ಕಬಡ್ಡಿ ಆಟಗಾರ ದೀಪಕ್ ಹೂಡಾ ಮತ್ತು ಬಾಕ್ಸರ್ ಸ್ವೀಟಿ ಬೋರಾ ನಡುವೆ ವಿಚ್ಛೇದನ ನಡೆಯುವ ಸಾಧ್ಯತೆ ಇದೆ. ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ಸ್ವೀಟಿ ಬೋರಾ, ದೀಪಕ್ ಹೂಡಾ ಮೇಲೆ ಹಲ್ಲೆ ನಡೆಸಿದ್ದಾರೆ.
ನವದೆಹಲಿ (ಮಾ.25): ಕೆಲ ದಿನಗಳ ಹಿಂದೆ ಯಜುವೇಂದ್ರ ಚಾಹಲ್ ಹಾಗೂ ಧನಶ್ರಿ ವರ್ಮಾ ಅವರ ವಿಚ್ಛೇದನ ಕಂಡಿದ್ದ ಭಾರತದ ಕ್ರೀಡಾ ಜಗತ್ತು ಶೀಘ್ರದಲ್ಲಿಯೇ ಇನ್ನೊಂದು ವಿಚ್ಛೇದನ ಕಾಣಲು ಸಜ್ಜಾಗಿದೆ. ರಾಷ್ಟ್ರೀಯ ಕಬಡ್ಡಿ ತಂಡದ ಆಟಗಾರ ಹಾಗೂ ಪ್ರೋ ಕಬಡ್ಡಿ ಲೀಗ್ ಪ್ಲೇಯರ್ ದೀಪಕ್ ನಿವಾಸ್ ಹೂಡಾ ಹಾಗೂ ಅಂತಾರಾಷ್ಟ್ರೀಯ ಬಾಕ್ಸರ್, ಮಾಜಿ ವಿಶ್ವ ಚಾಂಪಿಯನ್ ಸ್ವೀಟಿ ಬೋರಾ ನಡುವೆ ಶೀಘ್ರದಲ್ಲಿಯೇ ವಿಚ್ಛೇದನ ಆಗುವ ಸಾಧ್ಯತೆ ಇದೆ. 2022ರ ಜುಲೈನಲ್ಲಿ ಮದುವೆಯಾಗಿದ್ದ ಜೋಡಿಯ ರಂಪಾಟ ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿದ್ದು, ಸೋಮವಾರ ಇದು ಸಾರ್ವಜನಿಕವಾಗಿ ದರ್ಶನವಾಗಿದೆ. ಪೊಲೀಸ್ ಠಾಣೆಯಲ್ಲಿಯೇ ಪತಿ ದೀಪಕ್ ನಿವಾಸ್ ಹೂಡಾ ಮೇಲೆ ಬಾಕ್ಸರ್ ಸ್ವೀಟಿ ಬೋರಾ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನನ್ನ ಪತಿಗೆ ಗೇ ಎಂದೂ ಆರೋಪ ಮಾಡಿದ್ದಾರೆ.
ಹರಿಯಾಣದ ಹಿಸ್ಸಾರ್‌ನಲ್ಲಿನ ಪೊಲೀಸ್ ಠಾಣೆಯಲ್ಲಿ ದೀಪಕ್ ನಿವಾಸ್ ಹೂಡಾ ಮೇಲೆ ಸ್ವೀಟಿ ಬೋರಾ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾರ್ಚ್ 15 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ದೀಪಕ್ ಹೂಡಾರಿಂದ ಸ್ವೀಟಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆಯ ಆರೋಪವನ್ನೂ ಇವರ ಮೇಲೆ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಟ್ರ್ಯಾಕ್ ಪ್ಯಾಂಟ್‌ನಲ್ಲಿರುವ ಸ್ವೀಟಿ ಬೋರಾ, ಪೊಲೀಸ್ ಠಾಣೆಯಲ್ಲಿ ಕುಳಿತಿದ್ದ ದೀಪಕ್ ಹೂಡಾ ಬಳಿ ಆಗಮಿಸಿ ಆತನ ಕುತ್ತಿಗೆಯನ್ನು ಹಿಡಿದು ಹಲ್ಲೆ ಮಾಡಿದ್ದಾರೆ.ಪೊಲೀಸ್ ಠಾಣೆಯೊಳಗೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಾಗ, ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಬೇಕಾಯಿತು.
ಮಾರ್ಚ್ 11 ರಂದು ಹಿಸಾರ್ ಎಸ್ಪಿಗೆ ತಾನು ಹೂಡಾ ಜೊತೆ ವಾಸಿಸಲು ಬಯಸುವುದಿಲ್ಲ ಎಂದು ಬೂರಾ ಹೇಳಿದ್ದಾರೆ. ಬಾಕ್ಸರ್ ಕೂಡ ತನಗೆ ವಿಚ್ಛೇದನ ಮತ್ತು ತನ್ನ ಆಸ್ತಿ ಮಾತ್ರ ಬೇಕು, ಬೇರೇನೂ ಬೇಡ ಎಂದು ಹೇಳಿದರು. "ಮಾರ್ಚ್ 11 ರಂದು, ನಾನು ಹಿಸಾರ್ ಎಸ್ಪಿಗೆ ನಾನು ಅವರೊಂದಿಗೆ ಹೂಡಾ ಅವರೊಂದಿಗೆ ವಾಸಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದೆ. ನನಗೆ ಅವರಿಂದ ಒಂದು ಪೈಸೆಯೂ ಬೇಡ. ಕೇವಲ ವಿಚ್ಛೇದನ ಮತ್ತು ನನ್ನ ವಸ್ತುಗಳು ಸಾಕು. ನಾನು ನನ್ನ ವಸ್ತುಗಳ ಭಾಗಶಃ ಪಟ್ಟಿಯನ್ನು ಸಲ್ಲಿಸಿದ್ದೇನೆ, ಆದರೆ ಒಂದು ತಿಂಗಳಿಗೂ ಹೆಚ್ಚು ಕಾಲ ಯಾವುದೇ ಕ್ರಮ ತೆಗೆದುಕೊಂಡಿಲ್ಲ... ನಾನು ಪ್ರಧಾನಿ ನರೇಂದ್ರ ಮೋದಿ ಜಿ ಮತ್ತು ನಮ್ಮ ಗೃಹ ಸಚಿವರಿಗೆ ನ್ಯಾಯಕ್ಕಾಗಿ ಮನವಿ ಮಾಡುತ್ತೇನೆ. ಶಾಂತಿಯುತ ಪರಿಹಾರಕ್ಕಾಗಿ ಆಶಿಸುತ್ತಾ ನಾನು ಆರಂಭದಲ್ಲಿ ಮೌನವಾಗಿದ್ದೆ' ಎಂದು ಹೇಳಿದ್ದಾರೆ.
ವಿಚ್ಛೇದನ ನೀಡಿದ್ದಕ್ಕೆ ಗಂಡನಿಗೆ ಜೀವನಾಂಶ ನೀಡಿದ ಪ್ರಖ್ಯಾತ ಕಿರುತೆರೆ ನಟಿ
ಮಾರ್ಚ್ 15 ರಂದು ವಿಚಾರಣೆಯ ಸಮಯದಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಯಿತು ಎಂದು ಹೂಡಾ ಹೇಳಿದ್ದಾರೆ. “ವಿಚಾರಣೆಯ ಸಮಯದಲ್ಲಿ, ನನ್ನ ಹೆಂಡತಿ ಮತ್ತು ಅವಳ ತಂದೆ ಕಠಿಣ ಭಾಷೆಯನ್ನು ಬಳಸಲು ಪ್ರಾರಂಭಿಸಿದರು. ಪೊಲೀಸರ ಸಮ್ಮುಖದಲ್ಲಿ ಅವರು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ನಮ್ಮ ಕಡೆಯ ಇಬ್ಬರಿಗೆ ಗಾಯವಾಗಿದೆ. ಅವರ ತಾಯಿಯ ಚಿಕ್ಕಪ್ಪ ಸತ್ಯವಾನ್ ಕೂಡ ಅವರೊಂದಿಗೆ ಇದ್ದರು” ಎಂದು ಹೂಡಾ ಹೇಳಿದ್ದಾರೆ. ಬೂರಾ ಮತ್ತು ಹೂಡಾ 2022 ರಲ್ಲಿ ವಿವಾಹವಾದರು ಮತ್ತು ಇಬ್ಬರೂ ಕ್ರೀಡಾಪಟುಗಳು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದಾರೆ. ಬೂರಾ ಮಿಡಲ್‌ವೇಟ್ ವರ್ಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಆಗಿದ್ದರೆ, ಹೂಡಾ ಪ್ರೊ ಕಬಡ್ಡಿ ಲೀಗ್‌ನ ಸ್ಟಾರ್ ಪ್ಲೇಯರ್ ಆಗಿದ್ದಾರೆ.
ಅವಳು ದೂರವಾದ ಮೇಲೆ ದೊಡ್ಡ ಕುಡುಕನಾಗಿದ್ದೆ, ಫುಲ್ ಬಾಟಲ್ ಕುಡೀತಿದ್ದೆ
