Asianet Suvarna News Asianet Suvarna News

40ನೇ ವಯಸ್ಸಿನಲ್ಲಿ ಪ್ರೀತಿ ಚಿಗುರಿದವರಿಗೆ Dating Tips

ವಯಸ್ಸಾದಂತೆ ಮನಸ್ಸು ಬದಲಾಗ್ತಾ ಹೋಗುತ್ತೆ. ವಯಸ್ಕರು ಚಿಕ್ಕ ಮಕ್ಕಳಂತೆ ಆಡೋದು ಸರಿ ಕಾಣೋದಿಲ್ಲ. ಹಾಗೆ ಹಿರಿಯರು ವಯಸ್ಕರಂತೆ ಪ್ರೀತಿ ಮಾಡ್ತೇನೆಂದ್ರೆ ಸಾಧ್ಯವಿಲ್ಲ. 40ನೇ ವಯಸ್ಸಿನಲ್ಲಿ ಡೇಟಿಂಗ್ ಶುರು ಮಾಡಿದವರು ಹೇಗೆ ವರ್ತಿಸಬೇಕು ಗೊತ್ತಾ?
 

Dating Tips For Single Men
Author
Bangalore, First Published Aug 10, 2022, 2:56 PM IST

ದೇಹಕ್ಕೆ ಎಷ್ಟೇ ವಯಸ್ಸಾಗಿರಲಿ ಮನಸ್ಸು ಸಂಗಾತಿಯನ್ನು ಬಯಸುತ್ತದೆ. ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಆದ್ರೆ ವಯಸ್ಸಿಗೆ ತಕ್ಕಂತೆ ಪ್ರೀತಿ ಮಾಡುವ ವಿಧಾನ ಕೂಡ ಬದಲಾಗುತ್ತದೆ. 40ನೇ ವಯಸ್ಸಿನಲ್ಲಿ ಮನಸ್ಸು ಪ್ಯಾರ್, ಮಹೋಬತ್ ಅಂತಿದ್ರೆ ನೀವು ವಯಸ್ಸಿನ ಹುಡುಗರಂತೆ ವರ್ತಿಸಲು ಆಗೋದಿಲ್ಲ. ನಿಮ್ಮ ವಯಸ್ಸಿಗೆ ತಕ್ಕಂತೆ ನೀವು ಪ್ರೀತಿಯನ್ನು ಎಂಜಾಯ್ ಮಾಡ್ಬೇಕಾಗುತ್ತದೆ. ನಿಮ್ಮ ಪ್ರೀತಿಸುವ ವಿಧಾನವನ್ನು ನೀವು ಬದಲಿಸಲೇಬೇಕು. ಈ ವಯಸ್ಸಿನಲ್ಲಿ ಪ್ರೀತಿ ಸವಾಲಿನ ಸಂಗತಿಯಾಗಿದೆ. 40ನೇ ವಯಸ್ಸಿನಲ್ಲಿ ಪ್ರೀತಿ ಚಿಗುರೊಡೆದಿದ್ದು, ನಿಮ್ಮ ಪ್ರೀತಿ ಮತ್ತಷ್ಟು ಗಟ್ಟಿಯಾಗ್ಬೇಕೆಂದ್ರೆ ಕೆಲ ನಿಯಮಗಳನ್ನು ಪಾಲಿಸಬೇಕು. ನಾವಿಂದು 40ರ ಪುರುಷರಿಗೆ ವಿಶೇಷ ಡೇಟಿಂಗ್ ಸಲಹೆಗಳನ್ನು ನೀಡ್ತೇವೆ.  

ಡೇಟಿಂಗ್ (Dating) ಮೊದಲು ನೋ ಫೋನ್ (Phone) : ಈ ವಯಸ್ಸಿನಲ್ಲಿ ಪುರುಷರಷ್ಟೇ ಅಲ್ಲ, ಹೆಂಗಸರ ಹೆಗಲ ಮೇಲೆ ಹಲವು ಜವಾಬ್ದಾರಿಗಳಿವೆ. ನೀವು ಆಗಾಗ್ಗೆ ಫೋನ್ ಮಾಡ್ತಿದ್ದರೆ ಅವರಿಗೆ ತೊಂದರೆಯಾಗಬಹುದು. ನಿಮ್ಮ ಮೇಲೆ ಅವರಿಗೆ ಕೆಟ್ಟ ಅಭಿಪ್ರಾಯ ಮೂಡಬಹುದು. ಇತ್ತೀಚಿನ ದಿನಗಳಲ್ಲಿ ಫೋನ್ ಮಾಡದೆ ಹೋದರೆ ಅದನ್ನು ತಪ್ಪಾಗಿ ತಿಳಿಯುವುದಿಲ್ಲ. ಹಾಗಾಗಿ ನೀವು ಮೆಸ್ಸೇಜ್ ಮೂಲಕ ನಿಮ್ಮ ಭಾವನೆ ಹಂಚಿಕೊಳ್ಳಬಹುದು. ಮೆಸ್ಸೇಜ್ ನಲ್ಲಿಯೇ ನಿಮ್ಮ ಬಗ್ಗೆ ವಿವರ ನೀಡಿ, ಡೇಟಿಂಗ್ ಶುರು ಮಾಡಿ.

ನಿಮ್ಮ ಬಗ್ಗೆ ಎಲ್ಲವೂ ತಿಳಿದಿದೆ : ಇದು ಹಿಂದಿನ ಕಾಲವಲ್ಲ. ಆಗ ನೀವು ಹೇಳಿದ್ರೆ ಮಾತ್ರ ನಿಮ್ಮ ಮುಂದಿರುವವರಿಗೆ ನಿಮ್ಮ ವಿಷ್ಯ ಗೊತ್ತಾಗ್ತಾಯಿತ್ತು. ಆದ್ರೀಗ ಸಾಮಾಜಿಕ ಜಾಲತಾಣಗಳ ಮೂಲಕ ನಿಮ್ಮ ವಿಷ್ಯವನ್ನು ಅವರು ಕಲೆ ಹಾಕಿರ್ತಾರೆ. ಹಾಗಾಗಿ ಅವರಿಗೆ ನಿಮ್ಮ ಬಗ್ಗೆ ಎಲ್ಲ ತಿಳಿದಿದೆ ಎಂಬುದರ ಅರಿವು ನಿಮಗಿರಲಿ. ಹಾಗೆಯೇ ಅವರ ಬಗ್ಗೆ ನೀವು ತಿಳಿದುಕೊಳ್ಳಿ.

Types of Love: ಪ್ರೀತಿ ಅಂದ್ರೆ ಒಂದೇ ಅಲ್ಲ, ನಮ್ಮಲ್ಲಿವೆ ಎಂಟು ವಿಧಗಳ ಪ್ರೀತಿ

ಇಲ್ಲಿ ಆತುರವಿಲ್ಲ ಎಂಬುದು ನೆನಪಿರಲಿ : ವಾರಕ್ಕೆ ಎರಡು ಬಾರಿ, ವಾರಕ್ಕೆ ಮೂರು ಬಾರಿ ಡೇಟಿಂಗ್ ಇಲ್ಲಿ ಸಾಧ್ಯವಿಲ್ಲದೆ ಇರಬಹುದು. ಸಂಗಾತಿ ತಿಂಗಳಿಗೊಮ್ಮೆ ಡೇಟಿಂಗ್ ಗೆ ಬರೋದು ಕಷ್ಟವಾಗಬಹುದು. ಇದಕ್ಕೆ ಕಾರಣವಿದೆ. ಅವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಹಾಗಾಗಿ ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಅವರಿಗೆ ನಿಮ್ಮ ಮೇಲೆ ಆಸಕ್ತಿಯಿಲ್ಲ ಎಂಬ ನಿರ್ಧಾರಕ್ಕೆ ಬರಬಾರದು. 

ಬ್ಯೂಟಿ :   ಚಿಕ್ಕವಯಸ್ಸಿನಲ್ಲಿ ನಿಮ್ಮ ಗೆಳತಿ ಅಲಂಕಾರ ಮಾಡಿಕೊಂಡು ಡೇಟಿಂಗ್ ಗೆ ಬರ್ತಿರಬಹುದು. ಈಗ್ಲೂ ನೀವು ನಿಮ್ಮ ಸಂಗಾತಿಯಿಂದ ಅದನ್ನು ನಿರೀಕ್ಷಿಸುವುದು ತಪ್ಪು. ವಯಸ್ಸಾದಂತೆ ಬೇರೆ ಬೇರೆ ಕೆಲಸ, ಒತ್ತಡವಿರುತ್ತದೆ. ಹಾಗೆ ಸೌಂದರ್ಯಕ್ಕೆ ಮಹತ್ವ ನೀಡುವ ಸಮಯವಿದಲ್ಲವೆಂದು ಕೆಲವರು ಭಾವಿಸ್ತಾರೆ. ಹಾಗಾಗಿ ಡ್ರೆಸ್, ಮೇಕಪ್ ಗೆ ಹೆಚ್ಚು ಮಹತ್ವ ನೀಡದೆ ಇರಬಹುದು. ನೀವೂ ಕೂಡ  ಇಷ್ಟಕ್ಕೆ ಅನುಗುಣವಾಗಿ ನಡೆದುಕೊಳ್ಳಲು ಅವರಿಗೆ ಬಿಡಬೇಕು. 

