ಪ್ರಶ್ನೆ : ನಾನು ನನ್ನ ಗರ್ಲ್ ಫ್ರೆಂಡ್ ಕಳೆದ ಒಂದು ತಿಂಗಳಿನಿಂದ ಜೊತೆಯಾಗಿ ವಾಸ ಮಾಡುತ್ತಿದ್ದೇವೆ. ನಮ್ಮಿಬ್ಬರ ನಡುವೆ ದೖಹಿಕ ಸಂಬಂಧವೂ ಇದೆ. ನಾವಿಬ್ಬರೂ ಅವಳ ಪೀರಿಯೆಡ್ಸ್ ಆಗುವ ನಾಲ್ಕೖದು ದಿನ ಮೊದಲು ಸೇರಿದ್ದೇವೆ. ಪೀರಿಯೆಡ್ಸ್ ಆಗಿರುವಾಗಲೇ ಅಂದರೆ ಎರಡನೇ ದಿನ ಸೆಕ್ಸ್ ಮಾಡಿದ್ದೀವಿ. ಇದು ಯಾವುದೇ ಸುರಕ್ಷತೆ ಇಲ್ಲದೇ. ಉಳಿದ ಸಮಯದಲ್ಲಿ ಕಾಂಡೋಮ್ ಬಳಕೆ ಮಾಡಿದ್ದೀನಿ. ಈಗ ಇಬ್ಬರಲ್ಲೂ ಆತಂಕ ಶುರುವಾಗಿದೆ. ಅವಳು ಎಲ್ಲಾದರೂ ಗರ್ಭ ಧರಿಸಬಹುದಾ ಅಂತ. ನಾವಿಬ್ಬರೂ ಮುಂದೆ ಮದುವೆ ಆಗುವವರೇ. ಆದರೂ ಮದುವೆಗೂ ಮುಂಚೆ ಅವಳು ಗರ್ಭ ಧರಿಸುವುದು ಇಷ್ಟವಿಲ್ಲ. ಜೊತೆಗೆ ಒಂದು ವೇಳೆ ಅವಳು ಪ್ರೆಗ್ನೆಂಟ್ ಆಗಿದ್ದರೆ ಅದನ್ನು ಗುರುತಿಸೋದು ಹೇಗೆ? ಆಗ ಏನು ಮಾಡಬೇಕು? ನಮ್ಮಿಬ್ಬರಿಗೂ ಏನೂ ತೋಚುತ್ತಿಲ್ಲ. 

ಕೊರೋನಾ ಹಾವಳಿ: ಕಾಂಡೋಮ್‌ಗೆ ಹೆಚ್ಚಾದ ಡಿಮ್ಯಾಂಡ್, ಉತ್ಪಾದನೆ ಬಂದ್! 

ಉತ್ತರ : ನೀವಿಬ್ಬರೂ ಸುರಕ್ಷತೆಯಿಲ್ಲದೇ ಅವಳ ಪೀರಿಯೆಡ್ಸ್ ಆಗುವ ನಾಲ್ಕೖದು ದಿನ ಮೊದಲು ಸೇರಿದ್ದೀರಿ. ಪೀರಿಯೆಡ್ಸ್ ಇರುವಾಗಲೂ ಸೇರಿದ್ದೀರಿ. ಪೀರಿಯೆಡ್ಸ್ ಆದ ಬಳಿಕದ ಹತ್ತು ದಿನಗಳನ್ನು ಸೇಫ್ ಪೀರಿಯೆಡ್‌ ಅಂತೀವಿ. ಮಧ್ಯದ ವಾರ ಫಲವತ್ತಿನ ದಿನಗಳು. ಆ ಸಮಯದಲ್ಲಿ ಸೆಕ್ಸ್ ಮಾಡಿದರೆ ಗರ್ಭ ಧರಿಸುವ ಸಾಧ್ಯತೆ ಅತೀ ಹೆಚ್ಚು. ಆಮೇಲೆ ಕೊನೆಯ ವಾರ ಅಥವಾ ಮೂರನೇ ವಾರ ಈ ಟೈಮ್ ಅನ್ನೂ ಸೇಫ್ ಟೖೆಮ್ ಅನ್ನಬಹುದು. ನಿಮ್ಮ ವಿಚಾರ ತೆಗೆದುಕೊಂಡರೆ ನೀವು ಈ ಸೇಫ್ ಪಿರಿಯೆಡ್ ನಲ್ಲಿ ಸೇರಿದ್ದೀರಿ. ಹಾಗಾಗಿ ಗರ್ಭ ಧರಿಸುವ ಸಾಧ್ಯತೆ ಕಡಿಮೆ. ಹಾಗಂತ ಚಾನ್ಸ್ ಇಲ್ಲವೇ ಇಲ್ಲ ಅಂತ ಹೇಳಲಿಕ್ಕಾಗಲ್ಲ. ಆಕೆಗೆ ಒಂದು ವೇಳೆ ಪೀರಿಯೆಡ್ಸ್ ಟೖಮ್ ಬಂದಾಗಲೂ ಪೀರಿಯೆಡ್ಸ್ ಆಗದಿದ್ದರೆ ಇನ್ನೂ ಸ್ವಲ್ಪ ದಿನ ಕಾದು ಅಂದರೆ ನಲವತ್ತು ದಿನಗಳಾಗುವ ತನಕ ಕಾದು, ಆಗಲೂ ಪೀರಿಯೆಡ್ಸ್ ಆಗದಿದ್ದರೆ,  ಪ್ರೆಗ್ನೆನ್ಸಿ ಕಿಟ್ ಮೂಲಕ ಆಕೆ ಗರ್ಭವತಿ ಹೌದೋ ಅಲ್ಲವೋ ಅಂತ ನೀವೇ ಟೆಸ್ಟ್ ಮಾಡಬಹುದು. ಟೆಸ್ಟ್  ಮಾಡುವ ಕ್ರಮಗಳನ್ನು ಆ ಕಿಟ್ ನಲ್ಲೇ ಬರೆದಿರುತ್ತಾರೆ. ಅದರಲ್ಲಿ ಪಾಸಿಟಿವ್ ಬಂದರೆ ಕೂಡಲೇ ಗೖನಕಾಲಜಿಸ್ಟ್ ಅನ್ನು ಸಂಪರ್ಕಿಸಿ. ಮುಂದಿನ ಹಂತವನ್ನು ಅವರೇ ವಿವರಿಸುತ್ತಾರೆ. ಆದರೆ ನಿಮಗೆ ಮಗು ಬೇಡವಾದರೆ ದಯವಿಟ್ಟು ಸುರಕ್ಷತಾ ಕ್ರಮ ತೆಗೆದುಕೊಳ್ಳದೇ ಸೆಕ್ಸ್ ಮಾಡಬೇಡಿ. ಅದರಿಂದ ಇವತ್ತಲ್ಲ ನಾಳೆ ಅಪಾಯ ಕಟ್ಟಿಟ್ಟ ಬುತ್ತಿ. ಮದುವೆಯಾಗುವವರೆಗೂ ಈ ಸುಖಕ್ಕಾಗಿ ಕಾಯ್ದರೆ ಜೀವನ ಮತ್ತಷ್ಟೂ ಹಾಯಾಗಿ ಇರುತ್ತದೆ. 

