ಋಣ ಎಲ್ಲಿ, ಹೇಗೆ ಯಾವ ರೂಪದಲ್ಲಿ ಇರುತ್ತದೆ ಎಂದು ಹೇಳಲಾಗದು ಎನ್ನುವುದಕ್ಕೆ ಈ ಸ್ಟೋರಿ ಉದಾಹರಣೆ. ಮದುವೆ ಸ್ವರ್ಗದಲ್ಲಿಯೇ ನಡೆದಿರುತ್ತದೆ ಎನ್ನುವುದಕ್ಕೂ ಇದನ್ನು ಉದಾಹರಣೆಯಾಗಿ ಬಳಸಬಹುದು. ಗುಜರಾತ್​ನ ಯುವಕ, ಫಿಲಿಪ್ಪೀನ್ಸ್ ಯುವತಿ ಲವ್​ಸ್ಟೋರಿ ಕೇಳಿ... 

ಋಣವಿಲ್ಲದೆ ಯಾವ ಬಂಧಗಳೂ ಬೆಸೆಯಲಾರವು. ಮನುಷ್ಯರು ಎಷ್ಟೇ ದೂರವಿದ್ದರೂ ಕೂಡ, ಮನಸ್ಸುಗಳು ಹತ್ತಿರವಾಗಿ ಬದುಕಲು ಋಣ ಇರಬೇಕು, ಎಲ್ಲೋ ಇದ್ದ ಇಬ್ಬರು ಒಂದಾಗಲು ಕಾರಣವಂತೂ ಇದ್ದೆ ಇರುತ್ತೆ ಎನ್ನುವ ಅರ್ಥ ಕೊಡುವ 'ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ' ಎನ್ನುವ ಮಾತಿದೆ. ಅದೇ ರೀತಿ ಇಲ್ಲೊಂದು ಮದುವೆ ಆಗಿದೆ. ಗುಜರಾತ್​ನ ತರಕಾರಿ ಮಾರುವವನ ಮದುವೆ, ಫಿಲಿಪ್ಪೀನ್ಸ್​ ಬೆಡಗಿ ಜೊತೆ ಆಗಿದೆ. ಫೇಸ್​ಬುಕ್​ನಲ್ಲಿ ಸುಮ್ಮನೇ ಫ್ರೆಂಡ್​ ರಿಕ್ವೆಸ್ಟ್​ ಕಳಿಸಿದ್ದರಿಂದ ಶುರುವಾದ ಈ ಪ್ರೀತಿ, ಭಾಷೆಗೂ ಅಡ್ಡಿ ಬರಲೇ ಇಲ್ಲ. ಆಕೆ ಪಟಪಟಾ ಇಂಗ್ಲಿಷ್​ನಲ್ಲಿ ಮಾತನಾಡುವವಳು, ಇವನಿಗೂ ಇಂಗ್ಲಿಷ್​ ಬರುವುದೇ ಇಲ್ಲ. ಆದರೂ ಇಮೋಜಿಗಳ ಮೂಲಕವೇ ಮಾತನಾಡಿ, ಲವ್​ ಶುರುವಾಗಿ ಮದುವೆಯೂ ಆಗಿಹೋಗಿದೆ.

ಇದು ಫಿಲಿಪ್ಪೀನ್ಸ್​ನ ಲಿಂಬಜಾನೆ ಮಗದಾವೋ ಪ್ರಸಾದ್ ಮತ್ತು ಗುಜರಾತಿನ ತರಕಾರಿ ಸಗಟು ವ್ಯಾಪಾರಿ ಪಿಂಟು ಕಥೆ. ಪಿಂಟು ಸುಮ್ಮನೇ ಫೇಸ್​ಬುಕ್​ನಲ್ಲಿ ಈಕೆಯನ್ನು ನೋಡಿ ಫ್ರೆಂಡ್​ ರಿಕ್ವೆಸ್ಟ್​ ಕಳಿಸಿದ್ದಾನೆ. ಹೀಗೆ ಇಬ್ಬರೂ ಫ್ರೆಂಡ್ಸ್​ ಆಗಿದ್ದಾರೆ. ಆದರೆ ಪಿಂಟುಗೆ ಇಂಗ್ಲಿಷ್​ ಬರುತ್ತಿರಲಿಲ್ಲ. ಆದರೂ ಇಮೋಜಿಗಳ ಮೂಲಕವೆ ಸಂಭಾಷಣೆ ಮಾಡಿದ್ದಾರೆ. ಹೀಗೆ ಭಾಷೆಯ ಅಡೆತಡೆಗಳ ಹೊರತಾಗಿಯೂ, ಅವರ ಸಂಬಂಧವು ಎಮೋಜಿ ಮೂಲಕ ಶುರುವಾಗಿ ವಿಡಿಯೋ ಕರೆಗಳ ಮೂಲಕ ದೃಢವಾಯಿತು. ಪ್ರೇಮ ನಿವೇದನೆ ಬಳಿಕ ಎರಡು ವರ್ಷಗಳ ಉತ್ತಮ ಸಂಬಂಧ ಇದೀಗ ವಿವಾಹದ ರೂಪ ಪಡೆದಿದೆ. ಪಿಂಟೂ ಹಿಂದೂವಾಗಿದ್ದು, ಯುವತಿ ಕ್ರೈಸ್ತ ಸಮುದಾಯದವಳು. ಎರಡೂ ಧರ್ಮದ ಪದ್ಧತಿಯಂತೆ ಮದುವೆ ನಡೆದಿದೆ.