ಬಹುತೇಕ ಪುರುಷರು ಹೇಳೋ ಸುಳ್ಳಿದು, ನೀವೂ ಹೇಳ್ತೀರಾ?

ಡೇಟಿಂಗ್ ಸ್ಥಳ : ಡೇಟಿಂಗ್ ಗಮ್ಯಸ್ಥಾನವು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ. ನಿಮಗೆ 20 ವರ್ಷವಾಗಿದ್ದಾಗ ನೀವು, ನಿಮ್ಮ ಸಂಗಾತಿಯನ್ನು  ವಾಟರ್ ಪಾರ್ಕ್ ನಲ್ಲಿ ಭೇಟಿಯಾಗಲು ಇಚ್ಛಿಸಿರಬಹುದು. ಆದ್ರೆ 40 ನೇ ವಯಸ್ಸಿನಲ್ಲೂ ಇದೇ ಆಯ್ಕೆ ಸರಿಯಲ್ಲ. 40ನೇ ವಯಸ್ಸಿನಲ್ಲಿ ಸಂಗಾತಿ ವಾಟರ್ ಪಾರ್ಕ್‌ಗೆ ಹೋಗಲು ಬಯಸದಿರಬಹುದು. ಅವರು ಶಾಂತವಾದ ರೆಸ್ಟೋರೆಂಟ್‌ನಲ್ಲಿ ಕುಳಿತು ಕಾಫಿ ಕುಡಿಯಲು ಇಷ್ಟಪಡಬಹುದು. ಈ ಸಮಯದಲ್ಲಿ ನೀವು ಅವರು ಈ ಇಷ್ಟಕ್ಕೆ ತಣ್ಣೀರೆರಚುವ ಪ್ರಯತ್ನ ಮಾಡಬಾರದು. ಅವರು ಬಯಸಿದ ಜಾಗಕ್ಕೆ ನೀವು ಕರೆದುಕೊಂಡು ಹೋಗ್ಬೇಕು. 
 
ಆಲೋಚಿಸಿ ಮುನ್ನಡೆಯಿರಿ : 40ನೇ ವಯಸ್ಸಿನಲ್ಲಿ ಡೇಟಿಂಗ್ ಶುರು ಮಾಡ್ತಿದ್ದರೆ ಕೆಲವೊಂದು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನೀವು ಡೇಟಿಂಗ್ ಮಾಡ್ತಿರುವ ವ್ಯಕ್ತಿ ವಿಚ್ಛೇದನ ಪಡೆದಿದ್ದಾರೆಯೇ ಎಂಬುದನ್ನು ನೋಡಬೇಕಾಗುತ್ತದೆ. ಕೆಲವರು ವಿಚ್ಛೇದನಪಡೆದ ತಕ್ಷಣ ಅಥವಾ ಸಂಗಾತಿಯಿಂದ ಬೇರ್ಪಟ್ಟ ನಂತರ ಶೀಘ್ರದಲ್ಲೇ ಡೇಟಿಂಗ್ ಪ್ರಾರಂಭಿಸುತ್ತಾರೆ. ಆದ್ರೆ ಹೊಸಬರು ಮಾಜಿಗಿಂತ ಕೆಟ್ಟದಾಗಿದ್ದರೆ ಜೀವನ ಕಷ್ಟವಾಗುತ್ತದೆ. ಹಾಗಾಗಿ ಇಲ್ಲಿ ಆತುರವಿಲ್ಲದೆ ಡೇಟಿಂಗ್ ಶುರು ಮಾಡುವುದು ಒಳ್ಳೆಯದು.  
 

Follow Us:
Download App:
  • android
  • ios