ಇದು ಆನ್‌ಲೈನ್‌ ಯುಗ ಎಂದು ಹೇಳುವುದನ್ನು ಕೇಳಿರುತ್ತೇವೆ. ತಿನ್ನುವುದಕ್ಕೂ, ಬಟ್ಟೆ ಖರೀದಿಗೂ, ದಿನಬಳಕೆ ವಸ್ತುವಿಗೆ, ಜೀವನ ಸಂಗಾತಿ ಹುಡುಕುವುದು ಎಲ್ಲವೂ ಆನ್‌ಲೈನ್. ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್‌ನಲ್ಲಿಯೇ ಎಂಗೇಜ್‌ಮೆಂಟ್‌ಗಳೂ ನಡೆಯುತ್ತಿದೆ. 

ಬೆಂಗಳೂರು(ಫೆ.12): ಇದು ಆನ್‌ಲೈನ್‌ ಯುಗ ಎಂದು ಹೇಳುವುದನ್ನು ಕೇಳಿರುತ್ತೇವೆ. ತಿನ್ನುವುದಕ್ಕೂ, ಬಟ್ಟೆ ಖರೀದಿಗೂ, ದಿನಬಳಕೆ ವಸ್ತುವಿಗೆ, ಜೀವನ ಸಂಗಾತಿ ಹುಡುಕುವುದು ಎಲ್ಲವೂ ಆನ್‌ಲೈನ್. ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್‌ನಲ್ಲಿಯೇ ಎಂಗೇಜ್‌ಮೆಂಟ್‌ಗಳೂ ನಡೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟಕ್ಕೂ ಲವ್‌ ಅಂದ್ರೇನು..?

ಉತ್ತರ ಭಾರತದ ಜೋಡಿಯೊಂದು ಮೊಬೈಲ್‌ ವಿಡಿಯೋ ಕಾಲ್ ಮೂಲಕವೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯವರಲ್ಲರೂ ಹೊಸ ಬಟ್ಟೆ ತೊಟ್ಟು, ಸಂಭ್ರಮಕ್ಕೆ ಸಿದ್ಧರಾಗಿ ಮೊಬೈಲ್‌ಗಳನ್ನು ಮಣೆಯ ಮೇಲೆ ಕೂರಿಸಿ ನಿಶ್ಚಿತಾರ್ಥ ಮುಗಿಸಿದ್ದಾರೆ.

ವಧುವಿನ ತಲೆಗೆ ಸಂಪ್ರದಾಯಿಕ ದುಪಟ್ಟಾ ಹೊದಿಸುವ ಕಾರ್ಯ, ಉಡುಗೊರೆ ನೀಡುವುದು, ಸೀರೆಯನ್ನು ಮೊಬೈಲ್‌ ಮುಂದೆ ಇಡಲಾಗಿದೆ. ಸಂಪ್ರದಾಯಿಕವಾಗಿ ಯಾವ ರೀತಿ ನಿಶ್ಚಿತಾರ್ಥ ನೆರವೇರುತ್ತದೆಯೋ ಅದೇ ರೀತಿ ಎಲ್ಲ ಕ್ರಮಗಳನ್ನು ನೆರವೇರಿಸಿದ್ದು, ವಧು ವರರ ಸ್ಥಳದಲ್ಲಿ ಮಾತ್ರ ಮೊಬೈಲ್‌ಗಳು ಕುಳಿತಿದ್ದವು.