ವಿವಾಹವಾಗುವ ವರನಿಗೆ ಅಥವಾ ವಧುವಿಗೆ ತಾನು ಮದುವೆಯಾಗುವ ಹುಡುಗಿ ಅಥವಾ ಹುಡುಗ ಹೀಗೆಯೇ ಇರಬೇಕೆಂಬ ಹಲವು ಬೇಡಿಕೆಗಳಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಐಪಿಎಸ್ ಅಧಿಕಾರಿಯೊಬ್ಬರ ಪುತ್ರಿ ತಾನು ವಿವಾಹವಾಗಬೇಕಾದ ಗಂಡು ಹೀಗೆಯೇ ಇರಬೇಕು ಎಂದು ನೀಡಿದ ಮಾನದಂಡಗಳು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮೇಲ್ವರ್ಗದ ವರ ಅಥವಾ ಕೋಟಿ ಹತ್ತಿರದ ಆದಾಯ

ವಿವಾಹ ವೇದಿಕೆಯೊಂದರ ಸಿಇಒ ಆಗಿರುವ ಒಂಡ್ರಿಲಾ ಕಪೂರ್ ಅವರು ಇತ್ತೀಚೆಗಷ್ಟೇ ಮದುವೆಯಾಗುವುದಕ್ಕೆ ವಿಚ್ಚೇದಿತ ವ್ಯಕ್ತಿಯೊಬ್ಬ ಟ್ಟ ವಿಭಿನ್ನ ಬೇಡಿಕೆಯ ಬಗ್ಗೆ ಹೇಳಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು. ಅವರು ಮಾಡಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ಅವರು ಯುವತಿಯೊಬ್ಬಳ ವಿಚಿತ್ರ ಬೇಡಿಕೆ ಬಗ್ಗೆ ಹೇಳಿಕೊಂಡಿದ್ದು, ಈ ವಿಚಾರವೂ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Add Asianetnews Kannada as a Preferred SourcegooglePreferred

ವಿವಾಹವಾಗುವ ವರನಿಗೆ ಅಥವಾ ವಧುವಿಗೆ ತಾನು ಮದುವೆಯಾಗುವ ಹುಡುಗಿ ಅಥವಾ ಹುಡುಗ ಹೀಗೆಯೇ ಇರಬೇಕೆಂಬ ಹಲವು ಬೇಡಿಕೆಗಳಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಐಪಿಎಸ್ ಅಧಿಕಾರಿಯೊಬ್ಬರ ಪುತ್ರಿ ತಾನು ವಿವಾಹವಾಗಬೇಕಾದ ಗಂಡು ಹೀಗೆಯೇ ಇರಬೇಕು ಎಂದು ನೀಡಿದ ಮಾನದಂಡಗಳು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿವಾಹ ವೇದಿಕೆಯ ಸಿಇಒ ಆದ ಒಂಡ್ರಿಲಾ ಅವರೇ ಈ ವಿಚಿತ್ರ ಬೇಡಿಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲ ಹೇಳಿಕೊಂಡಿದ್ದಾರೆ.

ಹಾಗಿದ್ದರೆ ವರನ ಬಗ್ಗೆ ಆಕೆಗಿದ್ದ ಬೇಡಿಕೆ ಏನು?

ಆಕೆಯನ್ನು ಮದುವೆಯಾಗುವ ವರ ಮೇಲ್ವರ್ಗದ ಜಾತಿಯವನಾಗಿರಬೇಕು ಅಥವಾ ಆತನಿಗೆ 80 ಲಕ್ಷ ರೂಪಾಯಿ ಆದಾಯ ಇರಬೇಕು ಎಂಬುದು ಆಕೆಯ ಬೇಡಿಕೆ ಆಗಿತ್ತು. ಆಕೆ ತನ್ನ ಜಾತಿಯ ಹೊರಗೆ ಮದುವೆಯಾಗಲು ಸಿದ್ಧಳಿದ್ದಾಳೆ ಆದರೆ ಅದು ಯಾವಾಗ ಎಂದರೆ ವರ ಉನ್ನತ ಜಾತಿಯವನಾಗಿದ್ದಾಗ ಅಥವಾ ಆತ 80 ಲಕ್ಷ ವೇತನ ಗಳಿಸುತ್ತಿದ್ದರೆ ಮಾತ್ರ.