ಪ್ರಶ್ನೆ : ನನಗೆ ಮದುವೆ ಮಾಡಲು ಮನೆಯವರೆಲ್ಲ ಒತ್ತಾಯಿಸುತ್ತಿದ್ದಾರೆ. ಆದರೆ ಈ ಹಿಂದೆ ನನ್ನ ಗೆಳತಿಯ ಜೊತೆಗೆ ಸೆಕ್ಸ್ ಮಾಡಿದಾಗ ಅವಳು, ನಿನ್ನ ಶಿಶ್ನ ತುಂಬ ಚಿಕ್ಕದಿದೆ. ನನಗೆ ತೃಪ್ತಿ ಸಿಗುತ್ತಲೇ ಇಲ್ಲ ಅಂದಿದ್ದಳು. ಈಗ ನಾನು ಮದುವೆಯಾದರೆ ಆ ಹುಡುಗಿಗೂ ಈ ಸಮಸ್ಯೆ ಆಗಬಹುದಲ್ಲಾ. ಏನು ಮಾಡಲಿ. ಶಿಶ್ನ ದೊಡ್ಡದಾಗಿಸಲು ಏನಾದರೂ ಚಿಕಿತ್ಸೆ ಇದೆಯಾ?

ಕೊರೋನಾ ವೈರಸ್‌ಗೆ ಅರಳುತ್ತಿವೆ ಆನ್‌ಲೈನ್ ಅಫೇರ್ಸ್ 

ಉತ್ತರ : ಶಿಶ್ನವನ್ನು ದೊಡ್ಡದಾಗಿಸಲು ಯಾವ ಚಿಕಿತ್ಸೆಯೂ ಇಲ್ಲ. ಶಿಶ್ನ ಚಿಕ್ಕದಾಗಿದ್ದರೆ ತೃಪ್ತಿ ಇರಲ್ಲ ಅನ್ನುವುದು ಆಧಾರ ರಹಿತ. ಆದಾಗ್ಯೂ ಸಮಸ್ಯೆ ಆದರೆ ಬೇರೆ ಬೇರೆ ಪೊಸಿಶನ್ ಗಳಲ್ಲಿ ಟ್ರೖ ಮಾಡಬಹುದು. ಮುನ್ನಲಿವಿನ ಸಮಯವನ್ನು ಹೆಚ್ಚಿಸಿಕೊಳ್ಳಿ. ಹೆಣ್ಣು ಮೇಲೆ ಬಂದು ಸೆಕ್ಸ್ ಮಾಡುವುದರಿಂದಲೂ ಅವಳ ತೃಪ್ತಿ ಹೆಚ್ಚುವ ಸಾಧ್ಯತೆ ಇದೆ. 

ನೀವು ವಿವಾಹವಾಗಬಹುದು. ಮದುವೆಯಾಗುವ ಹುಡುಗಿ ಏನಾದರೂ ಈ ಬಗ್ಗೆ ತಕರಾರು ತೆಗೆದರೆ ಮೇಲಿನ ತಂತ್ರಗಳನ್ನು ಪ್ರಯೋಗಿಸಬಹುದು. ಸೆಕ್ಸ್ ನಾವಂದುಕೊಂಡ ಹಾಗೆ ದೖಹಿಕ ಮಾತ್ರವಲ್ಲ, ಮಾನಸಿಕತೆಯೂ ಇದರಲ್ಲಿ ಅಡಗಿದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. 
"