ಉತ್ತರ ಪ್ರದೇಶದಲ್ಲಿ ಮದುವೆಯಾದ ಹತ್ತು ದಿನಗಳಲ್ಲೇ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮದುವೆಯ ನಂತರ ಗೋವಾಕ್ಕೆ ಹನಿಮೂನ್‌ಗೆ ಹೋದಾಗ ಗಂಡನಿಂದ ಹಲ್ಲೆ ಮತ್ತು ಕೊಲೆ ಯತ್ನ ನಡೆದಿದೆ ಎಂದು ಆಕೆ ಆರೋಪಿಸಿದ್ದಾರೆ. ವರದಕ್ಷಿಣೆ ಕಿರುಕುಳದ ಬಗ್ಗೆಯೂ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮದುವೆ (Marriage)ಗಿಂತ ವಿಚ್ಛೇದನ (divorce) ಸಂಖ್ಯೆ ಹೆಚ್ಚಾಗ್ತಿದೆ. ನಾನಾ ಕಾರಣಕ್ಕೆ ದಂಪತಿ ದೂರವಾಗ್ತಿದ್ದಾರೆ. ಮದುವೆಯಾದ ವರ್ಷದೊಳಗೇ ದಂಪತಿ ಬೇರೆಯಾದ ಅನೇಕ ಘಟನೆ ಇದೆ. ಆದ್ರೆ ಮದುವೆಯಾದ ಹತ್ತೇ ದಿನಕ್ಕೆ ಇಲ್ಲೊಬ್ಬ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮದುವೆ ನಂತ್ರ ಪರಸ್ಪರ ಅರ್ಥ ಮಾಡ್ಕೊಳ್ಳಲು ದಂಪತಿ ಹನಿಮೂನ್ (honeymoon) ಗೆ ಹೋಗ್ತಾರೆ. ಆದ್ರೆ ಈ ದಂಪತಿಗೆ ಹನಿಮೂನ್ಗಲಾಟೆ ಸ್ಥಳವಾಗಿ ಮಾರ್ಪಟ್ಟಿದೆ. ಮದುವೆಯಾಗಿ ಹತ್ತು ದಿನ ಆಗಿಲ್ಲ. ಆಗ್ಲೇ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಹಾಗೂ ಆತನ ಸಂಬಂಧಿಕರ ವಿಚಾರಣೆ ಜೋರು ಪಡೆದಿದೆ.
ಘಟನೆ ನಡೆದಿರೋದು ಉತ್ತರ ಪ್ರದೇಶ ಮಹಾರಾಜಗಂಜನಲ್ಲಿ. ಕೊತ್ವಾಲಿ ಕ್ಷೇತ್ರದ ಹುಡುಗಿ ನಿಚ್ಲೌಲ್ ಪ್ರದೇಶದ ಚಾಮನ್‌ಗಂಜ್ ಸೇತುವೆಯ ಬಳಿ ವಾಸಿಸುವ ರತ್ನೇಶ್ ಗುಪ್ತಾನನ್ನು ಮದುವೆ ಆಗಿದ್ದಳು. ಮದುವೆ ಫೆಬ್ರವರಿ 12ರಂದು ಹಿಂದೂ ಸಂಪ್ರದಾಯದಂತೆ ನಡೆದಿತ್ತು. ಮದುವೆ ನಂತ್ರ ಫೆಬ್ರವರಿ 19ರಂದು ದಂಪತಿ ಗೋವಾ (Goa)ಕ್ಕೆ ಹೋಗಿದ್ರು. ಅಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿದೆ. ವಧು, ವಿಮಾನ ಬುಕ್ ಮಾಡ್ಕೊಂಡು ಮನೆಗೆ ವಾಪಸ್ ಬಂದಿದ್ದಾಳೆ. ಮನೆಗೆ ಬಂದವಳು ಪೊಲೀಸ್ ಠಾಣೆಗೆ ಹೋಗಿ ಪತಿ ಹಾಗೂ ಏಳು ಮಂದಿ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
ನಿಮ್ಮ ಮಕ್ಕಳ ದಿನವನ್ನು ಒತ್ತಡ ಮುಕ್ತವಾಗಿಸುವುದು ಹೇಗೆ? ಈ ತಪ್ಪುಗಳನ್ನು ಮಾಡಬೇಡಿ!
