MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ನಿಮ್ಮ ಮುಖ ಮಾತ್ರವಲ್ಲ, ಕೂದಲಿನ ಉದ್ದ ಹೇಳುತ್ತೆ ನಿಮ್ಮ ವ್ಯಕ್ತಿತ್ವವನ್ನು!

ನಿಮ್ಮ ಮುಖ ಮಾತ್ರವಲ್ಲ, ಕೂದಲಿನ ಉದ್ದ ಹೇಳುತ್ತೆ ನಿಮ್ಮ ವ್ಯಕ್ತಿತ್ವವನ್ನು!

ಇಲ್ಲಿಯವರೆಗೆ ನಿಮ್ಮ ಭವಿಷ್ಯ (Horoscope) ಮತ್ತು ವ್ಯಕ್ತಿತ್ವವನ್ನು ಕಂಡು ಹಿಡಿಯಲು ಕೈಯಲ್ಲಿರುವ ರೇಖೆಗಳ ವಿಶ್ಲೇಷಣೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ಕೂದಲಿನ ಉದ್ದವು ನಿಮ್ಮ ವ್ಯಕ್ತಿತ್ವವು (Hairstyle Personality) ಹೇಗಿದೆ ಎಂಬುದರ ಬಗ್ಗೆ ತಿಳಿಸುತ್ತದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ. 

1 Min read
Suvarna News | Asianet News
Published : Oct 20 2021, 07:17 PM IST
Share this Photo Gallery
  • FB
  • TW
  • Linkdin
  • Whatsapp
17

ವಾಸ್ತವವಾಗಿ  ಕೂದಲು ಮತ್ತು ಅವುಗಳ ಉದ್ದ ಕೂಡ ವ್ಯಕ್ತಿಯ ಬಗ್ಗೆ ಬಹಳಷ್ಟು ಹೇಳುತ್ತದಂತೆ. ಈ ಮೂಲಕ ವ್ಯಕ್ತಿಯ ಸ್ವಭಾವವನ್ನು (personality) ಕಂಡುಕೊಳ್ಳುವುದರ ಜೊತೆಗೆ ಕೆಲಸದ ಒತ್ತಡದ ನಡುವೆ ನೀವು ನಿಮ್ಮನ್ನು ಹೇಗೆ ನಿಭಾಯಿಸುತ್ತೀರಿ ಎಂಬುದನ್ನು ಕೂಡ ಅಂದಾಜಿಸಬಹುದಂತೆ.

27

ಸಣ್ಣ ಕೂದಲಿನ ಗುಣಲಕ್ಷಣಗಳು
ಈ ಅಧ್ಯಯನದ ಪ್ರಕಾರ ಚಿಕ್ಕ ಕೂದಲನ್ನು(Small Hair) ಹೊಂದಿದ್ದರೆ ನೀವು ಖಂಡಿತವಾಗಿಯೂ ಬಹಿರಂಗವಾಗಿ ಮಾತನಾಡುವ ವ್ಯಕ್ತಿ. ಭುಜದ ಮೇಲೆ ಸ್ವಲ್ಪ ಕೂದಲು ಇರುವವರ ನಿರ್ಭೀತ ವ್ಯಕ್ತಿತ್ವವು ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತದಂತೆ.

37

ಅಂತಹ ಜನರು ವಿಶೇಷವಾಗಿ ಮಹಿಳೆಯರು, ತಮ್ಮ ಮನೆ ಜೀವನ ಮತ್ತು ಕಚೇರಿ ಜೀವನದ ನಡುವೆ ಉತ್ತಮ ಸಮತೋಲನವನ್ನು (balanced life) ಕಾಪಾಡಿಕೊಳ್ಳುವ ಮೂಲಕ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಾರೆ. ಇಂತಹ ಜನರು ಸಾಮಾನ್ಯವಾಗಿ ಹೊಸ ಹೊಸ ವಿಷಯ ತಿಳಿದುಕೊಳ್ಳಲು ಇಷ್ಟಪಡುತ್ತಾರಂತೆ. ಈ ಜನರು ಜೀವನದಲ್ಲಿ ಅವ್ಯವಸ್ಥೆಯನ್ನು ಸಹಿಸುವುದಿಲ್ಲವಂತೆ.