ಡೇಟ್ ಕ್ರೀವ್ ಎಂಬ ವಿವಾಹ ವೇದಿಕೆಯನ್ನು ನಡೆಸುತ್ತಿರುವ ಒಂಡ್ರಿಲಾ ಕಪೂರ್ ಅವರು ಈ ವಿಚಾರವನ್ನು ತಮ್ಮ ಲಿಂಕ್ಡಿನ್‌ನಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಹೀಗೆ ವಿಚಿತ್ರ ಬೇಡಿಕೆ ಇಟ್ಟ ವಧು ಐಪಿಎಸ್ ಅಧಿಕಾರಿ ತಂದೆ ಹಾಗೂ ಶಿಕ್ಷಕಿಯೊಬ್ಬರ ಪುತ್ರಿಯಾಗಿದ್ದಳು. ಆಕೆಯ ಕೌಟುಂಬಿಕ ಹಿನ್ನೆಲೆ ಶೈಕ್ಷಣಿಕವಾಗಿ ತುಂಬಾ ಚೆನ್ನಾಗಿಯೇ ಇತ್ತು. ಆದರೆ ಇಷ್ಟೊಂದು ಮುಂದುವರೆದಿದ್ದರೂ ವರನ ಬಗ್ಗೆ ಅವರಿಟ್ಟ ಬೇಡಿಕೆಗಳು ತುಂಬಾ ಬಾಲಿಶವೆನಿಸಿವೆ ಎಂಬುದು ಅನೇಕರ ಅಭಿಪ್ರಾಯವಾಗಿದೆ. ಆಕೆ ತಾನು ಮೇಲ್ವರ್ಗದ ಜಾತಿಗಳಾದ ಬ್ರಾಹ್ಮಣ ಹಾಗೂ ರಾಜಪೂತ್ ಸಮುದಾಯದ ವರರನ್ನು ಮಾತ್ರ ಮದುವೆಯಾಗುವುದಕ್ಕೆ ಸಿದ್ಧಳಿದ್ದೇನೆ ಎಂದು ಹೇಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದರ ಹೊರತಾಗಿ ವರನಿಗೆ 80 ಲಕ್ಷ ವೇತನವಿದ್ದರೂ ಆಕೆ ಮದುವೆಗೆ ಸಿದ್ಧಳಿದ್ದಳು.

ಇದನ್ನೂ ಓದಿ: ಅತ್ಯಂತ ವೇಗದ ಪ್ರಾಣಿ ಚೀತಾ ಜೀವಿತಾವಧಿಯ ಶೇಕಡಾ 90ರಷ್ಟು ಕಾಲ ವಿಶ್ರಾಂತಿಯಲ್ಲೇ ಕಳೆಯೋದೇಕೆ?

32 ವರ್ಷದ ತಮ್ಮದೇ ಫ್ಯಾಷನ್ ಕಂಪನಿ ನಡೆಸುತ್ತಿರುವ ಮಹಿಳೆ ಈ ರೀತಿ ಹೇಳಿದ್ದಾಳೆ ಎಂದು ಒಂಡ್ರಿಲಾ ಹೇಳಿದ್ದಾರೆ. ಪೇಪರ್‌ನಲ್ಲಿ ನೋಡುವುದಕ್ಕೆ ಆಕೆ ಸುಶಿಕ್ಷಿತ ಕುಟುಂಬದಿಂದ ಬಂದಿದ್ದಾಳೆ. ತಂದೆ ಐಪಿಎಸ್ ತಾಯಿ ಟೀಚರ್, ಆದರೂ ಆಕೆ ರೀತಿಯ ಕಂಡೀಷನ್‌ಗಳನ್ನು ನಮ್ಮ ಮುಂದಿಟ್ಟಿದ್ದಾಳೆ. ಬ್ರಾಹ್ಮಿನ್, ರಾಜಪೂತ್ ಹಾಗೂ ಕೇವಲ ಉನ್ನತಮಟ್ಟದ ಜಾತಿಗಳನ್ನಷ್ಟೇ ಆಕೆ ಮದುವೆ ಆಗುವುದಕ್ಕೆ ಬಯಸಿದ್ದಾಳೆ ಎಂದು ಒಂಡ್ರಿಲಾ ಹೇಳಿಕೊಂಡಿದ್ದಾಳೆ.

ಜಾತಿ ಅಥವಾ ಹಣ ಯಾವುದಾದರೂ ಒಂದು ಪ್ರಬಲವಾಗಿರಬೇಕು ಎಂಬುದು ಆಕೆಯ ಅಭಿಪ್ರಾಯವಾಗಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ಆಕೆಯ ಬೇಡಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಮದುವೆ ಕೇವಲ ಹಣದ ವರ್ಗಾವಣೆಯಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಇದು ಭಾರತದಲ್ಲಿ ಅರೆಂಜ್ ಮದುವೆಗಳಲ್ಲಿ ಹೀಗೆಯೇ ಇರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಪ್ರೀತಿಗಾಗಿ ಮದುವೆ ಆಗುವುದು ಪಶ್ಚಿಮದ ಸಂಪ್ರದಾಯ. ಆದರೆ ಭಾರತದಲ್ಲಿ ಇದು ವಿಭಿನ್ನ, ಇದು ಎರಡು ಕುಟುಂಬಗಳ ನಡುವಿನ ಆರ್ಥಿಕ, ಸಾಮಾಜಿಕ ಸ್ಥಾನಮಾನದ ಮೇಲೆ ನಿಂತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ ಕೆಲವರು ಈ ವಿವಾಹ ವೇದಿಕೆಯ ಒಂಡ್ರಿಲಾ ಅವರನ್ನೇ ಬೈದಾಡಿದ್ದು, ತಮ್ಮ ಸೈಟ್ ಬಗ್ಗೆ ಪ್ರಮೋಟ್ ಮಾಡುವುದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ಕೈದಿ ಸಾವು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೇರ್ ಟೇಕರ್ ಮಹಿಳೆಯಿಂದ ಹನಿಟ್ರ್ಯಾಪ್ ಆರೋಪ!