ಮದ್ವೆಯಾಗಿ ಗಂಡನಿದ್ರೂ ಆರು ಕಾರಣಗಳಿಂದ ಪರ ಪುರುಷನತ್ತ ಮಹಿಳೆ ಆಕರ್ಷಿತಳಾಗ್ತಾಳೆ!
Man And Woman Attraction: ಮದುವೆಯಾದ ಮೇಲೂ ಮಹಿಳೆಯರು ಪರ ಪುರುಷರತ್ತ ಆಕರ್ಷಿತರಾಗಲು ಹಲವು ಕಾರಣಗಳಿವೆ.ಆ ಕಾರಣಗಳು ಏನು ಎಂಬುದರ ಮಾಹಿತಿ ಇಲ್ಲಿದೆ.

ಮದುವೆಯಾಗಿ ಗಂಡನಿದ್ರೂ ಕೆಲವೊಮ್ಮೆ ಮಹಿಳೆಯರ ಬೇರೆ ಪುರುಷನತ್ತ ಆಕರ್ಷಿತರಾಗುತ್ತಾರೆ. ಪರ ಪುರುಷನತ್ತ ಮಹಿಳೆ ಆಕರ್ಷಿತರಾಗಲು ಕೆಲವು ಕಾರಣಗಳಿರುತ್ತವೆ. ಮಹಿಳೆ ಜೀವನದಲ್ಲಿನ ಬದಲಾವಣೆಗಳಿಂದ ಬೇರೆಯವರ ಸಾನಿಹ್ಯ ಬಯಸುತ್ತಾಳೆ. ಮಹಿಳೆಯರು ಬೇಗನೆ ಬೇರೆ ಪುರುಷನತ್ತ ಆಕರ್ಷತರಾಗಲು ಇಲ್ಲಿವೆ ಆರು ಕಾರಣಗಳು.
1.ಹೊಸತನದ ಹುಡುಕಾಟ
ಕೆಲ ಮಹಿಳೆಯರು ಪ್ರತಿ ಸನ್ನಿವೇಶದಲ್ಲಿ ಹೊಸತನದ ಹುಡುಕಾಟದಲ್ಲಿರುತ್ತಾರೆ. ಆದ್ರೆ ಸಂಗಾತಿ/ಗಂಡ ಈ ಗುಣಕ್ಕೆ ತದ್ವಿರುದ್ಧವಾಗಿದ್ರೆ ಇಬ್ಬರಲ್ಲಿ ಭಿನ್ನಾಬಿಪ್ರಾಯಗಳು ಉಂಟಾಗುತ್ತದೆ. ಈ ಸಂಬಂಧ ಇದೇ ಗುಣದ ಪುರುಷನತ್ತ ಮಹಿಳೆ ಆಕರ್ಷಿತಳಾಗುತ್ತಾಳೆ.
2.ಹೊಗಳಿಕೆ ಮತ್ತು ಬೆಂಬಲ
ತನ್ನನ್ನು ಹೊಗಳಬೇಕು ಮತ್ತು ಎಲ್ಲಾ ವಿಷಯದಲ್ಲಿಯೂ ಗಂಡ ತನಗೆ ಬೆಂಬಲವಾಗಿರಬೇಕು ಎಂದು ಬಹುತೇಕರು ಮಹಿಳೆಯರು ಬಯಸುತ್ತಾರೆ. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ಗಂಡ ಅಥವಾ ಸಂಗಾತಿಯಿಂದ ದೂರವಾಗಲು ಮಹಿಳೆ ಬಯಸುತ್ತಾಳೆ. ಆದ್ದರಿಂದ ಪತ್ನಿಗೆ ಬೆಂಬಲವಾಗಿ ಪುರುಷರು ನಿಲ್ಲಬೇಕೆಂದು ತಜ್ಞರು ಹೇಳುತ್ತಾರೆ.
3.ಆರ್ಥಿಕ ಭದ್ರತೆ
ತನ್ನ ಸಂಗಾತಿ ಅಥವಾ ಗಂಡ ಆರ್ಥಿಕವಾಗಿ ಸಶಕ್ತನಾಗಿರಬೇಕು ಎಂದು ಮಹಿಳೆ ಬಯಸುತ್ತಾಳೆ. ಆರ್ಥಿಕವಾಗಿ ಸದೃಢವಾದ್ರೆ ತನ್ನ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಸಮಾಜದಲ್ಲಿ ಗೌರವ ಸಿಗುತ್ತೆ ಎಂಬ ಬಲವಾದ ನಂಬಿಕೆಯನ್ನು ಹೊಂದಿರುತ್ತಾರೆ. ಇದು ಭಾಗಶಃ ನಿಜವೂ ಆಗಿರುತ್ತದೆ. ಸಂಗಾತಿ ಆರ್ಥಿಕವಾಗಿ ಕುಸಿದಾಗ ಮಹಿಳೆ ಬೇರೆ ಪುರುಷನತ್ತ ಆಕರ್ಷಿತವಾಗುವ ಸಾಧ್ಯತೆ ಅಧಿಕವಾಗಿರುತ್ತದೆ.
