿವೆ. ಆದರೆ ಇದೆಲ್ಲಾ ತಿಳಿದಿದ್ದರೂ ಮನೆಯಿಂದ ಹೊರಬರುವುದು ಮತ್ತು ಬೇರೆ ನಗರ ಅಥವಾ ದೇಶದಲ್ಲಿ ವಾಸಿಸುವುದು ಬಹಳಷ್ಟು ಮಂದಿಗೆ ಪ್ರಯಾಸವಾಗಿದೆ. ಹೀಗಾಗಿಯೇ ಹೆಚ್ಚಿನವರು ಮನೆಮಂದಿ, ಫ್ರೆಂಡ್ಸ್‌, ಸಂಬಂಧಿಕರು, ಊರು ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಾರೆ. ನಮ್ಮ ಪ್ರೀತಿಪಾತ್ರರಿಂದ ಮತ್ತು ನಾವು ಬೆಳೆದ ಸುಂದರವಾದ ಮನೆಯಿಂದ ದೂರವಿರುವುದು ಎಲ್ಲರ ಪಾಲಿಗೂ ದುಃಖದ ಕ್ಷಣವಾಗಿದೆ. ಹಲವರನ್ನು ಕಾಡುವ ಈ ಹೋಮ್‌ ಸಿಕ್‌ನೆಸ್‌ನ್ನು ಹೋಗಲಾಡಿಸುವುದು ಹೇಗೆ ?

ಅಪೋಲೋ ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ಮತ್ತು ಮನೋವೈದ್ಯಶಾಸ್ತ್ರದ ಹಿರಿಯ ಸಲಹೆಗಾರರಾದ ಡಾ.ಸಂದೀಪ್ ವೋಹ್ರಾ, ಹೋಮ್ ಸಿಕ್‌ನೆಸ್ ಹೋಗಲಾಡಿಸಲು ಏನು ಮಾಡಬಹುದು ಎಂಬ ಕುರಿತಾಗಿ ಕೆಲವೊಂದು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

Monsoon Remedies : ಮನೆ ತೇವಗೊಂಡು ಗಬ್ಬು ವಾಸನೆ ಬರ್ತಿದ್ಯಾ?

ಹೊಸ ಹವ್ಯಾಸ ರೂಢಿಸಿಕೊಳ್ಳಿ: ಹೊಸ ಹೊಸ ಹವ್ಯಾಸ (Habit)ದಲ್ಲಿ ತೊಡಗಿಸಿಕೊಳ್ಳುವ ಅಭ್ಯಾಸ ಯಾವಾಗಲೂ ನಮ್ಮ ಸಮಯವನ್ನು ಉತ್ತಮವಾದ ರೀತಿಯಲ್ಲಿ ಕಳೆಯಲು ನೆರವಾಗುತ್ತದೆ. ಹೊಸ ಹವ್ಯಾಸಗಳು ಹೊಸ ವಿಚಾರವನ್ನು ಕಲಿಸುವುದರ ಜೊತೆಗೆ ಮನಸ್ಸಿಗೆ ಖುಷಿ ನೀಡುತ್ತವೆ.  ಬೇಸರ, ಉದಾಸೀನ ಭಾವದಿಂದ ನಿಮ್ಮನ್ನು ದೂರವಿಡುತ್ತದೆ. ಪುಸ್ತಕಗಳನ್ನು ಓದುವುದು, ನೃತ್ಯ ಕಲಿಯುವುದು, ಡ್ರಾಯಿಂಗ್ ಅಭ್ಯಾಸ ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಯಾವಾಗಲೂ ಸಕ್ರಿಯರಾಗಿರಿ: ಸಕ್ರಿಯವಾಗಿರುವುದು ಮತ್ತು ಯಾವುದೇ ಕೆಲಸವನ್ನು ಮಾಡಲು ಸಿದ್ಧವಾಗಿರುವುದು ಯಾವಾಗಲೂ ಬೋರಿಂಗ್ ಮನೋಭಾವವನ್ನು ಹೋಗಲಾಡಿಸಲು ಉತ್ತಮ ಉಪಾಯವಾಗಿದೆ. ಆಲಸ್ಯ ಮತ್ತು ಸೋಮಾರಿಯಾಗಿರುವುದು ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ಯಾವಾಗಲೂ ಸಕ್ರಿಯವಾಗಿರಿ. ಮನೆಯ, ಕಚೇರಿಯ ಅಥವಾ ಇತರ ಕೆಲಸಗಳಲ್ಲಿ ಖುಷಿಯಿಂದ ತೊಡಗಿಸಿಕೊಳ್ಳಿ. ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ. ಯಾಕೆಂದರೆ ಇದು ಇರುವ ಖುಷಿಯನ್ನೂ ಕಿತ್ತುಕೊಳ್ಳುತ್ತದೆ. 

