Asianet Suvarna News Asianet Suvarna News

ಶ್ವಾನಕ್ಕೆ ಮದುವೆ ಮಾಡಿ ಊರಿಗೆ ಊಟ ಹಾಕಿದ ದಂಪತಿ

ಬಿಹಾರ: ತಮ್ಮ ಶ್ವಾನವೊಂದಕ್ಕೆ ಊರವರ ಸಮ್ಮುಖದಲ್ಲಿ ಮನುಷ್ಯರಿಗೆ ಮಾಡುವಂತೆ ಮದುವೆ ಮಾಡಿ ಇಡೀ ಗ್ರಾಮಕ್ಕೆ ದಂಪತಿ ಊಟ ಹಾಕಿದ ಘಟನೆ ಬಿಹಾರದ ಮೋತಿಹಾರದಲ್ಲಿ ನಡೆದಿದೆ. 

couple did dogs wedding in the presence of villagers in Bihar's Motahari akb
Author
Bangalore, First Published Jun 22, 2022, 10:04 AM IST

ಬಿಹಾರ: ತಮ್ಮ ಶ್ವಾನವೊಂದಕ್ಕೆ ಊರವರ ಸಮ್ಮುಖದಲ್ಲಿ ಮನುಷ್ಯರಿಗೆ ಮಾಡುವಂತೆ ಮದುವೆ ಮಾಡಿ ಇಡೀ ಗ್ರಾಮಕ್ಕೆ ದಂಪತಿ ಊಟ ಹಾಕಿದ ಘಟನೆ ಬಿಹಾರದ ಮೋತಿಹಾರದಲ್ಲಿ ನಡೆದಿದೆ. 

ಒಂದು ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎಂಬ ಗಾದೆ ಮಾತಿದೆ. ಅಂದರೆ ಮದುವೆ ಮಾಡುವುದು ಹಾಗೂ ಮನೆ ಕಟ್ಟುವುದು ಎರಡೂ ಬಲು ಕಷ್ಟದ ಕೆಲಸ ಸಾಕಷ್ಟು ಖರ್ಚುವೆಚ್ಚಗಳು ಮದುವೆ ಹಾಗೂ ಮನೆ ಕಟ್ಟುವುದಕ್ಕೆ ಆಗುವುದು ಎಂಬುದು ಇದರ ಅರ್ಥ. ಆದರೆ ಬಿಹಾರದ ದಂಪತಿಗಳು ಖರ್ಚು ವೆಚ್ಚಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮ ಮಕ್ಕಳಿಗೆ ಅಲ್ಲಲ್ಲ ಶ್ವಾನಗಳಿಗೆ ಮದುವೆ ಮಾಡಿಸಿದ್ದಾರೆ. ಇನ್ನು ವಿಶೇಷ ಎಂದರೆ ಈ ಮದುವೆಯಲ್ಲಿ ಮನುಷ್ಯರು ಮದುವೆಯಾಗುವಾಗ ಊರವರನ್ನೆಲ್ಲಾ ಕರೆದು ಹೇಗೆ ಊಟ ಹಾಕುತ್ತಾರೋ ಅದೇ ರೀತಿ ಊರವರನ್ನೆಲ್ಲ ಕರೆದು ಊಟ ಹಾಕಿದ್ದಾರೆ. ಊರಿನ ಸುಮಾರು 400 ಕ್ಕೂ ಹೆಚ್ಚು ಜನ ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

Davanagere: ಅಗಲಿದ ಪ್ರೀತಿಯ ಮಾಲೀಕನ ಸಮಾಧಿ ಮೇಲೆ ಮಲಗುವ 'ಡಯನಾ' ಶ್ವಾನ

ತುಂಬಾ ವೈಭವದಿಂದ ಈ ಮದುವೆ ಮಾಡಲಾಗಿದೆ. ವಾದ್ಯ ಮೇಳದೊಂದಿಗೆ ಶ್ವಾನದ ಮೆರವಣಿಗೆ ನಡೆಸಲಾಯಿತು. ಮದುವೆ ದಿಬ್ಬಣ ಬಂದವರು ಇಲ್ಲಿ ಸಖತ್ ಆಗಿ ಡಾನ್ಸ್ ಮಾಡುವ ಮೂಲಕ ಮದುವೆಯನ್ನು ಸಂಭ್ರಮಿಸಿದರು. ಶುಕ್ರವಾರ ರಾತ್ರಿ (ಜೂನ್‌ 17) ಈ ಮದುವೆ ನಡೆದಿದ್ದು, ಈ ಮದುವೆ ವಿಚಾರ ಗ್ರಾಮದಲ್ಲಿ ಚರ್ಚೆಯ ವಿಚಾರವಾಗಿತ್ತು.  

