2019ರ ಪ್ರೊ ಕಬಡ್ಡಿ ಟೂರ್ನಿಯ ಮೊದಲ ಪಂದ್ಯವೇ ಅಭಿಮಾನಿಗಳಿಗೆ ಕಿಕ್ಕೇರಿಸಿದೆ. ತೆಲುಗು ಟೈಟಾನ್ಸ್ ಹಾಗೂ ಯು ಮುಂಬಾ ರೋಚಕ ಪಂದ್ಯ ಟೂರ್ನಿಗೆ ಅದ್ದೂರಿ ಆರಂಭ ನೀಡಿತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

ಹೈದರಾಬಾದ್(ಜು.20): 7ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಉದ್ಘಟಾನಾ ಪಂದ್ಯದಲ್ಲಿ ತೆಲೆಗು ಟೈಟಾನ್ಸ್ ಹಾಗೂ ಯು ಮುಂಬಾ ಹೋರಾಟ ನಡೆಸಿತ್ತು. ರೋಚಕ ಪಂದ್ಯದಲ್ಲಿ ಯು ಮುಂಬಾ 31-25 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸೋ ಮೂಲಕ 2019ರ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. 

Scroll to load tweet…

ಗಚ್ಚಿಬೊಲಿ ಕ್ರೀಡಾಂಗಣದಲ್ಲಿ ತೆಲುಗು ಟೈಟಾನ್ಸ್ ಯಶಸ್ವಿ ರೈಡ್‌ನೊಂದಿಗೆ ಪಂದ್ಯ ಆರಂಭಿಸಿತು. ರಜನೀಶ್ ರೈಡ್ ತೆಲುಗು ಟೈಟಾನ್ಸ್ ತಂಡ ಅಂಕ ಖಾತೆ ತೆರೆಯಿತು. ಇತ್ತ ಅತುಲ್ ಎಂ.ಎಸ್ ರೈಡ್‌ನಿಂದ ಯು ಮುಂಬಾ ಕೂಡ ತಿರುಗೇಟು ನೀಡಿತು. ಆರಂಭಿಕ ಹಂತದಿಂದಲೇ ಯು ಮುಂಬಾ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.

ಯು ಮುಂಬಾ ಹಿಂದಿಕ್ಕಿಲು ತೆಲುಗು ಹಲವು ಪ್ರಯತ್ನ ನಡೆಸಿದರೂ ಯು ಮುಂಬಾ ಅವಕಾಶ ನೀಡಲಿಲ್ಲ. ಹೀಗಾಗಿ ಮೊದಲಾರ್ಧದಲ್ಲಿ ಯು ಮುಂಬಾ 17-10 ಅಂಕಗಳ ಮುನ್ನಡೆ ಪಡೆದುಕೊಂಡಿತು. ದ್ವಿತಿಯಾರ್ಧದಲ್ಲಿ ತೆಲುಗು ಆತ್ಮವಿಶ್ವಾಸ ಕಳೆದುಕೊಂಡಿತು.

ರೈಡ್, ಟ್ಯಾಕಲ್‌ಗಳಿಂದ ಅಂಕ ಕಲೆ ಹಾಕಲು ತೆಲುಗು ವಿಫಲಾವಾಯಿತು. ಆದರೆ ಯು ಮುಂಬಾ ಸವಾರಿ ಮಾಡಿತು. ಅಂತಿಮ ಹಂತದಲ್ಲಿ ತೆಲುಗು ತಿರುಗೇಟು ನೀಡೋ ಪ್ರಯತ್ನ ಮಾಡಿತು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಹೀಗಾಗಿ ಯು ಮುಂಬಾ 31-25 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.