ಸಾಧ್ಯವಾದಷ್ಟೂ ಸುತ್ತಾಡಿ: ನಾಲ್ಕು ಗೋಡೆಯ ಮಧ್ಯೆ ಸಮಯ ಕಳೆಯುವ ಅಭ್ಯಾಸ ನೀರಸವಾಗಿದೆ. ಇದು ರಜಾ ಸಮಯದಲ್ಲೂ ಮನೆಯನ್ನು ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಸಾಧ್ಯವಾದಷ್ಟೂ ಮನೆಯಿಂದ ಹೊರಗಿರಲು ಅಭ್ಯಾಸ ಮಾಡಿಕೊಳ್ಳಿ. ಅದು ಪಾರ್ಟಿ, ಕ್ಲಬ್‌, ಶಾಪಿಂಗ್ ಯಾವ ರೀತಿಯೂ ಆಗಿರಬಹುದು. ಇಂಥಾ ಔಟಿಂಗ್ ಇಷ್ಟವಿಲ್ಲದೇ ಇದ್ದರೆ ಪ್ರಕೃತಿಯ ನಡುವೆ ಸಮಯ ಕಳೆಯಿರಿ. ಹೊಸ ಹೊಸ ಪ್ರದೇಶಗಳಿಗೆ ವಿಸಿಟ್ ಮಾಡಿ. ಹೊಸ ವಿಚಾರಗಳನ್ನು ತಿಳಿಯಿರಿ. ಸೈಕ್ಲಿಂಗ್‌, ಲಾಂಗ್ ಡ್ರೈವ್ ಸಹ ಹೋಗಬಹುದು. ಇದು ದೇಹವನ್ನು ಮಾತ್ರವಲ್ಲ ಮನಸ್ಸನ್ನೂ ರಿಫ್ರೆಶ್‌ಗೊಳಿಸುತ್ತದೆ. 

ಬೆಂಗಳೂರಿಗರೇ ಬೀಚ್ ನೋಡಬೇಕಂದ್ರೆ ಈ ಪ್ಲೇಸಿಗೆ ವಿಸಿಟ್ ಮಾಡ್ಬಹುದು!

ಮನೆಯಲ್ಲೇ ಆಹಾರ ತಯಾರಿಸಿ: ಯಾವಾಗಲೂ ಫುಡ್‌ ಆರ್ಡರ್ ಮಾಡುವ ಬದಲು ಮನೆಯಲ್ಲಿಯೇ ಆಹಾರವನ್ನು ಮಾಡಲು ಪ್ರಯತ್ನಿಸಿ. ಅಡುಗೆ (Cooking) ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಇದು ಸರಿಯಾದ ರೀತಿಯಲ್ಲಿ ಸಮಯವನ್ನು ಕಳೆಯಲು ನೆರವಾಗುತ್ತದೆ. ಇದು ಮನಸ್ಸಿನೊಳಗೂ ಹೆಚ್ಚು ಧನಾತ್ಮಕತೆಯನ್ನು ತುಂಬುತ್ತದೆ.  ಮನೆಯಲ್ಲಿ ತಯಾರಿಸಿದ ಪಾಕವಿಧಾನಗಳನ್ನು ತಿನ್ನುವುದು ಆರೋಗ್ಯಕರ ಆಹಾರವನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಸಂಸ್ಕೃತಿಯೊಂದಿಗೆ ಸಂಪರ್ಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 

ಮನೆಯವರೊಂದಿಗೆ ಸಂಪರ್ಕದಲ್ಲಿರಿ: ಯಾವಾಗಲೂ ಕುಟುಂಬ (Family) ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ. ಕಾಲ್‌, ಮೆಸೇಜ್‌, ವೀಡಿಯೊ ಕರೆಗಳ ಮೂಲಕ ಮಾತನಾಡುತ್ತಿದ್ದರೆ ಮನೆಯ ನೆನಪು ಹೆಚ್ಚು ಕಾಡುವುದಿಲ್ಲ. ವಿವಿಧ ಕಾರ್ಯಗಳೊಂದಿಗೆ ಸ್ನೇಹಿತರು ಮತ್ತು ಕುಟುಂಬಗಳಿಗಾಗಿ ಆನ್‌ಲೈನ್ ಈವೆಂಟ್ ಅನ್ನು ಆಯೋಜಿಸುವುದು ಅಥವಾ ಹೊಸ ಆನ್‌ಲೈನ್ ಮಲ್ಟಿಪ್ಲೇಯರ್ ಆಟಗಳನ್ನು ಪ್ರಯತ್ನಿಸುವುದು ಜನರು ಸಂಪರ್ಕಿಸಲು ಮತ್ತು ಆನಂದಿಸಲು ಕೆಲವು ಹೊಸ ಟ್ರೆಂಡ್‌ಗಳಾಗಿವೆ.

Follow Us:
Download App:
  • android
  • ios