47

ಉದ್ದ ಕೂದಲಿನ ವ್ಯಕ್ತಿತ್ವ
ಉದ್ದ ಕೂದಲನ್ನು ನಿಭಾಯಿಸುವುದು ಸುಲಭವಲ್ಲ, ಅದಕ್ಕೆ ಸಾಕಷ್ಟು ತಾಳ್ಮೆ ಬೇಕು. ಅಂತಹ ಜನರು ಜೀವನದಲ್ಲಿ ಎಚ್ಚರಿಕೆಯಿಂದ ಮುಂದುವರಿಯುತ್ತಾರಂತೆ. ಉದ್ದನೆಯ ಕೂದಲು (Psychology of Hair Length) ಹೊಂದಿರುವ ಮಹಿಳೆಯರು ವಿವಾಹವಾಗಿದ್ದರೆ, ತಮ್ಮ ಸಂಗಾತಿಯನ್ನು ಗೌರವಿಸುತ್ತಾರಂತೆ. 

57

ಅಷ್ಟೇ ಅಲ್ಲದೆ ನಿಷ್ಠೆಯಿಂದ ತಮ್ಮ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುತ್ತಾರಂತೆ. ಸಂಗಾತಿಯಿಂದ ಕೂಡ ಅವರು ಅದನ್ನೇ ನಿರೀಕ್ಷಿಸುತ್ತಾರಂತೆ. ಇಂತಹ ಜನರು ಜೀವನದಲ್ಲಿ ಅಸಾಧ್ಯವಾದುದನ್ನು ಕಾಣುವುದಿಲ್ಲ. ಇಂತಹವರು ಅತ್ಯಂತ ಕಷ್ಟಕರವಾದ ಕೆಲಸಗಳನ್ನು ಕೂಡ ಶ್ರದ್ಧೆಯಿಂದ ಪೂರ್ಣಗೊಳಿಸುತ್ತಾರಂತೆ.

67

ಕೂದಲು ಭುಜದವರೆಗೆ ತಲುಪಿದ್ದರೆ?
ಹೆಗಲವರೆಗೂ ಕೂದಲು ಹೊಂದಿರುವ ಮಹಿಳೆಯರ ಒಂದು ಪ್ರಯೋಜನವೆಂದರೆ ಅವರು ಯಾವುದೇ ರೀತಿಯ ಕೇಶ ವಿನ್ಯಾಸ(Hairstyle)ವನ್ನು ಸುಲಭವಾಗಿ ಮಾಡಬಹುದು. ತಮ್ಮ ಭುಜದವರೆಗೂ ಕೂದಲು ಹೊಂದಿರುವ ಮಹಿಳೆಯರು ಸ್ತ್ರೀವಾದದ ಬಗ್ಗೆ ಹೆಮ್ಮೆಪಡುತ್ತಾರಂತೆ. ಈ ವಿಷಯವನ್ನು ಇತರರಿಗೆ ಹೇಳಲು ಅಥವಾ ವ್ಯಕ್ತಪಡಿಸಲು ಇಷ್ಟಪಡುತ್ತಾರೆಂದು ಹೇಳಲಾಗಿದೆ. 

77

ಇಂತಹ ಜನರು ಬಟ್ಟೆಗಳನ್ನು ತುಂಬಾ ಇಷ್ಟಪಡುತ್ತಾರೆ. ನಿಮ್ಮ ಕೂದಲು ಕೂಡ ಈ ರೀತಿ ಇದ್ದರೆ ನೀವು ಸುಲಭವಾಗಿ ಸವಾಲುಗಳನ್ನು ಎದುರಿಸುತ್ತೀರಿ.  ಸ್ನೇಹ (friendship) ಯಾವುದೇ ಆಗಿರಲಿ, ಅದು ದೀರ್ಘಕಾಲ ಉಳಿಯುತ್ತದೆ. ಏಕೆಂದರೆ ಪ್ರತಿಯೊಬ್ಬರೂ ಇವರ ಉತ್ತಮ ಸ್ವಭಾವವನ್ನು ಪ್ರೀತಿಸುತ್ತಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved