- ಸೋಮು ಕುದರಿಹಾಳ ಗಂಗಾವತಿ

ಕೆಲವು ದಿನಗಳ ಹಿಂದೆ ಶಾಲೆಯ ಮಕ್ಕಳಿಗೆ ‘ಫ್ರೆಂಡ್ಸ್‌’ ಅನ್ನುವ ಇಂಗ್ಲೀಷ್‌ ಪದ್ಯವೊಂದನ್ನು ಹೇಳುತ್ತಿದ್ದೆ. Wಛಿ a್ಟಛಿ ್ಛ್ಟಜಿಛ್ಞಿds/ಡಿಛಿ ್ಝಟvಛಿ ಠಿಟಜಛಿಠಿhಛ್ಟಿಎಂಬುದನ್ನು ನಾವೆಲ್ಲರೂ ಗೆಳೆಯರು, ಒಬ್ಬರನ್ನೊಬ್ಬರು ಲವ್‌ ಮಾಡಬೇಕು, ನಮ್ಮ ನಮ್ಮ ನಡುವೆ ಸ್ನೇಹ ಪ್ರೀತಿ ಇರಬೇಕು. ಅದು ನಮ್ಮ ಸಂಬಂಧಗಳನ್ನು ಚಂದ ಆಗಿಸುತ್ತದೆ ಎಂದು ವಿವರಿಸುತ್ತಿದ್ದೆ. ನನ್ನ ಮಾತುಗಳು ಮುಂದುವರಿದಾಗ ಮಕ್ಕಳ ಮುಖದಲ್ಲಿ ಅವರ ವರ್ತನೆಗಳಲ್ಲಿ ಒಂದಷ್ಟುಬದಲಾವಣೆ ಕಾಣತೊಡಗಿದವು. ಅಕ್ಕಪಕ್ಕದವರು ಮುಖ ನೋಡಿಕೊಂಡು ಮುಸಿಮುಸಿ ನಕ್ಕಂತೆ ಮಾಡುವುದು, ಹುಡುಗಿಯರು ಅರ್ಧ ತಲೆತಗ್ಗಿಸಿದಂತೆಯೂ ಮಾಡತೊಡಗಿದರು. ನನಗೆ ಅಚ್ಚರಿ ಅನಿಸಿದರೂ ಅದರ ಕಾರಣ ತಕ್ಷಣ ಹೊಳೆಯಿತು. ನನ್ನ ಮಾತುಗಳು ಮುಂದುವರಿದು ಗೆಳೆಯರ ನಡುವೆ ‘ಲವ್‌’ ಇದ್ದರೆ ಅದು ಸೊಗಸಾದ ಅನುಭವ ನೀಡುತ್ತೆ, ‘ಲವ್‌’ ಇರುವುದರಿಂದಲೇ ನಾವು ಪರಸ್ಪರ ಆಪ್ತರಾಗಿದ್ದೇವೆ. ಹೀಗೆ ಬೇಕೆಂತಲೇ ‘ಲವ್‌’ ಪದವನ್ನು ಪುನರುಚ್ಛರಿಸತೊಡಗಿದೆ. ಮಕ್ಕಳ ಮೊದಲಿನ ವರ್ತನೆಗಳ ಕಾರಣ ಸ್ಪಷ್ಟವಾಗಿ ತಿಳಿದುಬಿಟ್ಟಿತು.

ಪ್ರೇಮಿಯನ್ನು ಎಲ್ಲವಕ್ಕೂ ಅವಲಂಬಿಸೋದು ಒಳ್ಳೇದಾ?

ಇನ್ನೂ ನಿಖರವಾಗಿ ತಿಳಿದುಕೊಳ್ಳಲು ‘ಐ ಲವ್‌ ಯೂ ಆಲ್‌’ ಅಂದೆ. ನಂತರ ಒಬ್ಬೊಬ್ಬರ ಹೆಸರು ತೆಗೆದುಕೊಂಡು ‘ಐ ಲವ್‌ ಯೂ ಶಂಕರ’ ಅಂತ ಹೇಳಿದೆ. ‘ಐ ಲವ್‌ ಯೂ ರಂಜಿತಾ’? ಹೇಳತೊಡಗಿದೆ. ಹುಡುಗಿ ಹೆಸರು ಬಂದೊಡನೆ ಅವರ ಮುಖ ನೋಡಬೇಕಿತ್ತು. ಅಕ್ಷರಶಃ ನನ್ನನ್ನು ಕಣ್ಣು ಮಿಟುಕಿಸದೇ ದಿಟ್ಟಿಸಿದರು. ಆ ನೋಟದಲ್ಲಿ ನನ್ನ ಕಡೆಗೆ ಅವರಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿದ್ದವು ಅನಿಸಿತು.

