Asianet Suvarna News Asianet Suvarna News

ಬಹಳ ಕಾಲ ಜೊತೆಯಾಗಿರೋ ಜೋಡಿಗಳು ನೋಡೋಕೂ ಒಂದೇ ಥರ, ಇದು ಹೇಗೆ ಸಾಧ್ಯ?

ಗಂಡು ಹೆಣ್ಣು ಬಹುಕಾಲದಿಂದ ಜೊತೆಗೇ ಬದುಕುತ್ತಿದ್ದರೆ ಅವರ ಮಾತು, ನಡತೆಯಲ್ಲಿ ಸಿಮಿಲಾರಿಟಿ ಕಾಣಬಹುದು, ಆದರೆ ಅವರ ಲುಕ್‌ನಲ್ಲೂ ಸಿಮಿಲಾರಿಟಿ ಇರುತ್ತಾ? ಹೌದು ಅಂತಿದೆ ಒಂದು ಸ್ಟಡಿ. ಅದು ಹೇಗೆ, ಯಾಕೆ ಅನ್ನೋದರ ಬಗ್ಗೆ ಇಲ್ಲಿದೆ ಡೀಟೈಲ್ಸ್.

 

Couples looks same when they are live long together
Author
Bengaluru, First Published Oct 24, 2021, 2:21 PM IST
  • Facebook
  • Twitter
  • Whatsapp

ಒಬ್ಬ ಗಂಡು ಹೆಸರು ಎ ಅಂತಿಟ್ಟುಕೊಳ್ಳೋಣ, ಇನ್ನೊಬ್ಬ ಹೆಣ್ಣಮಗಳು, ಆಕೆಯ ಹೆಸರು ಬಿ ಅಂತಿರಲಿ. ಅವರಿಬ್ಬರೂ 10 ವರ್ಷಗಳಿಂದ ಜೊತೆಯಾಗಿ ಬದುಕುತ್ತಿದ್ದಾರೆ. ಅವರ ಸ್ವಭಾವದಲ್ಲಿ ಒಂದು ಬಗೆಯ ಸಾಮ್ಯತೆ ಇರೋದು ನಿಮ್ಮ ಗಮನಕ್ಕೆ ಬರಬಹುದು. ಇಬ್ಬರ ಮಾತು, ಅವರು ಒಂದು ವಿಷಯವನ್ನು ಟ್ರೀಟ್ ಮಾಡುವ ರೀತಿ, ಅವರ ಆಯ್ಕೆಗಳು ಇತ್ಯಾದಿಗಳಲ್ಲಿ ಸಿಮಿಲಾರಿಟಿ ಇರಬಹುದು. ಅವರಿಬ್ಬರ ವರ್ತನೆಗಳಲ್ಲಿ ಒಂದಿಷ್ಟು ಸಾಮ್ಯವನ್ನು ನೀವು ಗುರುತಿಸಬಹುದು.

ಆದರೆ ಅವರು ದೈಹಿಕತೆಯಲ್ಲಿ ಮಿಸ್ಟೀರಿಯಸ್ ಅನಿಸೋ ಸಾಮ್ಯತೆ ಕಾಣಬಹುದು ಅಂದರೆ ನಂಬುತ್ತೀರಾ? ನೀವು ಅವರ ದೈಹಿಕತೆಯನ್ನು ಪರೀಕ್ಷಿಸಿದರೆ ಅವರ ಬ್ಲಡ್ ಪ್ಲೆಶರ್,(blood pressure) ಕೊಲೆಸ್ಟ್ರಾಲ್ (cholesterol) ನ ಪ್ರಮಾಣ, ಅದರಿಂದಾಗಿ ಅವರ ದೇಹದಲ್ಲಿ ಆಗುವ ಮಾರ್ಪಾಡುಗಳು ಇಬ್ಬರಲ್ಲೂ ಒಂದೇ ಥರ ಇರುತ್ತದಂತೆ. ಈ ಕಾರಣಕ್ಕೆ ಕೆಲವೊಂದು ಆಂಗಲ್ ನಿಂದ ಗಮನಿಸಿದರೆ ಅವರು ನೋಡೋಕೂ ಒಂದೇ ಥರ ಕಾಣ್ತಾರಂತೆ. ಹೀಗೆ ಬಹಳ ಕಾಲದಿಂದ ಜೊತೆಗಿರುವ ರಿಲೇಶನ್‌ಶಿಪ್‌ನಲ್ಲಿ ಇರುವಾಗ ಇಂಥಾ ಅನೇಕ ದೈಹಿಕ ಸಿಮಿಲಾರಿಟಿಗಳನ್ನು ಕಾಣಬಹುದು. 