4.ಉತ್ಸಾಹದಲ್ಲಿ ಕೊರತೆ
ಮಹಿಳೆಯರು ಪ್ರತಿಯಿಂದು ವಿಷಯದಲ್ಲಿಯೂ ಸಂತೋಷವನ್ನು ಕಾಣುತ್ತಾರೆ. ಒಂದು ರೀತಿಯಲ್ಲಿ ಹೇಳಬೇಕಾದ್ರೆ ಮಹಿಳೆಯರು ಉತ್ಸಾಹಿಗಳು ಮತ್ತು ಸಾಹಸಿ ಗುಣಗಳನ್ನು ಹೊಂದಿರುತ್ತಾರೆ. ಆದ್ರೆ ಈ ಗುಣಗಳನ್ನು ಮಹಿಳೆಯರು ಮರೆ ಮಾಡಿದ್ರೂ, ಇವುಗಳನ್ನ ಸಂಗಾತಿಯಲ್ಲಿ ಕಾಣಲು ಬಯಸುತ್ತಾರೆ. ಈ ವಿಷಯದಲ್ಲಿ ಕೊರತೆಯೆನಿಸಿದಾಗ ಮಹಿಳೆ ಮನಸ್ಸು ಚಂಚಲವಾಗಬಹುದು.
5.ಏಕಾಂಗಿತನ
ತನ್ನ ಮಾತುಗಳನ್ನು ಕೇಳುವ ಸಂಗಾತಿಯನ್ನು ಮಹಿಳೆಯರು ಇಷ್ಟಪಡುತ್ತಾರೆ. ಗಂಡ ಕೆಲಸದಲ್ಲಿಯೇ ಬ್ಯುಸಿಯಾದ್ರೆ ಮಹಿಳೆಯಲ್ಲಿ ಏಕಾಂಗಿತನ ಉಂಟಾಗುತ್ತದೆ. ಈ ಸಂದರ್ಭದಲ್ಲಿ ತಮ್ಮ ಭಾವನೆಗಳಿಗೆ ಸ್ಪಂದಿಸುವ ಮತ್ತು ತನ್ನೊಂದಿಗೆ ಸಮಯ ಕಳೆಯುವ ಪುರುಷನತ್ತ ಮಹಿಳೆ ಆಕರ್ಷಿತಳಾಗತ್ತಾಳೆ ಎನ್ನಲಾಗುತ್ತದೆ.
6.ಭಾವನಾತ್ಮಕ ಪ್ರೀತಿ ಮತ್ತು ಸ್ಪರ್ಶದ ಸುಖ
ಮಹಿಳೆ ತನ್ನ ಸಂಗಾತಿಯಿಂದ ಭಾವನಾತ್ಮಕ ಪ್ರೀತಿ ಜೊತೆಯಲ್ಲಿ ದೈಹಿಕ ಆನಂದವನ್ನು ಸಹ ಮಹಿಳೆ ಬಯಸುತ್ತಾಳೆ. ಈ ಎರಡು ವಿಷಯದಲ್ಲಿ ಸಂಗಾತಿ ನಿರ್ಲಕ್ಷ್ಯ ತೋರಿದಾಗ ತನ್ನ ತೃಪ್ತಿಗಾಗಿ ಪರ ಪುರುಷನ ಶೋಧನೆಯಲ್ಲಿ ಮಹಿಳೆ ತೊಡಗಿಕೊಳ್ಳುತ್ತಾಳೆ.
ಗಮನಿಸಿ: ಎಲ್ಲಾ ಮಹಿಳೆಯರು ಈ ರೀತಿಯಾಗಿರುವುದಿಲ್ಲ. ಜೀವನದಲ್ಲಿನ ಏರುಪೇರು ಅಥವಾ ಸಮಸ್ಯೆಗಳಿಂದ ಮನಸ್ಸಿನಲ್ಲಿ ಚಂಚಲತೆ ಉಂಟಾದ್ರೆ ಮಹಿಳೆ ಪರ ಪುರುಷನತ್ತ ಆಕರ್ಷಿತವಾಗುವ ಸಾಧ್ಯತೆ ಇರುತ್ತದೆ. ಇದು ಅಂತರ್ಜಾಲದಲ್ಲಿ ಲಭ್ಯವಿರೋ ಮಾಹಿತಿಯನ್ನು ಆಧರಿಸಿದೆ. ಪ್ರತಿಯೊಬ್ಬರ ಸ್ವಭಾವ/ವರ್ತನೆ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ.