ಪ್ರಶ್ನೆ: ನಾನೊಬ್ಬಳು ಪೋಷಕ ನಟಿ. ವಯಸ್ಸು ಇಪ್ಪತ್ತೆರಡು. ಕಳೆದೆರಡು ವರ್ಷಗಳಿಂದ ಕೆಲವು ಕನ್ನಡ ಫಿಲಂಗಳಲ್ಲಿ ನಟಿಸಿದ್ದೇನೆ. ತೀರಾ ಸಣ್ಣ ಪಾತ್ರಗಳು. ಕೆಲವೊಮ್ಮೆ ನಟಿಸಿದ್ದರೂ ಫೈನಲ್ ಕಟ್‌ನಲ್ಲಿ ನಮ್ಮ ಸೀನ್ ಇರುವುದೇ ಇಲ್ಲ. ಈಗೀಗ ಶೂಟಿಂಗ್ ಇಲ್ಲವಾದ್ದರಿಂದ ನನ್ನ ಹಳ್ಳಿಗೆ ಬಂದಿದ್ದೇನೆ. ಶೂಟಿಂಗ್ ನಡೆಯುವಾಗಲೂ ನಮ್ಮ ಲೈಫು ಬರ್ಬರವಾಗಿರುತ್ತೆ. ಸಿನಿಮಾಕ್ಕೆ ನಮ್ಮನ್ನು ಸಪ್ಲೈ ಮಾಡುವ ಏಜೆಂಟ್‌ಗಳು, ಅಸಿಸ್ಟೆಂಟ್ ಡೈರೆಕ್ಟರ್‌ಗಳು, ಪ್ರೊಡ್ಯೂಸರ್ ಕಡೆಯ ಗೂಂಡಾಗಳು, ಕೆಲವೊಮ್ಮೆ ದೊಡ್ಡ ಹೀರೋಗಳು ಕೂಡ ನಮ್ಮನ್ನು ರಾತ್ರಿ ಪಾರ್ಟಿಗೆ ಕರೆಯುತ್ತಾರೆ. ಅದೆಲ್ಲೋ ಸಿಟಿಯ ಹೊರಗೆ ನಿರ್ಜನ ಪ್ರದೇಶದ ರೆಸಾರ್ಟ್ ‌ಗಳಲ್ಲಿರುತ್ತದೆ. ಪಾರ್ಟಿಗಳು ಶುರುವಾಗುವುದೇ ಮಧ್ಯರಾತ್ರಿ. ಬೆಳಗಿನವರೆಗೂ ನಡೆಯುತ್ತವೆ. ನಮ್ಮನ್ನು ಕನಿಷ್ಠ ಉಡುಪಿನಲ್ಲಿ, ಡ್ರಿಂಕ್ಸ್ ಸಪ್ಲೈ ಮಾಡಲು ಹೇಳುತ್ತಾರೆ. ದೊಡ್ಡ ರಾಜಕಾರಣಿಗಳ ಮಕ್ಕಳೂ ಇರುತ್ತಾರೆ. ಎಲ್ಲರೂ ಕುಡಿದು ಚಿತ್ ಆಗುತ್ತಾರೆ. ಹೆಚ್ಚಿನವರು ಗಾಂಜಾ, ಅಫೀಮು‌ ಮುಂತಾದ ಡ್ರಗ್ಸ್ ತೆಗೆದುಕೊಳ್ಳುತ್ತಾರೆ. 

ಸಿಸಿಬಿ ವಶವಾಗುವ ಮುನ್ನ ನಟಿ ಸಂಜನಾ ಮಾಡಿದ ಹೈ ಡ್ರಾಮ ಇದು! 
ನನಗೆ ಡ್ರಗ್ಸ್ ಅಭ್ಯಾಸವಾದದ್ದೇ ಇಂಥ ಪಾರ್ಟಿಗಳಲ್ಲಿ.‌ ಅಲ್ಲಿ ಡ್ರಗ್ಸ್ ತೆಗೆದುಕೊಳ್ಳದವರಿಗೆ ಬೆಲೆಯೇ ಇಲ್ಲ. ಹೀಗೆ ಅಮಲು ಸೇವಿಸಿದ ಬಳಿಕ ಏನು ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೇ ಹೊರಟುಹೋಗುತ್ತದೆ. ನನಗೂ ಹೀಗೇ ಆಯ್ತು. ನಾಲ್ಕಾರು ಪಾರ್ಟಿಗಳಲ್ಲಿ ಅಮಲು ಸೇವಿಸಿದ ಬಳಿಕ, ಅಲ್ಲೇ ಅಲ್ಪಸ್ವಲ್ಪ ಮರೆಗೆ ಹೋಗಿ ನಮ್ಮಿಂದ ಸೆಕ್ಸ್ ಮಾಡಿಸಿಕೊಳ್ಳುತ್ತಾರೆ. ತಡೆಯುವ ಶಕ್ತಿಯೂ ಬಯಕೆಯೂ ಆಗ ನಮಗೆ ಇರುವುದೇ ಇಲ್ಲ. ನಾನೂ ಹೀಗೇ ನಾಲ್ಕಾರು ಮಂದಿಯ ಜೊತೆಗೆ ಸೆಕ್ಸ್ ಮಾಡಿದ್ದೇ‌ನೆ. ಅವರು ಯಾರಂತಲೂ ನನಗೆ ಗೊತ್ತಿಲ್ಲ. ಕೋವಿಡ್ ಆರಂಭವಾದ ನಂತರ ಈ ಪಾರ್ಟಿಗಳೆಲ್ಲ ನಿಂತು ಹೋದವು. ನನ್ನಂಥ ಹಲವರು ಗತಿಗೆಟ್ಟುಊರು ಸೇರಿದೆವು. ಆದರೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಮನೆಯಲ್ಲಿ ಈಗಲೂ ಇಂಥ ಪಾರ್ಟಿಗಳು ನಡೆಯುತ್ತವೆ. ಆದರೆ ನಮಗೆ ಅಲ್ಲಿಗೆ ಆಹ್ವಾನವಿಲ್ಲ. ಯಾಕೆಂದರೆ‌ ನಾವು ಎಕ್ಸ್ಟ್ರಾಗಳು ನೋಡಿ.
ಈಗ ಊರಿನಲ್ಲಿ ಒಂದಿಬ್ಬರು ಹೆಣ್ಣು ಮಕ್ಕಳಿಗೆ ಟೇಲರಿಂಗ್ ಹೇಳಿಕೊಡುತ್ತ ಹೇಗೋ ಜೀವನ ಮಾಡುತ್ತಿದ್ದೇನೆ. ಶೂಟಿಂಗ್‌ಗಳು ಮತ್ತೆ ಶುರು ಆಗುತ್ತಿವೆ. ಕರೆಯುತ್ತಿದ್ದಾರೆ. ಅಲ್ಲಿ ಆದಾಯ ಹೆಚ್ಚು. ಆದರೆ ಹೀನ ಬದುಕು. ಇಲ್ಲಿ ಗಳಿಕೆ ಕಡಿಮೆ. ಏನು ಮಾಡಲಿ ಅಂತ ತಿಳಿಯುತ್ತಿಲ್ಲ. 

ಡ್ರಗ್ಸ್ ಮಾಫಿಯಾ ; ಸಂಜನಾ ರಿವೀಲ್ ಮಾಡಿದ ಆ 24 ಹೆಸರುಗಳ ಪಟ್ಟಿ ನೋಡಿ 

ಉತ್ತರ: ಊರಿಗೆ ಹೋಗಿ ಅಲ್ಲಿ ಪ್ರಾಮಾಣಿಕವಾದ ದುಡಿಮೆ ಮಾಡಿ ಬದುಕುತ್ತಿರುವ ನಿಮ್ಮ ನಿರ್ಧಾರವನ್ನು ಶ್ಲಾಘಿಸುತ್ತೇನೆ. ಈಗ ಎರಡರಲ್ಲಿ ಒಂದು ನಿರ್ಧಾರ ಮಾಡಬೇಕಾದವರು ನೀವೇ. ಒಂದು- ಬೆಂಗಳೂರಿಗೆ ಬಂದು ಶೂಟಿಂಗ್‌ಗಳಲ್ಲಿ ಭಾಗವಹಿಸುವುದು. ಇದರಿಂದ ಗಳಿಕೆ ಆಗಬಹುದು. ಆದರೆ ಜೀವನಶೈಲಿ ಹಾಗೂ ಖರ್ಚು ವೆಚ್ಚಗಳು ಹೆಚ್ಚುತ್ತವೆ. ಜೊತೆಗೆ ಹಳೆಯ ಅಭ್ಯಾಸಗಳು ಮರುಕಳಿಸಬಹುದು. 
ಡ್ರಗ್ಸ್ ಮತ್ತು ಸೆಕ್ಸ್ ಡೆಡ್ಲಿ ಕಾಂಬಿನೇಶನ್. ಅಮಲು ಪದಾರ್ಥ ಸೇವಿಸಿದವನಿ/ಳಿಗೆ ತನ್ನ ದೇಹದ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ನಿಮ್ಮ ಈ ಅಸಹಾಯಕ ಪರಿಸ್ಥಿತಿ ಬಳಸಿ ನಿಮ್ಮ ದೇಹವನ್ನು ಬಳಸಿಕೊಳ್ಳುವವರು ತುಂಬ ಮಂದಿ. ಇಂಥ ಸಂದರ್ಭದಲ್ಲಿ ಅಪರಾಧಗಳೂ ಸಾಕಷ್ಟು ನಡೆಯುತ್ತವೆ. ಮತ್ತೆ ನೀವು ಈ ಹುದುಲಿಗೆ ಬೀಳಬೇಕೆ? ಅಥವಾ ಇನ್ನೊಂದು ಆಯ್ಕೆ- ಇಂಥ ಪಾರ್ಟಿಗಳಿಂದ ದೂರವಿರುವುದು.‌ ದೂರವಿದ್ದೂ ನಿಮ್ಮ ಪ್ರತಿಭೆಯ ಮೂಲಕ ಚಿತ್ರರಂಗದಲ್ಲಿ ನಿಮ್ಮ ಬೇಡಿಕೆ ಉಳಿಸಿಕೊಳ್ಳಬಹುದು ಎನಿಸಿದರೆ ಧಾರಾಳವಾಗಿ ಪಟ್ಟಣಕ್ಕೆ ಮರಳಿ.
ಎರಡನೇ ಆಯ್ಕೆ- ನೀವು ಇರುವ ಊರಿನಲ್ಲೇ ಬದುಕು‌ ಕಂಡುಕೊಳ್ಳುವುದು. ಇಲ್ಲಿ ರಿಸ್ಕ್ ಕಡಿಮೆ. ಹಾಗೇ ಆದಾಯವೂ ಕಡಿಮೆ. ಬಹಳ ಕಷ್ಟಪಡಬೇಕಾದೀತು. ಆದರೆ ಘನತೆ ಇರುತ್ತದೆ. ಯಾವುದು ಉತ್ತಮವೋ ನೀವೇ ನಿರ್ಧರಿಸಿ. ಕಡೆಗೂ ಇದು ನಿಮ್ಮದೇ ಬದುಕು ಅಲ್ಲವೇ?

ಡ್ರಗ್ಸ್ ಜಾಲದಲ್ಲಿ ನಟಿಯರು ಮಾತ್ರ ಇರುವುದೇ? ನಟರಿಲ್ಲವೇ?