ಬಹಳ ಕಾಲದಿಂದ ಜೊತೆಗಿದ್ದು ಅನ್ಯೋನ್ಯವಾಗಿರುವವನ್ನು ಗಮನಿಸಿ, ಒಬ್ಬರು ಮಾತು ಶುರು ಮಾಡಿದರೆ ಇನ್ನೊಬ್ಬರು ಅವರ ಮಾತನ್ನು ಮುಕ್ತಾಯ ಮಾಡಬಹುದು, ಅದೊಂಥರ ಕನೆಕ್ಟಿವಿಟಿ. ಅದೇ ಥರ ಅವರ ಸ್ನಾಯು ಹಾಗೂ ಬಾಡಿ ಸೆಲ್‌ಗಳೂ ಕನೆಕ್ಟ್ ಆಗೋ ಹಾಗಿದ್ದರೆ.. ಆ ಥರದ ಅಚ್ಚರಿಗಳೂ ಸಂಭವಿಸುತ್ತವೆ ಅನ್ನೋದು ಸಾಬೀತಾಗಿದೆ. ಇದು ಹೀಗೇ ಮುಂದುವರಿದು ದಶಕಗಳ ಕಾಲ ಈ ಜೋಡಿ ಜೊತೆಯಾಗಿ ಕಳೆದಿದ್ದರೆ ಈ ಜೋಡಿಯಲ್ಲಿ ಜೆನೆಟಿಕಲ್‌ ಸಿಮಿಲಾರಿಟಿಗಳನ್ನೂ ಕಾಣಬಹುದು ಅನ್ನುತ್ತದೆ ಸ್ಟಡಿ.

ನವ ವಧುವರರಿಗೆ ಎದುರಾಗುವ ಶೃಂಗಾರ ಸಮಸ್ಯೆಗಳಿವು!

ಈ ಅಧ್ಯಯನ ತಂಡದವರು ಜಪಾನ್, ನೆದರ್‌ಲ್ಯಾಂಡ್‌ನ ಸಾವಿರಾರು ಜೋಡಿಗಳನ್ನು ಸಂಪರ್ಕಿಸಿ ಅವರ ಬಗ್ಗೆ ಅಧ್ಯಯನ ನಡೆಸಿದರು. ಅವರಲ್ಲಿ ಜೆನೆಟಿಕ್ ಸಾಮ್ಯತೆಗಳೇನೋ ಕಾಣಿಸಲಿಲ್ಲವಂತೆ. ಆದರೆ ಅವರ ಲೈಫ್‌ಸ್ಟೈಲ್ ನ ಆಯ್ಕೆಗಳಲ್ಲಿ ಸಿಮಿಲಾರಿಟಿ ಇತ್ತು. ಅವರಿಬ್ಬರೂ ಒಂದೇ ಬಗೆಯ ಆಹಾರ ಸೇವಿಸುವ ಕಾರಣ, ಒಂದೇ ಹವಾಮಾನದಲ್ಲಿರುವ ಕಾರಣ ಅವರ ಆರೋಗ್ಯ ಸಂಬಂಧಿ ವಿಷಯಗಳಲ್ಲಿ ಸಾಮ್ಯತೆ ಇತ್ತು. ಸುದೀರ್ಘ ದಾಂಪತ್ಯದಿಂದ ಅವರ ಆರೋಗ್ಯದಲ್ಲೂ ಒಂದು ಏಕತೆ ಇತ್ತು. ಅಂದರೆ ತುಂಬ ಸಮಯದಿಂದ ಜೊತೆಯಾಗಿದ್ದವರಲ್ಲಿ ಡಯಾಬಿಟೀಸ್, ಹೈಪರ್‌ ಟೆನ್ಶನ್‌ನಂಥಾ ಕೇಸ್‌ಗಳು ಒಟ್ಟೊಟ್ಟಿಗೇ ಕಾಣಿಸಿಕೊಳ್ಳುತ್ತಿದ್ದವು. ಇದಕ್ಕೆ ನೇರ ಕಾರಣ ಅವರಿಬ್ಬರ ಆಹಾರ ಮತ್ತು ಜೀವನ ಕ್ರಮ ಒಂದೇ ಆಗಿರುವುದು.

ನಿಮ್ಮ ಮುಖ ಮಾತ್ರವಲ್ಲ, ಕೂದಲಿನ ಉದ್ದ ಹೇಳುತ್ತೆ ನಿಮ್ಮ ವ್ಯಕ್ತಿತ್ವವನ್ನು!

