Love Dating: 30ನೇ ವಯಸ್ಸಿನಲ್ಲಿ ಡೇಟ್‌ ಮಾಡಿದ್ರೆ ಹೇಗಿರುತ್ತದೆ ಎಂದು ದೆಹಲಿ ಮೂಲದ ಯೋಗ ಟೀಚರ್‌ ಅವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. 

ದೆಹಲಿ ಮೂಲದ ಯೋಗ ಟೀಚರ್‌ ಶಿಪ್ರಾ ಗೋಯಲ್‌ ಅವರು 30ನೇ ವಯಸ್ಸಿನಲ್ಲಿ ಓರ್ವ ಹುಡುಗನ ಜೊತೆ ಡೇಟ್‌ ಮಾಡಿದ್ದಾರೆ. ಮೀಟ್‌ ಮಾಡಿದ್ಮೇಲೆ ಆತನ ವರ್ತನೆ ಅವರಿಗೆ ಬೇಸರ ತರಿಸಿದೆ. ಏನದು?

ಶಿಪ್ರಾ ಗೋಯಲ್‌ ಹೇಳಿದ್ದೇನು?

“ಕಳೆದ ಮೂರು ವಾರಗಳಿಂದ ಒಂದು ಹುಡುಗನ ಜೊತೆ ಇನ್‌ಸ್ಟಾಗ್ರಾಮ್‌, ಮೆಸೇಜ್‌, ಫೋನ್‌ನಲ್ಲಿ ಮಾತನಾಡುತ್ತಿದ್ದೆ. ಇಂಟರ್‌ನೆಟ್‌, ಸೋಶಿಯಲ್‌ ಮೀಡಿಯಾ ಸೇರಿದಂತೆ ನಾವು ತುಂಬ ಚೆನ್ನಾಗಿ ಮಾತನಾಡಿದ್ದೆವು. ನನಗೆ ಆ ಹುಡುಗನ ಜೊತೆ ಮಾತನಾಡಿದ್ದು ಖುಷಿ ಆಯ್ತು, ನಮ್ಮಿಬ್ಬರ ಆಸಕ್ತಿ ಕೂಡ ಒಂದೇ ಆಗಿದ್ದಕ್ಕೆ ಅವನು ಕೂಡ ಚೆನ್ನಾಗಿ ಮಾತನಾಡಿದ್ದನು” ಎಂದು ಶಿಪ್ರಾ ಹೇಳಿದ್ದಾರೆ.

"ನಾನು ಅವನ ಜೊತೆ ಕಾಫಿ ಡೇಟ್‌ಗೆ ಹೋಗಿದ್ದೆ. ಆ ಭೇಟಿ ನಂತರ ಅವನು ನನ್ನ ಜೊತೆ ಮಾತನಾಡುವ ಪ್ರಯತ್ನವನ್ನೇ ಮಾಡಲಿಲ್ಲ. ಅವನಿಂದ ಫೋನ್‌, ಮೆಸೇಜ್‌ ಕೂಡ ಬರಲಿಲ್ಲ. ಯಾಕೆ ಈ ರೀತಿ ಮಾಡುತ್ತಿದ್ದೀಯಾ? ನಿನಗೆ ನನ್ನ ಜೊತೆ ಮಾತಾಡೋಕೆ ಇಷ್ಟ ಇಲ್ಲವಾ? ಎಲ್ಲವೂ ಚೆನ್ನಾಗಿದೆಯಾ ಅಂತೆಲ್ಲ ನಾನು ಅವನಿಗೆ ಪ್ರಶ್ನೆ ಮಾಡಿದೆ. ನನ್ನ ಜೊತೆ ಅವನು ಯಾಕೆ ಮಾತಾಡ್ತಿಲ್ಲ ಎನ್ನೋದು ಪ್ರಶ್ನೆ ಆಗಿತ್ತು. ಎಲ್ಲದಕ್ಕೂ ಅವನು Yeah Yeah ಅಂತ ಮೆಸೇಜ್‌ ಮಾಡಿದ. ನಿನಗೆ ಸ್ಪಷ್ಟನೆ ಕೊಡೋದು ಕಷ್ಟವಾ ಎಂದು ನಾನು ಕೇಳಿದೆ. ಬಹುಶಃ 30ನೇ ವಯಸ್ಸಿಗೆ ಡೇಟ್‌ ಮಾಡಿದ್ರೆ ಹೀಗೆ ಆಗಬಹುದು" ಎಂದು ಶಿಪ್ರಾ ಹೇಳಿದ್ದಾರೆ. 