ಫಿಲಿಪ್ಪೀನ್ಸ್​ನಲ್ಲಿರುವ ಲಿಂಬಾಜಾನೆ ತಂದೆಗೆ ರೆಸ್ಟೋರೆಂಟ್ ನಡೆಸಲು ಸಹಾಯ ಮಾಡುತ್ತಿದ್ದಳು. ಅವರ ಆರಂಭಿಕ ಸಂಭಾಷಣೆಗಳು ಕಡಿಮೆಯಾಗಿದ್ದವು. ಆದಾಗ್ಯೂ, ಅವರು ಸಂವಹನ ನಡೆಸಲು ಒಂದು ವಿಶಿಷ್ಟ ಮಾರ್ಗವನ್ನು ಕಂಡುಕೊಂಡರು. ಈ ಬಗ್ಗೆ ಯುವತಿ ತನ್ನ ಹೃದಯಸ್ಪರ್ಶಿ ಕಥೆಯನ್ನು ಹಂಚಿಕೊಂಡಿದ್ದಾಳೆ: "ತರಕಾರಿ ಮಾರಾಟ ಗಾರನ ಫೇಸ್ಬುಕ್ ರಿಕ್ವೆಸ್ಟ್ ನನ್ನ ಜೀವನವನ್ನು ಬದಲಾಯಿಸುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದಿದ್ದಾಳೆ. ಈ ವಿಡಿಯೋದಲ್ಲಿ ಗುಜರಾತ್​ನ ತರಕಾರಿ ಸಗಟು ವ್ಯಾಪಾರಿ ಪಿಂಟು ಫೇಸ್​ಬುಕ್​ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು, ನಂತರ ಅದು ಅನಿರೀಕ್ಷಿತ ಸಂಬಂಧಕ್ಕೆ ಹೇಗೆ ನಾಂದಿ ಹಾಡಿತು ಎಂಬುದನ್ನು ವಿವರಿಸಿದ್ದಾಳೆ.

ಪಿಂಟು ತಮ್ಮ ಪ್ರೇಮಕಥೆಯನ್ನು ಲಿಂಬಾಜೇನ್​ಗೆ "ಭಾರತ" ಎಂದು ಲೇಬಲ್ ಮಾಡಲಾದ ವಿಶೇಷ ಪ್ಯಾಕೇಜ್ ಅನ್ನು ಕಳುಹಿಸುವ ಮೂಲಕ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿದ್ದಾರೆ. ಪ್ಯಾಕ್ ತೆರೆದಾಗ ಹೃತ್ಪೂರ್ವಕ ಪ್ರೇಮ ಪ್ರಸ್ತಾಪವಿತ್ತು, ಅದು ಆಕೆಯ ಮನಸ್ಸು ಗೆದ್ದಿತು. ಕೂಡಲೇ ಆಕೆ ಸಮ್ಮತಿ ಸೂಚಿಸಿದಳು. ಎರಡು ವರ್ಷ ಹೀಗೆಯೇ ಮುಂದುವರೆಯಿತು. ನಂತರ ಪಿಂಟು ಆಕೆಯನ್ನು ಭೇಟಿಯಾಗಲು ಫಿಲಿಪ್ಪೀನ್ಸ್​ಗೆ ಹೋಗಿದ್ದದ. ಅಲ್ಲಿ ಆಕೆಯ ಕುಟುಂಬಸ್ಥರನ್ನು ಭೇಟಿಯಾಗಿ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ.