ಪ್ರೇಮಿಗಳ ದಿನ ಪ್ರತಿ ಲವರ್ಸ್‌ಗೂ ಸ್ಪೆಷಲ್ ಡೇ. ಈ ದಿನ ತಮ್ಮ ಸಂಗಾತಿಯೊಂದಿಗೆ ಖುಷಿಯಿಂದ ಸಮಯ ಕಳೆಯಬೇಕು ಎಂದು ಅಂದುಕೊಳ್ಳುತ್ತಾರೆ. ಆದ್ರೆ ಕೆಲವೊಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆ ಇರದ ಕಾರಣ ಕದ್ದುಮುಚ್ಚಿ ಭೇಟಿಯಾಗಬೇಕಾಗುತ್ತದೆ. ಮನೆಯ ಟೆರೇಸ್‌ನಲ್ಲಿ ಗಪ್‌ಚುಪ್ ಅಂತ ಪ್ರೇಮಿಯನ್ನು ಭೇಟಿ ಮಾಡ್ತಿದ್ದ ಹುಡುಗಿ ತಾಯಿ ಕೈಗೇನೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. 

ವಾಲೆಂಟೈನ್ಸ್‌ ಡೇ ಕಳೆದು ದಿನಗಳೇ ಕಳೆಯಿತು. ಆದರೆ ಈ ಪ್ರೇಮಿಗಳ ದಿನವನ್ನು ಸ್ಪೆಷಲ್ ಆಗಿಸಲು ಕೆಲವೊಂದೆಡೆ ಲವರ್ಸ್ ಮಾಡಿದ ಸ್ಪೆಷಲ್ ಆರೇಂಜ್‌ಮೆಂಟ್ಸ್ ಇನ್ನೂ ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ. ಪ್ರೇಮಿಗಳ ದಿನ ಜಗತ್ತಿನಾದ್ಯಂತ ಜೋಡಿಗಳು ಭಿನ್ನ-ವಿಭಿನ್ನವಾಗಿ ಆಚರಿಸಿದ್ದಾರೆ. ಕೆಲವೊಬ್ಬರು ವಿಭಿನ್ನ ರೀತಿಯಲ್ಲಿ ಪ್ರಪೋಸ್ ಮಾಡಿದರೆ, ಇನ್ನು ಕೆಲವರು ಅತ್ಯದ್ಭುತ ಡೆಕೊರೇಷನ್ ಮೂಲಕ ತಮ್ಮ ಪ್ರೇಮಿಯನ್ನು ಖುಷಿಪಡಿಸಿದ್ದಾರೆ. ಆದರೆ ಈ ದಿನ ಎಲ್ಲರ ಪಾಲಿಗೂ ಖುಷಿಯಿಂದ ಕಳೆಯುವುದಿಲ್ಲ. ಮನೆಯಲ್ಲಿ ಹೇಳದೆ ಕದ್ದು ಮುಚ್ಚಿ ಪ್ರೀತಿ ಮಾಡುವವರು ಈ ದಿನ ತಮ್ಮ ಸಂಗಾತಿಯನ್ನು ಭೇಟಿ ಮಾಡಲು ಒದ್ದಾಡುವಂತಾಗುತ್ತದೆ. ಹಾಗೆಯೇ ತನ್ನ ಮನೆ ಮಂದಿಗೆ ತಿಳಿಯದಂತೆ ಮನೆಯ ಟೆರೇಸ್‌ನಲ್ಲೇ ಪ್ರೇಮಿಯನ್ನು ಭೇಟಿ ಮಾಡಿದ ಹುಡುಗಿ ತನ್ನ ತಾಯಿಯ ಕೈಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. 

ಪ್ರೇಮಿಗಳ ದಿನ (Valentines day) ಎಲ್ಲೆಡೆ ಲವ್ ಬರ್ಡ್‌ಗಳು ಓಡಾಡುವುದನ್ನು ನೋಡಬಹುದು. ತಮ್ಮ ಪ್ರೀತಿಪಾತ್ರರನ್ನು ಈ ದಿನ ಭೇಟಿ ಮಾಡಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೀಗಿರುವಾಗ ಆಕೆಯೂ ಹಾಗೆ ಮಾಡಿದಳು. ಮನೆಯವರ ಒಪ್ಪಿಗೆಯಿಲ್ಲದೆ ಮನೆಯಿಂದ ಹೊರ ಹೋಗುವುದು ಅಸಾಧ್ಯವೆಂದು ತಿಳಿದು ಮನೆಯ ಟೆರೇಸ್‌ನಲ್ಲಿ ಲವರ್‌ನ್ನು ಭೇಟಿಯಾದಳು. ಆದರೆ ಅಷ್ಟರಲ್ಲೇ ತನ್ನ ತಾಯಿ (Mother) ಕೈಗೆ ಸಿಕ್ಕಿಬಿದ್ದಿದ್ದಾಳೆ. ಉತ್ತರಭಾರತದಲ್ಲಿ ಈ ಘಟನೆ ನಡೆದಿದೆ. ಮುಂದೆ ಏನಾಯಿತು ಎಂದು ಆಶ್ಚರ್ಯಪಡುತ್ತೀರಾ? 

ಮುತ್ತಿನ ಗಮ್ಮತ್ತು..ನೀರೊಳಗೆ ಬರೋಬ್ಬರಿ 4 ನಿಮಿಷ ಚುಂಬಿಸಿ ಗಿನ್ನಿಸ್ ದಾಖಲೆ ಬರೆದ ಜೋಡಿ

ಮಗಳಿಗೂ, ಬಾಯ್‌ಫ್ರೆಂಡ್‌ಗೂ ತಾಯಿಯಿಂದ ಚಪ್ಪಲಿ ಪೂಜೆ
ತಾಯಿಯು ತನ್ನ ಚಪ್ಪಲಿ (Slippers)ಗಳನ್ನು ಎತ್ತಿಕೊಂಡು ಇಬ್ಬರನ್ನು ಹೊಡೆಯಲು ಹಿಂಜರಿಯಲಿಲ್ಲ, ಬಳಕೆದಾರರು ಇಡೀ ಘಟನೆಯ ವೀಡಿಯೊವನ್ನು ಇಂಟರ್‌ನೆಟ್‌ನಲ್ಲಿ ಹಂಚಿಕೊಂಡ ನಂತರ ಘಟನೆ ಬೆಳಕಿಗೆ ಬಂದಿದೆ. ವೈರಲ್ ಆಗಿರುವ ವೀಡಿಯೊವನ್ನು ಅವರ ನೆರೆಹೊರೆಯವರು ರೆಕಾರ್ಡ್ ಮಾಡಿದ್ದಾರೆ. ಇದರಲ್ಲಿ ಟೆರೇಸ್‌ಗೆ ಆಗಮಿಸುವ ತಾಯಿ ಮೂಲೆ ಮೂಲೆಯಲ್ಲಿ ಹುಡುಕಿ ಬಾಯ್‌ಫ್ರೆಂಡ್‌ನ್ನು ಕಂಡು ಹುಡುಕುತ್ತಾಳೆ. ನಂತರ ಕಾಲಿನಿಂದ ಚಪ್ಪಲಿಯನ್ನು ತೆಗೆದು ಆತನಿಗೆ ಸರಿಯಾಗಿ ಹೊಡೆಯುತ್ತಾಳೆ. ಆತ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ. ಆ ತಾಯಿ ನಂತರ ಮಗಳನ್ನೂ ಕರೆದು ಅವಳಿಗೂ ಚಪ್ಪಲಿಯಲ್ಲಿ ಹೊಡೆಯುವುದನ್ನು ನೋಡಬಹುದು.

ವೀಡಿಯೊವನ್ನು ಫೆಬ್ರವರಿ 14 ರಂದು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. 'ಆಂಟಿ, ಮಗಳ ವ್ಯಾಲೆಂಟೈನ್ಸ್ ಡೇ ಪ್ಲಾನ್‌ನ್ನು ಹಾಳು ಮಾಡಿದರು' ಎಂದು ವೀಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರೋ ವೀಡಿಯೋಗೆ 1 ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಲಭಿಸಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಈ ತಾಯಿ ಶೀಘ್ರವೇ ತನ್ನ ಮಗಳಿಗೆ (Daughter) ಮದುವೆ ಮಾಡಿ ಕಳುಹಿಸುತ್ತಾರೆ ಎಂದಿದ್ದಾರೆ. ಇನ್ನು ಕೆಲವರು, ಸಿಂಗಲ್‌ ಆಗಿರುವವರು ಇದನ್ನು ನೋಡಿ ಖುಷಿ ಪಡಿ ಎಂದಿದ್ದಾರೆ. ಮತ್ತೊಬ್ಬರು 'ಹುಡುಗನ ಸ್ನೇಹಿತನೇ ಈ ವಿಷಯವನ್ನು ಲೀಕ್ ಮಾಡಿರಬಹುದು' ಎಂದು ಕಾಮೆಂಟಿಸಿದ್ದಾರೆ.

Valentines Day: ಮದುವೆ ಪ್ರಮಾಣಪತ್ರವನ್ನು ತನ್ನ ಕೈಗೆ ಹಚ್ಚೆ ಹಾಕಿಸ್ಕೊಂಡು ಪತ್ನಿಗೆ ಸರ್‌ಪ್ರೈಸ್‌ ನೀಡಿದ ಪತಿ..!

ಹಲವಾರು ಬಳಕೆದಾರರು ಕಾಮೆಂಟ್‌ಗಳ ವಿಭಾಗಕ್ಕೆ ತೆಗೆದುಕೊಂಡು ತಾಯಿ ಶೀಘ್ರದಲ್ಲೇ ತನ್ನ ಮಗಳನ್ನು ಮದುವೆಯಾಗುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಇದು ಮತ್ತಷ್ಟು ಸ್ಮರಣಿಕೆ ಉತ್ಸವವನ್ನು ಹುಟ್ಟುಹಾಕಿತು, ಇದರಲ್ಲಿ ಸಿಂಗಲ್ಸ್ ಮೈತ್ರಿಯನ್ನು ರಚಿಸಿತು ಮತ್ತು ಹುಡುಗನನ್ನು ಹೊಡೆಯಲು ತಾಯಿಯನ್ನು ಪ್ರೋತ್ಸಾಹಿಸಿತು.

Scroll to load tweet…