ಮದುವೆಯಾದ ಎರಡೇ ದಿನಕ್ಕೆ ಶುರುವಾಗಿತ್ತು ಗಲಾಟೆ : ನವ ವಿವಾಹಿತೆ ನೀಡಿದ ದೂರಿನ ಪ್ರಕಾರ, ಆಕೆ ಮದುವೆಯಾಗಿ ವರನ ಮನೆಗೆ ಹೋಗ್ತಿದ್ದಂತೆ, ವರನ ಕಡೆಯವರು ಹಿಂಸೆ ನೀಡಲು ಶುರು ಮಾಡಿದ್ರು. ಹುಡುಗಿ ಕಡೆಯವರು, ವರನ ಮನೆಗೆ ಬಂದು ಮಾತುಕತೆ ನಡೆಸಿ ಎಲ್ಲವನ್ನು ಬಗೆಹರಿಸಿದ್ರಂತೆ. ಎಲ್ಲ ಒಂದು ಹಂತಕ್ಕೆ ಬಂದ್ಮೇಲೆ ನವ ಜೋಡಿ ಹನಿಮೂನ್ ಅಂತ ಗೋವಾಕ್ಕೆ ಹಾರಿತ್ತು. ಆದ್ರೆ ಗೋವಾದಲ್ಲಿ ಹುಡುಗ ಮತ್ತೆ ತನ್ನ ವರಸೆ ಶುರು ಮಾಡಿದ್ದ. ಹೊಸ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದ ಹುಡುಗಿ ಎಲ್ಲವನ್ನು ಬದಿಗಿಟ್ಟು ತವರಿಗೆ ವಾಪಸ್ ಬಂದಿದ್ದಾಳೆ.
ಮದ್ವೆಯಾಗಿ ಗಂಡನಿದ್ರೂ ಆರು ಕಾರಣಗಳಿಂದ ಪರ ಪುರುಷನತ್ತ ಮಹಿಳೆ ಆಕರ್ಷಿತಳಾಗ್ತಾಳೆ!
ಗೋವಾದಲ್ಲಿ ಆಗಿದ್ದೇನು? : ನವ ದಂಪತಿ ಅಚ್ಚುಮೆಚ್ಚಿನ ಸ್ಥಳವಾದ ಗೋವಾವನ್ನೇ ಇವರು ಹನಿಮೂನ್ ಗೆ ಆಯ್ಕೆ ಮಾಡ್ಕೊಂಡಿದ್ದರು. ಆದ್ರೆ ಸ್ವರ್ಗ ಸುಖ ನೀಡ್ಬೇಕಿದ್ದ ಹನಿಮೂನ್ ವಿವಾಹಿತೆಗೆ ನರಕವಾಯ್ತು. ಗೋವಾದಲ್ಲಿ ಪತಿ, ಪತ್ನಿ ಮೇಲೆ ಹಲ್ಲೆ ನಡೆಸಿದ್ದನಂತೆ. ಆಕೆ ಕತ್ತು ಹಿಸುಕಿ ಹತ್ಯೆ ಪ್ರಯತ್ನ ಮಾಡಿದ್ದನಂತೆ. ಇದ್ರಿಂದ ನೊಂದ ಮಹಿಳೆ, ತವರಿಗೆ ಸುದ್ದಿ ಮುಟ್ಟಿಸಿದ್ದಾಳೆ. ಫೆಬ್ರವರಿ 22ರಂದು ಫ್ಲೈಟ್ ಬುಕ್ ಮಾಡಿದ ಪಾಲಕರು, ಮಗಳನ್ನು ಮನೆಗೆ ಕರೆಸಿಕೊಂಡಿದ್ದಾರೆ. ಹನಿಮೂನ್ ಗೆ ಗಂಡನ ಜೊತೆ ಹೋದವಳು, ಒಂಟಿಯಾಗಿ ಮನೆಗೆ ಬಂದಿದ್ದಾಳೆ.
ಪೊಲೀಸ್ ಠಾಣೆಯಲ್ಲಿ ಈ ಎಲ್ಲ ಪ್ರಕರಣ ದಾಖಲು : ಪೊಲೀಸ್ ಠಾಣೆಯಲ್ಲಿ ಮಹಿಳೆ, ಹಲ್ಲೆ, ಕೊಲೆ ಯತ್ನ , ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾಳೆ. ದೂರಿನ ಮೇಲೆ ಪೊಲೀಸರು ವರನ ಕಡೆಯವರ ವಿಚಾರಣೆ ಮಾಡ್ತಿದ್ದಾನೆ.