"ಆಮೇಲೆ ಅವನು, “ನಮ್ಮಿಬ್ಬರ ಮಧ್ಯೆ ಸಾಂಸ್ಕೃತಿಕ ವ್ಯತ್ಯಾಸ ಇದೆ. ಹೀಗಾಗಿ ಮುಂದುವರೆಯೋದು ಕಷ್ಟ” ಅಂತ ಹೇಳಿದ. ಆಗ ನನಗೆ “ನಾವಿಬ್ಬರು ಒಂದು ಸಲ ಮಾತ್ರ ಮಾತನಾಡಿದ್ದೆವು. ಆ ಎರಡು ಗಂಟೆಯಲ್ಲಿ 1.15 ಗಂಟೆ ನೀನು ನಿನ್ನ ಬಗ್ಗೆ ಮಾತನಾಡಿದೆ. ನೀನು ನನ್ನ ಬಗ್ಗೆ ಏನೂ ಕೇಳಲಿಲ್ಲ. ಆದರೂ ನಾನು ನಿನಗೆ ಅನುಕೂಲವಾಗುವಂತೆ ಮಾತನಾಡಿದೆ. ಈಗ ನೀನು, ನಮ್ಮಿಬ್ಬರ ಮಧ್ಯೆ ವ್ಯತ್ಯಾಸ ಇದೆ ಅಂತ ನನ್ನ ಅನುಮತಿ ಇಲ್ಲದೆ ನಿರ್ಧಾರಕ್ಕೆ ಬಂದಿರುವೆ. ನಾನು ಪದೇ ಪದೇ ಫೋನ್‌ ಮಾಡಿದ ನಂತರ ನೀನು ನಿನ್ನ ನಿರ್ಧಾರವನ್ನು ಹೇಳಿದೆ” ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ಪೋಸ್ಟ್‌ಗೆ ಸಿಕ್ಕಾಪಟ್ಟೆ ಕಾಮೆಂಟ್!

ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಅದರಲ್ಲಿ ಕರಣ್‌ ಎನ್ನುವವರು “ಮೀಟಿಂಗ್‌ ಆದ್ಮೇಲೆ ನಿಮ್ಮ ಜೊತೆ ಆ ಹುಡುಗನಿಗೆ ಲೈಂ*ಗಿಕ ಆಸಕ್ತಿ ಇಲ್ಲ. ತನ್ನ ನಿರ್ಧಾರವನ್ನು ಹೇಳಿದರೆ ನೀವು ಅವನ ಬಗ್ಗೆ ನೆಗೆಟಿವ್‌ ಆಗಿ ಮಾತಾಡ್ತೀರಿ ಎಂದು ಆ ಹುಡುಗ ಭಯಪಟ್ಟಿದ್ದಾನೆ. ಇದೇ ಕಾರಣಕ್ಕೆ ಅವನು ಹಿಂದೇಟು ಹಾಕಿರೋದು ಅಂತ ನಾನು 1000% ಗ್ಯಾರಂಟಿ ಕೊಡ್ತೀನಿ. ಆ ಹುಡುಗಿ ಲೈಂ*ಗಿಕವಾಗಿ ಇಷ್ಟವಾದರೆ ಆ ಹುಡುಗ ಪರ್ವತವನ್ನು ಬೇಕಿದ್ರೂ ಏರುತ್ತಾನೆ. ನೀವು ನೋಡಲು ಸುಂದರವಾಗಿದ್ದರೂ ಕೂಡ ಅವನ ನಿರ್ಧಾರವನ್ನು ಗೌರವಿಸಬೇಕು. ಈ ಹುಡುಗನನ್ನು ಬಿಟ್ಟು, ಬೇರೆ ಹುಡುಗನ ಕಡೆ ಮುಖಮಾಡಿ” ಎಂದು ಇನ್ನೋರ್ವರು ಕಾಮೆಂಟ್‌ ಮಾಡಿದ್ದಾರೆ. ಆದರೆ ಶಿಪ್ರಾ ಅವರು, “ನನಗೆ ಕಮ್ಯೂನಿಕೇಶನ್‌ ಅಗತ್ಯವಿತ್ತು ಅಷ್ಟೇ” ಎಂದು ಹೇಳಿದ್ದಾರೆ.

View post on Instagram