ಇದಕ್ಕೆ ಕಾರಣ ಹಲವಾರು. ‘ಲವ್‌’ ಅನ್ನು ಅಭಿವ್ಯಕ್ತಿಸುವ ಹಲವಾರು ಚಿತ್ರಣಗಳನ್ನು ಮಕ್ಕಳು ಗಮನಿಸುತ್ತಿದ್ದಾರೆ. ಅವರ ನೋಟಕ್ಕೆ ‘ಲವ್‌’ ಎಂಬುದು ಮುಜುಗರವಾಗಿಯೇ ಕಂಡಿದೆ. ಅದೊಂದು ಪದಕ್ಕೆ ಬೇರೆ ಬೇರೆ ರೀತಿಯ ರೂಪಗಳು ಸೃಷ್ಟಿಯಾಗಿವೆ. ಮಕ್ಕಳು ನೋಡುವ ಟಿ.ವಿಗಳ ಮೂಲಕ ‘ಲವ್‌’ ಅಂದರೆ ಹುಡುಗ ಹುಡುಗಿಯರ ನಡುವಿನ ಆಕರ್ಷಣೆ. ಹುಡುಗ ಹುಡುಗಿಗಾಗಿ ಅಥವ ಹುಡುಗಿ ಹುಡುಗನಿಗಾಗಿ ಹೇಳುವ ಪದ. ‘ಐ ಲವ್‌ ಯೂ’ ಎಂದು ಹೇಳಲು ಪೇಚಾಡುವುದನ್ನೇ ಒಂದಿಡೀ ಕಥೆ ಮಾಡುವಾಗ ಮಕ್ಕಳ ಮನಸ್ಸು ಪರಿತಪಿಸಿರುತ್ತದೆ. ‘ಲವ್‌’ ಅಂದರೆ ಒಬ್ಬರನ್ನೊಬ್ಬರು ಕೈ ಕೈ ಹಿಡಿದುಕೊಂಡು ಹೋಗುವ, ಪರಸ್ಪರ ತಬ್ಬಿಕೊಳ್ಳುವ, ಮುತ್ತಿಗೆ ಮುತ್ತು ಕೊಡುವ, ರ್ಯೋಮಾಂಟಿಕ್‌ ಲೋಕದಲ್ಲಿ ಮೈಮರೆಯುವ, ಗಿಫ್ಟ್‌ ಕೊಟ್ಟು ಖುಷಿಪಡುವ, ಪ್ರೀತಿಗಾಗಿ ಮನೆಬಿಟ್ಟು ಹೋಗುವ, ಪ್ರೀತಿ ಸಿಗದೇ ವಿರಹ ವೇದನೆ ಅನುಭವಿಸುವ, ಹೊಡೆದಾಟಗಳಲ್ಲಿ ಅಂತ್ಯ ಕಾಣುವ ಹೀಗೆ ವಿವಿಧ ಸಿನಿಮೀಯ ಚಿತ್ರಗಳನ್ನೇ ಲವ್‌ ಅಂದುಕೊಂಡಿದ್ದಾರೆ.

ನನ್ನ ಇನ್ನೊಂದು ಕೆನ್ನೆ ಏನೇ ಮಾಡಿತ್ತು?

ಲವ್‌ ಎಂಬುದು ಹುಡುಗ ಹುಡುಗಿಯರ ನಡುವೆ ಮಾತ್ರ ನಡೆವಂತದ್ದು ಎಂಬುದು ಮಕ್ಕಳ ಮುಂದಿರುವ ಚಿತ್ರ. ಲವ್‌ ಎಂಬುದು ಸ್ನೇಹಿತರ ನಡುವೆಯೂ, ಲಿಂಗಬೇಧವಿಲ್ಲದ ಭಾವನೆಯೆಂದೂ, ತಂದೆ ತಾಯಿ ಮಕ್ಕಳನ್ನು ಪ್ರೀತಿಸುವುದೆಂದೂ ಹೇಗೆ ಅರ್ಥ ಮಾಡಿಸಲು ಸಾಧ್ಯ? ಮಕ್ಕಳ ಮನಸ್ಸಿನ ಈ ಚಿತ್ರವನ್ನು ಅಳಿಸುವುದಾದರೂ ಹೇಗೆ? ಎಂಬ ಪ್ರಶ್ನೆಗಳು ಎದುರಿಗೆ ನಿಂತವು. ಅದರ ಜೊತೆ ಇನ್ನು ದೊಡ್ಡ ಹುಡುಗರು ಹೈಸ್ಕೂಲ್‌ ಮಟ್ಟದಲ್ಲಿಯೇ ಪ್ರೀತಿಯ ಅಲ್ಲಲ್ಲ, ‘ಲವ್‌’ನ ಹುಚ್ಚಾಟಕ್ಕೆ ಬಿದ್ದಿರುವ ಸಾಕಷ್ಟುಉದಾಹರಣೆಗಳಿವೆ. ಅವರ ಪ್ರಕಾರ ‘ಲವ್‌’ ಎಂಬದು ಟಿ.ವಿಗಳಲ್ಲಿರುವಂತದ್ದು. ಇನ್ನೂ ಸ್ವಲ್ಪ ವಿಸ್ತರಿಸುವುದಾದರೆ ಹರೆಯದ ಬಹಳಷ್ಟು‘ಲವ್‌’ಗಳು ಟ.ವಿ.ಗಳನ್ನೇ ಅನುಸರಿಸುತ್ತವೆ. ಅದಕ್ಕೆ ಡೇಟ್‌, ಚಾಟ್‌, ಲಿವ್‌ ಇನ್‌, ಎಂಬ ಹೆಸರಿಟ್ಟುಕೊಂಡು ಸುತ್ತಾಟ ಮುತ್ತಾಟಗಳಲ್ಲಿ ಮುಗಿದು ಮತ್ತೊಂದು ಬದುಕು ಎಲ್ಲೋ ಸಾಗಿಸುತ್ತಾರೆ. ಇಲ್ಲಿಯೂ ಕೂಡ ‘ಲವ್‌’ ಅಂದರೆ ಪ್ರೀತಿ ಅಲ್ಲ. ಈ ಲವ್‌ ಅನ್ನು ಪ್ರೀತಿ ಅಂತ ಮಕ್ಕಳ ಮನಸ್ಸಿಗೆ ದಾಟಿಸುವ ಕಷ್ಟಯಾರಿಗೂ ಬೇಡ. ‘ಲವ್‌’ ಪ್ರೀತಿಯಾಗಲಿ. ಮಕ್ಕಳೆ.. ಲವ್‌ ಯೂ ಕಣ್ರೋ..

"