ಬಿಹಾರದ ಮೋತಿಹಾರಿ ಜಿಲ್ಲೆಯ ಮಜುರಾಹ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಿಂದೂ ಸಂಪ್ರದಾಯದಂತೆ  ಎರಡು ಶ್ವಾನಗಳಿಗೆ ಮದುವೆ ಮಾಡಲಾಯಿತು. ಸಾಮಾನ್ಯ ಮದುವೆಯಲ್ಲಿ ಕೈಗೊಳ್ಳುವ ಎಲ್ಲಾ ವಿಧಿವಿಧಾನಗಳನ್ನು ಈ ಮದುವೆಯಲ್ಲೂ ನಡೆಸಲಾಯಿತು. ಗಂಡು ಶ್ವಾನದ ತಲೆಗೆ ಪೇಟವನ್ನು ಕಟ್ಟಲಾಯಿತು ಹಾಗೆಯೇ ಹೆಣ್ಣು ಶ್ವಾನವನ್ನು ಮಧುಮಗಳಂತೆ ಸಿಂಗರಿಸಲಾಗಿತ್ತು. ಈ ಶ್ವಾನಗಳ ಮೆರವಣಿಗೆ ವೇಳೆ ಸಂಭ್ರಮಿಸಲು ಡಿಜೆ ಕೂಡ ಬುಕ್ ಆಗಿತ್ತು. ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು. ದಿಬ್ಬಣ ಬಂದವರು ಸಖತ್ ಆಗಿ ಕುಣಿದು ಸಂಭ್ರಮಿಸಿದರು. ಶ್ವಾನಗಳು ಪರಸ್ಪರ ಹಾರ ಬದಲಾಯಿಸಿದ ನಂತರ ಇಡೀ ಗ್ರಾಮದ ಜನರಿಗೆ ಔತಣಕೂಟ ಏರ್ಪಡಿಸಲಾಗಿತು. ಅಲ್ಲದೇ ಮದುವೆಗೆ ಬಂದವರು ನೂತನ ಶ್ವಾನ ಜೋಡಿಗೆ ಉಡುಗೊರೆಗಳನ್ನು ನೀಡಿದರು. 

ಮದುವೆಗೂ ಮೊದಲು ನಾಮಕರಣ

ಗಂಡು ಶ್ವಾನದ ಮಾಲೀಕ ನರೇಶ್‌ ಸಹನಿ (Naresh sahani) ಹಾಗೂ ಹೆಣ್ಣು ನಾಯಿಯ ಮಾಲೀಕರಾದ ಸಬೀತಾ ದೇವಿ (Sabita devi) ಜೊತೆಯಾಗಿ ಸೇರಿ ಈ ಎರಡು ಶ್ವಾನಗಳಿಗೆ ನಾಮಕರಣ ಮಾಡಿದರು. ಗಂಡು ನಾಯಿಗೆ ಕಲ್ಲು ಹಾಗೂ ಹೆಣ್ಣು ನಾಯಿಗೆ ಬಸಂತಿ ಎಂದು ಹೆಸರಿಡಲಾಯಿತು. ಈ ಬಗ್ಗೆ ಮಾತನಾಡಿದ ಹೆಣ್ಣು ಶ್ವಾನದ ಮಾಲಕಿ ಸಬೀತಾ ದೇವಿ, ಮಕ್ಕಳ ಸಲುವಾಗಿ ನಾನು ಹರಕೆ ಹೊತ್ತಿದ್ದೆ. ಹರಕೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ವಿವಾಹ ಮಾಡಿದ್ದಾಗಿ ಹೇಳಿದರು. ಈ ಮದುವೆಯಲ್ಲಿ 300 ರಿಂದ 400 ಜನ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಇಂತಹ ಮದುವೆಯೊಂದನ್ನು ನಾವು ಇದುವರೆಗೂ ನೋಡಿರಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. 

10 ಲಕ್ಷ ವರದಕ್ಷಿಣೆ ಕೊಟ್ಟ ನಂತ್ರ ಆಗಿತ್ತು ಮದುವೆ, ಹನಿಮೂನ್ ಆದ ನಂತ್ರ ಗೊತ್ತಾಗಿದ್ದೇ ಬೇರೆ!
 

ಸದ್ಯ ನವ ದಂಪತಿ ಕಲ್ಲು ಹಾಗೂ ಬಸಂತಿ ಮದುವೆ ವಿಚಾರ ಟಾಕ್ ಆಫ್ ದಿ ಟೌನ್ ಆಗಿದೆ. ಪಕ್ಕದ ಗ್ರಾಮದ ಜನರೂ ಕೂಡ ಈ ಮದುವೆಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಈ ಮದುವೆಯನ್ನು ನಡೆಸಿಕೊಟ್ಟ ಪಂಡಿತ್ ಧರ್ಮೇಂದ್ರ ಕುಮಾರ್ ಪಾಂಡೆ (Dharmendra kumar Pande) ಮಾತನಾಡಿ, ಪ್ರತಿಯೊಬ್ಬರೂ ನಾಯಿಗೂ (dog) ಮದುವೆ (Wedding) ಮಾಡಬೇಕು. ನಾಯಿ ಭೈರವನ ರೂಪದಲ್ಲಿದ್ದಾರೆ. ಈ ರೀತಿಯ ಮದುವೆಯು ಬಯಸಿದ ಫಲಿತಾಂಶವನ್ನು ನೀಡುತ್ತದೆ ಎಂದರು. 

Follow Us:
Download App:
  • android
  • ios