ಅದೇ ಥರ ಸುಮಾರು 20ರಿಂದ 50 ವರ್ಷ ಜೊತೆಯಾಗಿರುವ ಜೋಡಿಗಳ ಕಿಡ್ನಿ (kidney) ಫಂಕ್ಷನ್ ಹಾಗೂ ಕೊಲೆಸ್ಟ್ರಾಲ್ ಲೆವೆಲ್ ಒಂದೇ ಥರ ಇತ್ತು. ಹೀಗಾಗಿ ಒಬ್ಬ ವ್ಯಕ್ತಿಯಲ್ಲಿ ಏನಾದ್ರೂ ಸಮಸ್ಯೆ ಕಂಡು ಬಂದರೆ ಅದರ ಮುಂದುವರಿಕೆಯಾಗಿ ಇನ್ನೊಬ್ಬ ವ್ಯಕ್ತಿಯಲ್ಲೂ ಆ ಸಮಸ್ಯೆ ಮುಂದುವರಿದ ಹಂತದಲ್ಲಿ ಅಥವಾ ಅದೇ ಹಂತದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಅಧ್ಯಯನಕಾರ ಹೀಗೆ ಹೇಳುತ್ತಾರೆ - 'ಗಂಡ ಹೆಂಡಿರಲ್ಲಿ ಗಂಡ ಅಥವಾ ಹೆಂಡತಿ ಸಮಸ್ಯೆ ಎದುರಿಸಿದಾಗ ಅವರ ಸಂಗಾತಿ ಆ ಸಮಸ್ಯೆಯ ಭಾಗ ಆಗಿರುತ್ತಾರೆ, ಅಥವಾ ಪರಿಹಾರ ಆಗಿರುತ್ತಾರೆ.'

ನೀವಿನ್ನೂ ಸಿಂಗಲ್ ಆಗಿದ್ದೀರಿ ಅಂದ್ರೆ ಅದಕ್ಕೆ ಕಾರಣ ಏನು ಗೊತ್ತಾ?

ಅದೇ ಗಂಡ ಹೆಂಡಿರಲ್ಲಿ ಯಾರಾದರೂ ಒಬ್ಬರು ಪಾಸಿಟಿವ್‌ (positive) ಥಿಂಕಿಂಗ್‌ ಹೊಂದಿರುವವರಾಗಿದ್ರೆ ಆರ್ಥೈಟೀಸ್ ಅಥವಾ ಡಯಾಬಿಟೀಸ್ (diabetes) ಬರುವ ಸಾಧ್ಯತೆ ಇಬ್ಬರಲ್ಲೂ ತುಂಬ ಕಡಿಮೆ. ಹೀಗಾಗಿ ದಂಪತಿ ಸಾಧ್ಯವಾದಷ್ಟೂ ಧನಾತ್ಮಕ ಚಿಂತನೆ ರೂಢಿಸಿಕೊಂಡರೆ ಉತ್ತಮ ಅಂತಾರೆ ತಜ್ಞರು. 

ಆದರೆ ಇದಕ್ಕಿಂತ ಅಚ್ಚರಿಯ ಬೆಳವಣಿಗೆ ಅಂದರೆ ಕೆಲವು ಆಂಗಲ್‌ನಲ್ಲಿ ಸುದೀರ್ಘ ಕಾಲ ಜೊತೆಯಾಗಿರುವ ಜೋಡಿಗಳಲ್ಲಿ ಹೋಲಿಕೆ ಕಂಡುಬಂದಿರುವುದು. ಅವರ ಲುಕ್‌ನಲ್ಲಿ ಒಂದು ಬಗೆಯ ಯುನಿಫಾರ್ಮಿಟಿಯನ್ನು ತಜ್ಞರು ಪತ್ತೆ ಹಚ್ಚಿರುವದು. ಇದು ನಿಜಕ್ಕೂ ಒಂದು ಅಚ್ಚರಿಯ ಬೆಳವಣಿಗೆ ಎಂದು ಈ ಸ್ಟಡಿ ಮಾಡಿದವರು ಅಭಿಪ್ರಾಯಪಡುತ್ತಾರೆ. ಈ ಸ್ಟಡಿ ಇನ್ನೂ ಮುಂದುವರಿಯುತ್ತಿದೆ. ಆಶಾದಾಯಕ ಅಚ್ಚರಿಯ ಫಲಿತಾಂಶಗಳನ್ನೂ ನಿರೀಕ್ಷಿಸಬಹುದು ಅಂತಾರೆ ತಜ್ಞರು.

Follow Us:
Download App:
  • android
  • ios